ಬೆಂಗಳೂರಿನ ಟ್ರಾಫಿಕ್ ಪೊಲೀಸರು ಈ ವರ್ಷ ಸಂಗ್ರಹಿಸಿದ ದಂಡದ ಮೊತ್ತವನ್ನು ಕೇಳಿದ್ರೆ ಶಾಕ್ ಆಗ್ತಿರಾ..!!
ರಸ್ತೆ ನಿಯಮ ಉಲ್ಲಂಘಿಸುವರ ಸಂಖ್ಯೆ ಕೂಡಾ ಹೆಚ್ಚಳವಾಗುತ್ತಿದ್ದು, ಇದೇ ಕಾರಣಕ್ಕೆ ಟ್ರಾಫಿಕ್ ಪೊಲೀಸರು ಅಂದುಕೊಂಡಿದ್ದಕ್ಕಿಂತಲೂ ಬೃಹತ್ ಪ್ರಮಾಣದಲ್ಲಿ ದಂಡವನ್ನು ವಸೂಲಿ ಮಾಡಿದ್ದಾರೆ.
ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ದಿನದಿಂದ ದಿನಕ್ಕೆ ವಾಹನಗಳ ಸಂಖ್ಯೆ ದ್ವಿಗುಣಗೊಳ್ಳುತ್ತಿದೆ. ಜೊತೆಗೆ ಅಷ್ಟೇ ಪ್ರಮಾಣದಲ್ಲಿ ರಸ್ತೆ ನಿಯಮ ಉಲ್ಲಂಘಿಸುವರ ಸಂಖ್ಯೆ ಕೂಡಾ ಹೆಚ್ಚಳವಾಗುತ್ತಿದ್ದು, ಇದೇ ಕಾರಣಕ್ಕೆ ಟ್ರಾಫಿಕ್ ಪೊಲೀಸರು ಅಂದುಕೊಂಡಿದ್ದಕ್ಕಿಂತಲೂ ಬೃಹತ್ ಪ್ರಮಾಣದಲ್ಲಿ ದಂಡವನ್ನು ವಸೂಲಿ ಮಾಡಿದ್ದಾರೆ.

ಹೌದು.. ಬೆಂಗಳೂರಿನಲ್ಲಿ ವಾಹನ ಚಾಲನೆ ಮಾಡುವ ಮುನ್ನ ಮೋಟಾರ್ ಕಾಯ್ದೆ ನಿಯಮಾನುಸಾರ ಚಾಲನೆ ಮಾಡುತ್ತಿದ್ದೇನೆ ಇಲ್ಲವೋ ಎಂಬುವುದನ್ನು ಖಚಿತ ಪಡಿಸಿಕೊಂಡ ನಂತರವೇ ವಾಹನಗಳನ್ನು ರಸ್ತೆಗಿಳಿಸುವುದು ಒಳಿತು. ಇಲ್ಲವಾದ್ರೆ ಟ್ರಾಫಿಕ್ ಪೊಲೀಸರು ಜಡಿಯುವ ಕೇಸ್‌ಗಳಿಗೆ ನಿಮ್ಮ ತಿಂಗಳ ಸಂಬಳವೇ ಖಾಲಿಯಾಗಬಹುದು.

ಯಾಕೆಂದ್ರೆ ಕಳೆದ ಮಾರ್ಚ್‌ನಲ್ಲಿ ಜಾರಿಯಾಗಿರುವ 'ಮೋಟಾರ್ ಕಾಯ್ದೆ 2016' ನಿಯಮಾನುಸಾರ ರಸ್ತೆ ನಿಯಮ ಉಲ್ಲಂಘನೆಯ ದಂಡದ ಮೊತ್ತಗಳು ದ್ವಿಗುಣಗೊಂಡಿದ್ದು, ಬೆಂಗಳೂರು ಟ್ರಾಫಿಕ್ ಪೊಲೀಸರಿಗೆ ಈ ಬಾರಿ ಬೃಹತ್ ಪ್ರಮಾಣದ ದಂಡದ ಮೊತ್ತ ಹರಿದುಬಂದಿದೆ.
Recommended Video


ನೂರು ಕೋಟಿ ದಾಟಿದ ದಂಡದ ಸಂಗ್ರಹ
ಇನ್ನು 2017 ಪೂರ್ಣಗೊಂಡಿಲ್ಲ ಆಗಲೇ ಬೆಂಗಳೂರು ಟ್ರಾಫಿಕ್ ಪೊಲೀಸರ ದಂಡ ಸಂಗ್ರಹ 102 ಕೋಟಿ ತಲುಪಿದ್ದು, ಟ್ರಾಫಿಕ್ ನಿಯಮ ಉಲ್ಲಂಘಿಸಿದರ ಸಂಖ್ಯೆ 94,63,333ಕ್ಕೆ ತಲುಪಿದೆ.

ಕಳೆದ ವರ್ಷ ಇದೇ ಅವಧಿಯಲ್ಲಿ 91,80,438 ಕೇಸ್‌ಗಳನ್ನು ದಾಖಲಿಸಿದ್ದ ಟ್ರಾಫಿಕ್ ಪೊಲೀಸರು 66.97 ಕೋಟಿ ದಂಡ ಸಂಗ್ರಹಿಸಿದ್ದರು. ಆದ್ರೆ ಈ ವರ್ಷ ಜಾರಿಗೆ ಬಂದ ಹೊಸ ಮೋಟಾರ್ ಕಾಯ್ದೆ ವಾಹನ ಸವಾರರನ್ನು ಇಕ್ಕಟ್ಟಿಗೆ ಸಿಲುಕಿಸುವಂತೆ ಮಾಡಿದೆ.
ತಪ್ಪದೇ ಓದಿ-ರಸ್ತೆ ನಿಯಮ ಉಲ್ಲಂಘಿಸುವರಿಗೆ ಕಾದಿದೆ ಮಾರಿಹಬ್ಬ- ಯಾವ ನಿಯಮ ಉಲ್ಲಂಘನೆಗೆ ಎಷ್ಟು ದಂಡ ಗೊತ್ತಾ?

ಇದಲ್ಲಿದೇ 2015ರಲ್ಲೂ ರಸ್ತೆ ಉಲ್ಲಂಘಿಸಿದವರ ಸಂಖ್ಯೆ ಕೂಡಾ ಹೆಚ್ಚಿದ್ದು, 76,26,671 ಕೇಸ್‌ಗಳು ದಾಖಲಾಗುವ ಮೂಲಕ 70.44 ಲಕ್ಷ ದಂಡ ಸಂಗ್ರಹವಾಗಿತ್ತು. ಈ ಮೂಲಕ ನಿಯಮ ಉಲ್ಲಂಘಿಸುವ ವಾಹನ ಸವಾರರಿಗೆ ಟ್ರಾಫಿಕ್ ಪೊಲೀಸರು ಭರ್ಜರಿಯಾಗಿ ಶಾಕ್ ನೀಡಿದ್ದರು.

ಇನ್ನು ಸಂಗ್ರಹವಾದ 102 ಕೋಟಿ ದಂಡ ಮೊತ್ತದಲ್ಲಿ 20 ಕೋಟಿ ದಂಡವನ್ನು ನೋ ಪಾರ್ಕಿಂಗ್ ನಿಯಮದಿಂದ ಸಂಗ್ರಹಿಸಲಾಗಿದ್ದು, ಸಿಗ್ನಲ್ ಜಂಪ್ ಮಾಡಿದವರ ವಿರುದ್ಧ ದಾಖಲಿಸಲಾಗಿದ್ದ ಕೇಸ್‌ಗಳಿಂದ ಬರೋಬ್ಬರಿ 2 ಕೋಟಿ ದಂಡವನ್ನು ಸಂಗ್ರಹಿಸಲಾಗಿದೆ.

ಹೀಗಾಗಿ ಬೆಂಗಳೂರು ವಾಹನ ಸವಾರರು ವಾಹನ ಚಾಲನೆಗೂ ಮುನ್ನ ಮೋಟಾರ್ ಕಾಯ್ದೆ ನಿಯಮಾನುಸಾರ ಅಗತ್ಯ ದಾಖಲೆಗಳನ್ನು ಹೊಂದುವುದಲ್ಲದೇ ಸುರಕ್ಷಿತ ವಾಹನ ಚಾಲನೆ ಮಾಡುವುದು ಒಳಿತು. ಇಲ್ಲವಾದ್ರೆ ಟ್ರಾಫಿಕ್ ಪೊಲೀಸರ ದಂಡದ ಸಂಗ್ರಹ ಮುಂದಿನ ವರ್ಷ 150 ಕೋಟಿಯಾಗುವುದಲ್ಲಿ ಯಾವುದೇ ಅನುಮಾನವಿಲ್ಲ.
ಸುದ್ದಿ ಮೂಲ- 'ದ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್'
ತಪ್ಪದೇ ಓದಿ-ಯಾಕ್ರಿ ಲಂಚ ಕೊಡ್ತಿರಾ? ಇನ್ಮುಂದೆ ಸುಲಭದಲ್ಲೇ ಸಿಗಲಿದೆ ಡ್ರೈವಿಂಗ್ ಲೈಸೆನ್ಸ್..!!


Click it and Unblock the Notifications








