ನಿಯಂತ್ರಣ ತಪ್ಪಿ ಭೀಕರ ಅಪಘಾತ- ಟಿಯಾಗೋ ಕಾರಿನಲ್ಲಿದ್ದ ಎಲ್ಲರೂ ಸೇಫ್ ಆಗಿದ್ದು ಹೇಗೆ?
ಭೀಕರ ಅಪಘಾತ ಪ್ರಕರಣವೊಂದರಲ್ಲಿ ಟಾಟಾ ಟಿಗೋರ್ ಕಾರೊಂದು ಸಂಪೂರ್ಣ ಜಖಂಗೊಂಡಿದ್ದು, ಅದೃಷ್ಟವಶಾತ್ ಕಾರಿನಲ್ಲಿದ್ದವರು ಮೂವರು ಪ್ರಾಣಪಾಯದಿಂದ ಪಾರಾಗಿರುವ ಘಟನೆ ಅಚ್ಚರಿಗೆ ಕಾರಣವಾಗಿದೆ.
ಭೀಕರ ಅಪಘಾತ ಪ್ರಕರಣವೊಂದರಲ್ಲಿ ಟಾಟಾ ಟಿಯಾಗೋ ಕಾರೊಂದು ಸಂಪೂರ್ಣ ಜಖಂಗೊಂಡಿದ್ದು, ಅದೃಷ್ಟವಶಾತ್ ಕಾರಿನಲ್ಲಿದ್ದವರು ಮೂವರು ಪ್ರಾಣಪಾಯದಿಂದ ಪಾರಾಗಿರುವ ಘಟನೆ ಅಚ್ಚರಿಗೆ ಕಾರಣವಾಗಿದೆ.

ಪುಣೆ ಬಳಿಯ ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಈ ಭೀಕರ ಅಪಘಾತ ನಡೆದಿದ್ದು, ವೇಗದ ಚಾಲನೆಯಲ್ಲಿದ್ದಾಗ ನಿಯಂತ್ರಣ ತಪ್ಪಿದ ಟಾಟಾ ಟಿಯಾಗೋ ಕಾರು ನಾಲ್ಕು ಬಾರಿ ಪಲ್ಟಿ ಹೊಡೆದು ರಸ್ತೆ ಬಳಿಯಿದ್ದ ಕಲ್ಲಿನ ತಡೆಗೊಡೆಗೆ ಡಿಕ್ಕಿ ಹೊಡೆದಿದೆ.
Recommended Video


ಇಷ್ಟೇಲ್ಲಾ ಆದ್ರು ಕೂಡಾ ಟಾಟಾ ಟಿಯಾಗೋ ಕಾರಿನಲ್ಲಿದ್ದ ಕಾರಿನಲ್ಲಿದ್ದ ಮೂವರಿಗೆ ಸಣ್ಣಪುಟ್ಟ ಗಾಯಗಳನ್ನು ಹೊರತುಪಡಿಸಿ ಯಾವುದೇ ಪ್ರಾಣಹಾನಿ ಕೂಡಾ ಆಗಿಲ್ಲಾ ಅಂದ್ರೆ ನಾವೆಲ್ಲಾ ನಂಬಲೇಬೇಕು.

ಇನ್ನು ಅಪಘಾತಕ್ಕೆ ನಿಖರ ಕಾರಣ ತಿಳಿದಿಲ್ಲವಾದ್ರೂ ಹೆದ್ದಾರಿ ನಡುವಿನ ಗ್ರಾಮವೊಂದರ ಬಳಿ ಹಸುವೊಂದಕ್ಕೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋಗಿ ಈ ಘಟನೆ ನಡೆದಿದೆ ಎನ್ನಲಾಗಿದ್ದು, ಚಾಲಕನ ಸಮಯಪ್ರಜ್ಞೆಯನ್ನು ಮೆಚ್ಚಲೇಬೇಕು.

ಇದಲ್ಲದೇ ಅಪಘಾತಗೊಂಡಿರುವ ಕಾರಿನ ಮಾಲೀಕನನ್ನು ಮುಂಬೈ ಮೂಲದವರು ಎಂಬ ಮಾಹಿತಿ ಇದ್ದು, ಕೇರಳ ಪ್ರವಾಸಕ್ಕೆ ಹೋಗಿ ವಾಪಸ್ ಬರುತ್ತಿದ್ದಾಗ ಈ ದುರ್ಘಟನೆ ನಡೆದಿದೆ.
Trending On DriveSpark Kannada:
ಭಾರತದಲ್ಲಿ ಇವು ಅಟ್ಟರ್ ಫ್ಲಾಪ್ ಕಾರುಗಳು
ಮುಕೇಶ್ ಅಂಬಾನಿ ಡ್ರೈವರ್ ಸಂಬಳ ಕೇಳಿದ್ರೆ ಬೆಚ್ಚಿ ಬೀಳ್ತೀರಾ !!
ಎಂದಿಗೂ ಮರೆಯಲಾಗದ ಟೈಟಾನಿಕ್ ದುರಂತದ ನಗ್ನ ಸತ್ಯಗಳು

ಮತ್ತೊಂದು ಅಪಘಾತಕಾರಿ ಸಂಗತಿ ಅಂದ್ರೆ ಕಳೆದ ತಿಂಗಳಷ್ಟೇ ಈ ಹೊಸ ಕಾರು ಖರೀದಿಸಿದ್ದರು ಎಂಬುವುದರ ಬಗ್ಗೆ ಸ್ಥಳೀಯ ಸುದ್ಧಿವಾಹಿನಿಗಳು ವರದಿ ಮಾಡಿದ್ದು, ಟಾಟಾ ಕಾರುಗಳ ಉತ್ತಮ ಬಾಡಿ ಕಿಟ್ ಹೊಂದಿರುವುದು ಪ್ರಸಂಶೆ ವ್ಯಕ್ತವಾಗಿದೆ.

ಬಲಿಷ್ಠ ಬಾಡಿ ಸಾಮರ್ಥ್ಯ
ಹೌದು.. ಟಾಟಾ ಕಾರು ಅಂದ್ರೆನೆ ಹಾಗೆ. ಅಪಘಾತ ಸಂದರ್ಭಗಳಲ್ಲಿ ಪ್ರಯಾಣಿಕರಿಗೆ ಹೆಚ್ಚಿನ ಸುರಕ್ಷೆ ಒದಗಿಸುವುದಲ್ಲಿ ಹೆಚ್ಚು ವಿಶ್ವಾಸ ಹೊಂದಿದ್ದು, ಇದು ಹಲವು ಸಂದರ್ಭಗಳಲ್ಲಿ ಸಾಭೀತಾಗಿದೆ.

ಆದ್ರೆ ಅದೇನೆ ಇರಲಿ ಗುಣಮಟ್ಟದ ಕಾರು ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿರುವ ಟಾಟಾ ನಿರ್ಮಾಣದ ಕಾರುಗಳು ಹೆಚ್ಚು ಸುರಕ್ಷೆ ನೀಡುವುದರಲ್ಲಿ ಯಾವುದೇ ರಾಜಿ ಮಾಡಿಕೊಂಡಿಲ್ಲ. ಜೊತೆಗೆ ಗ್ರಾಹಕರು ಪಾವತಿಸುವ ಹಣಕ್ಕೂ ಯಾವುದೇ ಮೋಸ ಇಲ್ಲ ಎನ್ನಬಹುದು.
Image Source:rushlane

ಡ್ರೈವ್ ಸ್ಪಾರ್ಕ್ ಅಭಿಪ್ರಾಯ
ಗುಣಮಟ್ಟದ ಕಾರು ಉತ್ಪಾದನೆ ಮೂಲಕ ಭಾರತೀಯ ಆಟೋ ಉದ್ಯಮದಲ್ಲಿ ತನ್ನದೇ ಆದ ಜನಪ್ರಿಯತೆ ಸಾಧಿಸಿರುವ ಟಾಟಾ ಮೋಟಾರ್ಸ್ ಸುರಕ್ಷೆಗೆ ಹೆಚ್ಚಿನ ಒತ್ತು ನೀಡುತ್ತಿದ್ದು, ಈ ಬಗ್ಗೆ ಓದುಗರು ತಮ್ಮ ಅಭಿಪ್ರಾಯಗಳನ್ನು ಕೆಳಗಿನ ಕಮೆಂಟ್ ಬಾಕ್ಸ್‌ನಲ್ಲಿ ಹಂಚಿಕೊಳ್ಳಿ.
Trending On DriveSpark Kannada:
ಬೆಂಗಳೂರಿನ ಪ್ರತಿಷ್ಠಿತ ಮಾರುತಿ ಸರ್ವಿಸ್ ಸ್ಟೇಷನ್ ಕರ್ಮಕಾಂಡ ಬಯಲು ಮಾಡಿದ ಗ್ರಾಹಕ !! ವಿಡಿಯೋ
ಭಾರತದಿಂದ ಅತಿ ಹೆಚ್ಚು ರಫ್ತಾಗುವ ಕಾರು ಯಾವುದು ಗೊತ್ತೆ ?
Trending DriveSpark YouTube Videos
Subscribe To DriveSpark Kannada YouTube Channel - Click Here


Click it and Unblock the Notifications








