ಜಾವಾ ಹವಾ ಶುರು - ಒಟ್ಟು ಎರಡು ಬೈಕ್‍ಗಳನ್ನು ಬಿಡುಗಡೆಗೊಳಿಸಿದ ಜಾವಾ

ಭಾರತದಲ್ಲಿ ಜಾವಾ ಮೋಟಾರ್‍‍ಸೈಕಲ್ಸ್ ಸಂಸ್ಥೆಯು ತಮ್ಮ ಹೊಸ ಬೈಕ್‍ಗಳನ್ನು ಪರಿಚಯಿಸುವುದರ ಬಗ್ಗೆ ಸುಳಿವು ನೀಡಿತ್ತು. ಇದೀಗ ಸಂಸ್ಥೆಯು ದೇಶಿಯ ಮಾರುಕಟ್ಟೆಗೆ ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಒಂದಲ್ಲ, ಒಟ್ಟು ಎರಡು ಬೈಕ್‍ಗಳನ್ನು ಬಿಡುಗಡೆಗೊಳಿಸಿ ರಾಯಲ್‍ ಎನ್‍ಫೀಲ್ಟ್ ಗೆ ಟಕ್ಕರ್ ನೀಡಲು ರೀ-ಎಂಟ್ರಿ ಕೊಟ್ಟಿದೆ.

ಜಾವಾ ಹವಾ ಶುರು - ಒಟ್ಟು ಎರಡು ಬೈಕ್‍ಗಳನ್ನು ಬಿಡುಗಡೆಗೊಳಿಸಿದ ಜಾವಾ

ಹೊಸ ಬೈಕಿನ ಬೆಲೆಗಳು

ಜಾವಾ, ಜಾವಾ 42 ಮತ್ತು ಪೆರಾಕ್ ಎಂಬ ಮೂರು ಹೊಸ ಬೈಕ್‍ಗಳನ್ನು ಜಾವಾ ಪರಿಚಯಿಸಿಲಿದ್ದು, ಆಕರ್ಷಕ ಬೆಲೆಯನ್ನು ಪಡೆದುಕೊಂಡಿದೆ. ಎಂಟ್ರಿ ಲೆವೆಲ್ ಜಾವಾ 42 ಬೈಕ್ ಮುಂಬೈ ಎಕ್ಸ್ ಶೋರಂ ಪ್ರಕಾರ ರೂ.1.55 ಲಕ್ಷ ಮತ್ತು ಜಾವಾ ಬೈಕ್ ರೂ. 1.65 ಲಕ್ಷದ ಮಾರಾಟದ ಬೆಲೆಯನ್ನು ಪಡೆದುಕೊಂಡಿದೆ. ಆದರೆ ಮೂರನೆಯ ಬೈಕ್ ಆದ ಬಾಬರ್ ಮಾದರಿಯ ಜಾವಾ ಪೆರಾಕ್ ಬೈಕ್ ಅನ್ನು ಕೇವಲ ಅನಾವರಣಗೊಳಿಸಿದ್ದು, ಶೀಘ್ರವೇ ಈ ಬೈಕ್ ಅನ್ನು ಸಹ ಬಿಡುಗಡೆಗೊಳಿಸುವುದರ ಬಗ್ಗೆ ಹೇಳಿಕೊಂಡಿದೆ.

ಜಾವಾ ಹವಾ ಶುರು - ಒಟ್ಟು ಎರಡು ಬೈಕ್‍ಗಳನ್ನು ಬಿಡುಗಡೆಗೊಳಿಸಿದ ಜಾವಾ

ಜಾವಾ ಬಿಡುಗಡೆಗೊಳಿಸಿದ ಈ ಎರಡು ಬೈಕ್‍ಗಳು ಈಗಾಗಲೇ ಮಾರುಕಟ್ಟೆಯಲ್ಲಿ ಹೆಚ್ಚು ನಿರೀಕ್ಷೆಯನ್ನು ಹುಟ್ಟುಹಾಕಿದ್ದು, ರಾಯಲ್ ಎನ್‍ಫೀಲ್ಡ್ ಬೈಕ್‍ಗಳೊಂದಿಗೆ ನೇರವಾಗಿ ಸ್ಪರ್ಧಿಸಲಿದೆ.

ಜಾವಾ ಹವಾ ಶುರು - ಒಟ್ಟು ಎರಡು ಬೈಕ್‍ಗಳನ್ನು ಬಿಡುಗಡೆಗೊಳಿಸಿದ ಜಾವಾ

ಮಾರುಕಟ್ಟೆಗೆ ಲಗ್ಗೆಯಿಟ್ಟ ಜಾವಾ ಮತ್ತು ಜಾವಾ 42 ಬೈಕ್‍ಗಳು ರೆಟ್ರೋ ವಿನ್ಯಾಸವನ್ನು ಪಡೆದುಕೊಂಡಿದ್ದು, ಈ ಹಿಂದೆ ಮಾರಾಟಗೊಳ್ಳುತ್ತಿದ್ದ ಬೈಕ್‍ಗಳಂತೆಯೆ ಕಾಣಲಿದೆ. ಆದರೆ ಈ ಬಾರಿ ಈ ಬೈಕ್‍ಗಳಲ್ಲಿ ಬಳಸಲಾದ ಎಂಜಿನ್ ಹೈಲೈಟ್ ಎಂದು ಹೇಳಲಾಗಿದೆ.

ಜಾವಾ ಹವಾ ಶುರು - ಒಟ್ಟು ಎರಡು ಬೈಕ್‍ಗಳನ್ನು ಬಿಡುಗಡೆಗೊಳಿಸಿದ ಜಾವಾ

ಎಂಜಿನ್ ಸಾಮರ್ಥ್ಯ

ಜಾವಾ ಮತ್ತು ಜಾವಾ 42 293ಸಿಸಿ ಲಿಕ್ವಿಡ್-ಕೂಲ್ಡ್, ಸಿಂಗಲ್ ಸಿಲೆಂಡರ್ ಎಂಜಿನ್ ಸಹಾಯದಿಂದ 27ಬಿಹೆಚ್‍ಪಿ ಮತ್ತು 28ಎನ್ಮ್ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದುಕೊಂಡಿದ್ದು, ಎಂಜಿನ್ ಅನ್ನು 6 ಸ್ಪೀಡ್ ಗೇರ್‍‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ. ಮತ್ತೊಂದು ಕಡೆ ಬಾಬರ್ ವಿನ್ಯಾಸದ ಜಾವಾ ಪೆರಾಕ್ ಬೈಕ್ 334ಸಿಸಿ ಎಂಜಿನ್ ಅನ್ನು ಪಡೆದುಕೊಳ್ಳಲಿದೆ.

ಜಾವಾ ಹವಾ ಶುರು - ಒಟ್ಟು ಎರಡು ಬೈಕ್‍ಗಳನ್ನು ಬಿಡುಗಡೆಗೊಳಿಸಿದ ಜಾವಾ

ಲಭ್ಯವಿರುವ ಬಣ್ಣಗಳು

ಜಾವಾ ಬಿಡುಗಡೆಗೊಳಿಸಿದ ಈ ಎರಡೂ ಬೈಕ್‍ಗಳು ಆಕರ್ಷಕ ಬಣ್ಣದಲ್ಲಿ ಖರೀದಿಗೆ ಲಭ್ಯವಿದೆ. ಜಾವಾ ಬೈಕ್ - ಜಾವಾ ಬ್ಲಾಕ್, ಜಾವಾ ಮರೂನ್ ಮತ್ತು ಜಾವಾ ಗ್ರೇ ಎಂಬ ಮೂರು ಬಣ್ಣಗಳಲ್ಲಿ ಲಭ್ಯವಿದೆ.

READ MORE: ಇಂಧನಗಳ ಬೆಲೆ ಏರಿಳಿತದಲ್ಲಿ ಪ್ರಧಾನಿ ಮೋದಿ ಆಟ ಬಲ್ಲವರಾರು?

ಜಾವಾ ಹವಾ ಶುರು - ಒಟ್ಟು ಎರಡು ಬೈಕ್‍ಗಳನ್ನು ಬಿಡುಗಡೆಗೊಳಿಸಿದ ಜಾವಾ

ಇನ್ನು ಜಾವಾ 42 ಬೈಕ್ ಹಾಲಿಸ್ ಟೀಲ್, ಗ್ಲಾಕ್ಟಿಕ್ ಗ್ರೀನ್, ಸ್ಟಾರ್‍‍ಲೈಟ್ ಬ್ಲೂ, ಲುಮೊಸ್ ಲೈಮ್, ನೆಬ್ಯುಲಾ ಬ್ಲೂ ಮತ್ತು ಕೊಮೆಟ್ ರೆಡ್ ಎಂಬ ಆರು ಬಣ್ಣಗಳಲ್ಲಿ ಖರೀದಿಗೆ ಲಭ್ಯವಿದೆ.

ಜಾವಾ ಹವಾ ಶುರು - ಒಟ್ಟು ಎರಡು ಬೈಕ್‍ಗಳನ್ನು ಬಿಡುಗಡೆಗೊಳಿಸಿದ ಜಾವಾ

ಹೊಸ ಜಾವಾ ಬೈಕ್ ಖರೀದಿ ಹೇಗೆ.?

ಜಾವಾ ಸಂಸ್ಥೆಯು ಬಿಡುಗಡೆಗೊಳಿಸಿದ ಜಾವಾ ಮತ್ತು ಜಾವಾ 42 ಬೈಕ್‍ಗಳನ್ನು ಖರೀದಿಸಲು ಇಚ್ಛಿಸುವ ಗ್ರಾಹಕರು, ನಿಮ್ಮ ಸಮೀಪದಲ್ಲಿರುವ ಮಹೀಂದ್ರಾ ಡೀಲರ್‍‍ಗಳ ಹತ್ತಿರ ರೂ.5000 ಹಣವನ್ನು ಮುಂಗಡವಾಗಿ ಪಾವತಿಸಿ ಪ್ರೀ ಬುಕ್ಕಿಂಗ್ ಮಾಡಿಕೊಳ್ಳಬಹುದಾಗಿದೆ.

ಜಾವಾ ಹವಾ ಶುರು - ಒಟ್ಟು ಎರಡು ಬೈಕ್‍ಗಳನ್ನು ಬಿಡುಗಡೆಗೊಳಿಸಿದ ಜಾವಾ

ಭಾರತದಲ್ಲಿ 80ರ ದಶಕದಲ್ಲಿ ತನ್ನದೆ ಆದ ಜನಪ್ರಿಯತೆ ಸಾಧಿಸಿ ಕ್ಲಾಸಿಕ್ ಬೈಕ್ ಪ್ರಿಯರ ಕ್ರೇಜ್‌ಗೆ ಕಾರಣವಾಗಿದ್ದ ಜಾವಾ ಸಂಸ್ಥೆಯು ತದನಂತರದ ದಿನಗಳಲ್ಲಿ ಭಾರೀ ನಷ್ಟ ಅನುಭವಿಸುವ ಮೂಲಕ ಮಾರುಕಟ್ಟೆಯಿಂದಲೇ ನಿರ್ಗಮಿಸಿತ್ತು.

ಜಾವಾ ಹವಾ ಶುರು - ಒಟ್ಟು ಎರಡು ಬೈಕ್‍ಗಳನ್ನು ಬಿಡುಗಡೆಗೊಳಿಸಿದ ಜಾವಾ

ಆ ಬಳಿಕ ಬಿಎಸ್ಎ ಮೋಟಾರ್ ಸೈಕಲ್ ಸಂಸ್ಥೆಯ ಪಾಲಾಗಿದ್ದ ಜಾವಾ ಸಂಸ್ಥೆಯು ವಿವಿಧ ಮಾದರಿಯ ಬೈಕ್‌ಗಳನ್ನು ನಿರ್ಮಿಸಿದ್ದರೂ ಯಾವುದೇ ಸಂಚಲನ ಮೂಡಿಸಲಿಲ್ಲ. ಇದಾದ ನಂತರ 2016ರಲ್ಲಿ ಬಿಎಸ್ಎ ಸಂಸ್ಥೆಯಲ್ಲಿ ಮಹೀಂದ್ರಾ ಸಂಸ್ಥೆಯು ಪಾಲು ಹೊಂದುವ ಮೂಲಕ ಜಾವಾ ಸಂಸ್ಥೆಯನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿತು.

MOST READ: ಬಿಡುಗಡೆಗೊಂಡ ಆರ್‍ಇ 650 ಟ್ವಿನ್ ಬೈಕ್‍ಗಳು - ಬೆಲೆ ಕೇಳಿದ್ರೆ ಈಗಲೇ ಬುಕ್ ಮಾಡ್ತಿರ..!

ಜಾವಾ ಹವಾ ಶುರು - ಒಟ್ಟು ಎರಡು ಬೈಕ್‍ಗಳನ್ನು ಬಿಡುಗಡೆಗೊಳಿಸಿದ ಜಾವಾ

ಡ್ರೈವ್‍ಸ್ಪಾರ್ಕ್ ಕನ್ನಡ ಅಭಿಪ್ರಾಯ

ಮೇಲೆ ಹೇಳಿರುವ ಹಾಗೆ ಜಾವಾ ಮೋಟಾರ್‍‍ಸೈಕಲ್ಸ್ ಸಂಸ್ಥೆಯು 70 ಮತ್ತು 80ರ ದಶಕದಲ್ಲಿ ದೇಶಿಯ ಮಾರುಕಟ್ಟೆಯಲ್ಲಿ ಹೆಚ್ಚಾಗಿ ಸದ್ದು ಮಾಡಿತ್ತು. ಆದರೆ ಇದೀಗ ಮತ್ತೆ ಮಾರುಕಟ್ಟೆಯಲ್ಲಿ ಸದ್ದು ಮಾಡಲು ರೀ-ಎಂಟ್ರಿ ನೀಡಿದ್ದು, ರಾಯಲ್ ಎನ್‍‍ಫೀಲ್ಡ್ ಸಂಸ್ಥೆಯಲ್ಲಿರುವ 350ಸಿಸಿ ಬೈಕ್‍ಗಳಿಗೆ ಪೈಪೋಟಿ ನೀಡಲಿದೆ.

Most Read Articles

Kannada
English summary
New Jawa, Jawa 42 And Jawa Perak Motorcycles Launched In India; Prices Start At Rs 1.55 Lakh.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X