ಕರೋನಾ ಭೀತಿ: ಆನ್‌ಲೈನ್ ಕಾರು ಮಾರಾಟ ಮತ್ತು ಸೇವೆಗಳಿಗೆ ಚಾಲನೆ ನೀಡಿದ ವೊಲ್ವೋ

ಕರೋನಾ ವೈರಸ್ ಅಟ್ಟಹಾಸದಿಂದ ಇಡೀ ವಿಶ್ವವೇ ಆತಂಕದಲ್ಲಿದ್ದು, ವೈರಸ್ ಹತೋಟಿಗಾಗಿ ಎಲ್ಲಾ ಕಠಿಣ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಇದರಿಂದ ವಾಣಿಜ್ಯ ಚಟುವಟಿಕೆಗಳು ಸಂಪೂರ್ಣವಾಗಿ ಬಂದ್ ಆಗಿದ್ದು, ಆಟೋ ಉದ್ಯಮದಕ್ಕೂ ಕೂಡಾ ಭಾರೀ ಪ್ರಮಾಣದ ನಷ್ಟ ಉಂಟುಮಾಡುತ್ತಿದೆ.

ಆನ್‌ಲೈನ್ ಕಾರು ಮಾರಾಟ ಮತ್ತು ಸೇವೆಗಳಿಗೆ ಚಾಲನೆ ನೀಡಿದ ವೊಲ್ವೋ

ಸದ್ಯ ವೈರಸ್ ಹೊಡೆದೊಡಿಸಲು ವಿಧಿಸಲಾಗಿರುವ ಲಾಕ್‌‌ಡೌನ್ ಅನ್ನು ಪರಿಸ್ಥಿತಿಗೆ ಅನುಗುಣವಾಗಿ ತೆರವುಗೊಳಿಸಲಾಗುತ್ತಿದ್ದು, ಹಸಿರು ಮತ್ತು ಕಿತ್ತಳೆ ವಲಯದಲ್ಲಿನ ವಾಣಿಜ್ಯ ಚಟುವಟಿಕೆಗಳಿಗೆ ಷರತ್ತುಬದ್ದ ಅವಕಾಶ ನೀಡಲಾಗಿದೆ. ಇದರಿಂದ ಕೆಲವು ಸುರಕ್ಷಾ ಕ್ರಮಗಳೊಂದಿಗೆ ವಾಣಿಜ್ಯ ವ್ಯಾಪಾರವನ್ನು ಪುನಾರಂಭಿಸುತ್ತಿರುವ ಉದ್ಯಮ ಸಂಸ್ಥೆಗಳು ರೋಗ ಹರಡದಂತೆ ಸಾಕಷ್ಟು ಎಚ್ಚರಿಕೆ ವಹಿಸುತ್ತಿದ್ದು, ವೊಲ್ವೋ ಇಂಡಿಯಾ ಕೂಡಾ ಕಾರು ಮಾರಾಟ ಪುನಾಂಭಿಸಲು ಆನ್‌ಲೈನ್ ಪ್ಲ್ಯಾಟ್‌ಫಾರ್ಮ್ ಶುರುಮಾಡಿದೆ.

ಆನ್‌ಲೈನ್ ಕಾರು ಮಾರಾಟ ಮತ್ತು ಸೇವೆಗಳಿಗೆ ಚಾಲನೆ ನೀಡಿದ ವೊಲ್ವೋ

ಕೇಂದ್ರ ಸರ್ಕಾರವು 3ನೇ ಹಂತದ ಲಾಕ್‌ಡೌನ್ ವಿಧಿಸುವುರೊಂದಿಗೆ ಹಸಿರು ವಲಯಗಳಿಗೆ ಹಲವು ವಿನಾಯ್ತಿಗಳನ್ನು ನೀಡಿದ್ದು, ರೆಡ್ ಅಲರ್ಟ್ ಪ್ರದೇಶಗಳಲ್ಲಿನ ವಾಣಿಜ್ಯ ಚಟುವಟಿಕೆಗಳಿಗೆ ಸಾಕಷ್ಟು ನಿರ್ಬಂಧಗಳನ್ನು ವಿಧಿಸಿದೆ.

ಆನ್‌ಲೈನ್ ಕಾರು ಮಾರಾಟ ಮತ್ತು ಸೇವೆಗಳಿಗೆ ಚಾಲನೆ ನೀಡಿದ ವೊಲ್ವೋ

ಹೀಗಾಗಿ ಮೇ 3ರ ನಂತರ ನೇರ ವಾಹನ ಮಾರಾಟವನ್ನು ಪುನಾರಂಭಿಸುವ ತವಕದಲ್ಲಿದ್ದ ಆಟೋ ಕಂಪನಿಗಳಿಗೆ ಇದು ಹಿನ್ನಡೆ ಉಂಟಾಗಿದ್ದು, ಗ್ರಾಹಕರ ಸುರಕ್ಷತೆಯ ದೃಷ್ಠಿಯಿಂದ ಆನ್‌ಲೈನ್ ವಹಿವಾಟು ಆರಂಭಿಸಿವೆ.

MOST READ: ಲಾಕ್‌ಡೌನ್ ಸಂಕಷ್ಟ- ಆಟೋ ಚಾಲಕರ ಬ್ಯಾಂಕ್ ಖಾತೆ ಸೇರಿದ ರೂ.5 ಸಾವಿರ ಪರಿಹಾರ..

ಆನ್‌ಲೈನ್ ಕಾರು ಮಾರಾಟ ಮತ್ತು ಸೇವೆಗಳಿಗೆ ಚಾಲನೆ ನೀಡಿದ ವೊಲ್ವೋ

ಡಿಜಿಟಲ್ ಪ್ಲ್ಯಾಟ್‌‌ಫಾರ್ಮ್ ಮೂಲಕವೇ ಕಾರು ಮಾರಾಟ ಮತ್ತು ಗ್ರಾಹಕರ ಸೇವೆಗಳನ್ನು ಕೈಗೊಳ್ಳಲಿರುವ ವೊಲ್ವೋ ಇಂಡಿಯಾ ಕಂಪನಿಯು ಗ್ರಾಹಕರ ಮನೆ ಬಾಗಿಲಿಗೆ ಕಾರು ಉತ್ಪನ್ನಗಳನ್ನು ತಲುಪಿಸಲಿದ್ದು, ಈ ವೇಳೆ ಗರಿಷ್ಠ ಸುರಕ್ಷಾ ಕ್ರಮಗಳನ್ನು ತೆಗದುಕೊಳ್ಳಲಿದೆ.

ಆನ್‌ಲೈನ್ ಕಾರು ಮಾರಾಟ ಮತ್ತು ಸೇವೆಗಳಿಗೆ ಚಾಲನೆ ನೀಡಿದ ವೊಲ್ವೋ

ಹೊಸ ಸುರಕ್ಷಾ ನಿಯಮದಡಿ ಗ್ರಾಹಕರಿಗೆ ಹೆಚ್ಚಿನ ಸುರಕ್ಷತೆಯೊಂದಿಗೆ ಉತ್ಪನ್ನಗಳನ್ನು ತಲುಪಿಸುವುದರ ಜೊತೆಗೆ ಉದ್ಯೋಗಿಗಳಿಗೂ ಗರಿಷ್ಠ ಸುರಕ್ಷತೆ ಒದಗಿಸಲಿರುವ ವೊಲ್ವೋ ಕಂಪನಿಯು ಆರ್ಥಿಕ ಸಂಕಷ್ಟದಿಂದ ಹೊರಬರಲು ಹಲವಾರು ಹೊಸ ಯೋಜನೆಗಳನ್ನು ರೂಪಿಸಿದೆ.

MOST READ: ಕರೋನಾ ಕಾರಣಕ್ಕೆ ಕಾರಿನಲ್ಲೇ ತಂಗುತ್ತಿರುವ ವೈದ್ಯ..!

ಆನ್‌ಲೈನ್ ಕಾರು ಮಾರಾಟ ಮತ್ತು ಸೇವೆಗಳಿಗೆ ಚಾಲನೆ ನೀಡಿದ ವೊಲ್ವೋ

ಇನ್ನು ಕರೋನಾ ವೈರಸ್ ವಿರುದ್ಧದ ಹೋರಾಟದಲ್ಲೂ ಭಾಗಿಯಾಗಿರುವ ವೊಲ್ವೋ ಕಂಪನಿಯು ವಿವಿಧ ಮಾದರಿಯ ವೈದ್ಯಕೀಯ ಉಪಕರಣಗಳನ್ನು ಅಗತ್ಯವಿರುವ ರಾಜ್ಯ ಸರ್ಕಾರಗಳಿಗೆ ಒದಗಿಸಿದ್ದು, ಗ್ರಾಹಕರಿಗೆ ಎರಡು ತಿಂಗಳ ಹೆಚ್ಚುವರಿ ವಾರಂಟಿಯನ್ನು ಘೋಷಣೆ ಮಾಡಿದೆ.

ಆನ್‌ಲೈನ್ ಕಾರು ಮಾರಾಟ ಮತ್ತು ಸೇವೆಗಳಿಗೆ ಚಾಲನೆ ನೀಡಿದ ವೊಲ್ವೋ

ಇದಲ್ಲದೆ ಮಾಹಾಮಾರಿ ಕರೋನಾ ವೈರಸ್ ವಿರುದ್ಧದ ಹೋರಾಟಕ್ಕಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ದೇಣಿಗೆ ಸಂಗ್ರಹ ಅಭಿಯಾನಕ್ಕೆ ಸ್ಪಂದಿಸಿರುವ ಆಟೋ ಉತ್ಪಾದನಾ ಕಂಪನಿಗಳು ಭಾರೀ ಪ್ರಮಾಣದ ಧನಸಹಾಯದ ಜೊತೆಗೆ ವೈದ್ಯಕೀಯ ಉಪಕರಣಗಳನ್ನು ಉತ್ಪಾದನೆ ಮಾಡಿ ವಿವಿಧ ರಾಜ್ಯ ಸರ್ಕಾರಗಳಿಗೆ ವಿತರಣೆ ಮಾಡುತ್ತಿವೆ.

MOST READ: ಲಾಕ್‌ಡೌನ್ ವೇಳೆ ಕಾರು ಚಾಲನೆ ಮಾಡಿ ಸಿಕ್ಕಿಬಿದ್ದ ಮಹಿಳೆಯಿಂದ ಹೈಡ್ರಾಮಾ..

ಆನ್‌ಲೈನ್ ಕಾರು ಮಾರಾಟ ಮತ್ತು ಸೇವೆಗಳಿಗೆ ಚಾಲನೆ ನೀಡಿದ ವೊಲ್ವೋ

ಲಾಕ್‌ಡೌನ್ ವೇಳೆ ಆಟೋ ಉತ್ಪಾದನಾ ಚಟುವಟಿಕೆ ಸಂಪೂರ್ಣ ಸ್ತಬ್ಧವಾಗಿದ್ದರಿಂದ ವೈದ್ಯಕೀಯ ಉಪಕರಣಗಳ ಉತ್ಪಾದನೆ ಹೆಚ್ಚಿನ ಒತ್ತುನೀಡಿರುವ ಆಟೋ ಉತ್ಪಾದನಾ ಕಂಪನಿಗಳು ಮಾಸ್ಕ್, ಹ್ಯಾಂಡ್ ಸ್ಯಾನಿಟೈಜರ್, ಪ್ರೋಟೆಕ್ವಿಟ್ ಕ್ಲಾಥ್, ರ‍್ಯಾಪಿಡ್ ಟೆಸ್ಟಿಂಗ್ ಕಿಟ್, ವೆಂಟಿಲೇಟರ್ ಉತ್ಪಾದನೆ ಮಾಡುತ್ತಿವೆ.

More from DriveSpark

Article Published On: Wednesday, May 6, 2020, 11:26 [IST]
English summary
Volvo Announces Online Platform For Buying Cars & Booking Service. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+