ಪ್ರತಿಸ್ಪರ್ಧಿ ಕಾರುಗಳಿಂತ ಮಹೀಂದ್ರಾ ಅಲ್ಟುರಾಸ್ ಜಿ4 ಹೇಗೆ ಭಿನ್ನವಾಗಿದೆ ಗೊತ್ತಾ?

ಮಹೀಂದ್ರಾ ಸಂಸ್ಥೆಯು ಕೊನೆಗೂ ತನ್ನ ಬಹುನೀರಿಕ್ಷಿತ ಅಲ್ಟುರಾಸ್ ಜಿ4 ಕಾರನ್ನು ಬಿಡುಗಡೆಗೊಳಿಸಿದ್ದು, ಪ್ರೀಮಿಯಂ ಸೌಲಭ್ಯಗಳನ್ನು ಹೊತ್ತು ಬಂದಿರುವ ಹೊಸ ಕಾರು ಎಸ್‌ಯುವಿ ಪ್ರಿಯರ ಆಕರ್ಷಣೆಗೆ ಕಾರಣವಾಗಿದೆ. ಇದರಲ್ಲಿ ಮುಖ್ಯವಾಗಿ ಟೊಯೊಟಾ ಫಾರ್ಚೂನರ್ ಮತ್ತು ಫೋರ್ಡ್ ಎಂಡೀವರ್‌ಗೆ ತೀವ್ರ ಪೈಪೋಟಿ ನೀಡಲಿರುವ ಅಲ್ಟುರಾಸ್ ಜಿ4 ಕಾರು ಪ್ರೀಮಿಯಂ ಕಾರುಗಳಲ್ಲಿ ಭಾರೀ ಜನಪ್ರಿಯತೆ ಪಡೆಯುವ ತವಕದಲ್ಲಿದೆ.

ಪ್ರತಿಸ್ಪರ್ಧಿ ಕಾರುಗಳಿಂತ ಮಹೀಂದ್ರಾ ಅಲ್ಟುರಾಸ್ ಜಿ4 ಹೇಗೆ ಭಿನ್ನವಾಗಿದೆ ಗೊತ್ತಾ?

ಮಹೀಂದ್ರಾ ಸದ್ಯ ವಿನೂತನ ಮಾದರಿಯ ಪ್ರೀಮಿಯಂ ಕಾರುಗಳ ಅಭಿವೃದ್ಧಿಗಾಗಿ ದಕ್ಷಿಣ ಕೊರಿಯಾದ ಮೂಲದ ಸ್ಯಾಂಗ್‌ಯಾಂಗ್‌ ಆಟೋ ಉತ್ಪಾದನಾ ಸಂಸ್ಥೆಯೊಂದಿಗೆ ಕೈಜೋಡಿಸಿದ್ದು, ಸ್ಯಾಂಗ್‌ಯ್ಯಾಂಗ್ ಸಂಸ್ಥೆಯ ಈ ಹಿಂದಿನ ಜಿ4 ಕಾರಿನ ಪ್ರೇರಣೆಯೊಂದಿಗೆ ಹೊಸ ಅಲ್ಟುರಾಸ್ ಜಿ4 ಎಸ್‌ಯುವಿ ಕಾರನ್ನು ನಿರ್ಮಾಣ ಮಾಡಿದೆ.

ಪ್ರತಿಸ್ಪರ್ಧಿ ಕಾರುಗಳಿಂತ ಮಹೀಂದ್ರಾ ಅಲ್ಟುರಾಸ್ ಜಿ4 ಹೇಗೆ ಭಿನ್ನವಾಗಿದೆ ಗೊತ್ತಾ?

ಮಹೀಂದ್ರಾ ಸಂಸ್ಥೆಯು ಬಿಡುಗಡೆಗೊಳಿಸಿರುವ ಅಲ್ಟುರಾಸ್ ಜಿ4 ಕಾರು ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಪ್ರಮುಖ 2 ವೆರಿಯೆಂಟ್‌ಗಳಲ್ಲಿ ಬಿಡುಗಡೆಯಾಗಿದ್ದು, ಪ್ರೀಮಿಯಂ ಸೌಲಭ್ಯಗಳೊಂದಿಗೆ 7 ಸೀಟರ್ ಐಷಾರಾಮಿ ಎಸ್‌ಯುವಿ ಕಾರು ಮಾದರಿಯಾಗಿದೆ ಮಾರಾಟಗೊಳ್ಳಲಿದೆ.

ಪ್ರತಿಸ್ಪರ್ಧಿ ಕಾರುಗಳಿಂತ ಮಹೀಂದ್ರಾ ಅಲ್ಟುರಾಸ್ ಜಿ4 ಹೇಗೆ ಭಿನ್ನವಾಗಿದೆ ಗೊತ್ತಾ?

ಡಿಸೈನ್ ಮತ್ತು ಸ್ಟೈಲ್

ಸುಧಾರಿತ ತಂತ್ರಜ್ಞಾನ ಪ್ರೇರಿತ ವಿಶ್ವದರ್ಜೆ ಸೌಲಭ್ಯಗಳನ್ನು ಹೊಂದಿರುವ ಅಲ್ಟುರಾಸ್ ಜಿ4 ಕಾರುಗಳು ಮುಂಭಾಗದಲ್ಲಿ ಆಕರ್ಷಕ ವಿನ್ಯಾಸವನ್ನು ಹೊಂದಿದ್ದು, ಮಹೀಂದ್ರಾ ಸಂಸ್ಥೆಯ ಆಕರ್ಷಕ ವರ್ಟಿಕಲ್ ಸಿಕ್ಸ್ ಸ್ಲಾಟ್ ಗ್ರಿಲ್ ಹೊಸ ಕಾರಿನ ಪ್ರಮುಖ ಆಕರ್ಷಣೆಯಾಗಿದೆ.

ಪ್ರತಿಸ್ಪರ್ಧಿ ಕಾರುಗಳಿಂತ ಮಹೀಂದ್ರಾ ಅಲ್ಟುರಾಸ್ ಜಿ4 ಹೇಗೆ ಭಿನ್ನವಾಗಿದೆ ಗೊತ್ತಾ?

ಕಾರಿನ ಡಿಸೈನ್‌ನಲ್ಲಿ ಈ ಹಿಂದಿನ ಸ್ಯಾಂಗ್‌ಯಾಂಗ್ ರೆಕ್ಸ್‌ಸ್ಟಾನ್ ಜಿ4 ಕಾರಿನ ಕೆಲವು ವಿನ್ಯಾಸಗಳನ್ನು ಎರವಲು ಪಡೆಯಲಾಗಿದ್ದು, ಎಲೆಕ್ಟ್ರಿಕ್ ಸನ್ ರೂಫ್, ಪವರ್ಡ್ ಟೈಲ್‌ಗೆಟ್, ಪ್ರೊಜೆಕ್ಟರ್ ಹೆಡ್‌ಲ್ಯಾಂಪ್ ಜೊತೆ ಎಲ್ಇಡಿ ಡಿಆರ್‌ಎಲ್, ಹೊಂದಾಣಿಕೆ ಮಾಡಿಕೊಳ್ಳಬಹುದಾದ ಹೈಬೀಮ್ ಮತ್ತು ಲೋ ಬೀಮ್ ಲೈಟ್ಸ್, 18-ಇಂಚಿನ ಫೈವ್ ಸ್ಪೋಕ್ ಅಲಾಯ್ ವೀಲ್ಹ್‌ಗಳು, ಫಾಗ್ ಲ್ಯಾಂಪ್ ಜೊತೆ ಕಾರ್ನರ್ ಲೈಟಿಂಗ್ ಸೌಲಭ್ಯ ಪಡೆದಿದೆ.

ಪ್ರತಿಸ್ಪರ್ಧಿ ಕಾರುಗಳಿಂತ ಮಹೀಂದ್ರಾ ಅಲ್ಟುರಾಸ್ ಜಿ4 ಹೇಗೆ ಭಿನ್ನವಾಗಿದೆ ಗೊತ್ತಾ?

ಹೊಸ ಕಾರಿನಲ್ಲಿ ಪ್ರಕಾಶಿತ ಹಿಂಬದಿಯ ನಂಬರ್ ಪ್ಲೇಟ್, ಬಿಸಿಯಾಗುವ ಒಆರ್‌ವಿಎಂಗಳು, ವಿಂಡ್ ಷೀಲ್ಡ್ ಮತ್ತು ಕಾರ್ನರಿಂಗ್ ಲೈಟ್ಸ್ ಸೌಲಭ್ಯವು ಕೂಡಾ ಮಹತ್ವ ಪಡೆದಿದ್ದು, ಪ್ರತಿ ಹಂತದಲ್ಲೂ ಕ್ರೋಮ್ ಬಳಿಕೆ ಮಾಡಿರುವುದು ಕಾರಿನ ಹೊರ ಭಾಗದ ಲುಕ್‌ ಹೆಚ್ಚಿಸುವಲ್ಲಿ ಪ್ಲಸ್ ಪಾಯಿಂಟ್ ಆಗಿದೆ.

ಪ್ರತಿಸ್ಪರ್ಧಿ ಕಾರುಗಳಿಂತ ಮಹೀಂದ್ರಾ ಅಲ್ಟುರಾಸ್ ಜಿ4 ಹೇಗೆ ಭಿನ್ನವಾಗಿದೆ ಗೊತ್ತಾ?

ಇನ್ನು ಕಾರಿನ ಹಿಂಭಾಗದ ಡಿಸೈನ್ ಕೂಡಾ ನೋಡಲು ಆಕರ್ಷಕವಾಗಿದ್ದು, ಎಲ್ಇಡಿ ಟೈಲ್ ಲ್ಯಾಂಪ್ಸ್, ಮಹೀಂದ್ರಾ ಲೊಗೊ ಜೊತೆಗೆ ಬೂಟ್‌ಸ್ಪೆಸ್ ಮಧ್ಯದಲ್ಲಿ ಜೋಡಣೆ ಮಾಡಲಾಗಿರುವ 'ALTURAS G4' ಬ್ಯಾಡ್ಜ್, ಬಂಪರ್ ಕ್ಲ್ಯಾಡಿಂಗ್ ಸೇರಿಸಲಾಗಿದೆ.

ಪ್ರತಿಸ್ಪರ್ಧಿ ಕಾರುಗಳಿಂತ ಮಹೀಂದ್ರಾ ಅಲ್ಟುರಾಸ್ ಜಿ4 ಹೇಗೆ ಭಿನ್ನವಾಗಿದೆ ಗೊತ್ತಾ?

ಕಾರಿನ ಒಳಾಂಗಣ ವಿನ್ಯಾಸ

ಅಲ್ಟುರಾಸ್ ಜಿ4 ಕಾರಿನ ಒಳಭಾಗದ ವಿನ್ಯಾಸವು ನಿಜಕ್ಕೂ ಎಸ್‌ಯುವಿ ಪ್ರಿಯರನ್ನು ಮೊದಲ ನೋಟದಲ್ಲೇ ಸೆಳೆಯದೆ ಇರಲಾರವು. ಯಾಕೆಂದ್ರೆ ಪ್ರೀಮಿಯಂ ಸೌಲಭ್ಯಗಳಾದ ಸ್ಟೀರಿಂಗ್ ಮೌಟೆಂಡ್ ಆಡಿಯೋ ಕಂಟ್ರೋಲ್, ಡಿಜಿಟಲ್ ಅನಲಾಗ್ ಇನ್‌ಸ್ಟ್ರುಮೆಂಟ್ ಕ್ಲಸ್ಟರ್ ಜೊತೆ 7-ಇಂಚಿನ ಟಿಎಫ್‌ಟಿ ಡಿಸ್‌ಪ್ಲೈ ಗಮನ ಸೆಳೆಯುತ್ತವೆ.

ಪ್ರತಿಸ್ಪರ್ಧಿ ಕಾರುಗಳಿಂತ ಮಹೀಂದ್ರಾ ಅಲ್ಟುರಾಸ್ ಜಿ4 ಹೇಗೆ ಭಿನ್ನವಾಗಿದೆ ಗೊತ್ತಾ?

ಸಾಫ್ಟ್-ಟಚ್ ಮೆಟೀರಿಯಲ್ ಪ್ರೇರಿತ ಪ್ರೀಮಿಯಂ ಸೌಲಭ್ಯದ ಒಳಾಂಗಣದಲ್ಲಿ ಕಾರು ಚಾಲನೆಯು ಮತ್ತಷ್ಟು ಐಷಾರಾಮಿತನ ನೀಡಲಿದ್ದು, 8-ಇಂಚಿನ ಟಚ್‌ಸ್ಕ್ರೀನ್ ಇನ್ಫೆೋಟೈನ್‌ಮೆಂಟ್ ಸಿಸ್ಟಂ, ಅಂಡ್ರಾಯಿಡ್ ಸೌಲಭ್ಯ ಪ್ರೇರಿತ ಆ್ಯಪಲ್ ಕಾರ್‌ಪ್ಲೇ ಮತ್ತು ನ್ಯಾವಿಗೇಷನ್, ಮುಂಭಾಗದ ಆಸನಗಳಲ್ಲಿ ತಾಪಮಾನ ಏರಿಳಿತದ ಸೌಲಭ್ಯವಿದೆ.

ಪ್ರತಿಸ್ಪರ್ಧಿ ಕಾರುಗಳಿಂತ ಮಹೀಂದ್ರಾ ಅಲ್ಟುರಾಸ್ ಜಿ4 ಹೇಗೆ ಭಿನ್ನವಾಗಿದೆ ಗೊತ್ತಾ?

ಪ್ರಮುಖವಾಗಿ ಡ್ಯುಯಲ್ ಜೋನ್ ಕ್ಲೈಮೆಟ್ ಕಂಟ್ರೋಲ್ ಸಿಸ್ಟಂ, 8 ಹಂತದಲ್ಲಿ ಹೊಂದಾಣಿಕೆ ಮಾಡಿಕೊಳ್ಳಬಹುದಾದ ಚಾಲಕನ ಸೀಟು, ಎರಡನೇ ಸಾಲಿನಲ್ಲಿರುವ ಮಧ್ಯದ ಆಸನದಲ್ಲಿ ಆರ್ಮ್‌ರೆಸ್ಟ್ ಮತ್ತು ಕಪ್-ಹೋಲ್ಡ್ ಸೌಲಭ್ಯವು ಅಲ್ಟುರಾಸ್ ಜಿ4 ಕಾರಿನ ಆಯ್ಕೆಯ ಮಹತ್ವವನ್ನು ಹೆಚ್ಚಿಸುತ್ತವೆ.

ಪ್ರತಿಸ್ಪರ್ಧಿ ಕಾರುಗಳಿಂತ ಮಹೀಂದ್ರಾ ಅಲ್ಟುರಾಸ್ ಜಿ4 ಹೇಗೆ ಭಿನ್ನವಾಗಿದೆ ಗೊತ್ತಾ?

ಅದಲ್ಲದೇ ಎರಡನೇ ಸಾಲಿನ ಆಸನಗಳು 60:40 ಅನುಪಾತದಲ್ಲಿ ಜೋಡಣೆ ಮಾಡಲಾಗಿದ್ದು, ಮೂರನೇ ಸಾಲಿನ ಆಸನಗಳನ್ನು 50:50 ಅನುಪಾತದಲ್ಲಿ ಸರಿದೂಗಿಸಬಹುದು. ಜೊತೆಗೆ ಅನಕೂಲಕರ ಲೆಗರೂಮ್ ಮತ್ತು ಹೆಡ್ ರೂಂ ಸೌಲಭ್ಯದೊಂದಿಗೆ 7 ಜನ ಆರಾಮದಾಯಕವಾಗಿ ಪ್ರಯಾಣಿಸಬಹುದ್ದು, ಬೂಟ್‌ಸ್ಪೆಸ್ ಕೂಡಾ ದೊಡ್ಡದಾಗಿದೆ.

ಪ್ರತಿಸ್ಪರ್ಧಿ ಕಾರುಗಳಿಂತ ಮಹೀಂದ್ರಾ ಅಲ್ಟುರಾಸ್ ಜಿ4 ಹೇಗೆ ಭಿನ್ನವಾಗಿದೆ ಗೊತ್ತಾ?

ಎಂಜಿನ್ ಸಾಮರ್ಥ್ಯ

ಹೊಸ ಮಹೀಂದ್ರಾ ಅಲ್ಟುರಾಸ್ ಜಿ4 ಕಾರು 2.2-ಲೀಟರ್(2,200ಸಿಸಿ) 4 ಸಿಲಿಂಡರ್, ಟರ್ಬೋಚಾರ್ಜ್ಡ್ ಡೀಸೆಲ್ ಎಂಜಿನ್ ಪಡೆದುಕೊಂಡಿದ್ದು, 7 ಸ್ಪೀಡ್ ಆಟೋಮ್ಯಾಟಿಕ್ ಗೇರ್‍‍ಬಾಕ್ಸ್ ನೊಂದಿಗೆ 178-ಬಿಹೆಚ್‍‍ಪಿ ಮತ್ತು 420-ಎನ್ಎಂ ಟಾರ್ಕ್ ಅನ್ನು ಉತ್ಪಾದಿಸಲಿವೆ.

ಪ್ರತಿಸ್ಪರ್ಧಿ ಕಾರುಗಳಿಂತ ಮಹೀಂದ್ರಾ ಅಲ್ಟುರಾಸ್ ಜಿ4 ಹೇಗೆ ಭಿನ್ನವಾಗಿದೆ ಗೊತ್ತಾ?

ಅಲ್ಟುರಾಸ್ ಜಿ4 ಕಾರುಗಳು ಕೇವಲ ಪ್ರೀಮಿಯಂ ಎಸ್‌ಯುವಿ ಮಾದರಿಯಷ್ಟೇ ಅಲ್ಲದೇ ಆಫ್ ರೋಡ್ ವೈಶಿಷ್ಟ್ಯತೆಯನ್ನು ಸಹ ಹೊಂದಿರುವ ಈ ಕಾರುಗಳಲ್ಲಿ ಹಿಂಬದಿ ಚಕ್ರಗಳಿಗೂ ಗೇರ್‌ಬಾಕ್ಸ್ ಶಕ್ತಿ ಪೂರೈಕೆಯ ಸೌಲಭ್ಯವಿದ್ದು, ಇದು ಕಠಿಣ ಪರಿಸ್ಥಿತಿಗಳಲ್ಲೂ ಸರಾಗವಾಗಿ ನುಗ್ಗಬಲ್ಲ ಬಲಿಷ್ಠ ಕಾರು ಮಾದರಿಯಾಗಲಿದೆ.

ಪ್ರತಿಸ್ಪರ್ಧಿ ಕಾರುಗಳಿಂತ ಮಹೀಂದ್ರಾ ಅಲ್ಟುರಾಸ್ ಜಿ4 ಹೇಗೆ ಭಿನ್ನವಾಗಿದೆ ಗೊತ್ತಾ?

ಹೀಗಾಗಿ ಗ್ರಾಹಕರು ತಮ್ಮ ಬೇಡಿಕೆ ಅನುಗುಣವಾಗಿ 4x4 ಮತ್ತು 2x4 ಡ್ರೈವ್‌ ಟೆಕ್ನಾಲಜಿ ಪ್ರೇರಿತ ಅಲ್ಟುರಾಸ್ ಜಿ4 ಕಾರನ್ನು ಆಯ್ಕೆ ಮಾಡಬಹುದಾಗಿದ್ದು, 225/60 ಆರ್18 ಟೈರ್ ಸೌಲಭ್ಯವು ಆಪ್ ರೋಡ್ ಕೌಶಲ್ಯಕ್ಕೂ ಅನುಕೂಲಕವಾಗಿವೆ.

ಪ್ರತಿಸ್ಪರ್ಧಿ ಕಾರುಗಳಿಂತ ಮಹೀಂದ್ರಾ ಅಲ್ಟುರಾಸ್ ಜಿ4 ಹೇಗೆ ಭಿನ್ನವಾಗಿದೆ ಗೊತ್ತಾ?

ಕಾರಿನ ಬೆಲೆಗಳು(ಎಕ್ಸ್‌ಶೋರೂಂ ಪ್ರಕಾರ)

ಅಲ್ಟುರಾಸ್ ಜಿ4 ಕಾರುಗಳು ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ(2x2 ವರ್ಷನ್) ರೂ. 26.95 ಲಕ್ಷಕ್ಕೆ ಹಾಗೂ ಟಾಪ್ ಎಂಡ್(4x4 ವರ್ಷನ್) ಮಾದರಿಯನ್ನು ರೂ. 29.95 ಲಕ್ಷಕ್ಕೆ ನಿಗದಿಪಡಿಸಲಾಗಿದೆ.

ಪ್ರತಿಸ್ಪರ್ಧಿ ಕಾರುಗಳಿಂತ ಮಹೀಂದ್ರಾ ಅಲ್ಟುರಾಸ್ ಜಿ4 ಹೇಗೆ ಭಿನ್ನವಾಗಿದೆ ಗೊತ್ತಾ?

ಇದೇ ಸೌಲಭ್ಯಗಳನ್ನು ಹೊಂದಿರುವ ಫಾರ್ಚೂನರ್ ಕಾರು ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ 27.27 ಲಕ್ಷಕ್ಕೆ ಮತ್ತು ಟಾಪ್ ಎಂಡ್ ಮಾದರಿಯು ರೂ.32.97 ಲಕ್ಷ ಬೆಲೆ ಹೊಂದಿದೆ. ಹಾಗೆಯೇ ಫೋರ್ಡ್ ಎಂಡೀವರ್ ಸಹ ಆರಂಭಿಕವಾಗಿ ರೂ. 26.32 ಲಕ್ಷಕ್ಕೆ ಹಾಗೂ ಟಾಪ್ ಎಂಡ್ ಮಾದರಿಯು ರೂ.33. 11 ಲಕ್ಷ ಬೆಲೆ ಹೊಂದಿದೆ. ಹೀಗಾಗಿ ಸ್ಪರ್ಧಾತ್ಮಕ ಬೆಲೆಯಲ್ಲಿರುವ ಅಲ್ಟುರಾಸ್ ಜಿ4 ಕಾರು ಗ್ರಾಹಕರ ಆಯ್ಕೆಯಲ್ಲಿ ಮುಂಚೂಣಿ ಸಾಧಿಸುವ ಸಾಧ್ಯತೆಗಳಿವೆ.

ಪ್ರತಿಸ್ಪರ್ಧಿ ಕಾರುಗಳಿಂತ ಮಹೀಂದ್ರಾ ಅಲ್ಟುರಾಸ್ ಜಿ4 ಹೇಗೆ ಭಿನ್ನವಾಗಿದೆ ಗೊತ್ತಾ?

ಸುರಕ್ಷಾ ಸೌಲಭ್ಯಗಳು

ಪ್ರಯಾಣಿಕರ ಸುರಕ್ಷತೆಗೂ ಹೆಚ್ಚಿನ ಒತ್ತು ನೀಡಲಾಗಿದ್ದು, 9 ಏರ್‍‍ಬ್ಯಾಗ್, ಎಬಿಎಸ್, ಇಬಿಡಿ, ಎಲೆಕ್ಟ್ರಿಕ್ ಪಾರ್ಕಿಂಗ್ ಬ್ರೇಕ್, ಅಡ್ವಾನ್ಸ್ಡ್ ಎಮರ್ಜೆನ್ಸಿ ಬ್ರೇಕಿಂಗ್ ಸಿಸ್ಟಮ್, ಲೇನ್ ಡಿಪಾರ್ಚುರ್ ವಾರ್ನಿಂಗ್, ಲೇನ್ ಚೇಂಜ್ ಅಸ್ಸಿಸ್ಟ್, ಟ್ರಾಫಿಕ್ ಸೇಫ್ಟಿ ಅಸ್ಸಿಸ್ಟ್, ಐಎಸ್ಒಎಫ್ಐಎಕ್ಸ್ ಚೈಲ್ಡ್-ಸೀಟ್ ಮೌಂಟ್ ಸೀಟ್, ಹಿಲ್ ಕ್ಲೈಮ್ / ಡಿಸೆಂಟ್ ಅಸಿಸ್ಟ್ಸ್ ಮತ್ತು ಹೈ ಬೀಮ್ ಅಸ್ಸಿಸ್ಟ್ ಅನ್ನು ಅಳವಡಿಸಲಾಗಿದೆ.

ಪ್ರತಿಸ್ಪರ್ಧಿ ಕಾರುಗಳಿಂತ ಮಹೀಂದ್ರಾ ಅಲ್ಟುರಾಸ್ ಜಿ4 ಹೇಗೆ ಭಿನ್ನವಾಗಿದೆ ಗೊತ್ತಾ?

ಲಭ್ಯವಿರುವ ಬಣ್ಣಗಳು

ಅಲ್ಟುರಾಸ್ ಜಿ4 ಕಾರುಗಳು ಒಟ್ಟು 5 ಬಣ್ಣಗಳಲ್ಲಿ ಖರೀದಿಗೆ ಲಭ್ಯವಿದ್ದು, ನ್ಯೂ ಪರ್ಲ್ ವೈಟ್, ನಪೊಲಿ ಬ್ಯಾಕ್, ಲೆಕ್ ಸೈಡ್ ಬ್ರೌನ್, ಡಸಾಟ್ ಸಿಲ್ವರ್ ಮತ್ತು ರಿಗಾಲ್ ಬ್ಲ್ಯೂ ಬಣ್ಣದಲ್ಲಿ ಖರೀದಿಸಬಹುದು.

ಪ್ರತಿಸ್ಪರ್ಧಿ ಕಾರುಗಳಿಂತ ಮಹೀಂದ್ರಾ ಅಲ್ಟುರಾಸ್ ಜಿ4 ಹೇಗೆ ಭಿನ್ನವಾಗಿದೆ ಗೊತ್ತಾ?

ಒಟ್ಟಿನಲ್ಲಿ ಐಷಾರಾಮಿ ಎಸ್‌ಯುವಿ ವಿಭಾಗದಲ್ಲಿ ಅಲ್ಟುರಾಸ್ ಜಿ4 ಪರಿಚಯಿಸುವ ಮೂಲಕ ಹೊಸ ಅಧ್ಯಾಯ ಆರಂಭಿಸಿರುವ ಮಹೀಂದ್ರಾ ಸಂಸ್ಥೆಯು ಮುಂಬರುವ ದಿನಗಳಲ್ಲಿ ಯಾವ ಮಟ್ಟಿಗೆ ಹೊಸ ಕಾರಿನಲ್ಲಿ ಯಶಸ್ವಿಯಾಗಲಿದೆ ಎನ್ನುವುದನ್ನು ಕಾಯ್ದು ನೋಡಬೇಕಿದೆ.

More from DriveSpark

Article Published On: Monday, November 26, 2018, 14:31 [IST]
English summary
5 Advantages Mahindra Alturas G4 Has Over The Competition.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+