ಬರೋಬ್ಬರಿ 40 ಕೋಟಿ ಬೆಲೆ ಹೊಂದಿರುವ ಬುಗಾಟಿ ಹೊಸ ಕಾರಿನ ವಿಶೇಷತೆ ಏನು?

By Praveen Sannamani

ಫ್ರೆಂಚ್ ಜನಪ್ರಿಯ ಹೈಪರ್ ಕಾರು ತಯಾಕ ಸಂಸ್ಥೆಯಾದ ಬುಗಾಟಿ ತನ್ನ ಬಹುನೀರಿಕ್ಷಿತ ಡಿವೊ ಲಿಮಿಟೆಡ್ ಎಡಿಷನ್ ಐಷಾರಾಮಿ ಕಾರನ್ನು ಅನಾವರಣಗೊಳಿಸಿದ್ದು, ವಿಶ್ವದಲ್ಲೇ ಅತಿ ದುಬಾರಿ ಕಾರು ಮಾದರಿ ಎಂಬ ಖ್ಯಾತಿ ಪಡೆದಿರುವ ಈ ಕಾರಿನ ತಾಂತ್ರಿಕ ಮಾಹಿತಿಗಳು ಕೂಡಾ ಇಂಟ್ರಸ್ಟಿಂಗ್ ಆಗಿವೆ.

ಬರೋಬ್ಬರಿ 40 ಕೋಟಿ ಬೆಲೆ ಹೊಂದಿರುವ ಬುಗಾಟಿ ಹೊಸ ಕಾರಿನ ವಿಶೇಷತೆ ಏನು?

ಬುಗಾಟಿ ಹೈಪರ್ ಕಾರುಗಳು ಇತರೆ ಸೂಪರ್ ಕಾರುಗಳಿಂತಲೂ ವಿಶೇಷ ಎನ್ನಿಸಲಿದ್ದು, ಏರೋ ಡೈನಾಮಿಕ್ ಬಾಡಿ ಕಿಟ್ ಹೊಂದಿರುವ ಬುಗಾಟಿ ಕಾರುಗಳಲ್ಲಿ ಹತ್ತು ಹಲವು ವಿಶ್ವದರ್ಜೆ ಸೌಲಭ್ಯಗಳಿರುವ ಹಿನ್ನೆಲೆ ಇತರೆ ಸೂಪರ್ ಕಾರುಗಳಿಂತಲೂ ಅತಿ ದುಬಾರಿ ಎನ್ನಿಸಲಿವೆ. ಇವುಗಳಲ್ಲಿ ಸೀಮಿತ ಅವಧಿಯ ಡಿವೊ ಕಾರುಗಳು ಸಹ ಹಲವು ಐಷಾರಾಮಿ ವೈಶಿಷ್ಟ್ಯತೆಗಳೊಂದಿಗೆ ಬಲಿಷ್ಠ ಎಂಜಿನ್ ಸಾಮರ್ಥ್ಯ ಪಡೆದುಕೊಂಡಿದೆ.

ಬರೋಬ್ಬರಿ 40 ಕೋಟಿ ಬೆಲೆ ಹೊಂದಿರುವ ಬುಗಾಟಿ ಹೊಸ ಕಾರಿನ ವಿಶೇಷತೆ ಏನು?

ಬುಗಾಟಿ ಸಂಸ್ಥೆಯ ಜನಪ್ರಿಯ ರೇಸಿಂಗ್ ಚಾಲಕ ಅಲ್ಬರ್ಟ್ ಡಿವೊ ನೆನಪಿಗಾಗಿ ಈ ಸ್ಪೆಷಲ್ ಎಡಿಷನ್ ಹೊರ ತರಲಾಗಿದ್ದು, ಈ ಹಿಂದೆ ಜಿನೆವಾ ಆಟೋ ಮೇಳದಲ್ಲಿ ಬಿಡುಗಡೆಗೊಳಿಸಲಾಗಿದ್ದ ಚಿರೊನ್ ಸ್ಪೋರ್ಟ್ ಕಾರಿನ ಮುಂದುವರಿದ ಭಾಗವಾಗಿದೆ.

ಬರೋಬ್ಬರಿ 40 ಕೋಟಿ ಬೆಲೆ ಹೊಂದಿರುವ ಬುಗಾಟಿ ಹೊಸ ಕಾರಿನ ವಿಶೇಷತೆ ಏನು?

ಕಾರಿನ ಮುಂಭಾಗದ ವಿನ್ಯಾಸದಲ್ಲಿ ಮಾತ್ರವೇ ಗುರುತರ ಬದವಾವಣೆ ತಂದಿರುವ ಬುಗಾಟಿ ಸಂಸ್ಥೆಯು ಬಹುತೇಕ ತಾಂತ್ರಿಕ ಅಂಶಗಳನ್ನ ಚಿರೊನ್ ಸ್ಪೋರ್ಟ್ ಕಾರಿನಿಂದಲೇ ಎರವರು ಪಡೆಯಲಾಗಿದ್ದು, ಹೊಸ ಕಾರಿನ ಮುಂಭಾಗದಲ್ಲಿರುವ ಸಿ ಆಕಾರದ ಹೆಡ್‌ಲ್ಯಾಂಪ್ ಅನ್ನು ಪತ್ತೆಹಚ್ಚುವುದೇ ಇಲ್ಲಿ ಒಂದು ಸವಾಲು.

ಬರೋಬ್ಬರಿ 40 ಕೋಟಿ ಬೆಲೆ ಹೊಂದಿರುವ ಬುಗಾಟಿ ಹೊಸ ಕಾರಿನ ವಿಶೇಷತೆ ಏನು?

ಹೀಗೆ ಹಲವು ವಿಶೇಷತೆಗಳನ್ನ ಹೊಂದಿರುವ ಡಿವೊ ಲಿಮಿಟೆಡ್ ಎಡಿಷನ್ ಕಾರುಗಳಲ್ಲಿ ಸ್ಟ್ಯಾಂಡರ್ಡ್ ವರ್ಷನ್‍ಗಿಂತ ಸುಧಾರಿತ ಮಾದರಿಯ ಹೊಸ ಚಕ್ರಗಳು, ಕಾರ್ಬನ್ ಫೈಬರ್ ಇಂಟರ್‌ಕೂಲರ್ ಕವರ್ ಮತ್ತು ಕಾರ್ಬನ್ ಫೈಬರ್ ವಿಂಡ್‍ಸ್ಕ್ರೀನ್ ವೈಪರ್ ಗಳನ್ನು ಬಳಸಿರುವ ಹಿನ್ನೆಲೆಯಲ್ಲಿ ಕಾರಿನ ತೂಕವನ್ನ 30 ಕೆಜಿ ಕಡಿತಗೊಳಿಸಲಾಗಿದೆ.

ಬರೋಬ್ಬರಿ 40 ಕೋಟಿ ಬೆಲೆ ಹೊಂದಿರುವ ಬುಗಾಟಿ ಹೊಸ ಕಾರಿನ ವಿಶೇಷತೆ ಏನು?

ಹಾಗೆಯೇ ಕಾರಿನ ಬಾಗಿಲುಗಳಿಗೆ ಸ್ಪೋರ್ಟ್ಸ್ ಲೋಗೊವನ್ನು ಅಳವಡಿಸಲಾಗಿದ್ದು ಜೊತೆಗೆ ಇದರ ಸೆಂಟರ್ ಕಂಸೋಲ್ ನಲ್ಲಿ ಎಂಬ್ರಾಯ್ಡರಿ ಮಾಡಲಾಗಿದೆ. ಇದಲ್ಲದೆ ಅಲ್ಕಾಂಟರ್ ಮಿಶ್ರಣ, ಲೆದರ್‍‍ನೊಂದಿಗೆ ಬ್ಲಾಕ್ ಫಿನಿಷ್ ಅನ್ನು ಎಂಜಿನ್ ಸ್ಟಾರ್ಟರ್ ಬಳಿ ಅಳವಡಿಸಲಾಗಿದ್ದು, ಡ್ರೈವ್ ಮೋಡ್ ಸೆಲೆಕ್ಟ್ ಮಾಡಿಕೊಳ್ಳಬಲ್ಲ ಅನುಕೂಲತೆಯನ್ನು ಪಡೆದಿದೆ.

ಬರೋಬ್ಬರಿ 40 ಕೋಟಿ ಬೆಲೆ ಹೊಂದಿರುವ ಬುಗಾಟಿ ಹೊಸ ಕಾರಿನ ವಿಶೇಷತೆ ಏನು?

ಎಂಜಿನ್ ಸಾಮರ್ಥ್ಯ

ಬುಗಾಟಿ ಡಿವೊ ಕಾರುಗಳು 8.0-ಲೀಟರ್(8 ಸಾವಿರ ಸಿಸಿ) W16 ಎಂಜಿನ್ ಪಡೆದಿದ್ದು, ಹೊಸ ತಂತ್ರಜ್ಞಾನ ಪ್ರೇರಿತ 12 ಸ್ಪೀಡ್ ರೇಸಿಂಗ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ನೊಂದಿಗೆ 1479-ಬಿಹೆಚ್‍ಪಿ ಮತ್ತು 1600-ಎನ್ಎಂ ಟಾರ್ಕ್ ಅನ್ನು ಉತ್ಪಾದಿಸಬಲ್ಲವು.

ಬರೋಬ್ಬರಿ 40 ಕೋಟಿ ಬೆಲೆ ಹೊಂದಿರುವ ಬುಗಾಟಿ ಹೊಸ ಕಾರಿನ ವಿಶೇಷತೆ ಏನು?

ಈ ಮೂಲಕ 2.5 ಸೆಕೆಂಡುಗಳಲ್ಲಿ ಸೊನ್ನೆಯಿಂದ 100 ಕಿಲೋ ಮೀಟರ್ ಚಲಿಸುವ ಸಾಮರ್ಥ್ಯವನ್ನು ಹೊಂದಿದ್ದು, 6.5 ಸೇಕೆಂಡುಗಳಲ್ಲಿ 420 ಕಿ.ಮಿ ಟಾಪ್ ಸ್ಪೀಡ್ ತಲುಪುವ ವೈಶಿಷ್ಟ್ಯತೆ ಹೊಂದಿದ್ದು, ಶಾರ್ಪರ್ ಡಿಸೈನ್ ಹೊಂದಿರುವ ಈ ಕಾರಿನ ಪ್ರತಿ ಇಂಚಿಂಚು ಸಹ ಒಂದೊಂದು ವಿಶೇಷ ಹೊಂದಿದೆ ಎನ್ನಬಹುದು.

ಬರೋಬ್ಬರಿ 40 ಕೋಟಿ ಬೆಲೆ ಹೊಂದಿರುವ ಬುಗಾಟಿ ಹೊಸ ಕಾರಿನ ವಿಶೇಷತೆ ಏನು?

ಕಾರಿನ ಬೆಲೆಗಳು ಮತ್ತು ಮಾರಾಟ

ಯುರೋಪ್ ಮಾರುಕಟ್ಟೆಗಳಲ್ಲಿ ಸದ್ಯ ಮಾರಾಟಕ್ಕೆ ಲಭ್ಯವಾಗಲಿರುವ ಹೊಸ ಡಿವೊ ಕಾರುಗಳು ಕೇವಲ 40 ಯುನಿಟ್‌ಗಳಲ್ಲಿ ಮಾತ್ರವೇ ಖರೀದಿಗೆ ಲಭ್ಯವಿದ್ದು, ಮಾರಾಟಕ್ಕಿದ್ದ 40 ಡಿವೊ ಕಾರುಗಳು ಸಹ ಈಗಾಗಲೇ ಬುಕ್ಕಿಂಗ್ ಆಗಿವೆ ಎನ್ನಲಾಗಿದೆ. ಬರೋಬ್ಬರಿ 5 ಮಿಲಿಯನ್ ಯುರೋ ಬೆಲೆ ಹೊಂದಿರುವ ಈ ಕಾರು ಭಾರತದಲ್ಲಿ 40 ಕೋಟಿಗೂ ಅಧಿಕ ಬೆಲೆ ಪಡೆದುಕೊಳ್ಳಬಹುದು.

ಬರೋಬ್ಬರಿ 40 ಕೋಟಿ ಬೆಲೆ ಹೊಂದಿರುವ ಬುಗಾಟಿ ಹೊಸ ಕಾರಿನ ವಿಶೇಷತೆ ಏನು?

ಬುಗಾಟಿ ನಿರ್ಮಾಣದ ಡಿವೊ ಕಾರುಗಳು ಸದ್ಯ ವಿಶ್ವದಲ್ಲೇ ಅತ್ಯಂತ ಕ್ರೇಜ್ ಹುಟ್ಟು ಹಾಕಿದ ಹೈಪರ್‍ ಕಾರುಗಳಲ್ಲಿ ಒಂದಾಗಿದ್ದು, ಮುಂಬರುವ 2019ರ ಮೊದಲಾರ್ಧದಲ್ಲಿ ಹೊಸ ಕಾರಿನ ವಿತರಣೆ ಪ್ರಕ್ರಿಯೆ ಆರಂಭವಾಗಲಿವೆ. ಯಾಕೆಂದ್ರೆ ಈ ಹೈಪರ್ ಕಾರನ್ನು ಬೇಡಿಕೆ ಆಧಾರದ ಮೇಲೆ ನಿರ್ಮಾಣ ಮಾಡಲಾಗುತ್ತಿದೆ.

More from DriveSpark

Article Published On: Saturday, August 25, 2018, 18:33 [IST]
English summary
Limited-Edition Bugatti Divo Unveiled — Slower But Nothing Short Of Extreme!
Read more on bugatti super car
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+