ಬೆಂಗಳೂರಿನಲ್ಲಿ ಆರಂಭವಾಯ್ತು ಮೊದಲ ಇವಿ ಚಾರ್ಜಿಂಗ್ ಸ್ಟೇಷನ್

ರಾಜ್ಯದಲ್ಲೇ ಮೊದಲ ಬಾರಿಗೆ ಎಲೆಕ್ಟ್ರಿಕ್ ವಾಹನಗಳನ್ನು ಉತ್ತೇಜಿಸುವ ನಿಟ್ಟಿನಲ್ಲಿ ಪ್ರಪಥಮ ವಿದ್ಯುತ್ ಚಾರ್ಜಿಂಗ್ ಸ್ಟೇಷನ್ ಅನ್ನು ಬೆಂಗಳೂರಿನಲ್ಲಿ ಆರಂಭಿಸಲಾಗಿದೆ.

By Rahul Ts

ರಾಜ್ಯದಲ್ಲೇ ಮೊದಲ ಬಾರಿಗೆ ಎಲೆಕ್ಟ್ರಿಕ್ ವಾಹನಗಳನ್ನು ಉತ್ತೇಜಿಸುವ ನಿಟ್ಟಿನಲ್ಲಿ ಪ್ರಪಥಮ ವಿದ್ಯುತ್ ಚಾರ್ಜಿಂಗ್ ಸ್ಟೇಷನ್ ಅನ್ನು ಬೆಂಗಳೂರಿನಲ್ಲಿ ಆರಂಭಿಸಲಾಗಿದ್ದು, ಮಹತ್ವದ ಯೋಜನೆಗೆ ಇಂಧನ ಸಚಿವ ಡಿ.ಕೆ.ಶಿವಕುಮಾರ್ ಇಂದು ಚಾಲನೆ ನೀಡಿದ್ದಾರೆ.

ಬೆಂಗಳೂರಿನಲ್ಲಿ ಆರಂಭವಾಯ್ತು ಮೊದಲ ಇವಿ ಚಾರ್ಜಿಂಗ್ ಸ್ಟೇಷನ್

ಸಿಲಿಕಾನ್ ಸಿಟಿ ಬೆಂಗಳೂರಲ್ಲಿ ಸುಮಾರು 6 ಸಾವಿರಕ್ಕೂ ಹೆಚ್ಚು ಎಲ್ಕೆಕ್ಟ್ರಿಕ್ ವಾಹನಗಳನ್ನು ಹೊಂದಿದ್ದು, ಈ ಹಿನ್ನಲೆಯಲ್ಲಿ ಇವಿ ವಾಹನಗಳನ್ನು ಉತ್ತೇಜಿಸಲು ನಗರದ ಕೆ.ಆರ್.ಸರ್ಕಲ್ ಬಳಿಯಿರುವ ಬೆಸ್ಕಾಂ ಕಚೇರಿ ಆವರಣದಲ್ಲಿ ಚಾರ್ಜಿಂಗ್ ಸ್ಟೇಷನ್‌ಗಳನ್ನು ಆರಂಭಿಸಲಾಗಿದೆ.

ಬೆಂಗಳೂರಿನಲ್ಲಿ ಆರಂಭವಾಯ್ತು ಮೊದಲ ಇವಿ ಚಾರ್ಜಿಂಗ್ ಸ್ಟೇಷನ್

ದಿನದ 24 ಗಂಟೆಯು ತೆರೆದಿರುವ ಈ ಕೇಂದ್ರದಲ್ಲಿ ಸಾರ್ವಜನಿಕರು ತಮ್ಮ ಎಲೆಕ್ಟ್ರಿಕ್‌ ವಾಹನಗಳನ್ನು ಕಡಿಮೆ ದರದಲ್ಲಿ ರಿಚಾರ್ಜ್‌ ಮಾಡಬಹುದಾಗಿದ್ದು, ಸೆಮಾ ಕನೆಕ್ಟ್ ಹಾಗೂ ಆರ್‌ಆರ್‌ಟಿ ಎಲೆಕ್ಟ್ರೊ ಪವರ್‌ ಕಂಪನಿಗಳು ಎರಡು ಕಡೆ ಅಳವಡಿಸಿರುವ ಯಂತ್ರಗಳು 15 ಕಿಲೊ ವ್ಯಾಟ್‌ ಸಾಮರ್ಥ್ಯ‌ ಹೊಂದಿವೆ.

ಬೆಂಗಳೂರಿನಲ್ಲಿ ಆರಂಭವಾಯ್ತು ಮೊದಲ ಇವಿ ಚಾರ್ಜಿಂಗ್ ಸ್ಟೇಷನ್

ಎಲೆಕ್ಟ್ರಿಕ್‌ ಕಾರನ್ನು ಸತತ 1.20 ಗಂಟೆ ಚಾರ್ಜ್‌ ಮಾಡಿದರೆ ಸುಮಾರು 125 ಕಿ.ಮೀ. ದೂರ ಕ್ರಮಿಸಬಹುದಾಗಿದ್ದು, ಇದೇ ರೀತಿ ದಿನಕ್ಕೆ 20 ಕಾರುಗಳನ್ನು ಚಾರ್ಜಿಂಗ್ ಮಾಡಬಹುದು.

ಬೆಂಗಳೂರಿನಲ್ಲಿ ಆರಂಭವಾಯ್ತು ಮೊದಲ ಇವಿ ಚಾರ್ಜಿಂಗ್ ಸ್ಟೇಷನ್

ಜೊತೆಗೆ ಎಲೆಕ್ಟ್ರಿಕ್‌ ವಾಹನ ಮಾಲೀಕರು ಮನೆಯಲ್ಲಿ ಚಾರ್ಜ್‌ ಮಾಡಿದರೆ ಪ್ರತಿ ಯುನಿಟ್‌ಗೆ 6 ರಿಂದ 7 ರೂ. ಪಾವತಿಸಬೇಕಿರುವ ಪರಿಸ್ಥಿತಿ ಇದ್ದು, ಆದ್ದರಿಂದ ಬೆಸ್ಕಾಂ ಸಹಯೋಗದಲ್ಲಿ ಚಾರ್ಜಿಂಗ್ ಸ್ಟೇಷನ್ ಕಡಿಮೆ ದರಗಳಲ್ಲಿ ಚಾರ್ಜ್ ಮಾಡಿಕೊಳ್ಳಬಹುದು.

ಬೆಂಗಳೂರಿನಲ್ಲಿ ಆರಂಭವಾಯ್ತು ಮೊದಲ ಇವಿ ಚಾರ್ಜಿಂಗ್ ಸ್ಟೇಷನ್

ಇನ್ನು ಫಾಸ್ಟ್ ಚಾರ್ಜಿಂಗ್ ಆಯ್ಕೆಯ ದರವನ್ನು ಬೆಳಗಿನ ಸಮಯದಲ್ಲಿ ಒಂದು ಯೂನಿಟ್ ಗೆ ರೂ.5 ಹಾಗೆಯೇ ರಾತ್ರಿಯ ಸಮಯದಲ್ಲಿ ರೂ.4.40 ನಿಗದಿ ಪಡಿಸಲಾಗಿದ್ದು, ಎಲೆಕ್ಟ್ರಿಕ್ ಬಸ್ ಗಳಿಗೆ ಒಂದು ಯೂನಿಟ್ ಗೆ ದಿನದ ಸಮಯದಲ್ಲಿ ರೂ.5.5 ಮತ್ತು ರಾತ್ರಿಯ ಸಮಯದಲ್ಲಿ ರೂ.4.40 ನಿಗದಿಪಡಿಸಿದೆ.

ಬೆಂಗಳೂರಿನಲ್ಲಿ ಆರಂಭವಾಯ್ತು ಮೊದಲ ಇವಿ ಚಾರ್ಜಿಂಗ್ ಸ್ಟೇಷನ್

ಮತ್ತೊಂದು ವಿಚಾರ ಅಂದ್ರೆ, ಬೆಂಗಳೂರಿನ ಕೆ.ಆರ್.ಸರ್ಕಲ್‌ನಲ್ಲಿ ಅಷ್ಟೇ ಅಲ್ಲದೇ ಯಲಹಂಕದ ಡಿ.ಬಿ.ರಸ್ತೆ, ಜಾಲಹಳ್ಳಿ ಸಮೀಪದ ಗೆಳೆಯರ ಬಳಗ ಲೇಔಟ್‌, ಬನಶಂಕರಿ 2 ನೇ ಹಂತದ 22 ನೇ ಮುಖ್ಯರಸ್ತೆ, ಕುಮಾರಸ್ವಾಮಿ ಲೇಔಟ್‌ 1 ನೇ ಹಂತ, ಜೆ.ಪಿ.ನಗರ 1 ನೇ ಹಂತ, ಪಾಂಡುರಂಗ ನಗರ, ವೈಟ್‌ಫೀಲ್ಡ್‌ನ ಇಮ್ಮಡಹಳ್ಳಿ, ಎಚ್‌ಎಎಲ್‌ 2 ನೇ ಹಂತದ 2 ನೇ ಕ್ರಾಸ್‌ ರಸ್ತೆ, ಪಿಳ್ಳಣ್ಣ ಗಾರ್ಡನ್‌ ರಸ್ತೆ, ಎಚ್‌ಆರ್‌ಬಿಆರ್‌ ಲೇಔಟ್‌ನಲ್ಲಿ ಎರಡು ಕೇಂದ್ರಗಳನ್ನು ಆರಂಭಿಸಲು ಸಿದ್ಧತೆ ನಡೆದಿದೆ.

ಬೆಂಗಳೂರಿನಲ್ಲಿ ಆರಂಭವಾಯ್ತು ಮೊದಲ ಇವಿ ಚಾರ್ಜಿಂಗ್ ಸ್ಟೇಷನ್

ಈ ಮೂಲಕ ಬೆಸ್ಕಾಂನಲ್ಲಿ ಬಳಕೆಯಾಗುತ್ತಿರುವ ಸುಮಾರು 1,500 ಸಾಮಾನ್ಯ ಕಾರುಗಳನ್ನು ಎಲೆಕ್ಟ್ರಿಕ್‌ ಕಾರುಗಳಿಗೆ ಬದಲಿಸಲು ತೀರ್ಮಾನಿಸಿದ್ದು, ಮೊದಲ ಹಂತದಲ್ಲಿ 5 ಕಾರುಗಳನ್ನು ಪಡೆಯಲಾಗಿದೆ. ಭಾಗೀರಥಿ ಗ್ರೂಪ್ ಹೊರಗುತ್ತಿಗೆ ಆಧಾರದಲ್ಲಿ ಎಲೆಕ್ಟ್ರಿಕ್‌ ಕಾರುಗಳ ಸೇವೆ ನೀಡಲಿದೆ.

ಬೆಂಗಳೂರಿನಲ್ಲಿ ಆರಂಭವಾಯ್ತು ಮೊದಲ ಇವಿ ಚಾರ್ಜಿಂಗ್ ಸ್ಟೇಷನ್

ಹೊಸ ಯೋಜನೆಯಿಂದ ವಿದ್ಯುತ್ ಸಮಸ್ಯೆ?

ಪರಿಸರ ಸ್ನೇಹಿ ವಾಹನಗಳ ಬಳಕೆಯನ್ನು ಉತ್ತೇಜಿಸಲು ಬೆಸ್ಕಾಂ ಮಹತ್ವದ ನಿರ್ಧಾರ ತೆಗೆದುಕೊಂಡಿದ್ದು, ಹೊಸ ಯೋಜನೆಯಿಂದ ನಗರದಲ್ಲಿನ ಮನೆಗಳಿಗೆ ಹಾಗು ಉದ್ಯಮಗಳಿಗೆ ಪೂರೈಕೆಯಾಗುತ್ತಿರುವ ವಿದ್ಯುತ್‌ನಲ್ಲಿ ಯಾವುದೇ ಕಡಿತ ಇಲ್ಲ ಎನ್ನಲಾಗಿದೆ.

ಬೆಂಗಳೂರಿನಲ್ಲಿ ಆರಂಭವಾಯ್ತು ಮೊದಲ ಇವಿ ಚಾರ್ಜಿಂಗ್ ಸ್ಟೇಷನ್

ಡ್ರೈವ್ ಸ್ಪಾರ್ಕ್ ಅಭಿಪ್ರಾಯ

ನಗರದಲ್ಲಿ ಹೆಚ್ಚುತ್ತಿರುವ ಮಾಲಿನ್ಯ ತಡೆಯಲು ವಿದ್ಯುತ್ ವಾಹನಗಳ ಬಳಕೆಯು ಅವಶ್ಯಕತೆಯಿದ್ದು, ಸದ್ಯ ಭಾರತದಲ್ಲಿ ಮಹಿಂದ್ರಾ ಸಂಸ್ಥೆಯು ವಿದ್ಯುತ್ ವಾಹನಗಳ ಉತ್ಪಾದನೆ ಮುಂಚೂಣಿ ಸಾಧಿಸುತ್ತಿದೆ. ಸದ್ಯ ಟಾಟಾ ಮೋಟಾರ್ಸ್, ಮಾರುತಿ ಸುಜುಕಿ, ಟೊಯೊಟಾ ಮತ್ತು ಹ್ಯುಂಡೈ ಸಂಸ್ಥೆಗಳು ಕೂಡಾ ತಮ್ಮ ಎಲೆಕ್ಟ್ರಿಕ್ ಕಾರುಗಳನ್ನು ಭಾರತದಲ್ಲಿ ಬಿಡುಗಡೆಗೊಳಿಸುವ ತವಕದಲ್ಲಿವೆ.

Most Read Articles

Kannada
Read more on electric car evergreen
English summary
Bangalore Gets its First Public Electric Vehicle Charging Station.
Story first published: Tuesday, February 20, 2018, 16:49 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X