ಕೇಂದ್ರದಿಂದ ಪ್ರತಿ 3 ಕಿಲೋ ಮೀಟರ್‌ಗೆ ಒಂದು ಇವಿ ಚಾರ್ಜಿಂಗ್ ಸ್ಟೇಷನ್..

ಭಾರತೀಯ ಮಾರುಕಟ್ಟೆಯಲ್ಲಿ ಹಲವು ಮಾದರಿಯ ಎಲೆಕ್ಟ್ರಿಕ್ ವಾಹನಗಳು ಮಾರಾಟಕ್ಕೆ ಲಭ್ಯವಿದ್ದರೂ ಗ್ರಾಹಕರು ಅವುಗಳತ್ತ ಹೆಚ್ಚಿನ ಒಲವು ತೋರುತ್ತಿಲ್ಲ. ಕಾರಣ, ಇವಿ ವಾಹನಗಳಿಗೆ ಮುಖ್ಯವಾಗಿ ಬೇಕಿರುವ ಚಾರ್ಜಿಂಗ್ ಸ್ಟೇಷನ್ ಸೌಲಭ್ಯದ ಕೊರತೆಯಿದೆ.

By Praveen Sannamani

ಭಾರತೀಯ ಮಾರುಕಟ್ಟೆಯಲ್ಲಿ ಹಲವು ಮಾದರಿಯ ಎಲೆಕ್ಟ್ರಿಕ್ ವಾಹನಗಳು ಮಾರಾಟಕ್ಕೆ ಲಭ್ಯವಿದ್ದರೂ ಗ್ರಾಹಕರು ಅವುಗಳತ್ತ ಹೆಚ್ಚಿನ ಒಲವು ತೋರುತ್ತಿಲ್ಲ. ಕಾರಣ, ಇವಿ ವಾಹನಗಳಿಗೆ ಮುಖ್ಯವಾಗಿ ಬೇಕಿರುವ ಚಾರ್ಜಿಂಗ್ ಸ್ಟೇಷನ್ ಸೌಲಭ್ಯದ ಕೊರತೆಯಿದ್ದು, ಇದಕ್ಕಾಗಿ ಕೇಂದ್ರ ಸರ್ಕಾರವು ಹೊಸ ಯೋಜನೆ ರೂಪಿಸಿದೆ.

ಕೇಂದ್ರದಿಂದ ಪ್ರತಿ 3 ಕಿಲೋ ಮೀಟರ್‌ಗೆ ಒಂದು ಇವಿ ಚಾರ್ಜಿಂಗ್ ಸ್ಟೇಷನ್..

ಪರಿಸರ ಮಾಲಿನ್ಯ ತಡೆ ಉದ್ದೇಶದಿಂದ 2030ರ ವೇಳೆಗೆ ಶೇ.100 ಎಲೆಕ್ಟ್ರಿಕ್ ಕಾರುಗಳು ರಸ್ತೆಗಿಳಿಸುವ ಉದ್ದೇಶದಿಂದ ವಿಶ್ವಾದ್ಯಂತ ಎಲ್ಲಾ ಕಾರು ಉತ್ಪಾದನಾ ಸಂಸ್ಥೆಗಳು ಇವಿ ವಾಹನಗಳ ವಿಶೇಷ ಆಸಕ್ತಿ ತೊರುತ್ತಿದ್ದು, ಇದಕ್ಕಾಗಿ ಕೇಂದ್ರ ಸರ್ಕಾರ ಕೂಡಾ ಗ್ರಾಹಕರನ್ನು ಉತ್ತೇಜಿಸುವ ಯೋಜನೆಗಳಿಗೆ ಸಾಥ್ ನೀಡುತ್ತಿದೆ.

ಕೇಂದ್ರದಿಂದ ಪ್ರತಿ 3 ಕಿಲೋ ಮೀಟರ್‌ಗೆ ಒಂದು ಇವಿ ಚಾರ್ಜಿಂಗ್ ಸ್ಟೇಷನ್..

ವರದಿಗಳ ಪ್ರಕಾರ, ನಗರ ಪ್ರದೇಶಗಳಲ್ಲಿ ಪ್ರತಿ 3 ಕಿಲೋ ಮೀಟರ್‌ಗೆ ಒಂದು ಇವಿ ಚಾರ್ಜಿಂಗ್ ಸ್ಟೇಷನ್‌ಗಳನ್ನು ತೆರೆಯಲು ಮುಂದಾಗಿದ್ದು, ಎಲೆಕ್ಟ್ರಿಕ್ ವಾಹನ ಸವಾರರಿಗೆ ತೊಂದರೆಯಾಗದಂತೆ ಕ್ರಮ ಕೈಗೊಳ್ಳಲಾಗುತ್ತಿದೆ.

ಕೇಂದ್ರದಿಂದ ಪ್ರತಿ 3 ಕಿಲೋ ಮೀಟರ್‌ಗೆ ಒಂದು ಇವಿ ಚಾರ್ಜಿಂಗ್ ಸ್ಟೇಷನ್..

ಇದಕ್ಕಾಗಿ ಮುಂದಿನ ವರ್ಷಗಳ ಅವಧಿಯಲ್ಲಿ ಒಟ್ಟು 30 ಸಾವಿರ ಫಾಸ್ಟ್ ಚಾರ್ಜಿಂಗ್ ಸ್ಟೇಷನ್ ಮತ್ತು 15 ಸಾವಿರ ಸ್ಲೋ ಚಾರ್ಜಿಂಗ್ ಸ್ಟೇಷನ್‌ಗಳನ್ನು ತೆರೆಯಲಿದ್ದು, ನಗರಪ್ರದೇಶಗಳಲ್ಲಿ ಪ್ರತಿ 3 ಕಿ.ಮೀ ಅಂತರದಲ್ಲಿ ಒಂದು ಚಾರ್ಜಿಂಗ್ ಸ್ಟೇಷನ್‌ ಇದ್ದಲ್ಲಿ ಹೆದ್ದಾರಿಗಳಲ್ಲಿ ಚಲಿಸುವ ಇವಿ ವಾಹನಗಳಿಗೆ ಪ್ರತಿ 50 ಕಿ.ಮೀ ಗೆ ಒಂದು ಚಾರ್ಜಿಂಗ್ ಸ್ಟೇಷನ್‌ಗಳನ್ನು ತೆರೆಯಲಿದೆ.

ಕೇಂದ್ರದಿಂದ ಪ್ರತಿ 3 ಕಿಲೋ ಮೀಟರ್‌ಗೆ ಒಂದು ಇವಿ ಚಾರ್ಜಿಂಗ್ ಸ್ಟೇಷನ್..

ಈ ಸಂಬಂಧ ಹಲವು ವಿದೇಶಿ ಸಂಸ್ಥೆಗಳೊಂದಿಗೆ ಮಾತುಕತೆ ನಡೆಸಿರುವ ಕೇಂದ್ರ ಸರ್ಕಾರವು ವಿಶ್ವದರ್ಜೆ ಗುಣಮಟ್ಟದ ಚಾರ್ಜಿಂಗ್ ಸ್ಟೇಷನ್ ನಿರ್ಮಾಣ ಮಾಡಲು ಗುತ್ತಿಗೆ ನೀಡುತ್ತಿದ್ದು, ಸ್ಥಳೀಯವಾಗಿ ಚಾರ್ಜಿಂಗ್ ಸ್ಟೇಷನ್ ತೆರೆಯುವ ಸಂಸ್ಥೆಗಳಿಗೂ ಕೇಂದ್ರದಿಂದ ಆರ್ಥಿಕ ಸಹಾಯ ದೊರೆಯಲಿದೆ.

ಕೇಂದ್ರದಿಂದ ಪ್ರತಿ 3 ಕಿಲೋ ಮೀಟರ್‌ಗೆ ಒಂದು ಇವಿ ಚಾರ್ಜಿಂಗ್ ಸ್ಟೇಷನ್..

ಇನ್ನು ಎನ್‌ಟಿಪಿಸಿ ಸಂಸ್ಥೆಯು ಸಹ ಈಗಾಗಲೇ ದೇಶದ ಪ್ರಮುಖ ನಗರಗಳಲ್ಲಿ ಪ್ರಾಯೋಗಿಕವಾಗಿ ಚಾರ್ಜಿಂಗ್ ಸ್ಟೇಷನ್‌ಗಳಿಗೆ ಚಾಲನೆ ನೀಡಿದ್ದು, ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ದೊರೆಯಲಿದೆ. ಇದಕ್ಕೆ ಪ್ರಮುಖ ಉದಾಹರಣೆ ಅಂದ್ರೆ ಬೆಂಗಳೂರಿನ ಕೆ.ಆರ್.ವೃತ್ತದಲ್ಲಿರುವ ಬೆಸ್ಕಾಂ ಕಚೇರಿ ಆವರಣದಲ್ಲಿ ತೆರೆಯಲಾಗಿರುವ ಇವಿ ಚಾರ್ಜಿಂಗ್ ಪಾಯಿಂಟ್‌ಗಳಲ್ಲಿ ಇದೀಗ ಭಾರೀ ಬೇಡಿಕೆ ಉಂಟಾಗಿರುವುದು.

ಕೇಂದ್ರದಿಂದ ಪ್ರತಿ 3 ಕಿಲೋ ಮೀಟರ್‌ಗೆ ಒಂದು ಇವಿ ಚಾರ್ಜಿಂಗ್ ಸ್ಟೇಷನ್..

ಇದಲ್ಲದೇ ಸಾರಿಗೆ ವ್ಯವಸ್ಥೆಯಲ್ಲಿ ಪ್ರಮುಖ ಸ್ಥಾನವಹಿಸುತ್ತಿರುವ ರೈಲು ನಿಲ್ದಾಣ, ಬಸ್ ನಿಲ್ದಾಣ, ಮೆಟ್ರೋ ನಿಲ್ದಾಣಗಳ ಬಳಿ ಸಹ ಚಾರ್ಜಿಂಗ್ ಸ್ಟೇಷನ್‌ಗಳನ್ನು ತೆರೆಯಲಾಗುತ್ತಿದ್ದು, ಇದು ಎಲೆಕ್ಟ್ರಿಕ್ ಕಾರುಗಳನ್ನು ಖರೀದಿಸುವ ಗ್ರಾಹಕರನ್ನು ಉತ್ತೇಜಿಸುವಲ್ಲಿ ಪ್ರಮುಖ ಪಾತ್ರವಹಿಸಲಿವೆ.

ಕೇಂದ್ರದಿಂದ ಪ್ರತಿ 3 ಕಿಲೋ ಮೀಟರ್‌ಗೆ ಒಂದು ಇವಿ ಚಾರ್ಜಿಂಗ್ ಸ್ಟೇಷನ್..

ಎಲೆಕ್ಟ್ರಿಕ್ ಕಾರುಗಳಿಗೆ ಗ್ರೀನ್ ನಂಬರ್ ಪ್ಲೇಟ್

ನೀತಿ ಆಯೋಗ ಶಿಫಾರಸ್ಸು ಅನ್ವಯ ಎಲೆಕ್ಟ್ರಿಕ್ ಕಾರುಗಳು ಗ್ರಿನ್ ನಂಬರ್ ಪ್ಲೆಟ್ ಒದಗಿಸುವ ಬಗ್ಗೆ ಕೇಂದ್ರ ಸರ್ಕಾರವು ಒಪ್ಪಿಗೆ ಸೂಚಿಸಿದ್ದು, ಎಲೆಕ್ಟ್ರಿಕ್ ಕಾರುಗಳ ಖರೀದಿಯನ್ನು ಹೆಚ್ಚಿಸಲು ಮತ್ತಷ್ಟು ಹೊಸ ಆಫರ್‌ಗಳನ್ನು ನೀಡುವ ಬಗ್ಗೆ ಸುಳಿವು ನೀಡಿದೆ.

ಕೇಂದ್ರದಿಂದ ಪ್ರತಿ 3 ಕಿಲೋ ಮೀಟರ್‌ಗೆ ಒಂದು ಇವಿ ಚಾರ್ಜಿಂಗ್ ಸ್ಟೇಷನ್..

ಕೆಲವು ಬಲ್ಲ ಮೂಲಗಳ ಪ್ರಕಾರ ಎಲೆಕ್ಟ್ರಿಕ್ ಕಾರು ಖರೀದಿಸುವ ಮಾಲೀಕರಿಗೆ 3 ವರ್ಷದ ತನಕ ದೇಶಾದ್ಯಂತ ಪಾರ್ಕಿಂಗ್ ಶುಲ್ಕ ವಿನಾಯ್ತಿ ನೀಡಲಾಗುತ್ತಿದ್ದು, ಇದರ ಜೊತೆಗೆ ಸಿಮಿತ ಅವಧಿಗೆ ಟೋಲ್ ಫ್ರಿ ಸೌಲಭ್ಯವನ್ನು ಸಹ ನೀಡುತ್ತಿದೆ.

ಕೇಂದ್ರದಿಂದ ಪ್ರತಿ 3 ಕಿಲೋ ಮೀಟರ್‌ಗೆ ಒಂದು ಇವಿ ಚಾರ್ಜಿಂಗ್ ಸ್ಟೇಷನ್..

ರೂ.2.50 ಲಕ್ಷ ಪ್ರೋತ್ಸಾಹ ಧನ

ಎಲೆಕ್ಟ್ರಿಕ್ ಕಾರುಗಳನ್ನು ಖರೀದಿಸುವ ಗ್ರಾಹಕರನ್ನು ಪ್ರೊತ್ಸಾಹಿಸಲು ಕೇಂದ್ರ ಸರ್ಕಾರವು ಪ್ರತಿ ಕಾರಿನ ಖರೀದಿ ಮೇಲೆ ಬರೋಬ್ಬರಿ 2. 50 ಲಕ್ಷ ರೂಪಾಯಿ ಪ್ರೋತ್ಸಾಹ ಧನ ನೀಡಲು ಮುಂದಾಗಿದೆ.

ಕೇಂದ್ರದಿಂದ ಪ್ರತಿ 3 ಕಿಲೋ ಮೀಟರ್‌ಗೆ ಒಂದು ಇವಿ ಚಾರ್ಜಿಂಗ್ ಸ್ಟೇಷನ್..

ಹೊಸ ಯೋಜನೆಯ ಪ್ರಕಾರ, ಈಗಾಗಲೇ ಡೀಸೆಲ್ ಅಥವಾ ಪೆಟ್ರೋಲ್ ಕಾರುಗಳನ್ನು ಹೊಂದಿರುವ ಮಾಲೀಕರು ತಮ್ಮ ಹಳೆಯ ಬಿಎಸ್ 3 ಕಾರುಗಳನ್ನು ಬದಲಾಯಿಸಿ ಎಲೆಕ್ಟ್ರಿಕ್ ಕಾರನ್ನು ಖರೀದಿಸುವಂತಹ ಗ್ರಾಹಕರಿಗೆ ಮಾತ್ರ ಅನ್ವಯವಾಗಲಿದೆ

ಕೇಂದ್ರದಿಂದ ಪ್ರತಿ 3 ಕಿಲೋ ಮೀಟರ್‌ಗೆ ಒಂದು ಇವಿ ಚಾರ್ಜಿಂಗ್ ಸ್ಟೇಷನ್..

ಇದಕ್ಕಾಗಿಯೇ ಬರೋಬ್ಬರಿ 9 ಸಾವಿರ ಕೋಟಿ ವ್ಯಯ ಮಾಡುತ್ತಿರುವ ಕೇಂದ್ರವು ಮುಂದಿನ ಐದು ವರ್ಷಗಳ ಅವಧಿಯಲ್ಲಿ ಶೇ.50 ರಷ್ಟು ಎಲೆಕ್ಟ್ರಿಕ್ ಕಾರುಗಳನ್ನು ರಸ್ತೆಗಿಳಿಸುವ ಗುರಿಹೊಂದಿದ್ದು, ಅಂತಿಮವಾಗಿ ಹೆಚ್ಚುತ್ತಿರುವ ವಾಯು ಮಾಲಿನ್ಯ ತಗ್ಗಿಸುವುದೇ ಯೋಜನೆಯ ಮುಖ್ಯ ಉದ್ದೇಶವಾಗಿದೆ.

Most Read Articles

Kannada
Read more on electric cars
English summary
Electric Car Charging Stations To Be Set Up Every Three Kilometres In India.
Story first published: Saturday, May 19, 2018, 13:06 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X