ಬಿಎಮ್‍ಟಿಸಿ ಡ್ರೈವರ್‍ಗಳಿಗೆ ಹೊಸ ಸೂಚನೆ.. ಏನದು.?
ಬೆಂಗಳೂರು ಮೆಟ್ರೊಪಾಲಿಟನ್ ಟ್ರ್ಯಾನ್ಸ್ಪೋರ್ಟ್ ಕಾರ್ಪೊರೇಷನ್ (ಬಿಎಮ್‍ಟಿಸಿ) ಅಧಿಕಾರಿಗಳು ತಮ್ಮ ಬಸ್ ಡ್ರವರ್‍ಗಳಿಗೆ ಕೆಲಸ ಡ್ರೈವಿಂಗ್ ಮಾಡುವಾಗ ಮೊಬೈಲ್ ಫೋನಿನ ಬಳಕೆಯನ್ನು ಖಡ್ಡಾಯವಾಗಿ ನಿಲ್ಲಿಸಬೇಕೆಂದು ಸೂಚಿಸಿದ್ದಾರೆ.
ಬೆಂಗಳೂರು ಮೆಟ್ರೊಪಾಲಿಟನ್ ಟ್ರ್ಯಾನ್ಸ್ಪೋರ್ಟ್ ಕಾರ್ಪೊರೇಷನ್ (ಬಿಎಮ್‍ಟಿಸಿ) ಅಧಿಕಾರಿಗಳು ತಮ್ಮ ಬಸ್ ಡ್ರವರ್‍ಗಳಿಗೆ ಕೆಲಸ ಡ್ರೈವಿಂಗ್ ಮಾಡುವಾಗ ಮೊಬೈಲ್ ಫೋನಿನ ಬಳಕೆಯನ್ನು ಖಡ್ಡಾಯವಾಗಿ ನಿಲ್ಲಿಸಬೇಕೆಂದು ಸೂಚಿಸಿದ್ದಾರೆ. ಈ ಹೊಸ ಸೂಚನೆಯು ಪ್ರಯಾಣಿಕರಿಂದ ಬರುತ್ತಿದ್ದ ದೂರುಗಳನ್ನು ಪರಿಗಣಿಸಿ ಜಾರಿ ಮಾಡಲಾಗಿದೆ ಎಂದು ಹೇಳಲಾಗಿದೆ.

ಕೇವಲ ಚಾಲನೆ ವೇಳೆ ಮೊಬೈಲ್ ಫೋನ್ ಬಳಕೆಯನ್ನು ಮಾತ್ರವಲ್ಲದೇ, ಬಿಎಮ್‍ಟಿಸಿ ಅಧಿಕಾರಿಗಳು ಜಾಗೃತಿ ಪ್ರಚಾರವನ್ನು ಕೂಡಾ ಹಮ್ಮಿಕೊಂಡಿದ್ದಾರೆ. ಈ ಪ್ರಚಾರವನ್ನು ಬೆಂಗಳೂನಿರನಲ್ಲಿರುವ ಹಲವಾರು ಬಸ್ ಟರ್ಮಿನಲ್‍ಗಳಲ್ಲಿ ಹಮ್ಮಿಕೊಳ್ಳಲಾಗಿದೆ ಎನ್ನಲಾಗಿದೆ.

ಹಿರಿಯ ಬಿಎಮ್‍ಟಿಸಿ ಡ್ರೈವರ್ ಆದ ವಿ.ದೀನದಯಾಳು ಅವರು ಜಾಗೃತಿ ಪ್ರಚಾರದಲ್ಲಿ ಮುಖ್ಯಪಾತ್ರವನ್ನು ವಹಿಸುತ್ತಿದ್ದಾರೆ. ಅವರೂ ಲೌಡ್ ಸ್ಪೀಕರ್ ಮುಖಾಂತರ ವಿವಿಧ ಬಸ್ ನಿಲ್ದಾಣಗಳಿಗೆ ಹೋಗಿ "ಬಸ್ ಚಾಲನೆ ವೇಳೆ ನಿಮ್ಮ ಮೊಬೈಲ್ ಫೋನುಗಳನ್ನು ಸಂಪೂರ್ಣವಾಗಿ ಸ್ವಿಚ್ ಆಫ್ ಮಾಡಿ, ಇಲ್ಲವಾದಲ್ಲಿ ಅದು ಪ್ರಾಣಕ್ಕೆ ಅಪಾಯ" ಎಂದು ಘೋಷಿಸುತ್ತಿದ್ದಾರೆ.

ಬಿಎಮ್‍ಟಿಸಿಯ ಬೆಂಗಳೂರು ದರ್ಶಿನಿ ಸೇವಿಗಾಗಿ ಕಾರ್ಯನಿರ್ವಹಿಸುತ್ತಿರುವ ದೀನದಯಾಳು ಅವರು ನಗರದಲಿ ಹೆಚ್ಚಿನ ಬಸ್ ನಿಲ್ದಾಣಗಳಲ್ಲಿ ಪ್ರಚಾರವನ್ನು ವಿಸ್ತರಿಸಲಾಗುತ್ತದೆ ಮತ್ತು ಅಭಿಪ್ರಾಯದಲ್ಲಿ, ಬಸ್ ಚಾಲಕರು ಟ್ರಾಫಿಕ್ ಜಾಮ್ ಆದಾಗ ಮತ್ತು ರೆಡ್ ಸಿಗ್ನಲ್ ಬಿದ್ದಾಗ ಆ ಸಮಯದಲ್ಲಿ ಹೆಚ್ಚು ಬಳಸುತ್ತಾರೆ ಎಂದು ಎಕನಾಮಿಕ್ ಟೈಮ್ಸ್ ನೊಂದಿಗೆ ಹೇಳಿಕೆಯನ್ನು ಹಂಚಿಕೋಂಡಿದ್ದಾರೆ.

ಅಲ್ಲದೇ ಇದರ ಜೊತೆಗೆ ವಾಹನ ಚಾಲನೆ ವೇಳೆ ಮೊಬೈಲ್ ಮಾತ್ರವಲ್ಲದೇ, ಹೆಡ್‍ಫೋನ್ ಅನ್ನು ಬಳಸಿದರೂ ಅದು ಕಾನೂನು ವಿರುದ್ಧವೇ ಆಗಿದ್ದು ಈ ತಪ್ಪುಗಳಿಗೆ ಕಡಿಮೆ ಮೊತ್ತದಲ್ಲಿ ದಂಡ ವಿಧಿಸಲಾಗುತ್ತಿದೆ. ಈ ತಪ್ಪುಗಳಿಗೆ ಅಧಿಕವಾಗಿ ದಂಡದ ಮೊತ್ತವನ್ನು ನಿರ್ಣಯಿಸಿದರೆ ವಾಹನ ಚಾಲಕರು ಈ ತಪ್ಪುಗಳನ್ನು ಕಡಿಮೆ ಮಾಡುತ್ತಾರೆ ಎಂದು ಹೇಳಿಕೊಂಡಿದ್ದಾರೆ.

ಸೇವ್ ಲೈಫ್ ಫೌಂಡೇಶನ್ ಇಂಡಿಯಾ ಎಂಬ ಎನ್‍ಜಿಒ ಒಂದು 2017ರ ಅಂಕಿ ಅಂಶವನ್ನು ತಯಾರಿಸಲಾಗಿದ್ದು, ಇದರಲ್ಲಿ ಶೇಕಡ 83ರಷ್ಟು ರಸ್ತೆ ಅಪಘಾತಗಳು ಚಾಲನೆಯ ವೇಳೆ ಮೊಬೈಲ್ ಬಳಸಿರುವುದರಿಂದಲೇ ಆಗಿದೆ ಎಂದು ಸಾಬೀತು ಮಾಡಿದ್ದಾರೆ.

ಅದು ಬಸ್ ಆಗಲಿ ಅಥವಾ ದ್ವಿಚಕ್ರ ವಾಹನವೇ ಆಗಲಿ, ವಾಹನ ಚಾಲನೆ ವೇಳೆ ಮೊಬೈಲ್ ಅಥವಾ ಬೇರಾವ ಉತ್ಪನ್ನಗಳನ್ನು ಬಳಸುವುದು ತಪ್ಪು. ಏಕೆಂದರೆ ಇದು ಚಾಲನೆ ವೇಳೆ ನಿಮ್ಮ ಏಕಾಗ್ರತೆಯನ್ನು ತಪ್ಪುದಾರಿಗೆ ತಿರುಗುವ ಹಾಗೆ ಮಾಡುತ್ತದೆ. ಈ ಮೂಲಕ ಇದು ರಸ್ತೆ ಅಪಘಾತಕ್ಕೆ ಕಾರಣವಾಗುತ್ತದೆ.

ಡ್ರೈವ್‍ಸ್ಪಾರ್ಕ್ ಅಭಿಪ್ರಾಯ
ಮೇಲೆ ಹೇಳಿರುವ ಹಾಗೆ, ವಾಹನ ಚಾಲನೆ ವೇಳೆ ಮೊಬೈಲ್ ಬಳಸುವು ನಿಮಗು ಹಾಗು ಇನ್ನಿತರೆ ಪ್ರಯಾಣಿಕರಿಗು ಹಾನಿಯನ್ನುಂಟು ಮಾಡುತ್ತದೆ. ಹಲವಾರು ಆಧೂನಿಕ ಕಾರುಗಳಲ್ಲಿ ಈಗ ಬ್ಲೂಟೂತ್ ಅನ್ನು ಅಳವಡಿಸಿರುವುದರಿಂದ ಚಾಲನೆ ವೇಳೆ ಕರೆಯನ್ನು ಸ್ವೀಕರಿಸಿ ಮಾತನಾಡಬಹುದಾಗಿದೆ.

ನಿಮ್ಮ ಕಾರಿನಲ್ಲಿ ಬ್ಲೂಟೂತ್ ಇಲ್ಲವಾದಲ್ಲಿ ತುರ್ತು ಕರೆ ಮಾಡಲೇ ಬೇಕು ಎಂದ ಕ್ಷಣದಲ್ಲಿ ನಿಮ್ಮ ವಾಹನವನ್ನು ರಸ್ತೆಯ ಪಕ್ಕದಲ್ಲಿ ನಿಲ್ಲಿಸಿ ಕರೆ ಮಾಡಿಕೊಳ್ಳಬಹುದು. ಆದರೇ ಇರು ಸಾರ್ವಜನಿಕ ಸಾರಿಗೆಯಲ್ಲಿ ಆಗದ ಕೆಲಸ ಆದೂದರಿಂದಾ ಬಸ್ ಚಾಲನೆ ವೇಳೆ ಮೊಬೈಲ್ ಅನ್ನು ಬಳಸದಿದ್ದರೆ ಒಳ್ಳೆಯದು.


Click it and Unblock the Notifications








