ಬಿಡುಗಡೆಗಾಗಿ ಡೀಲರ್ಸ್ ಯಾರ್ಡ್ ತಲುಪಿದ ಹೊಚ್ಚ ಹೊಸ ಎರ್ಟಿಗಾ ಕಾರು

ಮಾರುತಿ ಸುಜುಕಿ ಸಂಸ್ಥೆಯು ಎರ್ಟಿಗಾ ಹೊಸ ಕಾರನ್ನು ಇದೇ ತಿಂಗಳು 21ಕ್ಕೆ ಬಿಡುಗಡೆಯಾಗುವುದು ಖಚಿತವಾಗಿದ್ದು, ವಿನೂತನ ವಿನ್ಯಾಸಗಳನ್ನು ಹೊತ್ತು ಬರುತ್ತಿರುವ ಹೊಸ ಕಾರು ಭಾರೀ ನೀರಿಕ್ಷೆ ಹುಟ್ಟುಹಾಕಿದೆ. ಹೊಸ ಕಾರುಗಳು ಈಗಾಗಲೇ ಡೀಲರ್ಸ್ ಯಾರ್ಡ್ ಕೂಡಾ ತಲುಪುತ್ತಿದ್ದು, ಹೊಸ ಕಾರಿನ ವಿನ್ಯಾಸಗಳು ಗಮನಸೆಳೆಯಲಿವೆ.

ಬಿಡುಗಡೆಗಾಗಿ ಡೀಲರ್ಸ್ ಯಾರ್ಡ್ ತಲುಪಿದ ಹೊಚ್ಚ ಹೊಸ ಎರ್ಟಿಗಾ ಕಾರು

ಸುಜಕಿ ಎರ್ಟಿಗಾ ಫೇಸ್‌ಲಿಫ್ಟ್ ಕಾರು ಈಗಾಗಲೇ ಅಂತರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಬಿಡುಗಡೆಗೊಂಡು ಭರ್ಜರಿಯಾಗಿ ಮಾರಾಟಗೊಳ್ಳುತ್ತಿದ್ದು, ಇದೀಗ ಭಾರತದಲ್ಲೂ ಬಿಡುಗಡೆಗೆ ಸಿದ್ದವಾಗಿದೆ. ಹೊಸ ಕಾರು ಖರೀದಿಗಾಗಿ ಅಧಿಕೃತವಾಗಿ ಬುಕ್ಕಿಂಗ್ ಕೂಡಾ ಆರಂಭವಾಗಿದ್ದು, ಹಳೆಯ ಎರ್ಟಿಗಾಗಿಂತ ಹೊಸ ಎರ್ಟಿಗಾ ಹೇಗೆ ವಿಭಿನ್ನವಾಗಿದೆ ಎಂಬುವುದನ್ನು ಇಲ್ಲಿ ತಿಳಿಯಿರಿ.

ಬಿಡುಗಡೆಗಾಗಿ ಡೀಲರ್ಸ್ ಯಾರ್ಡ್ ತಲುಪಿದ ಹೊಚ್ಚ ಹೊಸ ಎರ್ಟಿಗಾ ಕಾರು

ಪ್ರೀಯಿಯಂ ವಿನ್ಯಾಸದ ಎರ್ಟಿಗಾ ಕಾರು ಈ ಬಾರಿ ಹಲವು ಹೊಸ ವಿನ್ಯಾಸವನ್ನು ಪಡೆದುಕೊಂಡಿದ್ದು, ಕಾರಿನ ಮುಂಭಾಗದಲ್ಲಿ ಕ್ರೋಮ್ ಸ್ಟ್ರಿಪ್‍‍ನೊಂದಿಗೆ ಜೋಡಿಸಲಾದ ಹೊಸ ಗ್ರಿಲ್ ಮತ್ತು ಪ್ರೊಜೆಕ್ಟರ್ ಹೆಡ್‍‍ಲ್ಯಾಂಪ್‍‍ಗಳನ್ನು ಪಡೆದುಕೊಂಡಿರಲಿದೆ.

ಬಿಡುಗಡೆಗಾಗಿ ಡೀಲರ್ಸ್ ಯಾರ್ಡ್ ತಲುಪಿದ ಹೊಚ್ಚ ಹೊಸ ಎರ್ಟಿಗಾ ಕಾರು

ಕಾರಿನ ಸೈಡ್‍ ಪ್ರೋಫೈಲ್‌ನಲ್ಲಿ ಫ್ಲೋಟಿಂಗ್ ರೂಫ್ ವಿನ್ಯಾಸ ಮತ್ತು 15 ಇಂಚಿನ ಅಲಾಯ್ ಚಕ್ರಗಳನ್ನು ನೀಡಲಾಗಿದೆ. ಇನ್ನು ಕಾರಿನ ಹಿಂಭಾಗದಲ್ಲಿ 'ಎಲ್' ಆಕಾರದ ಟೈಲ್ ಲೈಟ್ ಅನ್ನು ಪಡೆದಿದ್ದು, ಒಟ್ಟಾರೆಯಾಗಿ ಈ ಕಾರು ಎಂಪಿವಿ ಕಾರಿಗಿಂತಲೂ ಇದು ಎಸ್‍‍ಯುವಿ ಮಾದರಿಯ ವಿನ್ಯಾಸವನ್ನು ಪಡೆದಿರಲಿದೆ.

ಬಿಡುಗಡೆಗಾಗಿ ಡೀಲರ್ಸ್ ಯಾರ್ಡ್ ತಲುಪಿದ ಹೊಚ್ಚ ಹೊಸ ಎರ್ಟಿಗಾ ಕಾರು

ವಿಶಾಲವಾದ ಆಕಾರ

ಹಳೆಯ ಮಾದರಿಯ ಎರ್ಟಿಗಾ ಕಾರಿಗೆ ಹೋಲಿಕೆ ಮಾಡಿದ್ದಲ್ಲಿ ಬಿಡುಗಡೆಗೊಳ್ಳಲಿರುವ ಹೊಸ ಎರ್ಟಿಗಾ ಕಾರು 110-ಎಂಎಂ ಉದ್ದ, 50-ಎಂಎಂ ಅಗಲ ಮತ್ತು 5-ಎಂಎಂ ಎತ್ತರವನ್ನು ಅಧಿಕ ಸುತ್ತಳತೆಯನ್ನು ಪಡೆದುಕೊಂಡಿದ್ದು, ಈ ಬದಲಾವಣೆಯು ಮೂರನೆಯ ಸಾಲಿನಲ್ಲಿ ಕೂರುವ ಪ್ರಯಾಣಿಕರಿಗೆ ಸಾಕಷ್ಟು ಅನುಕೂಲಕರವಾಗಲಿದೆ.

ಬಿಡುಗಡೆಗಾಗಿ ಡೀಲರ್ಸ್ ಯಾರ್ಡ್ ತಲುಪಿದ ಹೊಚ್ಚ ಹೊಸ ಎರ್ಟಿಗಾ ಕಾರು

ಹೊಸ ಇಂಟೀರಿಯರ್

ಎರ್ಟಿಗಾ ಕಾರಿನಲ್ಲಿ ಈ ಬಾರಿ ಮರುವಿನ್ಯಾಸಗೊಳಿಸಲಾದ ಡ್ಯಾಶ್‍‍ಬೋರ್ಡ್ ಅನ್ನು ಅಳವಡಿಸಲಾಗಿದ್ದು, ಹೊಸ ಸಿಯಾಜ್ ಕಾರಿನಲ್ಲಿ ಒದಗಿಸಲಾಗಿರುವ ಡ್ಯುಯಲ್ ಟೋನ್ ಡ್ಯಾಶ್‍ಬೋರ್ಡ್ ಮತ್ತು ವುಡನ್ ಟ್ರಿಮ್ ಅನ್ನು ನೀಡಲಾಗಿದೆ. ಇನ್ನು ಕಾರಿನ ಟಾಪ್ ಎಂಡ್ ಟ್ರಿಮ್‍‍ನಲ್ಲಿ ಲೆದರ್ ಸೀಟ್‍‍ಗಳನ್ನು ನೀಡುವ ಭರವಸೆ ಇದೆ ಎನ್ನಲಾಗಿದೆ.

ಬಿಡುಗಡೆಗಾಗಿ ಡೀಲರ್ಸ್ ಯಾರ್ಡ್ ತಲುಪಿದ ಹೊಚ್ಚ ಹೊಸ ಎರ್ಟಿಗಾ ಕಾರು

ಕಾರಿನ ಉಪಕರಣಗಳು

ಈ ಹಿಂದೆ ಬಿಡುಗಡೆಗೊಂಡಿದ್ದ ಡಿಜೈರ್ ಕಾರಿನಲ್ಲಿ ಬಳಸಲಾದ 6.8-ಇಂಚಿನ ಟಚ್‍ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಂ ಅನ್ನು ಹೊಸ ಎರ್ಟಿಗಾ ಕೂಡಾ ಪಡೆದಿದ್ದು, ಅಂಡ್ರಾಯ್ಡ್ ಆಟೋ, ಆ್ಯಪಲ್ ಕಾರ್ ಪ್ಲೇ ಮತ್ತು ಬ್ಲೂಟೂಥ್ ಕನೆಕ್ಟಿವಿಟಿಯನ್ನು ಸಪೋರ್ಟ್ ಮಾಡುತ್ತದೆ.

ಬಿಡುಗಡೆಗಾಗಿ ಡೀಲರ್ಸ್ ಯಾರ್ಡ್ ತಲುಪಿದ ಹೊಚ್ಚ ಹೊಸ ಎರ್ಟಿಗಾ ಕಾರು

ಇದಲ್ಲದೇ ಕಪ್ ಹೋಲ್ಡರ್ಸ್ ಅನ್ನೂ ಕೂಡಾ ನೀಡಲಾಗುತ್ತಿದ್ದು, ಇನ್ಫೋಟೈನ್ಮೆಂಟ್ ಸಿಸ್ಟಮ್‍‍‍ಗೆ ಸಹಾಯವಾಗುವ ಹಲವಾರು ಬಟನ್‍‍ಗಳುಳ್ಳ ಲೆದರ್‍‍ನಿಂದ ಸಜ್ಜುಗೊಂಡ ಸ್ಟೀರಿಂಗ್ ವ್ಹೀಲ್ ಅನ್ನು ಜೋಡಿಸಲಾಗಿದೆ.

MOST READ: ರಸ್ತೆಗಿಳಿದ ಹೊಸ ಜಾವಾ ಬೈಕ್‌ಗಳು- ರಾಯಲ್ ಎನ್‌ಫೀಲ್ಡ್‌ಗೆ ತಳಮಳ ಶುರು..!

ಬಿಡುಗಡೆಗಾಗಿ ಡೀಲರ್ಸ್ ಯಾರ್ಡ್ ತಲುಪಿದ ಹೊಚ್ಚ ಹೊಸ ಎರ್ಟಿಗಾ ಕಾರು

ಸುರಕ್ಷಾ ವೈಶಿಷ್ಟ್ಯತೆಗಳು ಹೊಸ ಎರ್ಟಿಗಾ ಎಂಪಿವಿ ಕಾರಿನಲ್ಲಿ ಪ್ರಯಾಣಿಕರ ಸುರಕ್ಷತೆಗಾಗಿ ಈ ಬಾರಿ ಡ್ಯುಯಲ್ ಏರ್‌ಬ್ಯಾಗ್, ಎಬಿಎಸ್, ಇಬಿಡಿ, ಐಎಸ್‍ಓಫಿಕ್ಸ್ ಚೈಲ್ಡ್ ಸೀಟ್ಸ್ ಅನ್ನು ಸ್ಟ್ಯಾಂಡರ್ಡ್ ಆಗಿ ನೀಡಲಾಗಿದ್ದು, ಸೇಫ್ಟಿ ಸೀಟ್ ಬೆಲ್ಟ್ ರಿಮೈಂಡರ್, ಸ್ಪೀಡ್ ವಾರ್ನಿಂಗ್ ಮತ್ತು ರಿಯರ್ ಪಾರ್ಕಿಂಗ್ ಸೆನ್ಸಾರ್ಸ್ ಅನ್ನು ಒದಗಿಸಲಾಗಿದೆ.

ಬಿಡುಗಡೆಗಾಗಿ ಡೀಲರ್ಸ್ ಯಾರ್ಡ್ ತಲುಪಿದ ಹೊಚ್ಚ ಹೊಸ ಎರ್ಟಿಗಾ ಕಾರು

ಎಂಜಿನ್ ಸಾಮರ್ಥ್ಯ

ಮಾಹಿತಿಗಳ ಪ್ರಕಾರ ಹೊಸ ಎರ್ಟಿಗಾ ಕಾರುಗಳಲ್ಲಿ ಈ ಹಿಂದಿನ 1.3-ಲೀಟರ್ ಡೀಸೆಲ್ ಎಂಜಿನ್ ಬದಲಾಗಿ 1.5-ಲೀಟರ್ ಡೀಸೆಲ್ ಎಂಜಿನ್ ಅನ್ನು ನೀಡಲಿದೆ ಎಂಬ ಸುದ್ದಿ ಕೇಳಿಬರುತ್ತಿದ್ದು, ಹಾಗೆಯೇ 1.5-ಲೀಟರ್ ಪೆಟ್ರೋಲ್ ಎಂಜಿನ್ ಕೂಡಾ ಖರೀದಿಗೆ ಲಭ್ಯವಿರಲಿದೆ. ವಿಶೇಷ ಅಂದ್ರೆ, ಎರಡು ಮಾದರಿಯ ಎಂಜಿನ್‍ಗಳನ್ನು ಸಹ ಕಾರ್ಯಕ್ಷಮತೆಯನ್ನು ಹೆಚ್ಚಿಸಲು ಎಸ್‍‍ಹೆಚ್‍‍ವಿಎಸ್ ಹೈಬ್ರಿಡ್ ಸಿಸ್ಟಮ್ ಅನ್ನು ಒದಗಿಸುವುದು ಖಚಿತವಾಗಿದೆ.

ಬಿಡುಗಡೆಗಾಗಿ ಡೀಲರ್ಸ್ ಯಾರ್ಡ್ ತಲುಪಿದ ಹೊಚ್ಚ ಹೊಸ ಎರ್ಟಿಗಾ ಕಾರು

ಗೇರ್ ಬಾಕ್ಸ್

ಸ್ಪೈ ಚಿತ್ರಗಳಲ್ಲಿ ಗಮಸಿದ್ದಲ್ಲಿ ಹೊಸ ಕಾರು 5-ಸ್ಪೀಡ್ ಮ್ಯಾನುವಲ್ ಗೇರ್‍‍ಬಾಕ್ಸ್ ಅನ್ನು ಅಳವಡಿಸಲಾಗಿದ್ದು, ಇದು ಕೇವಲ ಡಿಸೆಲ್ ಮಾದರಿಯ ಕಾರಿನಲ್ಲಿ ಮಾತ್ರ ಈ ಆಯ್ಕೆಯು ಲಭ್ಯವಿರಲಿದೆ ಎನ್ನಲಾಗಿದೆ. ಆದರೆ ಪೆಟ್ರೋಲ್ ಎಂಜಿನ್ ಅನ್ನು 5-ಸ್ಪೀಡ್ ಮ್ಯಾನುವಲ್ ಮತ್ತು 4-ಸ್ಪೀಡ್ ಆಟೋಮ್ಯಾಟಿಕ್ ಗೇರ್‍‍ಬಾಕ್ಸ್ ಪಡೆದುಕೊಳ್ಳಲಿದೆ.

Image Source: TeamBHP,Instagram/Indra Fathan

Article Published On: Sunday, November 18, 2018, 9:30 [IST]
English summary
2018 Maruti Eritga Spotted In Dealership.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+