ಕಿಸೆಯಲ್ಲಿ 5 ಸಾವಿರಕ್ಕು ಗತಿ ಇಲ್ಲ ಎಂದಿದ್ದ ನಟ ಸಿಂಬು ಈಗ ಬೆಂಟ್ಲಿ ಒಡೆಯ

ಕಳೆದ ಎರಡು ವರ್ಷಗಳ ಹಿಂದೆ ಸುಮಾರು ಮೂರು ಸಿನಿಮಾಗಳಲ್ಲಿ ನಟಿಸಿ ಫ್ಲಾಪ್ ಆದ ನಟ ಸಿಂಬು ವರ್ಷದ ಹಿಂದಷ್ಟೇ ಕಾರ್ಯಕ್ರಮವೊಂದರಲ್ಲಿ 5 ಸಾವಿರಕ್ಕೂ ನಾನು ಪರದಾಡಬೇಕಿದೆ ಅಂದಿದ್ದಲ್ಲದೇ, ನನ್ನ ಖರ್ಚಿಗೆ ನನ್ನ ತಾಯಿಯನ್ನು ನೆಚ್ಚಿಕೊಳ್ಳಬೇಕಾಗಿದೆ ಎಂದಿದ್ದ. ಆದ್ರೆ ನಟ ಇದೀಗ ಚೆನ್ನೈ ನಗರದಲ್ಲಿ ಮೊದಲ ಬೆಂಟ್ಲಿ ಕಾಂಟಿನೆಂಟಲ್ ಜಿಟಿ ಕಾರಿನ ಮಾಲೀಕರಾಗಿದ್ದಾರೆ.

ಕಿಸೆಯಲ್ಲಿ 5 ಸಾವಿರಕ್ಕು ಗತಿ ಇಲ್ಲ ಎಂದಿದ್ದ, ನಟ ಸಿಂಬು ಈಗ ಬೆಂಟ್ಲಿ ಒಡೆಯ

ಚೆನ್ನೈ ಎಂದ್ರೆ ಸಿನಿಮಾ ಮಂದಿಗೆ ಮೊದಲು ನೆನಪು ಬರೋದು ಅಲ್ಲಿನ ಸ್ಟೂಡಿಯೋಗಳು ಮತ್ತು ವಾಯ್ಸ್ ರೆಕಾರ್ಡಿಂಗ್ ಸ್ಟುಡಿಯೋಗಳು. ಈಗಲೂ ಕೂಡಾ ನಮ್ಮ ಸ್ಯಾಂಡಲ್‍ವುಡ್‍ನಿಂದ ಹಲವರು ಸಾಂಗ್ಸ್ ಮತ್ತು ವಾಯ್ಸ್ ರೆಕಾರ್ಡಿಂಗ್‍ಗಾಗಿ ಚೆನ್ನೈಗೆ ತೆರಳುತ್ತಾರೆ.

ಕಿಸೆಯಲ್ಲಿ 5 ಸಾವಿರಕ್ಕು ಗತಿ ಇಲ್ಲ ಎಂದಿದ್ದ, ನಟ ಸಿಂಬು ಈಗ ಬೆಂಟ್ಲಿ ಒಡೆಯ

ಸ್ಯಾಂಡಲ್‍ವುಡ್‍ನಲ್ಲಿರುವ ಹಲವಾರು ನಟರ ಮಾದರಿಯಲ್ಲೇ ದೇಶವಿದೇಶಗಳಲ್ಲಿ ಜನಪ್ರಿಯತೆಯನ್ನು ಹೊಂದಿರುವ ನಟರು ಕಾಲಿವುಡ್‍‍ನಲ್ಲಿ ಇದ್ದಾರೆ. ಅದರಲ್ಲಿ ಮೊದಲನೆಯ ತಲೆಮಾರಿನ ನಟರಾದ ಎಂಜಿಆರ್-ಶಿವಾಜಿ, ಎರಡನೆಯ ತಲೆಮಾರಿನಲ್ಲಿ ರಜಿನಿಕಾಂತ್-ಕಮಲ್ ಹಾಸನ್, ಮೂರನೆಯ ತಲೆಮಾರಿನಲ್ಲಿ ವಿಜಯ್-ಅಜಿತ್ ಮತ್ತು ಪ್ರಸ್ತುತ ತಲೆಮಾರಿನಲ್ಲಿ ಸಿಂಬು-ಧನುಷ್.

ಕಿಸೆಯಲ್ಲಿ 5 ಸಾವಿರಕ್ಕು ಗತಿ ಇಲ್ಲ ಎಂದಿದ್ದ, ನಟ ಸಿಂಬು ಈಗ ಬೆಂಟ್ಲಿ ಒಡೆಯ

ಆದರೆ ಕಾಲಿವುಡ್‍ನಲ್ಲಿನ ಪ್ರಸ್ತುತ ತಲೆಮಾರಿನಲ್ಲಿರುವ ಸಿಂಬು ಮತ್ತು ಧನುಷ್, ಕೇವಲ ಅವರ ನಟನೆಗೆ ಮಾತ್ರವಲ್ಲದೆ ತಮ್ಮಲಿನ ಇನ್ನಿತರೆ ಕಲೆಗಳನ್ನು ಬಹಿರಂಗಗೊಳಿಸಿ ಸ್ಟಾರ್‍‍ಡಮ್ ಅನ್ನು ಪಡೆದುಕೊಂಡಿದ್ದಾರೆ.

ಕಿಸೆಯಲ್ಲಿ 5 ಸಾವಿರಕ್ಕು ಗತಿ ಇಲ್ಲ ಎಂದಿದ್ದ, ನಟ ಸಿಂಬು ಈಗ ಬೆಂಟ್ಲಿ ಒಡೆಯ

ಈ ಮಾರ್ಗದಲ್ಲಿ ಹೇಳುವುದಾದರೆ ಧನುಶ್ ಸಿಂಬುಗಿಂತಾ ಹೆಚ್ಚು ಮುನ್ನುಗ್ಗುತ್ತಿದ್ದು, ಇದೀಗ ಹಾಲಿವುಡ್ ಚಿತ್ರದಲ್ಲಿ ಕೂಡಾ ನಟಿಸುತ್ತಿದ್ದಾರೆ. ಸಿಂಬು ಮಾತ್ರ ಇನ್ನು ಕಾಲಿವುಡ್‍ನಲ್ಲಿಯೆ ಉಳಿದಿದ್ದಾರೆ.

ಕಿಸೆಯಲ್ಲಿ 5 ಸಾವಿರಕ್ಕು ಗತಿ ಇಲ್ಲ ಎಂದಿದ್ದ, ನಟ ಸಿಂಬು ಈಗ ಬೆಂಟ್ಲಿ ಒಡೆಯ

ಮೇಲೆ ಹೇಳಿರುವ ಹಾಗೆ ಸುಮಾರು ಮೂರು ಚಿತ್ರಗಳು ಫ್ಲ್ಯಾಪ್ ಆಗಿದ್ದು, ಒಂದು ಪತ್ರಿಕಾಗೋಷ್ಠಿಯೊಂದರಲ್ಲಿ ನನ್ನ ಬಳಿ ಈಗ 5000ರೂ ಕೂಡಾ ಇಲ್ಲ, ಖರ್ಚಿಗೆ ಅಮ್ಮನ ಹತ್ತಿರ ದುಡ್ಡು ತೆಗೆದುಕೊಳ್ಳುತಿದ್ದೀನಿ ಎಂದು ಹೇಳಿ ಇದೀಗ ಸುಮಾರು ರೂ. 4.43 ಕೋಟಿ ಬೆಲೆಬಾಳುವ ಬೆಂಟ್ಲಿ ಕಾಂಟಿನೆಂಟಲ್ ಜಿಟಿ ಕಾರನ್ನು ಖರೀದಿಸಿರುವುದು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.

ಕಿಸೆಯಲ್ಲಿ 5 ಸಾವಿರಕ್ಕು ಗತಿ ಇಲ್ಲ ಎಂದಿದ್ದ, ನಟ ಸಿಂಬು ಈಗ ಬೆಂಟ್ಲಿ ಒಡೆಯ

ಕಾಲಿವುಡ್‍ನಲ್ಲಿ ಮನ್ಮಧನ್, ವಾಣಂ, ವಲ್ಲವನ್, ಮತ್ತು ಇನ್ನಿತರೆ ಸಿನಿಮಾಗಳಲ್ಲಿ ಹಿಟ್ ನೀಡಿರುವ ಈತ ವಿವಾದಾತ್ಮಕ ಸುದ್ಧಿಗಳಿಗೂ ಫೇಮಸ್ ಎಂದು ತಿಳಿದೆ ಇದೆ. ಇತ್ತೀಚೆಗೆ ನಡೆದ ಕಾವೇರಿ ವಿವಾದದಲ್ಲೂ ಕನ್ನಡಿಗರ ಪರ ನಿಂತು ನಮ್ಮ ಕನ್ನಡಿಗರ ಮನ ಗೆದ್ದು, ಈಗಲೂ ಸಹ ನಮ್ಮ ಪರವಾಗಿಯೆ ಇದ್ದಾರೆ.

MOST READ: ಜಾವಾ ಹವಾ ಶುರು - ಒಟ್ಟು ಎರಡು ಬೈಕ್‍ಗಳನ್ನು ಬಿಡುಗಡೆಗೊಳಿಸಿದ ಜಾವಾ

ಕಿಸೆಯಲ್ಲಿ 5 ಸಾವಿರಕ್ಕು ಗತಿ ಇಲ್ಲ ಎಂದಿದ್ದ, ನಟ ಸಿಂಬು ಈಗ ಬೆಂಟ್ಲಿ ಒಡೆಯ

ಇನ್ನು ನಟ ಸಿಂಬು ಖರೀದಿಸಿದ ಬೆಂಟ್ಲಿ ಕಾಂಟೆನೆಂಟಲ್ ಜಿಟಿ ಕಾರಿನ ಬಗ್ಗೆ ಹೇಳುವುದಾರೆ, ಇದು ಅಮೆರಿಕಾ ಮೂಲದ ವಾಹನ ತಯಾರಕ ಸಂಸ್ಥೆ ಬೆಂಟ್ಲಿಯಲ್ಲಿ ಈ ಕಾರು ಹೆಚ್ಚು ಜನಪ್ರಿಯತೆಯನ್ನು ಪಡೆದುಕೊಂಡಿದ್ದು, ಎಕ್ಸ್ ಶೋರಂ ಪ್ರಕಾರ ರೂ. 3.58 ಕೋಟಿಗೆ ಮಾರಾಟದ ಬೆಲೆಯನ್ನು ಪಡೆದುಕೊಂಡಿದೆ.

ಕಿಸೆಯಲ್ಲಿ 5 ಸಾವಿರಕ್ಕು ಗತಿ ಇಲ್ಲ ಎಂದಿದ್ದ, ನಟ ಸಿಂಬು ಈಗ ಬೆಂಟ್ಲಿ ಒಡೆಯ

ಎಂಜಿನ್ ಸಾಮರ್ಥ್ಯ

ಎರಡನೆಯ ತಲೆಮಾರಿನ ಬೆಂಟ್ಲಿ ಕಾಂಟಿನೆಂಟಲ್ ಜಿಟಿ ಕಾರು 5998ಸಿಸಿ, ಡಿವಿಡಿ ಟರ್ಬೋಚಾರ್ಜ್ಡ್ ಎಂಜಿನ್ ಸಹಾಯದಿಂದ 567ಬಿಹೆಚ್‍ಪಿ ಮತ್ತು 700ಎನ್ಎಮ್ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದುಕೊಂಡಿದ್ದು, ಎಂಜಿನ್ ಅನ್ನು 8 ಸ್ಪೀಡ್ ಆಟೋಮ್ಯಾಟಿಕ್ ಗೇರ್‍‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ.

ಕಿಸೆಯಲ್ಲಿ 5 ಸಾವಿರಕ್ಕು ಗತಿ ಇಲ್ಲ ಎಂದಿದ್ದ, ನಟ ಸಿಂಬು ಈಗ ಬೆಂಟ್ಲಿ ಒಡೆಯ

ಒಟ್ಟು 20 ಬಣ್ಣಗಳಲ್ಲಿ ಖರೀದಿಗೆ ಲಭ್ಯವಿರುವ ಈ ಬೆಂಟ್ಲಿ ಕಾಂಟಿನೆಂಟಲ್ ಜಿಟಿ ಕಾರು, ಗಂಟೆಗೆ 318ಕಿಲೋಮೀಟರ್ ವೇಗದಲ್ಲಿ ಚಲಿಸುವ ಟಾಪ್ ಸ್ಪೀಟ್ ಮತ್ತು ಒಂದು ಲೀಟರ್‍‍ಗೆ ಸುಮಾರು 10.1 ಕಿಲೋಮೀಟರ್ ಮೈಲೇಜ್ ಅನ್ನು ನೀಡುತ್ತದೆ.

ಕಿಸೆಯಲ್ಲಿ 5 ಸಾವಿರಕ್ಕು ಗತಿ ಇಲ್ಲ ಎಂದಿದ್ದ, ನಟ ಸಿಂಬು ಈಗ ಬೆಂಟ್ಲಿ ಒಡೆಯ

ಬೆಂಟ್ಲಿ ಕಾಂಟಿನೆಂಟಲ್ ಜಿಟಿ ಐಷಾರಾಮಿ ಕರು 4807ಎಂಎಂ ಉದ್ದ, 2226ಎಂಎಂ ಅಗಲ ಮತ್ತು 1401ಎಂಎಂನ ಎತ್ತರವನ್ನು ಪಡೆದುಕೊಂಡಿದ್ದು, 2746ಎಂಎಂ ವ್ಹೀಲ್ ಬೇಸ್, 142ಎಂಎಂ ಗ್ರೌಂಡ್ ಕ್ಲಿಯರೆನ್ಸ್, 358ಲೀಟರ್‍‍ನ ಬೂಟ್ ಸ್ಪೇಸ್ ಅನ್ನು ಹೊಂದಿದೆ.

MOST READ: ಬಿಡುಗಡೆಗೊಂಡ ಆರ್‍ಇ 650 ಟ್ವಿನ್ ಬೈಕ್‍ಗಳು - ಬೆಲೆ ಕೇಳಿದ್ರೆ ಈಗಲೇ ಬುಕ್ ಮಾಡ್ತಿರ..!

ಕಿಸೆಯಲ್ಲಿ 5 ಸಾವಿರಕ್ಕು ಗತಿ ಇಲ್ಲ ಎಂದಿದ್ದ, ನಟ ಸಿಂಬು ಈಗ ಬೆಂಟ್ಲಿ ಒಡೆಯ

ಇನ್ನು ಪ್ರಯಾಣಕರ ಸುರಕ್ಷತೆಗಾಗಿ ಬೆಂಟ್ಲಿ ಕಾಂಟಿನೆಂಟಲ್ ಕಾರಿನಲ್ಲಿ 6 ಏರ್‍‍‍ಬ್ಯಾಗ್‍ಗಳು, ಹಿಲ್ ಅಸ್ಸಿಸ್ಟ್, ಎಂಜಿನ್ ಇಮ್ಮೊಬಿಲೈಜರ್, ಟ್ರಾಕ್ಷನ್ ಕಂಟ್ರೋಲ್, ಪಾರ್ಕಿಂಗ್ ಅಸ್ಸಿಸ್ಟಂನ್ಸ್, ಚೈಲ್ಡ್ ಸೇಫ್ಟಿ ಲಾಕ್, ಐಎಸ್ಒ ಫಿಕ್ಸ್, ಸೆಂಟ್ರಲ್ ಲಾಕಿಂಗ್, ಎಬಿಎಸ್, ಇಬಿಡಿ, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ ಮತ್ತು ಇನ್ನಿತರೆ ಸುರಕ್ಷಾ ಸೌಲಭ್ಯಗಳನ್ನು ಒದಗಿಸಲಾಗಿದೆ.

Source: Behindwoods

ರಾಯಲ್ ಎನ್‍ಫೀಲ್ಡ್ ಬೈಕ್‍ಗಳಿಗೆ ಟಕ್ಕರ್ ನೀಡಲು ಬಿಡುಗಡೆಗೊಂಡ ಜಾವಾ ಮೋಟಾರ್‍‍ಸೈಕಲ್ಸ್ ಸಂಸ್ಥೆಯ ಹೊಸ ಬೈಕ್‍ಗಳ ಚಿತ್ರಗಳು ಇಲ್ಲಿದೆ ನೋಡಿ..

More from DriveSpark

Article Published On: Friday, November 16, 2018, 12:33 [IST]
English summary
CHENNAI'S FIRST GOES TO STR!
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+