ವೊಲ್ವೋ ಬಹುನಿರೀಕ್ಷಿತ ಎಕ್ಸ್‌ಸಿ 40 ಪ್ರಿಮಿಯಂ ಎಸ್‌ಯುವಿ ಟೀಸರ್ ಸೋರಿಕೆ

Written By:

ಮಧ್ಯಮ ಗಾತ್ರದ ಪ್ರಿಮಿಯಂ ಎಸ್‌ಯುವಿ ವೈಶಿಷ್ಟ್ಯತೆಗಳೊಂದಿಗೆ ಬಿಡುಗಡೆಗೆ ಸಿದ್ಧಗೊಳ್ಳುತ್ತಿರುವ ವೊಲ್ಪೋ ಬಹುನೀರಿಕ್ಷಿತ ಎಕ್ಸ್‌ಸಿ 40 ಕಾರು ಭಾರೀ ನೀರಿಕ್ಷೆ ಹುಟ್ಟುಹಾಕಿದ್ದು, ಈ ನಡುವೆ ಹೊಸ ಕಾರಿನ ಟೀಸರ್ ಚಿತ್ರಗಳು ಸೋರಿಕೆಯಾಗಿವೆ.

To Follow DriveSpark On Facebook, Click The Like Button
ಎಕ್ಸ್‌ಸಿ 40 ಪ್ರಿಮಿಯಂ ಎಸ್‌ಯುವಿ ಟೀಸರ್ ಸೋರಿಕೆ

ಸ್ವೀಡಿಷ್ ಕಾರು ತಯಾರಕ ಸಂಸ್ಥೆಯಾಗಿರುವ ವೊಲ್ಪೋ ಪ್ರಸ್ತುತ ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಸಣ್ಣ ಪ್ರಿಮಿಯಂ ಎಸ್‌ಯುವಿ ಎಕ್ಸ್‌ಸಿ 40 ಕಾರು ಬಿಡುಗಡೆಗೊಳಿಸುತ್ತಿದ್ದು, ಚಾಲಕರನಿಗೆ ಇದೊಂದು ಅತ್ಯುತ್ತಮ ಕಾರು ಮಾದರಿಯಾಗಿದೆ ಎಂದು ಕಂಪನಿ ಹೇಳಿಕೊಂಡಿದೆ.

ವೊಲ್ವೋ ಎಕ್ಸ್‌ಸಿ 40 ಪ್ರಿಮಿಯಂ ಎಸ್‌ಯುವಿ ಟೀಸರ್ ಸೋರಿಕೆ

ಹಲವಾರು ಬಾಹ್ಯ ಮತ್ತು ಆಂತರಿಕ ಬಣ್ಣ ಸಂಯೋಜನೆಯೊಂದಿಗೆ ಅಭಿವೃದ್ಧಿಯಾಗಿರುವ ವೊಲ್ವೋ ಎಕ್ಸ್‌ಸಿ 40 ಕಾರು, ಐಷಾರಾಮಿ ವಿನ್ಯಾಸಗಳಿಂದಾಗಿ ಆಕರ್ಷಣೆಯ ಕೇಂದ್ರವಾಗಿದೆ ತಪ್ಪಾಗಲಾರದು.

ವೊಲ್ವೋ ಎಕ್ಸ್‌ಸಿ 40 ಪ್ರಿಮಿಯಂ ಎಸ್‌ಯುವಿ ಟೀಸರ್ ಸೋರಿಕೆ

ಇನ್ನೊಂದು ವಿಶೇಷ ಅಂದ್ರೆ ಎಕ್ಸ್‌40 ಕಾರು ತಯಾರಿಕೆ ವಿಚಾರದಲ್ಲಿ ಕಾರು ವಿನ್ಯಾಸಕಾರರಿಗೆ ಪೂರ್ಣ ಸ್ವಾತಂತ್ರ್ಯ ನೀಡಿದ್ದ ವೊಲ್ಪೋ, ಚಾಲಕನಿಗೆ ಇದೊಂದು ಅತ್ಯುತ್ತಮ ಮಾದರಿಯಾಗುವ ರೀತಿಯಲ್ಲಿ ಕಾರು ಉತ್ಪಾದನೆಗೆ ಸೂಚನೆ ನೀಡಿತ್ತು.

ವೊಲ್ವೋ ಎಕ್ಸ್‌ಸಿ 40 ಪ್ರಿಮಿಯಂ ಎಸ್‌ಯುವಿ ಟೀಸರ್ ಸೋರಿಕೆ

ಈ ಹಿನ್ನೆಲೆ ಹೊಸ ಕಾರಿನ ಬಗ್ಗೆ ಭಾರೀ ನೀರಿಕ್ಷೆ ಇಟ್ಟುಕೊಂಡಿರುವ ವೊಲ್ವೋ ಸಂಸ್ಥೆಯು, ಎಕ್ಸ್‌ಸಿ40 ಕಾರಿನ ಚಾಲನೆ ವೇಳೆ ಚಾಲಕರು ತಮ್ಮ ವ್ಯಕ್ತಿತ್ವ ತೆರೆದುಕೊಳ್ಳಿ ಎಂಬ ಘೋಷವಾಕ್ಯದೊಂದಿಗೆ ಹೊಸ ಕಾರನ್ನು ಸಿದ್ಧಗೊಳಿಸುತ್ತಿದೆ.

ವೊಲ್ವೋ ಎಕ್ಸ್‌ಸಿ 40 ಪ್ರಿಮಿಯಂ ಎಸ್‌ಯುವಿ ಟೀಸರ್ ಸೋರಿಕೆ

ಎಂಜಿನ್

ಮೂಲಗಳ ಪ್ರಕಾರ 1.5-ಲೀಟರ್ ಮತ್ತು 2.0-ಲೀಟರ್ ಪೆಟ್ರೋಲ್ ಎಂಜಿನ್‌ನೊಂದಿಗ ಎಕ್ಸ್‌ಸಿ 40 ಬಿಡುಗಡೆ ಸಾಧ್ಯತೆಯಿದ್ದು, 2018ರ ಸ್ಪಿಡಿಷ್ ಆಟೋ ಪ್ರದರ್ಶನದ ನಂತರವಷ್ಟೇ ಮಾರುಕಟ್ಟೆಗೆ ಲಗ್ಗೆಯಿಡಲಿದೆ.

ವೊಲ್ವೋ ಎಕ್ಸ್‌ಸಿ 40 ಪ್ರಿಮಿಯಂ ಎಸ್‌ಯುವಿ ಟೀಸರ್ ಸೋರಿಕೆ

ಇನ್ನು ಕಾರಿನ ಒಳಭಾಗದಲ್ಲಿ ಬೆಚ್ಚಗಿನ ಲಾವಾ ಆರೆಂಜ್ ಕಾರ್ಪೆಟ್, ಆಕ್ಸೈಡ್ ರೆಡ್, ನಗರ ವಿನ್ಯಾಸಗಳು ಮತ್ತು ಕಾರ್ಟೋಗ್ರಫಿಗಳಿಂದ ಸ್ಫೂರ್ತಿ ಪಡೆದ ವಿನ್ಯಾಸಗಳು ಎಕ್ಸ್‌ಸಿ 40 ಅಂದಕ್ಕೆ ಮತ್ತಷ್ಟು ಮೆರಗು ನೀಡಿವೆ.

ವೊಲ್ವೋ ಎಕ್ಸ್‌ಸಿ 40 ಪ್ರಿಮಿಯಂ ಎಸ್‌ಯುವಿ ಟೀಸರ್ ಸೋರಿಕೆ

ಡ್ರೈವ್ ಸ್ಪಾರ್ಕ್ ಅಭಿಪ್ರಾಯ

ಬಹುದಿನಗಳಿಂದ ಇಂತದೊಂದು ವಿಶಿಷ್ಠ ವಿನ್ಯಾಸದ ಕಾರು ಒಂದನ್ನು ಬಿಡುಗಡೆ ಮಾಡುವ ಬಗ್ಗೆ ಯೋಜನೆ ರೂಪಿಸುತ್ತಿದ್ದ ವೊಲ್ವೋ ಈ ಬಾರಿ ಎಕ್ಸ್‌ಸಿ 40ನೊಂದಿಗೆ ಮರ್ಸಿಡಿಸ್ ಬೆಂಝ್ ಜಿಎಲ್ಎ, ಬಿಎಂಡಬ್ಲ್ಯು ಎಕ್ಸ್1 ಮತ್ತು ಆಡಿ ಕ್ಯೂ3 ಮಾದರಿಗಳಿಗೆ ತೀವ್ರ ಸ್ಪರ್ಧೆ ನೀಡಲಿದೆ.

Read more on ವೊಲ್ವೋ volvo
English summary
Read in Kannada about Volvo XC40 Teaser Image Leaked Ahead of Debut.
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark