ಬಿಡುಗಡೆಗೊಂಡ 15 ಆಸನವುಳ್ಳ ಟಾಟಾ ವಿಂಗರ್.. ಬೆಲೆ ಎಷ್ಟು.?
ದೇಶಿಯ ವಾಹನ ತಯಾರಕ ಸಂಸ್ಥೆಯಾದ ಟಾಟಾ ಮೋಟರ್ಸ್ 2007ರಲ್ಲಿ ಮೊದಲ ಬಾರಿಗೆ ತಮ್ಮ ಕಮರ್ಷಿಯಲ್ ವೆಹಿಕಲ್ ವಿಂಗರ್ ಕಾರನ್ನು ಬಿಡುಗಡೆಗೊಳಿಸಿತ್ತು. ಇದೀಗ ಸಂಸ್ಥೆಯು 15 ಆಸನವುಳ್ಳ ವಿಂಗರ್ 15ಎಸ್ ವಾಹನವನ್ನು ಮಾರುಕಟ್ಟೆಗೆ ಪರಿಚಯಿಸಲಾಗಿದೆ.
ದೇಶಿಯ ವಾಹನ ತಯಾರಕ ಸಂಸ್ಥೆಯಾದ ಟಾಟಾ ಮೋಟರ್ಸ್ 2007ರಲ್ಲಿ ಮೊದಲ ಬಾರಿಗೆ ತಮ್ಮ ಕಮರ್ಷಿಯಲ್ ವೆಹಿಕಲ್ ವಿಂಗರ್ ಕಾರನ್ನು ಬಿಡುಗಡೆಗೊಳಿಸಿತ್ತು. ಇದೀಗ ಸಂಸ್ಥೆಯು 15 ಆಸನವುಳ್ಳ ವಿಂಗರ್ 15ಎಸ್ ವಾಹನವನ್ನು ಮಾರುಕಟ್ಟೆಗೆ ಪರಿಚಯಿಸಲಾಗಿದೆ. ಹೊಸದಾಗಿ ಬಿಡುಗಡೆಗೊಂಡ 15 ಸೀಟರ್ ವಿಂಗರ್ ದೆಹಲಿಯ ಎಕ್ಸ್ ಶೋರಂ ಪ್ರಕಾರ ರೂ. 12.05 ಲಕ್ಷಕ್ಕೆ ಬೆಲೆಯನ್ನು ನಿಗದಿಪಡಿಸಲಾಗಿದೆ.

ಹೊಸ 15 ಸೀಟರ್ ವಿಂಗರ್ 15ಎಸ್ ವಾಹನವು ದೇಶದೆಲ್ಲೆಡೆ ಇರುವ 23 ಅಧಿಕೃತ ಡೀಲರ್‍ಗಳ ಬಳಿ ಖರೀದಿಗೆ ಲಭ್ಯವಿದ್ದು, ಈ ಬಾರಿ ಪ್ರಯಾಣಿಕರಿಗೆ ಉಪಯೋಗವಾಗುವಂತೆ ಹತ್ತು ಹಲವು ವೈಶಿಷ್ಟ್ಯತೆಗಳನ್ನು ಅಳವಡಿಸಲಾಗಿದೆ.

ನೂತನ ವಿಂಗರ್ 15ಎಸ್ ಬಿಡುಗಡೆಯ ಬಗ್ಗೆ ಮಾತನಾಡುತ್ತ ಟಾಟಾ ಮೋಟರ್ಸ್‍ನ ಹೆಡ್ ಸೇಲ್ಸ್ ಮತ್ತು ಮಾರ್ಕೆಟಿಂಗ್, ಪ್ಯಾಸೆಂಜರ್ ಕಮರ್ಷಿಯಲ್ ವೆಹಿಕಲ್ ಬಿಸಿನೆಸ್ ಯುನಿಟ್‍ನ ಸಂದೀಪ್ ಕುಮಾರ್ ಅವರು " ಕ್ಷಿಪ್ರ ನಗರೀಕರಣ, ಸಂಚಾರ ದಟ್ಟಣೆ ಮತ್ತು ಪರಿಸರ ಕಾಳಜಿ ಹೊಂದಿರುವ ದೇಶಗಳಲ್ಲಿ; ಟಾಟಾ ವಿಂಗರ್ 15 ಎಸ್ ಆಟವು ಬದಲಾಗುವ ಉತ್ಪನ್ನವಾಗಿದೆ.

ಇದು ಟೂರ್ ಮತ್ತು ಟ್ರಾವೆಲ್ ಆಪರೇಟರ್‍ಗಳಿಗೆ ಉತ್ಪನ್ನದ ನಿರ್ವಹಣೆಯ ಅಗತ್ಯತೆ ಮತ್ತು ಇಂಧನ ದಕ್ಷತೆಯ ಅಗತ್ಯತೆಯನ್ನು ತಿಳಿಸುತ್ತದೆ. ಟಾಟಾ ವಿಂಗರ್ 15ಎಸ್ ಅನ್ನು ನಿರ್ವಾಹಕರಿಗೆ ಪ್ರಯಾಣಿಕರಿಗೆ ಮತ್ತು ಆರ್ಥಿಕತೆಗೆ ಒಂದು ಅನನ್ಯ ಸಂಯೋಜನೆಯನ್ನು ಒದಗಿಸುವಂತೆ ವಿನ್ಯಾಸಗೊಳಿಸಲಾಗಿದೆ." ಎಂದು ಹೇಳಿಕೊಂಡಿದ್ದಾರೆ.

ಟಾಟಾ ವಿಂಗರ್ 15ಎಸ್ 5458ಎಮ್ಎಮ್ ಉದ್ದ, 1905ಎಮ್ಎಮ್ ಅಗಲ, 15 ಇಂಚಿನ ಅಲಾಯ್ ಚಕ್ರಗಳು, 180ಎಮ್ಎಮ್ ಗ್ರೌಂಡ್ ಕ್ಲಿಯರೆನ್ಸ್ ಮತ್ತು 600 ಲೀಟರ್‍ನ ಲಗೇಜ್ ಕ್ಯಾಪಸಿಟಿಯನ್ನು ಪಡೆದುಕೊಂಡಿದೆ.

ಈ ಬಾರಿ ಹೊಸ ವಿಂಗರ್ 15ಎಸ್ ವಾಹನದಲ್ಲಿ ಪುಷ್ ಬ್ಯಾಕ್ ಸೀಟ್ಸ್, ಇಂಡಿವಿಶ್ಯಲ್ ಎಸಿ ವೆಂಟ್ಸ್ ಮತ್ತು ಎಲ್ಲಾ ಸೀಟ್‍ಗಳಿಗು ಯುಎಸ್‍ಬಿ ಚಾರ್ಜಿಂಗ್ ಪಾಯಿಂಟ್‍ಗಳನ್ನು ನೀಡಲಾಗಿದೆ.

ಇದರಲ್ಲಿ ಅಳವಡಿಸಲಾಗಿರುವ ಮಲ್ಟಿ ಸೀಟರ್ ಮೊನೊಷಾಕ್ ನಿರ್ಮಾಣವು ಶಬ್ದ, ಕಂಪನ ಮತ್ತು ಕಠಿಣತೆಯ ಕೆಳಮಟ್ಟವನ್ನು ಖಚಿತಪದಿಸುತ್ತದೆ. ಆಂಟಿ ರೋಲ್ ಬಾರ್‍ಗಳೊಂದಿಗೆ ಸ್ವತಂತ್ಯ್ರ ಫ್ರಂಟ್ ಸಸ್ಪೆಂಷನ್ ಅನ್ನು ಮತ್ತು ಹಿಂಭಾಗದಲ್ಲಿ ಹೈಡ್ರಾಲಿಕ್ ಶಾಕ್ ಅಬ್ಸಾರ್ಬರ್‍ಗಳನ್ನು ಅಳವಡಿಸಲಾಗಿದೆ.

ಎಂಜಿನ್ ಸಾಮರ್ಥ್ಯ
ಹೊಸದಾಗಿ ಬಿಡುಗಡೆಗೊಂಡ ಟಾಟಾ ವಿಂಗರ್ 15ಎಸ್ ವಾಹನವು 2.2 ಲೀಟರ್ 4 ಸಿಲೆಂಡರ್ ಡಿಕೊರ್ ಡೀಸೆಲ್ ಎಂಜಿನ್ ಸಹಾಯದಿಂಡ 99ಬಿಹೆಚ್‍ಪಿ ಮತ್ತು 190ಎನ್ಎಮ್ ಪೀಕ್ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದಿದ್ದು, ಎಂಜಿನ್ ಅನ್ನು 5 ಸ್ಪೀಡ್ ಗೇರ್‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ.

ಟಾಟಾ ವಿಂಗರ್ 15ಎಸ್ ವಾಹನವನ್ನು ವಿಶೇಷವಾಗಿ ಟೂರ್ ಮತ್ತು ಟ್ರಾವೆಲ್ ಸೆಗ್ಮೆಂಟ್‍ಗೆ ಸೀಮಿತ ಪಡಿದಿದ್ದು, ಗ್ರಾಹಕರು 3 ವರ್ಷದ ಅಥವಾ 3 ಲಕ್ಷ ಕಿಲೋಮೀಟರ್‍ನ ಎಕ್ಸ್ಟೆಂಡೆಡ್ ವಾರೆಂಟಿಯನ್ನು ಪಡೆಯಬಹುದಾಗಿದೆ. ಟಾಟಾ ವಿಂಗರ್ 15ಎಸ್ ವಾಹನವು ಮೊದಲಿಗೆ ಮಹಾರಾಷ್ಟ್ರದಲ್ಲಿ ಲಭ್ಯವಿರಲಿದ್ದು ನಂತರ ದೇಶದ ಇನ್ನಿತರೆ ಪ್ರಾಂತ್ಯಗಳಲ್ಲಿ ಮಾರಾಟವನ್ನು ಶುರು ಮಾಡಲಿದೆ.


Click it and Unblock the Notifications








