ಬಿಡುಗಡೆಗು ಮುನ್ನ ಮುಸುಕಿಲ್ಲದೆ ಕಾಣಿಸಿಕೊಂಡ ಫೋರ್ಡ್ ಆಸ್ಫೈರ್ ಫೇಸ್‍‍ಲಿಫ್ಟ್ ಕಾರು..

ಅಮೆರಿಕ ಮೂಲದ ವಾಹನ ತಯಾರಕ ಸಂಸ್ಥೆಯಾದ ಫೋರ್ಡ್ ತಮ್ಮ ಜನಪ್ರಿಯ ಫಿಗೊ ಕಾರಿನ ಫೇಸ್‍‍ಲಿಫ್ಟ್ ಮಾದರಿಯನ್ನು ಇದೇ ವರ್ಷದಲ್ಲಿ ಬಿಡುಗಡೆಗೊಳಿಸುವ ಸುಳಿವು ನೀಡಿತ್ತು.

By Rahul Ts

ಅಮೆರಿಕ ಮೂಲದ ವಾಹನ ತಯಾರಕ ಸಂಸ್ಥೆಯಾದ ಫೋರ್ಡ್ ತಮ್ಮ ಜನಪ್ರಿಯ ಫಿಗೊ ಕಾರಿನ ಫೇಸ್‍‍ಲಿಫ್ಟ್ ಮಾದರಿಯನ್ನು ಇದೇ ವರ್ಷದಲ್ಲಿ ಬಿಡುಗಡೆಗೊಳಿಸುವ ಸುಳಿವು ನೀಡಿತ್ತು. ಆದರೆ ಬಿಡುಗಡೆಗು ಮುನ್ನವೆ ಫೋರ್ಡ್ ಫಿಗೊ ಆಸ್ಫೈರ್ ಫೇಸ್‍‍ಲಿಫ್ಟ್ ಕಾರು ಇದೀಗ ಯಾವುದೆ ಮುಸುಕಿಲ್ಲದೆ ಭಾರತೀಯ ರಸ್ತೆಗಳಲ್ಲಿ ಸ್ಪಾಟ್ ಟೆಸ್ಟಿಂಗ್ ವೇಳೆ ಕಾಣಿಸಿಕೊಂಡಿದೆ.

ಬಿಡುಗಡೆಗು ಮುನ್ನ ಮುಸುಕಿಲ್ಲದೆ ಕಾಣಿಸಿಕೊಂಡ ಫೋರ್ಡ್ ಆಸ್ಫೈರ್ ಫೇಸ್‍‍ಲಿಫ್ಟ್ ಕಾರು..

ಹೊಸ ಫೋರ್ಡ್ ಆಸ್ಫೈರ್ ಸೆಡಾನ್ ಕಾರು ಪ್ರಸ್ತುತ ತಲೆಮಾರಿನೊಂದಿಗೆ ಹೋಲಿಸಿದರೆ ಹಲವಾರು ಹೊಸ ನವೀಕರಣಗಳೊಂದಿಗೆ ಸಿದ್ದಗೊಂಡಿದ್ದು, ಕಾರಿನ ಮುಂಭಾಗ ಮತ್ತು ಹಿಂಭಾಗದಲ್ಲಿ ಹೊಸ ಬಂಪರ್ ಮತ್ತು ಟ್ವೀಕ್ಡ್ ರಿಯರ್ ಪ್ರೊಫೈಲ್ ಹಾಗೆಯೇ ಅಲಾಯ್ ಚಕ್ರಗಳನ್ನೂ ಕೂಡಾ ಪಡೆದಿರಲಿವೆ.

ಬಿಡುಗಡೆಗು ಮುನ್ನ ಮುಸುಕಿಲ್ಲದೆ ಕಾಣಿಸಿಕೊಂಡ ಫೋರ್ಡ್ ಆಸ್ಫೈರ್ ಫೇಸ್‍‍ಲಿಫ್ಟ್ ಕಾರು..

ಇನ್ನು ಕಾರಿನ ಒಳಭಾಗದಲ್ಲಿ ಫೋರ್ಡ್ ಇಕೋ ಸ್ಪೋರ್ಟ್ ಮಾದರಿಯಲ್ಲೇ ಮೊದಲ ಬಾರಿಗೆ ಎಸ್‍ವೈಎನ್‍ಸಿ3 ಟಚ್ ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಂ ಅನ್ನು ಬಳಸಲಾಗಿದ್ದು, ಇದರಲ್ಲಿ ಆಂಡ್ರಾಯ್ಡ್ ಆಟೋ ಮತ್ತು ಆ್ಯಪಲ್ ಕಾರ್ ಪ್ಲೇ ಕನೆಕ್ಟಿವಿಟಿ ಅಂಶಗಳನ್ನು ಕೂಡಾ ಅಳವಡಿಸಲಾಗಿದೆ.

ಬಿಡುಗಡೆಗು ಮುನ್ನ ಮುಸುಕಿಲ್ಲದೆ ಕಾಣಿಸಿಕೊಂಡ ಫೋರ್ಡ್ ಆಸ್ಫೈರ್ ಫೇಸ್‍‍ಲಿಫ್ಟ್ ಕಾರು..

ಹೊಸದಾಗಿ ಬಿಡುಗಡೆಗೊಳ್ಳಲಿರುವ ಆಸ್ಫೈರ್ ಕಾರು, ಎಕೋ ಸ್ಪೋರ್ಟ್ಸ್ ಫೇಸ್‍ಲಿಫ್ಟ್ ಕಾರಿನಲ್ಲಿ ಬಳಸಲಾದಂತೆ 1.5 ಲೀಟರ್ ಮೂರು ಸಿಲಿಂಡರ್ ಡ್ರಾಗನ್ ಸರಣಿಯ ಪೆಟ್ರೋಲ್ ಎಂಜಿನ್ ಅನ್ನು ಪಡೆದಿದ್ದು, 121 ಬಿಹೆಚ್‍ಪಿ ಮತ್ತು 150 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸಲಿದೆ.

ಬಿಡುಗಡೆಗು ಮುನ್ನ ಮುಸುಕಿಲ್ಲದೆ ಕಾಣಿಸಿಕೊಂಡ ಫೋರ್ಡ್ ಆಸ್ಫೈರ್ ಫೇಸ್‍‍ಲಿಫ್ಟ್ ಕಾರು..

ಹಾಗೆಯೇ ಡೀಸೆಲ್ ಆವೃತ್ತಿಯು 1.5 ಲೀಟರ್ ಡೀಸೆಲ್ ಎಂಜಿನ್ 98.9 ಬಿಹೆಚ್‍ಪಿ ಮತ್ತು 215ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದಿರಲಿದ್ದು, ಈ ಎರಡೂ ಎಂಜಿನ್‍ಗಳನ್ನು 5 ಸ್ಪೀಡ್ ಮ್ಯಾನುವಲ್ ಮತ್ತು 6 ಸ್ಪೀಡ್ ಆಟೋಮ್ಯಾಟಿಕ್ ಗೇರ್‍‍ಬಾಕ್ಸ್ ಆಯ್ಕೆಗಳನ್ನು ಕೂಡ ಪಡೆದಿರಲಿದೆ.

ಬಿಡುಗಡೆಗು ಮುನ್ನ ಮುಸುಕಿಲ್ಲದೆ ಕಾಣಿಸಿಕೊಂಡ ಫೋರ್ಡ್ ಆಸ್ಫೈರ್ ಫೇಸ್‍‍ಲಿಫ್ಟ್ ಕಾರು..

ಹೊಸ ಅವತಾರದಲ್ಲಿ ಬಿಡಗಡೆಗೊಳ್ಳಲಿರುವ ಫೋರ್ಡ್ ಆಸ್ಪೈರ್ ಕಾರಿನ ಬಗ್ಗೆ ಸಂಸ್ಥೆಯು ಇನ್ನು ಹೆಚ್ಚು ಮಾಹಿತಿಯನ್ನು ಬಹಿರಂಗಗೊಳಿಸಲಿಲ್ಲವಾದರೂ, ಪವರ್‌ಫುಲ್ ಎಂಜಿನ್ ಬಳಕೆ ಹಿನ್ನೆಲೆ ಸೆಡಾನ್ ಪ್ರಿಯರನ್ನು ಸೆಳೆಯುವ ತವಕದಲ್ಲಿದೆ.

ಬಿಡುಗಡೆಗು ಮುನ್ನ ಮುಸುಕಿಲ್ಲದೆ ಕಾಣಿಸಿಕೊಂಡ ಫೋರ್ಡ್ ಆಸ್ಫೈರ್ ಫೇಸ್‍‍ಲಿಫ್ಟ್ ಕಾರು..

ಒಟ್ಟಿನಲ್ಲಿ ಹೊಸದಾಗಿ ನವೀಕರಣಗೊಂಡ ಈ ಕಾರು ಮಾರುಕಟ್ಟೆಗೆ ಲಗ್ಗೆಯಿಟ್ಟಲ್ಲಿ ಮಾರುತಿ ಡಿಜೈರ್, ಹ್ಯುಂಡೈ ಎಕ್ಸ್ ಸೆಂಟ್, ಫೋಕ್ಸ್‌ವ್ಯಾಗನ್ ಎಮಿಯೊ ಮತ್ತು ಮುಂದಿನ ತಲೆಮಾರಿನ ಹೋಂಡಾ ಅಮೇಜ್ ಕಾರುಗಳಿಗೆ ಪೈಪೋಟಿಯನ್ನು ನೀಡಲಿದೆ.

Article Published On: Friday, June 1, 2018, 17:46 [IST]
English summary
2018 Ford Aspire (facelift) spotted undisguised.
Read more on ford sedan new car
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+