ಮಾರುತಿ ಬ್ರೆಝಾ ಕಾರನ್ನು ಹಿಂದಿಕ್ಕಿದ ಹ್ಯುಂಡೈ ಕ್ರೆಟಾ ಫೇಸ್‍‍ಲಿಫ್ಟ್..

ದಕ್ಷಿಣ ಕೊರಿಯಾ ಮೂಲದ ವಾಹನ ತಯಾರಕ ಸಂಸ್ಥೆಯಾದ ಹ್ಯುಂಡೈ ಇದೇ ಮೇ 21ರಂದು ತಮ್ಮ ಕ್ರೆಟಾ ಫೇಸ್‍‍‍ಲಿಫ್ಟ್ ಎಸ್‍‍ಯುವಿ ಕಾರನ್ನು ಬಿಡುಗಡೆಗೊಳಿಸಿತ್ತು.

By Rahul Ts

ದಕ್ಷಿಣ ಕೊರಿಯಾ ಮೂಲದ ವಾಹನ ತಯಾರಕ ಸಂಸ್ಥೆಯಾದ ಹ್ಯುಂಡೈ ಇದೇ ಮೇ 21ರಂದು ತಮ್ಮ ಕ್ರೆಟಾ ಫೇಸ್‍‍‍ಲಿಫ್ಟ್ ಎಸ್‍‍ಯುವಿ ಕಾರನ್ನು ಬಿಡುಗಡೆಗೊಳಿಸಿತ್ತು. ಈ ಕಾರು ದೆಹಲಿಯ ಎಕ್ಸ್ ಶೋರಂ ಪ್ರಕಾರ ರೂ. 9.43 ಲಕ್ಷದ ಪ್ರಾರಂಭಿಕ ಬೆಲೆಯನ್ನು ಪಡೆದಿದ್ದು, 2018ರ ಜೂನ್ ತಿಂಗಳಿನಲ್ಲಿ ಸುಮಾರು 11,111 ಯೂನಿಟ್ ಕಾರುಗಳನ್ನು ಮಾರಾಟ ಮಾಡಿದೆ.

ಮಾರುತಿ ಬ್ರೆಝಾ ಕಾರನ್ನು ಹಿಂದಿಕ್ಕಿದ ಹ್ಯುಂಡೈ ಕ್ರೆಟಾ ಫೇಸ್‍‍ಲಿಫ್ಟ್..

ಜೂನ್ 2018ರಲ್ಲಿ ಹ್ಯುಂಡೈ ಸಂಸ್ಥೆಯು 11,111 ಯೂನಿಟ್ ಕ್ರೆಟಾ ಫೇಸ್‍‍ಲಿಫ್ಟ್ ಕಾರುಗಳನ್ನು ಡೀಲರ್‍‍ಗಳಿಗೆ ತಲುಪಿಸಿದ್ದರೆ, ಇನ್ನು ಮಾರುತಿ ಸುಜುಕಿ ಸಂಸ್ಥೆಯು 10,713 ವಿಟಾರಾ ಬ್ರೆಝಾ ಕಾರುಗಳನ್ನು ಡೀಲರ್‍‍ಗಳಿಗೆ ತಲುಪಿಸಿದೆ.

ಮಾರುತಿ ಬ್ರೆಝಾ ಕಾರನ್ನು ಹಿಂದಿಕ್ಕಿದ ಹ್ಯುಂಡೈ ಕ್ರೆಟಾ ಫೇಸ್‍‍ಲಿಫ್ಟ್..

2016ರ ಮಾರ್ಚ್‌ನಲ್ಲಿ ಮೊದಲ ಬಾರಿಗೆ ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಂಡಿದ್ದ ವಿಟಾರಾ ಬ್ರೆಝಾ ಕಂಪ್ಯಾಕ್ಟ್ ಎಸ್‌ಯುವಿ ಕಾರುಗಳು 28 ತಿಂಗಳ ಅವಧಿಯಲ್ಲಿ ಬರೋಬ್ಬರಿ 3 ಲಕ್ಷ ಕಾರುಗಳು ಮಾರಾಟಗೊಂಡಿದ್ದವು, ಆದರೆ ಮಾರುಕಟ್ಟೆಯಲ್ಲಿ ಕ್ರೆಟಾ ಫೇಸ್‍‍ಲಿಫ್ಟ್ ಕಾರಿನ ಬಿಡುಗಡೆಯ ನಂತರ ಕಡೆಗೆ ಜನರು ವಾಲಿದ ಕಾರಣದಿಂದಾಗಿ ವಿಟಾರಾ ಬ್ರೆಝಾ ಕಾರಿನ ಮಾರಾಟದ ಸಂಖ್ಯೆಯು ಕಡಿಮೆಯಾಗಿದೆ ಎನ್ನಲಾಗಿದೆ.

ಮಾರುತಿ ಬ್ರೆಝಾ ಕಾರನ್ನು ಹಿಂದಿಕ್ಕಿದ ಹ್ಯುಂಡೈ ಕ್ರೆಟಾ ಫೇಸ್‍‍ಲಿಫ್ಟ್..

ಹ್ಯುಂಡೈ ಕ್ರೇಟಾ ಫೇಸ್‌‌ಲಿಫ್ಟ್ ಕಾರುಗಳು ಪೆಟ್ರೋಲ್ ಎಂಜಿನ್ ಮತ್ತು ಡೀಸೆಲ್ ಎಂಜಿನ್ ಮಾದರಿಯಲ್ಲಿ ಖರೀದಿಗೆ ಲಭ್ಯವಿದ್ದು, ಇವುಗಳಲ್ಲಿ ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಪೆಟ್ರೋಲ್ ಆವೃತ್ತಿಯಲ್ಲಿ 6 ವೆರಿಯೆಂಟ್‌ಗಳು ಮತ್ತು ಡೀಸೆಲ್ ಆವೃತ್ತಿಯಲ್ಲಿ 7 ವೆರಿಯೆಂಟ್‌ಗಳನ್ನು ಪರಿಚಯಿಸಲಾಗಿದೆ.

ಮಾರುತಿ ಬ್ರೆಝಾ ಕಾರನ್ನು ಹಿಂದಿಕ್ಕಿದ ಹ್ಯುಂಡೈ ಕ್ರೆಟಾ ಫೇಸ್‍‍ಲಿಫ್ಟ್..

ಎಂಜಿನ್ ಸಾಮರ್ಥ್ಯ

ಈ ಹಿಂದಿನಂತೆಯೇ 1.4-ಲೀಟರ್ ಡೀಸೆಲ್, 1.6-ಲೀಟರ್ ಪೆಟ್ರೋಲ್ ಮತ್ತು 1.6-ಡೀಸೆಲ್ ಎಂಜಿನ್‌ಗಳನ್ನು ಹೊಂದಿದ್ದು, ಇದರಲ್ಲಿ 1.4-ಲೀಟರ್ ಪೆಟ್ರೋಲ್ ಎಂಜಿನ್‌ಗಳು 88.7-ಬಿಎಚ್‌ಪಿ, 1.6-ಲೀಟರ್ ಪೆಟ್ರೋಲ್ ಎಂಜಿನ್‌ಗಳು 121-ಬಿಎಚ್‌ಪಿ ಮತ್ತು 1.6-ಲೀಟರ್ 126-ಬಿಎಚ್‌ಪಿ ಉತ್ಪಾದನಾ ಗುಣ ಪಡೆದಿವೆ.

ಮಾರುತಿ ಬ್ರೆಝಾ ಕಾರನ್ನು ಹಿಂದಿಕ್ಕಿದ ಹ್ಯುಂಡೈ ಕ್ರೆಟಾ ಫೇಸ್‍‍ಲಿಫ್ಟ್..

ಇದರಲ್ಲಿ 1.4-ಲೀಟರ್ ಪೆಟ್ರೋಲ್ ಮಾದರಿಯು 6-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಪಡೆದಿದ್ದು, ಇನ್ನುಳಿದ 1.6-ಲೀಟರ್ ಪೆಟ್ರೋಲ್ ಹಾಗೂ ಡೀಸೆಲ್ ಎಂಜಿನ್ ಮಾದರಿಗಳಲ್ಲಿ 6-ಸ್ಪೀಡ್ ಆಟೋ ಮ್ಯಾಟಿಕ್ ಒದಗಿಸಲಾಗಿದೆ.

ಮಾರುತಿ ಬ್ರೆಝಾ ಕಾರನ್ನು ಹಿಂದಿಕ್ಕಿದ ಹ್ಯುಂಡೈ ಕ್ರೆಟಾ ಫೇಸ್‍‍ಲಿಫ್ಟ್..

ಹೊಸ ಕಾರುಗಳ ಪರ್ಫಾಮೆನ್ಸ್ ಹೆಚ್ಚಿಸಲು ಕ್ಲಾಸ್ ಲೀಡಿಂಗ್ ಎನ್‌ವಿಹೆಚ್ ತಂತ್ರಜ್ಞಾನ ಬಳಕೆ ಮಾಡಿದ್ದು, ಇವು ಆರಾಮದಾಯಕ ಕಾರು ಚಾಲನೆಗೆ ಸಹಕಾರಿಯಾಗಿದೆ. ಆದ್ರೆ ಟಾಪ್ ಎಂಡ್ ಮಾದರಿಯಾದ ಎಸ್ಎಕ್ಸ್(ಒ) ಮಾದರಿಯಲ್ಲಿ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಬದಲಾಗಿ ಮ್ಯಾನುವಲ್ ಗೇರ್‌ಬಾಕ್ಸ್ ಹೊಂದಿದೆ.

ಮಾರುತಿ ಬ್ರೆಝಾ ಕಾರನ್ನು ಹಿಂದಿಕ್ಕಿದ ಹ್ಯುಂಡೈ ಕ್ರೆಟಾ ಫೇಸ್‍‍ಲಿಫ್ಟ್..

ಒಂದು ವೇಳೆ ಟಾಪ್ ಎಂಡ್ ಮಾದರಿಯಲ್ಲಿ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಪ್ರೇರಿತ ಆವೃತ್ತಿಯನ್ನು ಆಯ್ಕೆ ಮಾಡುವುದಾದ್ರೆ ಅದಕ್ಕೂ ಒಂದು ಅವಕಾಶವಿದ್ದು, ಇದಕ್ಕಾಗಿ ಎಲೆಕ್ಟ್ರಾನಿಕ್ ಸನ್‌ರೂಫ್ ಮತ್ತು ವೈರ್‌ಲೇಸ್ ಚಾರ್ಜಿಂಗ್ ಸೌಲಭ್ಯಗಳು ಕಳೆದುಕೊಳ್ಳಬೇಕಾಗುತ್ತೆ. ಇಲ್ಲವೇ ಈ ಸೌಲಭ್ಯಗಳು ಬೇಕೆ ಬೇಕು ಎಂದಲ್ಲಿ ಮ್ಯಾನುವಲ್ ಆವೃತ್ತಿಯನ್ನು ಆಯ್ಕೆ ಮಾಡುವುದು ಅನಿವಾರ್ಯ.

ಮಾರುತಿ ಬ್ರೆಝಾ ಕಾರನ್ನು ಹಿಂದಿಕ್ಕಿದ ಹ್ಯುಂಡೈ ಕ್ರೆಟಾ ಫೇಸ್‍‍ಲಿಫ್ಟ್..

ಇನ್ನು ಕಾರಿನ ಡಿಸೈನ್ ಕುರಿತು ಹೇಳುವುದಾದರೇ, ಹೊಸ ಕಾರುಗಳಲ್ಲಿ ವಿನ್ಯಾಸ ಮಾಡಲಾಗಿರುವ ಕಾಸ್ ಕ್ಲ್ಯಾಡಿಂಗ್ ಫ್ರಂಟ್ ಗ್ರಿಲ್, ನ್ಯೂ ಫ್ರಂಟ್ ಬಂಪರ್, ಹೊಸ ವಿನ್ಯಾಸ ಫಾಗ್ ಲ್ಯಾಂಪ್, ಸಿಲ್ವರ್ ಸ್ಕೀಡ್ ಪ್ಲೇಟ್, ಡ್ಯುಯಲ್ ಟೋನ್ ಇಂಟಿರಿಯರ್ ಸೌಲಭ್ಯ ಪಡೆದಿದೆ.

ಮಾರುತಿ ಬ್ರೆಝಾ ಕಾರನ್ನು ಹಿಂದಿಕ್ಕಿದ ಹ್ಯುಂಡೈ ಕ್ರೆಟಾ ಫೇಸ್‍‍ಲಿಫ್ಟ್..

ಹೊಸ ಕಾರುಗಳಲ್ಲಿನ ರಿಯಲ್ ಬಂಪರ್ ಕೂಡಾ ಆಕರ್ಷಣೆಯಾಗಿದ್ದು, ಸುಧಾರಿತ ತಂತ್ರಜ್ಞಾನ ಪ್ರೇರಿತ 7-ಇಂಚಿನ ಇನ್ಪೋಟೈನ್‌ಮೆಂಟ್, ಬೆಸ್ ವೆರಿಯೆಂಟ್‌ಗಳಿಂದಲೇ ಹೊಂದಾಣಿಕೆ ಮಾಡಿಕೊಳ್ಳಬಹುದಾದ ಡ್ರೈವರ್ ಸೈಡ್ ಸೀಟುಗಳು, ಆರ್ಮ್ ರೆಸ್ಟ್ ವಿನ್ಯಾಸವು ಗಮನ ಸೆಳೆಯುತ್ತೆ.

ಮಾರುತಿ ಬ್ರೆಝಾ ಕಾರನ್ನು ಹಿಂದಿಕ್ಕಿದ ಹ್ಯುಂಡೈ ಕ್ರೆಟಾ ಫೇಸ್‍‍ಲಿಫ್ಟ್..

ಒಟ್ಟು 7 ಬಣ್ಣಗಳಲ್ಲಿ ಖರೀದಿಗೆ ಲಭ್ಯವಿರುವ ಕ್ರೇಟಾ ಫೇಸ್‌ಲಿಫ್ಟ್ ಕಾರುಗಳನ್ನು ವೈಟ್, ಆರೇಂಜ್, ಬ್ಲ್ಯಾಕ್, ಸಿಲ್ವರ್ ಬ್ಲ್ಯೂ, ರೆಡ್, ವೈಟ್ ಆ್ಯಂಡ್ ಬ್ಲ್ಯಾಕ್(ಡ್ಯುಯಲ್ ಟೋನ್) ಮತ್ತು ಆರೇಂಜ್ ಆ್ಯಂಡ್ ಬ್ಲ್ಯಾಕ್ ಬಣ್ಣಗಳಲ್ಲಿ ಖರೀದಿ ಮಾಡಬಹುದು.

More from DriveSpark

Article Published On: Friday, July 13, 2018, 12:28 [IST]
English summary
2018 Hyundai Creta becomes best selling SUV in India.
Read more on hyundai sales suv
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+