2020ರೊಳಗೆ ಬಿಡುಗಡೆಗೊಳಲ್ಲಿರುವ ಹ್ಯುಂಡೈ ಕಾರುಗಳಿವು..
ದೇಶಿಯ ಮಾರುಕಟ್ಟೆಯಲ್ಲಿ ಎರಡನೆಯ ಅತೀ ದೊಡ್ಡ ಕಾರು ತಯಾರಕ ಸಂಸ್ಥೆಯಾದ ಹ್ಯುಂಡೈ ತನ್ನ ಕಾರುಗಳ ಪಟ್ಟಿಯಲ್ಲಿನ ಸಂಖ್ಯೆಗಳನ್ನು ಇನ್ನಷ್ಟು ಬೆಳೆಸುವ ಯೋಜನೆಯಲಿದೆ.
ದೇಶಿಯ ಮಾರುಕಟ್ಟೆಯಲ್ಲಿ ಎರಡನೆಯ ಅತೀ ದೊಡ್ಡ ಕಾರು ತಯಾರಕ ಸಂಸ್ಥೆಯಾದ ಹ್ಯುಂಡೈ ತನ್ನ ಕಾರುಗಳ ಪಟ್ಟಿಯಲ್ಲಿನ ಸಂಖ್ಯೆಗಳನ್ನು ಇನ್ನಷ್ಟು ಬೆಳೆಸುವ ಯೋಜನೆಯಲಿದ್ದು, ಭಾರತದ ಮಾರುಕಟ್ಟೆಯಲ್ಲಿ ಇನ್ನೆರಡು ವರ್ಷದಲ್ಲಿ ತಮ್ಮ 8 ಹೊಸ ಕಾರುಗಳನ್ನು ಪರಿಚಯಿಸುವ ಆಲೋಚನೆಯಲ್ಲಿದೆ.

ಈ ನಿಟ್ಟಿನಲ್ಲಿ ಕೊರಿಯನ್ ಮೂಲದ ವಾಹನ ತಯಾರಕ ಸಂಸ್ಥೆಯಾದ ಹ್ಯುಂಡೈ ಮಾರುಕಟ್ಟೆಯಲ್ಲಿರುವ ಅವಕಾಶಗಳನ್ನು ತಮ್ಮದಾಗಿಸಿಕೊಳ್ಳಲು ಮತ್ತು ತಮ್ಮ ಎದುರಾಳಿ ವಾಹನ ತಯಾರಕ ಸಂಸ್ಥೆಗಳಿಗೆ ಪೈಪೋಟಿ ನೀಡಲು 2020ರೊಳಗೆ ಹ್ಯುಂಡೈ ಸಂಸ್ಥೆಯು ಬಿಡುಗಡೆಗೊಳಿಸಲಿರುವ ಕಾರುಗಳ ಪಟ್ಟಿ ಇಲ್ಲಿದೆ ನೋಡಿ.

ಹ್ಯುಂಡೈ ಸ್ಯಾಂಟ್ರೊ
ಹ್ಯುಂಡೈ ಸಂಸ್ಥೆಯು ದೇಶಿಯ ಮಾರುಕಟ್ಟೆಯಲ್ಲಿ ತಮ್ಮ ಕಾರ್ಯಾಚರಣೆಯನ್ನು ಪ್ರಾರಂಭಿಸಿದಾಗ ಮೊದಲಿಗೆ ಬಿಡುಗಡೆ ಮಾಡಿದ ಕಾರು ಸ್ಯಾಂಟ್ರೊ. ಸ್ಯಾಂಟ್ರೊ ಹ್ಯಾಚ್‍ಬ್ಯಾಕ್ ಕಾರಿನಿಂದ ಹೆಚ್ಚು ಯಶಸ್ವಿಯನ್ನು ಪಡೆದಿದ್ದು, ಭಾರತ ದೇಶದಲ್ಲಿನ ಎರಡನೆಯ ಅತೀ ದೊಡ್ಡ ಪ್ಯಾಸ್ಸೆಂಜರ್ ಕಾರ್ ಎಂಬ ಖ್ಯಾತಿಗೆ ಪಾತ್ರವಾಗಿದೆ.

ಪ್ರಸ್ಥುತ ಮಾರುಕಟ್ಟೆಯಲ್ಲಿ ಚಿಕ್ಕ ಹ್ಯಾಚ್‍ಬ್ಯಾಕ್ ಕಾರುಗಳಿಗೆ ಬೇಡಿಕೆಯು ಹೆಚ್ಚಾಗುತಿದ್ದು, ಈ ಹಿಂದೆ ಮಾರುಕಟ್ಟೆಯಿಂದ ಮರೆಯಾಗಿದ್ದ ಸ್ಯಾಂಟ್ರೊ ಕಾರನ್ನು ರೀಲಾಂಚ್ ಮಾಡಲು ಸಂಸ್ಥೆಯು ಸಕಲ ಸಿದ್ಧತೆಯನ್ನು ಮಾಡಿಕೊಂಡಿದೆ. ವಿನ್ಯಾಸ ಮತ್ತು ವೈಶಿಷ್ಟ್ಯತೆಗಳನ್ನು ನವೀಕರಿಸಿ ಸ್ಯಾಂಟ್ರೊ ಕಾರನ್ನು ಮಾರುತಿ ಆಲ್ಟೊ ಮತ್ತು ರೆನಾಲ್ಟ್ ಕ್ವಿಡ್ ಕಾರುಗಳಿಗೆ ಪೈಪೋಟಿ ನೀಡುವಂತೆ ಸಜ್ಜುಗೊಳಿಸಿದೆ.
ಬಿಡುಗಡೆಯ ಅವಧಿ : ಸೆಪ್ಟೆಂಬರ್/ಅಕ್ಟೋಬರ್ 2018

ಹ್ಯುಂಡೈ ಕ್ಯೂಎಕ್ಸ್ಐ ಸಬ್ 4 ಮೀಟರ್ ಎಸ್‍ಯುವಿ
ಹ್ಯುಂಡೈ ಸಂಸ್ಥೆಯು ಕರ್ಲಿನೊ ಕಾರಿನ ಪರಿಕಲ್ಪನೆಯನ್ನು 2016ರಲ್ಲಿ ನಡೆದ ಆಟೋ ಎಕ್ಸ್ ಪೋ ಮೇಳದಲ್ಲಿ ಪ್ರದರ್ಶಿಸಲಾಗಿದ್ದು, ಶೀಘ್ರವೇ ಸಂಸ್ಥೆಯು ಈ ಕಾರನ್ನು ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲಿದೆ. ಹುಂಡೈ ಈಗಾಗಲೇ ಕಾಂಪ್ಯಾಕ್ಟ್ ಎಸ್‍ಯುವಿ ವಿಭಾಗದಲ್ಲಿ ಕ್ರೆಟಾ ಮತ್ತು ಸಬ್ -4-ಮೀಟರ್ ಎಸ್‍ಯುವಿ ವಿಭಾಗದೊಂದಿಗೆ ಶೀಘ್ರವಾಗಿ ಬೆಳೆಯುತ್ತಿದೆ.

ಕ್ಯೂಎಕ್ಸ್ಐ ಸಂಕೇತನಾಮವನ್ನು ಪಡೆದಿರುವ ಕಾರ್ಲಿನೊದ ಉತ್ಪಾದನಾ ಆವೃತ್ತಿಯು ಟಾಟಾ ನೆಕ್ಸಾನ್, ಫೋರ್ಡ್ ಇಕೊಸ್ಪೋರ್ಟ್ ಮತ್ತು ಮಾರುತಿ ವಿಟಾರಾ ಬ್ರೆಝಾ ಎಂಬ ಕಾರುಗಳಿಗೆ ಪೈಪೋಟಿ ನೀಡಲಿದೆ. ಇನ್ನು ಈ ಕಾರು ಬಿಎಸ್ 4 ಎಂಜಿನ್ ಅನ್ನು ಹೊಂದಿರಲಿದ್ದು ಟರ್ಬೋಚಾರ್ಜ್ಡ್ ಎಂಜಿನ್ ಮತ್ತು ಹೊಸ ಡೀಸೆಲ್ ಎಂಜಿನ್ ಮಾದರಿಗಳನ್ನು ಹೊತ್ತು ಬಿಡುಗಡೆಗೊಳ್ಳಲಿದೆ ಎನ್ನಲಾಗಿದೆ.
ಬಿಡುಗಡೆಯ ಅವಧಿ : 2019

ಹ್ಯುಂಡೈ ಕೋನಾ ಇವಿ
ಪೆಟ್ರೋಲ್ ಮತ್ತು ಡೀಸೆಲ್ ಇಂಧನ ಆಧಾರಿತ ಕಾರುಗಳನ್ನಲ್ಲದೆ ಹ್ಯುಂಡೈ ಸಂಸ್ಥೆಯು ವಿದ್ಯುತ್ ವಾಹನಗಳನ್ನು ಪರಿಚಯಿಸಲಿದ್ದು, ಹ್ಯುಂಡೈ ಸಂಸ್ಥೆಯು ಬಿಡುಗಡೆಗೊಳಿಸಲಿರುವ ಮೊದಲ ವಿದ್ಯುತ್ ಕಾರು ಕೋನಾ ಎವಿ. ಈ ಕಾರು ಕಳೆದ ವರ್ಷ ಬಹಿರಂಗಗೊಂಡಿದ್ದು 2019ರ ದ್ವಿತಿಯ ತ್ರೈಮಾಸಿಕ ಅವಧಿಯಲ್ಲಿ ಬಿಡುಗಡೆಗೊಳ್ಳಲಿದೆ.

ಹ್ಯುಂಡೈ ಕೊನಾ ಇವಿ ಕಾರು 39.2 ಕಿಲೋವ್ಯಾಟ್ಸ್ ಮತ್ತು 64ಕಿಲೋವ್ಯಾಟ್ಸ್ ಎಂಬ ಎರಡು ವೇರಿಯಂಟ್‍ನಲ್ಲಿ ಬಿಡುಗಡೆಗೊಳ್ಳಲ್ಲಿದ್ದು, ಭಾರತಕ್ಕೆ ಸಿಕೆಡಿ (ಕಂಪ್ಲೀಟ್ಲಿ ಕ್ನಾಕ್ಡ್ ಡೌನ್) ಮಾರ್ಗದಲ್ಲಿ ಕಾಲಿಡಲಿವೆ.
ಬಿಡುಗಡೆಯ ಅವಧಿ : 2019 ದ್ವಿತಿಯ ತ್ರೈಮಾಸಿಕ ಅವಧಿ

ಹೊಸ ಹ್ಯುಂಡೈ ಕ್ರೆಟಾ
ಹೊಸ ಕ್ರೆಟಾ ಈಗಾಗಲೇ ಭಾರತದಲ್ಲಿನ ವಿಭಾಗದಲ್ಲಿ ಹೆಚ್ಚಿನ ಮಾರುಕಟ್ಟೆ ಪಾಲನ್ನು ವಶಪಡಿಸಿಕೊಂಡಿದ್ದು, ಹ್ಯುಂಡೈ ಈಗ ಎರಡನೇ ತಲೆಮಾರಿನ ಕ್ರೆಟಾದಲ್ಲಿ ಕಾರ್ಯನಿರ್ವಹಿಸುತ್ತಿದೆ ಮತ್ತು ಇದು ಕಿಯಾ ಎಸ್‍ಪಿಯ ಅದೇ ವೇದಿಕೆಯನ್ನು ಆಧರಿಸಿದೆ.

ಬಿಡುಗಡೆಗೊಳ್ಳಲಿರುವ ಹೊಸ ಹ್ಯುಂಡೈ ಕ್ರೆಟಾ 5 ಮತ್ತು 7 ಆಸನವುಳ್ಳ ಮಾದರಿಗಳಲ್ಲಿ ಲಭ್ಯವಿರಲಿದೆ ಎನ್ನಲಾಗಿದೆ. ಹೊಸ ತಲೆಮಾರಿನ ಕ್ರೆಟಾ ಸಂಪೂರ್ಣವಾಗಿ ಪರಿಷ್ಕರಿಸಿದ ಮುಂಭಾಗ ಮತ್ತು ಹಿಂಭಾಗವನ್ನು ಪಡೆಯಲು ನಿರೀಕ್ಷಿಸಲಾಗಿದೆ, ಆದರೆ ಕಾರಿನ ಸಿಲೂಯೆಟ್ ಎಸ್‍ಯುವಿ ಪ್ರಸ್ತುತ ಆವೃತ್ತಿಗೆ ಹೋಲುತ್ತದೆ.
ಬಿಡುಗಡೆಯ ಅವಧಿ : 2020

ಹ್ಯುಂಡೈ ಟಕ್ಸನ್
ಹುಂಡೈ ಸಂಸ್ಥೆಯು ಹೊಸ ಟಕ್ಸನ್ ಎಸ್‍ಯುವಿ ಕಾರನ್ನು ತಯಾರು ಮಾಡುವ ಕಾರ್ಯದಲಿದ್ದು, ಮುಂಬರುವ ಮಾದರಿ ಈಗಾಗಲೇ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಸ್ಪಾಟ್ ಟೆಸ್ಟಿಂಗ್ ನಡೆಸುತ್ತಿದೆ. ಹೊಸ ಎಸ್‍ಯುವಿ ಕಾರು ಗುರುತರ ಬದಲಾವಣೆಗಳನ್ನು ಪಡೆಯಲಿದ್ದು, ಇದು ಹೊಸ ಗ್ರಿಲ್, ಹೆಡ್‍ಲ್ಯಾಂಪ್‍ಗಳು, ಟೈಲ್ ಲ್ಯಾಂಪ್ಸ್ ಮತ್ತು ಇತರ ದೇಹದ ಫಲಕಗಳೊಂದಿಗೆ ಕಾಣುವ ರೀತಿಯಲ್ಲಿ ಬದಲಾವಣೆಗಳನ್ನು ಪಡೆಯಲಿದೆ.

ಈ ಕಾರಿನ ಎಂಜಿನ್ ವಿವರಗಳನ್ನು ಬಹಿರಂಗಪಡಿಸಲಾಗಿಲ್ಲವಾದರೂ 2.0 ಲೀಟರ್ ಪೆಟ್ರೋಲ್ ಎಂಜಿನ್ ಅಥವಾ 1.6 ಲೀಟರ್ ಟರ್ಬೋಚಾರ್ಜ್ಡ್ ಪೆಟ್ರೋಲ್ ಇಂಜಿನ್ ಅನ್ನು ಪಡೆಯಬಹುದು ಎಂದು ನಿರೀಕ್ಷಿಸಲಾಗಿದೆ. ಹೊರಸೂಸುವಿಕೆಯ ಮಾನದಂಡಗಳೊಂದಿಗೆ ಇರಿಸಿಕೊಳ್ಳಲು ಡೀಸೆಲ್ ಎಂಜಿನ್ ಅನ್ನು ನವೀಕರಿಸಲಾಗುತ್ತದೆ.
ಬಿಡುಗಡೆಯ ಅವಧಿ : 2019

ಹ್ಯುಂಡೈ ಎಲೈಟ್ ಐ20
ಕೊರಿಯನ್ ಮೂಲದ ವಾಹನ ತಯಾರಕ ಸಂಸ್ಥೆಯಾದ ಹ್ಯುಂಡೈ 2015ರಲ್ಲಿ ತಮ್ಮ ಐ20 ಆಕ್ಟಿವ್ ಕಾರನ್ನು ಬಿಡುಗಡೆಗೊಳಿಸಿದ್ದು, ಇದೀಗ ಐ20 ಆಕ್ಟಿವ್ ಫೇಸ್‍ಲಿಫ್ಟ್ ಕಾರನ್ನು ಬಹಿರಂಗಪಡಿಸಿದೆ. ಇದಲ್ಲದೆ ಸಂಸ್ಥೆಯು ಫೆಬ್ರವರಿಯಲ್ಲಿ ನಡೆದ ಆಟೋ ಎಕ್ಸ್ ಪೋ ಮೇಳದಲ್ಲಿ ತಮ್ಮ ಹೊಸ 2018ರ ಎಲೈಟ್ ಐ20 ಕಾರ್ ಅನ್ನು ಕೂಡ ಬಿಡುಗಡೆಗೊಳಿಸಿತ್ತು.

ಹ್ಯುಂಡೈ ಐ20 ಆಕ್ಟೀವ್ ಫೇಸ್‍ಲಿಫ್ಟ್ ಕಾರುಗಳು ಪ್ರಸ್ಥುತ ಲಭ್ಯವಿರುವ ಕಾರಿನ ಮಾದರಿಗಳಿಗಿಂದ ಹೆಚ್ಚುವರಿ ನವೀಕರಣಗಳನ್ನು ಪಡೆದಿಲ್ಲವಾದರೂ, ಈ ಕಾರು ಮಾರುಕಟ್ಟೆಗೆ ಒಮ್ಮೆ ಲಗ್ಗೆಯಿಟ್ಟಲ್ಲಿ ಟೊಯೊಟಾ ಇಟಿಯೊಸ್ ಕ್ರಾಸ್ ಮತ್ತು ಫಿಯಾಟ್ ಅರ್ಬನ್ ಕ್ರಾಸ್ ಕಾರುಗಳಿಗೆ ಪೈಪೋಟಿಯನ್ನು ನೀಡಲಿದೆ.
ಬಿಡುಗಡೆಯ ಅವಧಿ : 2020

ಹ್ಯುಂಡೈ ಗ್ರ್ಯಾಂಡ್ ಐ10
ಜಾಗತಿಕ ಮಾರುಕಟ್ಟೆಯಲ್ಲಿ ಮತ್ತು ದೇಶಿಯ ಮಾರುಕಟ್ಟೆಯಲ್ಲಿ ಹೆಚ್ಚು ಜನಪ್ರಿಯತೆಯನ್ನು ಪಡೆದ ಗ್ರ್ಯಾಂಡ್ ಐ10 ಕಾರು ಇದೀಗ ಹೊಸ ವಿನ್ಯಾಸ ಮತ್ತು ಹೊಸ ಎಂಜಿನ್ ಅನ್ನು ಪಡೆದು ಮತ್ತೆ ಬಿದುಗಡೆಗೊಳ್ಳಲಿದೆ. ಈ ಕಾರು ಒಮ್ಮೆ ಬಿಡುಗಡೆಗೊಂಡಲ್ಲಿ ಮಾರುತಿ ಸ್ವಿಫ್ಟ್ ಮತ್ತು ಫೋರ್ಡ್ ಫಿಗೊ ಕಾರುಗಳಿ ಪೈಪೋಟಿ ನೀಡಲಿದೆ.
ಬಿಡುಗಡೆಯ ಅವಧಿ : 2020

ಹ್ಯುಂಡೈ ಎಕ್ಸ್‌ಸೆಂಟ್
ಹೊಸ ಎಕ್ಸ್‌ಸೆಂಟ್ ಗ್ರ್ಯಾಂಡ್ ಐ10 ಹ್ಯಾಚ್‍ಬ್ಯಾಕ್ ಕಾರಿನ ಸಬ್ 4 ಮೀಟರ್ ಸೆಡಾನ್ ಮಾದರಿಯಾಗಿದ್ದು, ಈ ಹಿಂದೆಯೆ ಈ ಕಾರಿನ ಮಿಡ್ ಲೈಫ್ ಫೇಸ್‍ಲಿಫ್ಟ್ ಮಾದರಿಯನ್ನು ಪಡೆದುಕೊಂಡಿದೆ. ಈ ಕಾರು ಕೂಡಾ ಗ್ರ್ಯಾಂಡ್ ಐ10 ನಂತೆಯೆ ವಿನ್ಯಾಸದಲ್ಲಿ, ಎಂಜಿನ್ ಮತ್ತು ಹೊಸ ಪ್ಲಾಟ್‍ಫಾರ್ಮ್ ಅನ್ನು ಪಡೆದುಕೊಳ್ಳಲಿದೆ.
ಬಿಡುಗಡೆಯ ಅವಧಿ : 2020


Click it and Unblock the Notifications