ವಿಶ್ವದ ಅತ್ಯಂತ ಬೆಲೆಬಾಳುವ ಕಾರ್ ಬ್ರ್ಯಾಂಡ್‌ ಯಾವುದು ಗೊತ್ತಾ?

Written By:

ವಿಶ್ವ ಆಟೋಮೊಬೈಲ್ ಉದ್ಯಮದಲ್ಲಿ ದಿನಕ್ಕೊಂದು ಹೊಸ ಹೊಸ ಕಾರು ಮಾದರಿಗಳು ಲಗ್ಗೆಯಿಡುತ್ತವೆ. ಆದ್ರೆ ಕೆಲವೇ ಕಾರು ಮಾದರಿಗಳು ಮಾತ್ರ ಗ್ರಾಹಕರನ್ನು ಸೆಳೆಯುವಲ್ಲಿ ಯಶಸ್ವಿಯಾಗುತ್ತವೆ. ಅಂತಹ ಪ್ರಮುಖ ಕಾರು ಮಾದರಿಯೊಂದರ ಮಾಹಿತಿ ಇಲ್ಲಿದೆ.

ವಿಶ್ವದ ಅತ್ಯಂತ ಬೆಲೆಬಾಳುವ ಕಾರ್ ಬ್ರ್ಯಾಂಡ್‌ ಯಾವುದು ಗೊತ್ತಾ?

ವಿಶ್ವ ಆಟೋ ಮೊಬೈಲ್ ಉದ್ಯಮದಲ್ಲಿ ತನ್ನದೇ ಪ್ರಭಾವ ಹೊಂದಿರುವ ಟೊಯೊಟಾ ಸಂಸ್ಥೆಯು, ವಿಶ್ವದ ಅತ್ಯಂತ ಬೆಲೆಬಾಳುವ ಕಾರ್ ಬ್ರ್ಯಾಂಡ್ ಆಗಿ ಹೊರಹೊಮ್ಮಿದೆ.

ವಿಶ್ವದ ಅತ್ಯಂತ ಬೆಲೆಬಾಳುವ ಕಾರ್ ಬ್ರ್ಯಾಂಡ್‌ ಯಾವುದು ಗೊತ್ತಾ?

ಇತ್ತೀಚೆಗೆ ನಡೆದ ಸಮೀಕ್ಷೆಯೊಂದರಲ್ಲಿ ಈ ಮಹತ್ವದ ವಿಚಾರ ಬಹಿರಂಗಗೊಂಡಿದ್ದು, ಪ್ರಮುಖ 100 ಕಾರು ಉತ್ಪಾದನಾ ಸಂಸ್ಥೆಗಳಲ್ಲಿ ಟೊಯೊಟಾ ಮುಂಚೂಣಿಯಲ್ಲಿದೆ.

ವಿಶ್ವದ ಅತ್ಯಂತ ಬೆಲೆಬಾಳುವ ಕಾರ್ ಬ್ರ್ಯಾಂಡ್‌ ಯಾವುದು ಗೊತ್ತಾ?

ಕಳೆದ 12 ವರ್ಷಗಳಲ್ಲಿ ನಂ.1 ಸ್ಥಾನವನ್ನು ಕಾಯ್ದುಕೊಂಡು ಬಂದಿರುವ ಟೊಯೊಟಾ ಸಂಸ್ಥೆಯು, ವಿಶ್ವಾದ್ಯಂತ ಅಗ್ಗದ ದರದಲ್ಲಿ ಕಾರುಗಳನ್ನು ಉತ್ಪಾದನೆ ಮಾಡುವ ಮೂಲಕ ಜನಪ್ರಿಯತೆ ಪಡೆದಿದೆ.

ವಿಶ್ವದ ಅತ್ಯಂತ ಬೆಲೆಬಾಳುವ ಕಾರ್ ಬ್ರ್ಯಾಂಡ್‌ ಯಾವುದು ಗೊತ್ತಾ?

ಸದ್ಯ $ 28.7 ಬಿಲಿಯನ್ ಡಾಲರ್ ಮೌಲ್ಯ ಹೊಂದಿರುವ ಟೊಯೊಟಾ ಸಂಸ್ಥೆಯು, ಐಷಾರಾಮಿ ಕಾರು ಉತ್ಪಾದನಾ ಸಂಸ್ಥೆಗಳಿಗೆ ತೀವ್ರ ಪೈಪೋಟಿ ನೀಡುತ್ತಿದೆ.

ವಿಶ್ವದ ಅತ್ಯಂತ ಬೆಲೆಬಾಳುವ ಕಾರ್ ಬ್ರ್ಯಾಂಡ್‌ ಯಾವುದು ಗೊತ್ತಾ?

ಬ್ರ್ಯಾಂಡ್ ಮೌಲ್ಯದಲ್ಲಿ ಟೊಯೊಟಾ ನಂತರ ಸ್ಥಾನ ಪಡೆದಿರುವ ಬಿಎಂಡಬ್ಲ್ಯು ಹಾಗೂ ಮರ್ಸಿಡಿಸ್ ಬೆಂಝ್ ಸಂಸ್ಥೆಗಳು ಕೂಡಾ ಕ್ರಮವಾಗಿ $24.6 ಬಿಲಿಯನ್ ಡಾಲರ್, $23.5 ಬಿಲಿಯನ್ ಡಾಲರ್ ಬ್ರ್ಯಾಂಡ್ ಮೌಲ್ಯ ಹೊಂದಿವೆ.

ವಿಶ್ವದ ಅತ್ಯಂತ ಬೆಲೆಬಾಳುವ ಕಾರ್ ಬ್ರ್ಯಾಂಡ್‌ ಯಾವುದು ಗೊತ್ತಾ?

ಇದೆಲ್ಲದರ ಮಧ್ಯೆ ಶೇಕಡಾ ವಾರು ಬೆಳವಣಿಗೆಯಲ್ಲಿ ಕುಸಿತ ಕಂಡಿರುವ ಟೊಯೊಟಾ, ಬಿಎಂಡಬ್ಲ್ಯು ಮತ್ತು ಮರ್ಸಿಡಿಸ್ ಸಂಸ್ಥೆಗಳಿಂತ ಶೇ.3ರಷ್ಟು ಹಿನ್ನಡೆ ಅನುಭವಿಸಿದೆ.

ವಿಶ್ವದ ಅತ್ಯಂತ ಬೆಲೆಬಾಳುವ ಕಾರ್ ಬ್ರ್ಯಾಂಡ್‌ ಯಾವುದು ಗೊತ್ತಾ?

ಟೊಯೊಟಾ, ಬಿಎಂಡಬ್ಲ್ಯು , ಮರ್ಸಿಡಿಸ್ ನಂತರದ ಸ್ಥಾನದಲ್ಲಿರುವ ಲ್ಯಾಂಡ್ ರೋವರ್ ಹಾಗೂ ಟೆಸ್ಲಾ ಕೂಡಾ ಉತ್ತಮ ಬೆಳವಣಿಗೆ ಕಂಡಿದ್ದು, ಐಷಾರಾಮಿ ಕಾರು ಉತ್ವಾದನೆ ಮೂಲಕ ಪ್ರಗತಿ ಸಾಧಿಸುತ್ತಿವೆ.

English summary
Toyota is the world's most valuable car brand as per a recent study conducted by a market research group.
Story first published: Wednesday, June 7, 2017, 12:35 [IST]
Please Wait while comments are loading...

Latest Photos