ಮರಳಿ ಮಾರುಕಟ್ಟೆಗೆ ಲಗ್ಗೆಯಿಡಲಿದೆ ಜೇಮ್ಸ್ ಬಾಂಡ್ ಮನಮೆಚ್ಚಿದ ಐಕಾನಿಕ್ ಕಾರು..
ಜೇಮ್ಸ್ ಬಾಂಡ್ ಎಂದಾಕ್ಷಣ ತಟ್ ಅಂಥ ನೆನಪಿಗೆ ಬರೋದು ಅವರ ಆಕ್ಷನ್ ಚಿತ್ರಗಳು. ಚಿತ್ರದ ಪ್ರತಿ ತಿರುವಿನಲ್ಲೂ ಹಾಟ್ ಹಾಟ್ ಹುಡುಗಿಯರ ನಡುವೆ ಬಾಂಡ್ ಕಾರು ಚಾಲನೆ ಮಾಡುತ್ತಿದ್ದರೇ ಅವರ ಸ್ಟೈಲ್‌ಗೆ ಮನಸೋಲದ ಹುಡುಗಿಯರೇ ಇಲ್ಲ ತಪ್ಪಾಗುದಿಲ್ಲ. ಇದಕ್ಕೆ ಕಾರಣ, ಅವರ ನಟನೆ ಶೈಲಿಯೇ ಹಾಗಿತ್ತು. ಅದರಲ್ಲೂ ಅವರು ಬಳಕೆ ಮಾಡುತ್ತಿದ್ದ ಐಷಾರಾಮಿ ಕಾರು ಸಂಗ್ರಹವೇ ಒಂದು ವಿಶೇಷವಾಗಿದ್ದಲ್ಲದೇ ಇದೀಗ ಬಾಂಡ್ ಬಳಕೆಯ ಐಕಾನಿಕ್ ಕಾರೊಂದು ಮರಳಿ ಮಾರುಕಟ್ಟೆಗೆ ಲಗ್ಗೆಯಿಡುವ ಸುಳಿವು ನೀಡಿದೆ.

ಹಾಲಿವುಡ್ ನಟ ಜೇಮ್ಸ್ ಬಾಂಡ್ ಬಳಕೆ ಮಾಡುತ್ತಿದ್ದ ಬಹುತೇಕ ಕಾರು ಮಾದರಿಗಳು ಅಂದಿಗೂ ಹಿಟ್ ಇಂದಿಗೂ ಹಿಟ್ ಅಂದ್ರೆ ತಪ್ಪಾಗುವುದಿಲ್ಲ. ಹೀಗಾಗಿಯೇ ಜೇಮ್ಸ್ ಬಾಂಡ್ ನಟಿಸಿರುವ ಬಹುತೇಕ ಚಿತ್ರಗಳಲ್ಲಿ ಅತಿ ಹೆಚ್ಚು ಬಳಕೆಯಾಗಿದ್ದ ಕಾರು ಮಾದರಿಯೊಂದು ಇದೀಗ ಮರಳಿ ಮಾರುಕಟ್ಟೆಗೆ ಲಗ್ಗೆಯಿಡುತ್ತಿದ್ದು, ವಿಷಯ ತಿಳಿಯುತ್ತಿದ್ದಂತೆ ಸೀಮಿತ ಆವೃತ್ತಿಯ ಆಸ್ಟನ್ ಮಾರ್ಟಿನ್ ಡಿಬಿ5 ಕಾರು ಖರೀದಿ ಮಾಡುವರರ ಪಟ್ಟಿ ಬೆಳೆಯುತ್ತಲೇ ಇವೆ.

ಹೌದು, ಜೇಮ್ಸ್ ಬಾಂಡ್ ನಟಿಸಿರುವ ಗೋಲ್ಡ್‌ಫಿಂಗರ್, ಥಂಡರ್‌ಬಾಲ್, ಗೋಲ್ಡನ್‌ಐ, ಟುಮೊರೊ ನೆವರ್ ಡೈಸ್ ಚಿತ್ರಗಳಲ್ಲಿ ಹೆಚ್ಚಾಗಿ ಕಾಣಿಸಿಕೊಂಡಿದ್ದ ಆಸ್ಟನ್ ಮಾರ್ಟಿನ್ ಡಿಬಿ5 ಕಾರಿನ ಲಿಮಿಟೆಡ್ ಸ್ಪೆಷಲ್ ಎಡಿಷನ್ ಸಿದ್ದಗೊಳಿಸುತ್ತಿರುವ ಬಗ್ಗೆ ಆಸ್ಟನ್ ಮಾರ್ಟಿನ್ ಮಾಹಿತಿ ನೀಡಿದೆ

ಮೆಟಾಲಿಕ್ ಗ್ರೇ ಬಣ್ಣವನ್ನು ಹೊಂದಿರುವ ಆಸ್ಟನ್ ಮಾರ್ಟಿನ್ ಡಿಬಿ5 ಕಾರುಗಳು ಜೇಮ್ಸ್ ಬಾಂಡ್ ನೆಚ್ಚಿನ ಕಾರು ಮಾದರಿಯಾಗಿದ್ದು, 1964ರಲ್ಲಿ ಬಿಡುಗಡೆಯಾಗಿದ್ದ ಗೋಲ್ಡ್ ಫಿಂಗರ್‌ನಿಂದ ಹಿಡಿದು 1995ರಲ್ಲಿ ತೆರೆಕಂಡಿದ್ದ ಗೋಲ್ಡನ್ ಐ ಚಿತ್ರದಲ್ಲೂ ಈ ವಿಶೇಷ ಸೆಡಾನ್ ಕಾರು ಬಳಕೆಯಾಗಿತ್ತು.

ಇದಲ್ಲದೇ ನಟ ಜೇಮ್ಸ್ ಬಾಂಡ್ ಅವರು ಆಸ್ಟನ್ ಮಾರ್ಟಿನ್ ಸಂಸ್ಥೆಯ ಡಿಬಿ5 ಸರಣಿಯ ಮತ್ತೆರಡು ಐಷಾರಾಮಿ ಕಾರುಗಳನ್ನು ತಮ್ಮ ಜನಪ್ರಿಯ ಆಕ್ಷನ್ ಚಿತ್ರಗಳಲ್ಲಿ ಬಳಕೆ ಮಾಡುವ ಮೂಲಕ ಟ್ರೆಂಡ್ ಸೃಷ್ಠಿಸಿದ್ದು, ಅವುಗಳನ್ನು ಈಗಾಗಲೇ ದುಬಾರಿ ಬೆಲೆಗೆ ಹರಾಜು ಮಾಡಲಾಗಿದೆ. ಹೀಗಾಗಿ ಜೇಮ್ಸ್ ಬಾಂಡ್ ಅಭಿಮಾನಿಗಳಿಗೆ ಮತ್ತೊಂದು ವಿಶೇಷ ಅವಕಾಶವನ್ನ ಒದಗಿಸುತ್ತಿರುವ ಆಸ್ಟನ್ ಮಾರ್ಟಿನ್ ಸಂಸ್ಥೆಯು ಡಿಬಿ5 ಕಾರಿನ ಲಿಮಿಟೆಡ್ ಸ್ಪೆಷಲ್ ಎಡಿಷನ್ ಹೊರತರುತ್ತಿದೆ.

ವರದಿಗಳ ಪ್ರಕಾರ, ಆಸ್ಟಿನ್ ಮಾರ್ಟಿನ್ ಸಂಸ್ಥೆಯು ಕೇವಲ 25 ಸ್ಪೆಷಲ್ ಎಡಿಷನ್ ಕಾರುಗಳನ್ನು ನಿರ್ಮಾಣ ಮಾಡಲು ನಿರ್ಧರಿಸಿದ್ದು, ಈ ಹಿನ್ನೆಲೆ ಹೊಸ ಕಾರನ್ನ ತಮ್ಮದಾಗಿಸಿಕೊಳ್ಳಲು ಲಕ್ಷಾಂತಕ ಗ್ರಾಹಕರು ತುದಿಗಾಲ ಮೇಲೆ ನಿಂತಿದ್ದಾರೆ. ಹೀಗಾಗಿ ಸ್ಪೆಷಲ್ ಎಡಿಷನ್ ಕಾರುಗಳನ್ನ ಲಾಟರಿ ಮೂಲಕ ವಿತರಣೆ ಮಾಡುವ ಸಾಧ್ಯತೆಗಳಿವೆ.

ಕಾರಿನ ಎಂಜಿನ್ ಸಾಮರ್ಥ್ಯ
4.0-ಲೀಟರ್ ಸ್ಟ್ರೈಟ್ ಸಿಕ್ಸ್ ಎಂಜಿನ್ ಹೊಂದಿದ್ದ ಆಸ್ಟನ್ ಮಾರ್ಟಿನ್ ಡಿಬಿ5 ಕಾರುಗಳು 285-ಬಿಎಚ್‌ಪಿ ಮತ್ತು 380-ಎನ್ಎಂ ಟಾರ್ಕ್ ಉತ್ಪಾದನಾ ಕೌಶಲ್ಯ ಹೊಂದಿದ್ದವು. ಜೊತೆಗೆ 7.1 ಸೇಕೆಂಡುಗಳಲ್ಲಿ ಸೊನ್ನೆಯಿಂದ ನೂರು ಕಿ.ಮೀ ವೇಗ ಪಡೆಯುತ್ತಿದ್ದ ಈ ಕಾರುಗಳು ಗಂಟೆಗೆ 228 ಕಿ.ಮೀ ಟಾಪ್ ತಮ್ಮದಾಗಿಸಿಕೊಂಡಿದ್ದವು.

ಕಾರಿನ ಬೆಲೆ (ಅಂದಾಜು)
ಸದ್ಯ ಹೊಸ ತಂತ್ರಜ್ಞಾನ ಪ್ರೇರಣೆಯೊಂದಿಗೆ ಸಿದ್ದವಾಗಲಿರುವ ಸ್ಪೆಷಲ್ ಎಡಿಷನ್ ಆಸ್ಟನ್ ಮಾರ್ಟಿನ್ ಡಿಬಿ5 ಕಾರು ಭಾರತೀಯ ಮಾರುಕಟ್ಟೆಯ ಪ್ರಕಾರ ರೂ. 3 ಕೋಟಿಯಿಂದ ರೂ. 3.80 ಕೋಟಿ ಇರಬಹುದೆಂದು ಅಂದಾಜಿಸಲಾಗಿದೆ.

ಒಟ್ಟಿನಲ್ಲಿ ಹಲವು ವಿಶೇಷತೆಗಳಿಗೆ ಕಾರಣವಾಗಿರುವ ಜೇಮ್ಸ್ ಬಾಂಡ್ ನೆಚ್ಚಿನ ಆಸ್ಟನ್ ಮಾರ್ಟಿನ್ ಡಿಬಿ5 ಸ್ಪೆಷಲ್ ಎಡಿಷನ್ ಕಾರುಗಳು ಮಾರುಕಟ್ಟೆಗೆ ಲಗ್ಗೆಯಿಡುತ್ತಿದ್ದು, ಇದು ಅವರ ಅಭಿಮಾನಿಗಳಲ್ಲಿ ಸುವರ್ಣಾವಕಾಶ ಎಂದೇ ಹೇಳಬಹುದು. ಹೀಗಾಗಿ ಐತಿಹಾಸಿಕ ಹಿನ್ನೆಲೆ ಹೊಂದಿರುವ ಡಿಬಿ5 ಕಾರು ಹರಾಜಿನಲ್ಲಿ ಎಷ್ಟರ ಮಟ್ಟಿಗೆ ಬೆಲೆ ಪಡೆದುಕೊಳ್ಳುತ್ತೆ ಎನ್ನುವುದೇ ಸದ್ಯದ ಕುತೂಹಲ ಸಂಗತಿಯಾಗಿದೆ.

ಇನ್ನು ಅತಿಹೆಚ್ಚು ಜನಪ್ರಿಯ ಜೆಬಿ 007 ನೋಂದಣಿಯ ಕಾರುನ್ನು ಕಳೆದ ಕೆಲ ದಿನಗಳ ಹಿಂದಷ್ಟೇ ಹರಾಜು ಮಾಡಲಾಗಿದ್ದು, ಗೋಲ್ಡನ್ ಐ ಚಿತ್ರದಲ್ಲಿರುವ ಫೆರಾರಿ 355 ಮತ್ತು ಆಸ್ಟನ್ ಮಾರ್ಟಿನ್ ಡಿಬಿ5 ಕಾರುಗಳ ನಡುವಿನ ಕಾರ್ ರೇಸ್ ಅನ್ನು ವೀಕ್ಷಣೆ ಮಾಡಿದಲ್ಲಿ ಜೆಬಿ ಅಭಿರುಚಿ ಹೇಗಿತ್ತು ಎಂಬುವುದು ಅವರ ಅಭಿಮಾನಿ ಬಲ್ಲರು.


Click it and Unblock the Notifications








