ಮೆಕ್ಲಾರೆನ್ ಹೋಲಿಕೆಯ ಸೂಪರ್ ಕಾರು ಮಾದರಿಯನ್ನು ಸಿದ್ಧಗೊಳಿಸಿದ ಯಮಹಾ
ಯಮಹಾ ಸಂಸ್ಥೆಯು ಮೂರನೇ ಬಾರಿಗೆ ಮತ್ತೊಂದು ಸೂಪರ್ ಕಾರು ಪರಿಕಲ್ಪನೆಯನ್ನು ಪ್ರದರ್ಶಿಸಲು ಮುಂದಾಗಿದ್ದು, ಮುಂಬರುವ ಟೊಕಿಯೊ ಆಟೋ ಮೇಳದಲ್ಲಿ ತನ್ನ ಹೊಸ ಕಾರಿನ ಮಾಹಿತಿಯನ್ನು ಬಿಚ್ಚಿಡಲಿದೆ.
ದ್ವಿಚಕ್ರ ವಾಹನಗಳ ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿರುವ ಯಮಹಾ ಸಂಸ್ಥೆಯು ಮೂರನೇ ಬಾರಿಗೆ ಮತ್ತೊಂದು ಸೂಪರ್ ಕಾರು ಪರಿಕಲ್ಪನೆಯನ್ನು ಪ್ರದರ್ಶಿಸಲು ಮುಂದಾಗಿದ್ದು, ಮುಂಬರುವ ಟೊಕಿಯೊ ಆಟೋ ಮೇಳದಲ್ಲಿ ತನ್ನ ಹೊಸ ಕಾರಿನ ಮಾಹಿತಿಯನ್ನು ಬಿಚ್ಚಿಡಲಿದೆ.

ಈ ಹಿಂದೆ 2013 ಮತ್ತು 2015ರಲ್ಲಿ ಎರಡು ಹೊಸ ಕಾರು ಮಾದರಿಗಳನ್ನು ಪ್ರದರ್ಶನಗೊಳಿಸಿದ್ದ ಯಮಹಾ ಸಂಸ್ಥೆಯು ಇದೀಗ ಮತ್ತೊಂದು ವಿನೂತನ ಸೂಪರ್ ಕಾರು ಮಾದರಿಯ ಪ್ರದರ್ಶನಕ್ಕೆ ಮುಂದಾಗಿದ್ದು, ಭಾರೀ ನೀರಿಕ್ಷೆ ಹುಟ್ಟುಹಾಕಿದೆ.

ಸದ್ಯ ಮಾರುಕಟ್ಟೆಯಲ್ಲಿ ಸಾಕಷ್ಟು ಜನಪ್ರಿಯತೆ ಪಡೆದಿರುವ ಮೆಕ್ಲಾರೆನ್ ಎಫ್1 ಡಿಸೈಲ್ ಆಧಾರದಲ್ಲೇ ಯಮಹಾ ಸೂಪರ್ ಕಾರು ಕೂಡಾ ನಿರ್ಮಾಣವಾಗಿದ್ದು, ಪ್ರಸ್ತುತ ಸೂಪರ್ ಕಾರು ಆವೃತ್ತಿಗಳಲ್ಲೇ ಅತ್ಯಂತ ಕಡಿಮೆ ಬೆಲೆಗೆ ಪರಿಚಯಿಸುವ ಸುಳಿವು ನೀಡಿದೆ.
Recommended Video


ಹೀಗಾಗಿ ಅಗತ್ಯ ಸೌಲಭ್ಯಗಳನ್ನು ಹೊರತುಪಡಿಸಿ ಕೆಲವು ಐಷಾರಾಮಿ ವೈಶಿಷ್ಟ್ಯತೆಗಳಿಗೆ ಕತ್ತರಿ ಹಾಕಲಿರುವ ಯಮಹಾ ಸಂಸ್ಥೆಯು ಕಡಿಮೆ ಬೆಲೆಗೆ ಸೂಪರ್ ಕಾರುನ್ನು ಸಿದ್ಧಗೊಳಿಸಿದ್ದು, ಸ್ಥಿರವಾದ ಮೇಲ್ಛಾವಣೆ ಹೊಂದಿರಲಿವೆ.

ಎಂಜಿನ್ ಸಾಮರ್ಥ್ಯ
ಮೇಲೆ ಹೇಳಿದಂತೆ ಕಡಿಮೆ ಬೆಲೆ ಕಾರು ಮಾದರಿಯಾಗಿರುವುದರಿಂದ 1.0-ಲೀಟರ್ ತ್ರಿ ಸಿಲಿಂಡರ್ ಟರ್ಬೋ ಚಾರ್ಜ್ಡ್ ಎಂಜಿನ್ ಒದಗಿಸಲಾಗಿದ್ದು, 100-ಬಿಎಚ್‌ಪಿ ಉತ್ಪಾದಿಸಬಲ್ಲ ಶಕ್ತಿ ಪಡೆದುಕೊಂಡಿವೆ ಎನ್ನಲಾಗಿದೆ.

ಈ ಮೂಲಕ ಈ ಹಿಂದೆ ಪ್ರದರ್ಶನ ಮಾಡಿದ್ದ ಸ್ಪೋರ್ಟ್ ರೈಡ್ ಮತ್ತು ಮೋಟಿವ್ ಸಿಟಿ ಮಾದರಿಗಿಂತ ಹೊಸ ಮಾದರಿಯು ಹೆಚ್ಚು ಆಕರ್ಷಣೆಗೆ ಕಾರಣವಾಗಿದ್ದು, ಇದೇ ತಿಂಗಳು ಕೊನೆಯಲ್ಲಿ ಆರಂಭವಾಗಲಿರುವ ಟೊಕಿಯೊ ಮೋಟಾರ್ ಪ್ರದರ್ಶನದಲ್ಲಿ ಹೊಸ ಕಾರಿನ ಸಂಪೂರ್ಣ ಮಾಹಿತಿ ಲಭ್ಯವಾಗಲಿದೆ.

ಡ್ರೈವ್ ಸ್ಪಾರ್ಕ್ ಅಭಿಪ್ರಾಯ
ಇದುವರೆಗೆ ಎರಡು ಹೊಸ ಮಾದರಿಯ ಕಾರುಗಳನ್ನು ಪ್ರದರ್ಶನ ಮಾಡಿರುವ ಯಮಹಾ ಕಾರಣಾಂತರಗಳಿಂದ ಇದರುವರೆಗೂ ಅವುಗಳನ್ನು ಮಾರುಕಟ್ಟೆಗೆ ಪರಿಚಯಿಸಿಲ್ಲ. ಹೀಗಾಗಿ ಪ್ರದರ್ಶನ ಮಾಡುತ್ತಿರುವ ಮೂರನೇ ಕಾರು ಆವೃತ್ತಿಯು ಕೇವಲ ಪ್ರದರ್ಶನಕ್ಕೆ ಸೀಮಿತವಾಗದಿರಲಿ ಎನ್ನುವುದೇ ಆಟೋ ತಂತ್ರಜ್ಞರ ಅಭಿಪ್ರಾಯ.


Click it and Unblock the Notifications