ಗಂಟೆಗೆ 405 ಕಿ.ಮಿ ವೇಗದಲ್ಲಿ ಚಾಲನೆ- ನಿಸ್ಸಾನ್ ಜಿಟಿ-ಆರ್‌ನಿಂದ ಹೊಸ ಮೈಲಿಗಲ್ಲು..!!
ಕಾರುಗಳ ವೇಗದಲ್ಲಿ ಹೆಚ್ಚಳ ಕುರಿತಂತೆ ದಿನಕ್ಕೊಂದು ಆವಿಷ್ಕಾರ ನಡೆಯುತ್ತಿದ್ದು, ಸದ್ಯ ನಿಸ್ಸಾನ್ ಜಿಟಿ-ಆರ್ ಗಂಟೆಗೆ 405 ಕಿ.ಮಿ ವೇಗದಲ್ಲಿ ಚಲಿಸುವ ಮೂಲಕ ಹೊಸ ಮೈಲಿಗಲ್ಲು ಸಾಧಿಸಿದೆ.
ಕಾರುಗಳ ವೇಗದಲ್ಲಿ ಹೆಚ್ಚಳ ಕುರಿತಂತೆ ದಿನಕ್ಕೊಂದು ಆವಿಷ್ಕಾರ ನಡೆಯುತ್ತಿದ್ದು, ಸದ್ಯ ನಿಸ್ಸಾನ್ ಜಿಟಿ-ಆರ್ ಗಂಟೆಗೆ 405 ಕಿ.ಮಿ ವೇಗದಲ್ಲಿ ಚಲಿಸುವ ಮೂಲಕ ಹೊಸ ಮೈಲಿಗಲ್ಲು ಸಾಧಿಸಿದೆ.

ಸೂಪರ್ ಕಾರುಗಳಲ್ಲಿ ಒಂದಾಗಿರುವ ನಿಸ್ಸಾನ್ ಜಿಟಿ-ಆರ್ ಕೇವಲ ಐಷಾರಾಮಿ ಕಾರು ಅಷ್ಟೇ ಅಲ್ಲ, ಬದಲಾಗಿ ಅದು ಅತಿ ವೇಗದ ಕಾರು ಮಾದರಿ ಎಂದ್ರೆ ತಪ್ಪಾಗಲಾಗರಾದು. ಯಾಕೇಂದ್ರೆ ಜಿಟಿ-ಆರ್ ಮಾಡಿರುವ ಹೊಸ ಸಾಧನೆ ಇದೀಗ ವಿಶ್ವಾದ್ಯಂತ ಸದ್ದು ಮಾಡುತ್ತಿದೆ.

ಐಷಾರಾಮಿ ಕಾರು ಮಾದರಿಗಳಲ್ಲೇ ಅತಿಹೆಚ್ಚು 3,000-ಬಿಎಚ್‌ಪಿ ಉತ್ಪಾದನಾ ಶಕ್ತಿ ಹೊಂದಿರುವ ನಿಸ್ಸಾನ್ ಜಿಟಿ-ಆರ್, ವಿ6 ಎಂಜಿನ್ ಹೊಂದಿದೆ.

ಈ ಮೂಲಕ ಅತಿಹೆಚ್ಚು ಶಕ್ತಿ ಉತ್ಪಾದನಾ ಮಾಡುವ ಜಿಟಿ-ಆರ್ ಮಾದರಿಯೂ, ಗಂಟೆಗೆ 405 ಕಿ.ಮಿ ವೇಗದಲ್ಲಿ ಚಲಿಸುವ ಸಾಮಥ್ಯ ಹೊಂದಿದೆ. ಇದು ಕೇವಲ 1 ಕಿ.ಮಿ ಅಂತರದಲ್ಲಿ ಕ್ರಮಿಸಿದ ವೇಗವಾಗಿದ್ದು, ಜೆಟ್ ವಿಮಾನಗಳಿಗೂ ಸ್ಪರ್ಧೆ ನೀಡಬಲ್ಲ ಶಕ್ತಿ ಹೊಂದಿದೆ.
ಈ ಹಿಂದೆ ಗಂಟೆಗೆ 380 ಕಿ.ಮಿ ವೇಗದಲ್ಲಿ ಚಲಿಸುವ ಶಕ್ತಿ ಹೊಂದಿದ್ದ ಲಂಬೋರ್ಗಿನಿ ಹೊಸ ಆವೃತ್ತಿ ಸಾಧನೆಯನ್ನು ಅಳಿಸಿ ಹಾಕಿರುವ ಜಿಟಿ-ಆರ್, ಸದ್ಯ ವಿಶ್ವದ ಕಾರು ರೇಸಿಂಗ್ ಸ್ಪರ್ಧಿಗಳನ್ನು ಸೆಳೆಯುತ್ತಿದೆ.


Click it and Unblock the Notifications