ರೂ.92.60 ಲಕ್ಷಕ್ಕೆ ಟೊಯೊಟಾ ಲ್ಯಾಂಡ್ ಕ್ರೂಸರ್ ಪ್ರಾಡೊ ಬಿಡುಗಡೆ
ಐಷಾರಾಮಿ ಎಸ್‌ಯುವಿ ಮಾದರಿಯಾದ ಟೊಯೊಟಾ ಲ್ಯಾಂಡ್ ಕ್ರೂಸರ್ ಪ್ರಾಡೊ 2018ರ ಆವೃತ್ತಿಯನ್ನು ಭಾರತದಲ್ಲಿ ಬಿಡುಗಡೆಗೊಳಿಸಲಾಗಿದ್ದು, ಕಾರಿನ ಬೆಲೆಯನ್ನು ಎಕ್ಸ್‌ಶೋರಂ ಪ್ರಕಾರ ರೂ. 92.60 ಲಕ್ಷಕ್ಕೆ ನಿಗದಿಗೊಳಿಸಲಾಗಿದೆ.
ಐಷಾರಾಮಿ ಎಸ್‌ಯುವಿ ಮಾದರಿಯಾದ ಟೊಯೊಟಾ ಲ್ಯಾಂಡ್ ಕ್ರೂಸರ್ ಪ್ರಾಡೊ 2018ರ ಆವೃತ್ತಿಯನ್ನು ಭಾರತದಲ್ಲಿ ಬಿಡುಗಡೆಗೊಳಿಸಲಾಗಿದ್ದು, ಕಾರಿನ ಬೆಲೆಯನ್ನು ಎಕ್ಸ್‌ಶೋರಂ ಪ್ರಕಾರ ರೂ. 92.60 ಲಕ್ಷಕ್ಕೆ ನಿಗದಿಗೊಳಿಸಲಾಗಿದೆ.

ಸಿಂಗಲ್ ವಿಎಕ್ಸ್ಎಲ್ ಸ್ಟ್ರಿಮ್ ತಂತ್ರಜ್ಞಾನ ಹೊಂದಿರುವ ಕಾರು ಮಾದರಿ ಇದಾಗಿದ್ದು, ಈ ಹಿಂದಿನಂತೆಯೇ ಪ್ರೋಜೆಕ್ಟರ್ ವಿನ್ಯಾಸದ ಎಲ್ಇಡಿ ಹೆಡ್‌ಲ್ಯಾಂಪ್, ಎಲ್‌ಇಡಿ ಡಿಆರ್‌ಎಸ್, ವಿದ್ಯುತ ಪ್ರೇರಿತ ಒಆರ್‌ವಿಎಂ, ಫ್ರಂಟ್ ಆ್ಯಂಡ್ ರಿಯರ್ ಫಾಗ್ ಲ್ಯಾಂಪ್ ಸೇರಿದಂತೆ ಹಲವಾರು ಐಷಾರಾಮಿ ವೈಶಿಷ್ಟ್ಯತೆಗಳನ್ನು ಮುಂದುವರಿಸಲಾಗಿದೆ.

ಕಳೆದ ತಿಂಗಳಷ್ಟೇ 2018ರ ಆಟೋ ಮೇಳದಲ್ಲಿ ಲ್ಯಾಂಡ್ ಕ್ರೂಸರ್ ಪ್ರಾಡೊ ಪ್ರದರ್ಶನ ಮಾಡಿದ್ದ ಟೊಯೊಟಾ ಸಂಸ್ಥೆಯು, ಕಡಿಮೆ ಬೆಲೆಗಳಲ್ಲಿ ಪ್ರಾಡೊ ಮಾದರಿಗಳನ್ನು ಬಿಡುಗಡೆಗೊಳಿಸುವ ಬಗ್ಗೆ ಸುಳಿವು ನೀಡಿತ್ತು.

ಅಂತೆಯೇ ಇದೀಗ ರೂ. 92.60 ಲಕ್ಷಕ್ಕೆ ಸಿಂಗಲ್ ವಿಎಕ್ಸ್ಎಲ್ ಸ್ಟ್ರಿಮ್ ಲ್ಯಾಂಡ್ ಕ್ರೂಸರ್ ಪ್ರಾಡೊ ಬಿಡುಗಡೆ ಮಾಡಲಾಗಿದ್ದು, ಪವರ್ ಸ್ಟ್ರೀರಿಂಗ್ ಸೇರಿದಂತೆ ಕಾರಿನ ಹೊರ ಮತ್ತು ಒಳ ವಿನ್ಯಾಸಗಳಲ್ಲಿ ಗುರುತರ ಬದಲಾವಣೆ ತರಲಾಗಿದೆ.

ಇನ್ನು ಕಾರಿನ ಒಳಭಾಗದಲ್ಲಿ ವಿಲಾಸಿ ಮಾದರಿಯ ಸೀಟುಗಳು, ಸುಧಾರಿತ ಇನ್ಪೋಟೈನ್‌ಮೆಂಟ್ ಸಿಸ್ಟಂ, ಡೌನ್ ಹಿಲ್ ಮತ್ತು ಹಿಲ್ ಸ್ಟಾರ್ಟ್ ಅಸಿಸ್ಟಂಟ್ ಸೌಲಭ್ಯ ಹೊಂದಿದ್ದು, ಸುರಕ್ಷತೆಗಾಗಿ ಎಬಿಎಸ್, ಇಬಿಡಿ ಮತ್ತು 7 ಏರ್‌ಬ್ಯಾಗ್‌ಗಳನ್ನು ಒದಗಿಸಲಾಗಿದೆ.

ಎಂಜಿನ್ ಸಾಮರ್ಥ್ಯ
3 ಲೀಟರ್, 4 ಸಿಲಿಂಡರ್ ಟರ್ಬೋಚಾರ್ಜ್ಡ್ ಡೀಸೆಲ್ ಎಂಜಿನ್ ಹೊಂದಿರುವ ಲ್ಯಾಂಡ್ ಕ್ರೂಸರ್ ಪ್ರಾಡೊ ಕಾರುಗಳು, 5-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ನೊಂದಿಗೆ 170 ಬಿಎಚ್‌ಪಿ ಮತ್ತು 410ಎನ್ಎಂ ಟಾರ್ಕ್ ಉತ್ಪಾದಿಸಬಲ್ಲವು.

ಜೊತೆಗೆ ಎಸ್‌ಯುವಿ ಮಾದರಿಗಳಲ್ಲೇ ಅತಿಹೆಚ್ಚು ಒಳವಿನ್ಯಾಸ ಹೊಂದಿರುವ ಲ್ಯಾಂಡ್ ಕ್ರೂಸರ್ ಪ್ರಾಡೋ ಕಾರುಗಳು 2990 ಕೆಜಿ ತೂಕ ಹೊಂದಿದ್ದು, 87 ಲೀಟರ್ ಸಾಮರ್ಥ್ಯದ ಇಂಧನ ಟ್ಯಾಂಕ್ ಮತ್ತು 7 ಮಂದಿ ಆರಾಮದಾಯಕವಾಗಿ ಪ್ರಯಾಣಿಸಬಹುದಾಗಿದೆ.

ಲಭ್ಯವಿರುವ ಬಣ್ಣಗಳು
ಹೊಸದಾಗಿ ಬಿಡುಗಡೆಯಾಗಿರುವ ಲ್ಯಾಂಡ್ ಕ್ರೂಸರ್ ಪ್ರಾಡೊ ಕಾರುಗಳು ಒಟ್ಟು 8 ಬಣ್ಣಗಳಲ್ಲಿ ಲಭ್ಯವಿದ್ದು, ವೈಟ್ ಪರ್ಲ್ ಕ್ರಿಸ್ಟಲ್ ಶೈನ್, ಸಿಲ್ವರ್ ಮೆಟಾಲಿಕ್, ಗ್ರೇ ಮೆಟಾಲಿಕ್, ಬ್ಲ್ಯಾಕ್‌ಕಿಷ್ ಏಜ್ಹಾ ಗ್ಲಾಸ್ ಫ್ಲೇಕ್, ಆ್ಯಟಿಟ್ಯೂಡ್ ಬ್ಲ್ಯಾಕ್ ಮೈಕಾ, ರೆಡ್ ಮೈಕಾ ಮೆಟಾಲಿಕ್, ಆವಂತ್ ಗಾರ್ಡ್ ಬ್ರೋನ್ಜ್ ಮೆಟಾಲಿಕ್ ಮತ್ತು ವಿಂಟೇಜ್ ಬ್ರೌನ್ ಪರ್ಲ್ ಕ್ರಿಸ್ಟಲ್ ಶೈನ್ ಬಣ್ಣದಲ್ಲಿ ಆಯ್ಕೆ ಮಾಡಬಹುದು.

ಈ ಮೂಲಕ ಐಷಾರಾಮಿ ಎಸ್‌ಯುವಿ ತನ್ನದೇ ಆದ ವಿಶಿಷ್ಟ ವಿನ್ಯಾಸಗಳೊಂದಿಗೆ ಲ್ಯಾಂಡ್ ಕ್ರೂಸರ್ ಪ್ರಾಡೊ ಕಾರುಗಳು, ಸದ್ಯ ಮಾರುಕಟ್ಟೆಯಲ್ಲಿ ಜನಪ್ರಿಯವಾಗುತ್ತಿರುವ ಆಡಿ ಕ್ಯೂ7, ಮರ್ಸಿಡಿಸ್ ಬೆಂಝ್ ಜಿಎಲ್ಎಸ್ ಮತ್ತು ವೋಲ್ವೋ ಎಕ್ಸ್ ಸಿ 90 ಕಾರುಗಳಿಗೆ ತೀವ್ರ ಪ್ರತಿಸ್ಪರ್ಧಿಯಾಗುವ ನೀರಿಕ್ಷೆಯಲ್ಲಿದೆ.


Click it and Unblock the Notifications








