Bajaj: ಕಪ್ ಗೆದ್ದು 'ಬಜಾಜ್ ಚೇತಕ್' ಮನೆಗೆ ಕೊಂಡೊಯ್ದ T20 RCB ಸಾಧಕಿಯರು

ಪ್ರಮುಖ ದ್ವಿಚಕ್ರ ವಾಹನ ತಯಾರಕ ಕಂಪನಿಯಾದ ಬಜಾಜ್ (Bajaj) ಆಟೋ ಲಿಮಿಟೆಡ್, ಈ ವರ್ಷದ ಮಹಿಳಾ ಟಿ20 ಲೀಗ್‌ನ ಚಾಂಪಿಯನ್‌ಗಳಾದ ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bangalore) ಮಹಿಳಾ ತಂಡವನ್ನು ಅಭಿನಂದಿಸಿದೆ. ಸೀಸನ್ ಉದ್ದಕ್ಕೂ ಅವರ ಅತ್ಯುತ್ತಮ ಪ್ರದರ್ಶನ ಮತ್ತು ಹೋರಾಟದ ಮನೋಭಾವವನ್ನು ಗುರುತಿಸಿ ಪ್ರಶಸ್ತಿ ವಿಜೇತ ತಂಡದ ಪ್ರತಿಯೊಬ್ಬ ಸದಸ್ಯರಿಗೂ ಹೊಸ ಚೇತಕ್ ಸಿ25 (Chetak C25) ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಉಡುಗೊರೆಯಾಗಿ ನೀಡುವುದಾಗಿ ಘೋಷಿಸಿದೆ.

"2026 ರ ಐತಿಹಾಸಿಕ ವಿಜಯಕ್ಕಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮಹಿಳೆಯರಿಗೆ ಅಭಿನಂದನೆಗಳು. ಈ ಪಾಲುದಾರಿಕೆಯು ನಮ್ಮ ಘನ ಅಡಿಪಾಯವನ್ನು ಹೊಸ ಪೀಳಿಗೆಯ ಮಹತ್ವಾಕಾಂಕ್ಷೆಯೊಂದಿಗೆ ಸಂಯೋಜಿಸುತ್ತದೆ. ಅವರ ಪ್ರಾಬಲ್ಯವನ್ನು ಆಚರಿಸಲು, ನಾವು RCB ಮಹಿಳಾ T20 ಆಟಗಾರ್ತಿಯರಲ್ಲಿ ಪ್ರತಿಯೊಬ್ಬರಿಗೂ ಹೊಸ ಚೇತಕ್ C25 ಸ್ಕೂಟರ್ ಉಡುಗೊರೆಯಾಗಿ ನೀಡುತ್ತಿದ್ದೇವೆ ಎಂದು ಬಜಾಜ್ ಮಾರ್ಕೆಟಿಂಗ್ ಅಧ್ಯಕ್ಷ ಸುಮೀತ್ ನಾರಂಗ್ ಹೇಳಿದರು.

bajaj-gifted-to-rcb-womens-team-with-all-new-chetak-c25

ವೇಗವಾಗಿ ಚಲಿಸುವ ನಗರ ಜೀವನಕ್ಕಾಗಿ ವಿನ್ಯಾಸಗೊಳಿಸಲಾದ ಚೇತಕ್ C25 ಸ್ಕೂಟರ್, RCB ಮಹಿಳಾ ಚಾಂಪಿಯನ್‌ಶಿಪ್ ಓಟವನ್ನು ವ್ಯಾಖ್ಯಾನಿಸುವ ಗುಣಗಳನ್ನು ಪ್ರತಿಬಿಂಬಿಸುತ್ತದೆ. ಚುರುಕುತನ, ಒತ್ತಡದಲ್ಲಿ ಶಾಂತತೆ ಮತ್ತು ಪ್ರತಿಯೊಂದು ಸವಾಲನ್ನು ಎದುರಿಸುವ ಆತ್ಮವಿಶ್ವಾಸ, ಹಾಗೆಯೇ ಘನತೆ, ಸ್ಥಿರತೆ ಮತ್ತು ವಿಶ್ವಾಸಾರ್ಹತೆಯ ಮೂಲ ಚೇತಕ್ ಮೌಲ್ಯಗಳಲ್ಲಿ ನೆಲೆಗೊಂಡಿದೆ ಎಂದು ಬಜಾಜ್ ಹೇಳಿದೆ.

ಚೇತಕ್ C25 ವಿಶೇಷತೆಗಳು

ಬಜಾಜ್ ಚೆತಕ್ ಸಿ25 ಸ್ಕೂಟರ್ 107 ಕೆ.ಜಿ ತೂಗುತ್ತದೆ, ಇದು ನಗರ ಪ್ರಯಾಣಕ್ಕಾಗಿ ಹಗುರವಾದ ಮತ್ತು ಚುರುಕಾದ ಎಲೆಕ್ಟ್ರಿಕ್ ಸ್ಕೂಟರ್ ಆಗಿದೆ. ಇದರ ಸಣ್ಣ ಗಾತ್ರವು ಜನಸಂದಣಿಯಿಂದ ಕೂಡಿದ ನಗರ ಬೀದಿಗಳಲ್ಲಿಯೂ ಉತ್ತಮವಾಗಿ ಓಡಿಸಬಹುದು. ಚೆತಕ್ ಸಿ25 ಸ್ಕೂಟರ್ 2.25 kWh ಬ್ಯಾಟರಿಯನ್ನು ಒಳಗೊಂಡಿದ್ದು, ಒಮ್ಮೆ ಚಾರ್ಜ್‌ ಮಾಡಿ 113 ಕಿ.ಮೀ ಓಡಿಸಬಹುದು ಎಂದು ಕಂಪನಿ ಹೇಳಿಕೊಂಡಿದೆ.

bajaj-gifted-to-rcb-womens-team-with-all-new-chetak-c25

ಪ್ರಸ್ತುತ ಕೇವಲ 91,399 ರೂ. (ಎಕ್ಸ್-ಶೋರೂಂ) ಬೆಲೆಗೆ ಲಭ್ಯವಿರುವ ಈ ಹೊಸ ಸ್ಕೂಟರ್ ಅತ್ಯಂತ ಕೈಗೆಟುಕುವ ಚೇತಕ್ ಎಲೆಕ್ಟ್ರಿಕ್ ಸ್ಕೂಟರ್ ಆಗಿದೆ. ಪರ್ಫಾಮೆನ್ಸ್‌ನಲ್ಲೂ ಉತ್ತಮವಾಗಿದ್ದು, ಈ ಸ್ಕೂಟರ್ ಗಂಟೆಗೆ 55 ಕಿ.ಮೀ ಟಾಪ್ ಸ್ಪೀಡ್ ಮತ್ತು ಕೇವಲ 2.25 ಗಂಟೆಗಳಲ್ಲಿ ಶೇ80 ರಷ್ಟು ಚಾರ್ಜ್ ಆಗುತ್ತದೆ. ಹಾಗೆಯೇ ಶೇ100 ರಷ್ಟು ಚಾರ್ಜ್ ಮಾಡಲು ಸುಮಾರು 3 ಗಂಟೆ 45 ನಿಮಿಷಗಳನ್ನು ತೆಗೆದುಕೊಳ್ಳುತ್ತದೆ.

ಬಜಾಜ್ ಚೇತಕ್ C25 ಫ್ಲೋರ್‌ಬೋರ್ಡ್-ಮೌಂಟೆಡ್ 2.5kWh ಬ್ಯಾಟರಿಯನ್ನು 750W ಆಫ್‌ಬೋರ್ಡ್ ಚಾರ್ಜರ್‌ನಿಂದ ಚಾರ್ಜ್ ಮಾಡಬಹುದು. ದೈನಂದಿನ ನಗರ ಬಳಕೆಗೆ ಸಂಪೂರ್ಣವಾಗಿ ಹೊಂದಿಕೊಳ್ಳುವ ಈ ಸ್ಕೂಟರ್ 25-ಲೀಟರ್ ಬೂಟ್ ಜಾಗವನ್ನು ನೀಡುವ ಮೂಲಕ ಹೆಚ್ಚುವರಿ ಸರಕುಗಳನ್ನು ಸಾಗಿಸಲು ಅನುಕೂಲತೆ ನೀಡುತ್ತದೆ. ಬಜಾಜ್ 3 ವರ್ಷಗಳು ಅಥವಾ 50,000 ಕಿ.ಮೀ ಬ್ಯಾಟರಿ ವಾರೆಂಟಿಯನ್ನು ನೀಡುತ್ತಿದೆ.

bajaj-gifted-to-rcb-womens-team-with-all-new-chetak-c25

ಬಜಾಜ್ ಚೇತಕ್ C25 ನಲ್ಲಿ ನೀಡಲಾದ ಹಿಲ್ ಹೋಲ್ಡ್ ಅಸಿಸ್ಟ್ ಮತ್ತು ಪ್ಯಾನಿಕ್ ಲ್ಯಾಂಪ್‌ನಂತಹ ವೈಶಿಷ್ಟ್ಯಗಳ ಸೇರ್ಪಡೆಯು ಸವಾರಿ ಅನುಭವವನ್ನು ಮತ್ತಷ್ಟು ಸುಧಾರಿಸುತ್ತದೆ. ಇದ್ದಕ್ಕಿದ್ದಂತೆ ಬ್ರೇಕಿಂಗ್ ಸಮಯದಲ್ಲಿ ಪ್ಯಾನಿಕ್ ಲ್ಯಾಂಪ್, ಟೇಲ್ ಲ್ಯಾಂಪ್ ಮಿಟುಕಿಸುತ್ತದೆ, ಇದು ಹಿಂದೆ ಬರುವ ವಾಹನಗಳಿಗೆ ಎಚ್ಚರಿಕೆ ನೀಡುತ್ತದೆ. ಈ ವೈಶಿಷ್ಟ್ಯಗಳು ಸವಾರರ ವಿಶ್ವಾಸ ಮತ್ತು ಸುರಕ್ಷತೆ ಹೆಚ್ಚಿಸುತ್ತವೆ.

ಬಜಾಜ್ ಚೆತಕ್ ಸಿ25 ಆರಾಮದಾಯಕ ಸವಾರಿ ಅನುಭವವನ್ನು ನೀಡಲು ಅಗಲವಾದ ಆಸನ ಮತ್ತು ಸಾಕಷ್ಟು ಲೆಗ್‌ರೂಮ್ ಹೊಂದಿದೆ. ಫ್ಲಾಟ್ ಹ್ಯಾಂಡಲ್‌ಬಾರ್ ವಿನ್ಯಾಸವು ವಿಶೇಷವಾಗಿ ನಗರ ದಟ್ಟಣೆಯಲ್ಲಿ ಸವಾರಿ ಸೌಕರ್ಯ ಮತ್ತು ಉತ್ತಮ ಕಂಟ್ರೋಲ್ ನೀಡುತ್ತದೆ. ಮುಂಭಾಗದಲ್ಲಿ ಎರಡು ಕಪ್‌ಹೋಲ್ಡರ್‌ಗಳನ್ನು ಇರಿಸಲಾಗಿದ್ದು, ಸೀಟಿನ ಕೆಳಗಿನ ಶೇಖರಣೆಯು 25 ಲೀಟರ್ ಸಾಮರ್ಥ್ಯವನ್ನು ಒದಗಿಸುತ್ತದೆ.

More from DriveSpark

Article Published On: Saturday, February 7, 2026, 10:20 [IST]
English summary
Bajaj gifted to rcb womens team with all new chetak c25
Read more on bajaj india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+