ಕಾರು ಮಾರುಕಟ್ಟೆಯಲ್ಲಿ ಹೊಸ ಬದಲಾವಣೆ- ಎಸ್‌ಯುವಿ ಖರೀದಿಯತ್ತ ವಾಲಿದ ಗ್ರಾಹಕರು
ಜನಪ್ರಿಯ ಕಾರು ಉತ್ಪಾದನಾ ಸಂಸ್ಥೆಗಳು ಎಸ್‌ಯುವಿ ಕಾರುಗಳತ್ತ ಹೆಚ್ಚಿನ ಗಮನಹರಿಸುತ್ತಿದ್ದು, ಮುಂಬರುವ ದಿನಗಳಲ್ಲಿ ಭಾರತೀಯ ಆಟೋ ಉತ್ಪಾದನಾ ವಲಯವು ಹೊಸ ಬದಲಾವಣೆಗೆ ಸಾಕ್ಷಿಯಾಗಲಿದೆ.
ಭಾರತೀಯ ಮಾರುಕಟ್ಟೆಯಲ್ಲಿ ವಿವಿಧ ಮಾದರಿಯ ಅಗ್ಗದ ಬೆಲೆಯ ಕಾರುಗಳು ಮಾರಾಟಕ್ಕಿದ್ದು, ಇದೀಗ ಎಸ್‌ಯುವಿ ಕಾರುಗಳ ಉತ್ಪಾದನೆ ಮತ್ತು ಮಾರಾಟದತ್ತ ಕಾರು ಉತ್ಪಾದಕರು ಹೊಸ ಮಾರ್ಗ ಕಂಡುಕೊಳ್ಳುತ್ತಿದ್ದಾರೆ. ಹೀಗಾಗಿಯೇ ಜನಪ್ರಿಯ ಕಾರು ಉತ್ಪಾದನಾ ಸಂಸ್ಥೆಗಳು ಎಸ್‌ಯುವಿ ಕಾರುಗಳತ್ತ ಹೆಚ್ಚಿನ ಗಮನಹರಿಸುತ್ತಿದ್ದು, ಮುಂಬರುವ ದಿನಗಳಲ್ಲಿ ಭಾರತೀಯ ಆಟೋ ಉತ್ಪಾದನಾ ವಲಯವು ಹೊಸ ಬದಲಾವಣೆಗೆ ಸಾಕ್ಷಿಯಾಗಲಿದೆ.

ದೇಶಿಯ ಮಾರುಕಟ್ಟೆಯಲ್ಲಿ ಬಹುತೇಕ ಗ್ರಾಹಕರು ಅಗ್ಗದ ಬೆಲೆಯಲ್ಲಿ ಉತ್ತಮ ಮೈಲೇಜ್ ನೀಡುವ ಕಾರುಗಳ ಖರೀದಿಯತ್ತ ಒಲವು ಹೊಂದಿದ್ದು, ಇದು ಇತ್ತೀಚಿನ ದಿನಗಳಲ್ಲಿ ತುಸು ಬದಲಾವಣೆಯಗುತ್ತಿದೆ. ಹ್ಯಾಚ್‌ಬ್ಯಾಕ್ ಕಾರುಗಳನ್ನು ಬಿಟ್ಟು ಎಸ್‌ಯುವಿಯತ್ತ ಮುಖ ಮಾಡುತ್ತಿದ್ದು, ನಿರ್ವಹಣೆಗಾಗಿ ಉತ್ತಮವಾಗಿರುವ ಎಸ್‌ಯುವಿ ಗ್ರಾಹಕರ ಪರವಾದ ಸೌಲಭ್ಯಗಳನ್ನು ಹೊಂದಿರುವುದು ಖರೀದಿಗೂ ಉತ್ತಮ ಎನ್ನಿಸಲಿದೆ.

ಆದ್ರೆ, ಹ್ಯಾಚ್‌ಬ್ಯಾಕ್ ಕಾರುಗಳಿಗಿಂತ ಎಸ್‌ಯುವಿ ಕಾರುಗಳ ಆಯ್ಕೆ ಆರ್ಥಿಕವಾಗಿ ತುಸು ದುಬಾರಿ ಎನ್ನಿಸಲಿದ್ದು, ಇದೇ ಕಾರಣಕ್ಕೆ ಗ್ರಾಹಕರು ಅಗ್ಗದ ಬೆಲೆಯ ಹ್ಯಾಚ್‌ಬ್ಯಾಕ್ ಕಾರುಗಳಿಗೆ ಹೆಚ್ಚಿನ ಒತ್ತು ನೀಡುತ್ತಿರುವುದು ಸದ್ಯ ಪರಿಸ್ಥಿತಿ.

ಹೀಗಾಗಿಯೇ ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ವಿವಿಧ ಬಗೆಯ ಎಸ್‌ಯುವಿ ಅಭಿವೃದ್ಧಿ ಮುಂದಾಗಿರುವ ಕಾರು ಉತ್ಪಾದನಾ ಸಂಸ್ಥೆಯು ಮುಂಬರುವ ದಿನಗಳಲ್ಲಿ ಹೊಸ ಬದಲಾವಣೆಗೆ ನಾಂದಿ ಹಾಡಲಿದ್ದು, ಈಗಾಗಲೇ ಈ ನಿಟ್ಟಿನಲ್ಲಿ ಮಾರುತಿ ಸುಜುಕಿ ಮತ್ತು ಹ್ಯುಂಡೈ ಸಂಸ್ಥೆಗಳು ಯಶಸ್ವಿ ಹಾದಿಯಲ್ಲಿವೆ ಎನ್ನಬಹುದು.

ಕೆಲವು ಶ್ರೀಮಂತ ಗ್ರಾಹಕರಿಂದ ಮಾತ್ರವೇ ಎಸ್‌ಯುವಿ ಖರೀದಿ ಸಾಧ್ಯ ಎನ್ನುವ ಮಾರುಕಟ್ಟೆ ವಾತಾವರಣವನ್ನು ಹೊಗಲಾಡಿಸುವಲ್ಲಿ ಮಾರುತಿ ಸುಜುಕಿ ವಿಟಾರಾ ಬ್ರೆಝಾ ಮತ್ತು ಹ್ಯುಂಡೈ ಕ್ರೇಟಾ ಎಸ್‌ಯುವಿ ಕಾರುಗಳು ಮಹತ್ವದ ಬದಲಾವಣೆ ಕಾರಣವಾಗಿವೆ ಅಂದ್ರೇ ನಾವೇಲ್ಲಾ ನಂಬಲೇಬೇಕು.

ಇದಕ್ಕೆ ಕಾರಣ, ಸದ್ಯ ಭಾರತದಲ್ಲಿ ಮಾರಾಟವಾಗುತ್ತಿರುವ ಟಾಪ್ 10 ಕಾರುಗಳ ಪಟ್ಟಿಯಲ್ಲಿ 6ನೇ ಸ್ಥಾನದಲ್ಲಿರುವ ವಿಟಾರಾ ಬ್ರೆಝಾ ಮತ್ತು 8ನೇ ಸ್ಥಾನದಲ್ಲಿ ಕ್ರೇಟಾ ಕಾರುಗಳು ಗ್ರಾಹಕರ ಬೇಡಿಕೆಯನ್ನೇ ಬದಲಾಯಿಸಿದ್ದು, ಇದು ಮುಂಬರುವ ದಿನಗಳಲ್ಲಿ ಮತ್ತಷ್ಟು ಬದಲಾವಣೆಯಾಗಲಿದೆ.

ಹ್ಯಾಚ್‌ಬ್ಯಾಕ್ ಕಾರು ಖರೀದಿ ಯೋಜನೆಯಲ್ಲಿರುವ ಗ್ರಾಹಕರನ್ನು ಎಸ್‌ಯುವಿಗಳತ್ತ ಓಲೈಕೆ ಮಾಡುತ್ತಿರುವ ಕಾರು ಉತ್ಪಾದಕರು ಮುಂದಿನ 2 ವರ್ಷಗಳ ಅವಧಿಯಲ್ಲಿ ಸರಿಸುಮಾರು 10ಕ್ಕೂ ಹೆಚ್ಚು ಅಗ್ಗದ ಬೆಲೆಯ ಎಸ್‌ಯುವಿಗಳನ್ನ ಪರಿಚಯಿಸುವ ಇರಾದೆಯಲ್ಲಿದ್ದಾರೆ.

ಕಾರು ಉತ್ಪಾದನಾ ಸಂಸ್ಥೆಗಳು ಗ್ರಾಹಕರನ್ನು ಸೆಳೆಯಲು ರೂ. 7 ಲಕ್ಷದಿಂದ ರೂ. 12 ಲಕ್ಷದೊಳಗೆ ಖರೀದಿಗೆ ಯೋಗ್ಯವಾದ ಉತ್ತಮ ಕಾರುಗಳನ್ನ ಅಭಿವೃದ್ಧಿ ಮಾಡುತ್ತಿದ್ದು, ಬ್ರೆಝಾ ಮತ್ತು ಕ್ರೇಟಾ ಕಾರುಗಳಿಂತಲೂ ಉತ್ತಮ ಸೌಲಭ್ಯಗಳೊಂದಿಗೆ ಮಾರುಕಟ್ಟೆಗೆ ಲಗ್ಗೆಯಿಡುವ ನೀರಿಕ್ಷೆಯಲ್ಲಿವೆ.

ಇವುಗಳಲ್ಲಿ 7 ಸೀಟರ್ ದಟ್ಸನ್ ಕ್ರಾಸ್ ಕೂಡಾ ಒಂದಾಗಿದ್ದು, ದಟ್ಸನ್ ಕ್ರಾಸ್ ಕಾರುಗಳ ಬೆಲೆ ಕುರಿತಂತೆ ಸಂದರ್ಶನವೊಂದರಲ್ಲಿ ಮಾತನಾಡಿರುವ ನಿಸ್ಸಾನ್ ಇಂಡಿಯಾ ಮಾರುಕಟ್ಟೆ ವಿಭಾಗದ ಅಧ್ಯಕ್ಷ ಥಾಮಸ್ ಕೂಹಲ್ ಅವರು, ದಟ್ಸನ್ ಕಾರುಗಳನ್ನ ಭಾರತದಲ್ಲಿ ಜನಪ್ರಿಯ ಬ್ರಾಂಡ್ ಕಾರುಗಳಿಂತಲೂ ಅತಿ ಕಡಿಮೆ ಬೆಲೆಯಲ್ಲಿ ಖರೀದಿ ಲಭ್ಯವಿರಲಿದ್ದು, 10 ಲಕ್ಷದೊಳಗೆ ದಟ್ಸನ್ ಕ್ರಾಸ್ ಲಭ್ಯವಾಗುವುದರಲ್ಲಿ ಯಾವುದೇ ಸಂದೇಹವಿಲ್ಲ ಎಂದಿದ್ದಾರೆ.

ಜೊತೆಗೆ ಜೊತೆಗೆ ನಿಸ್ಸಾನ್ ಸಂಸ್ಥೆಯು ತನ್ನ ಬಹುನೀರಿಕ್ಷಿತ ಕಿಕ್ಸ್ ಎಸ್‌ಯುವಿಯನ್ನ ಮಾರುಕಟ್ಟೆಗೆ ಪರಿಚಯಿಸುತ್ತಿದ್ದು, ಕಿಕ್ಸ್ ಕಾರುಗಳು ಈಗಾಗಲೇ ಜಾಗತಿಕ ಮಾರುಕಟ್ಟೆಯಲ್ಲಿ ವಿ ಪ್ಲಾಟ್‍ಫಾರ್ಮ್ ಆಧಾರಿತ ಕ್ರಾಸ್ಓವರ್ ಎಸ್‍ಯುವಿ ಕಾರ್ ರೂಪದಲ್ಲಿ ಮಾರಾಟಗೊಳ್ಳುತ್ತಿದೆ. ಹೀಗಾಗಿ ಭಾರತಕ್ಕೆ ಬರಲಿರುವ ಕಿಕ್ಸ್ ಕಾರುಗಳು ಬೆಲೆ ತಗ್ಗಿಸಲು ರೆನಾಲ್ಟ್ ಡಸ್ಟರ್ ಬಿ ಪ್ಲಾಟ್‍ಫಾರ್ಮ್ ಅನ್ನು ಆಧರಿಸಲಿದೆ ಎನ್ನಲಾಗಿದೆ.

ಅದರಂತೆ ಮಹೀಂದ್ರಾ ಸಂಸ್ಥೆಯು ಸಹ ದಕ್ಷಿಣ ಕೊರಿಯಾ ಉತ್ಪಾದನಾ ಸಂಸ್ಥೆಯಾದ ಸ್ಯಾಂಗ್‌ಯಾಂಗ್ ಸಂಸ್ಥೆಯ ಜೊತೆಗೂಡಿ ಭಾರತೀಯ ಗ್ರಾಹಕರಿಗಾಗಿ ಎಸ್201 ಹೆಸರಿನೊಂದಿಗೆ ಹೊಸ ಕಾರಿನ ಎಂಜಿನ್ ಕಾರ್ಯಕ್ಷಮತೆಯನ್ನ ನಡೆಸುತ್ತಿರುವುದು ಎಸ್‌ಯುವಿ ಆಯ್ಕೆಗೆ ವಿಫುಲ ಅವಕಾಶಗಳು ಗ್ರಾಹಕರಿಗೆ ದೊರೆಯಲಿವೆ.

ಒಟ್ಟಿನಲ್ಲಿ ಎಸ್‌ಯುವಿ ಕಾರುಗಳ ಉತ್ಪಾದನೆ ಮತ್ತು ಮಾರಾಟದ ವಿಚಾರಕ್ಕೆ ಕಾರು ಉತ್ಪಾದನಾ ಸಂಸ್ಥೆಗಳು ವಿನೂತನ ಯೋಜನೆಗಳನ್ನ ರೂಪಿಸುತ್ತಿರುವುದು ಹಲವು ಹೊಸತನಗಳಿಗೆ ಮುನ್ನುಡಿಯಾಗುತ್ತಿದ್ದು, ಇದು ಮುಂಬರುವ 2 ವರ್ಷಗಳ ಅವಧಿಯಲ್ಲಿ ಹೊಸ ಬದಲಾವಣೆಯನ್ನ ತಿಳಿಯಬಹುದಾಗಿದೆ.


Click it and Unblock the Notifications