Bajaj: ಚೇತಕ್ EV ಖರೀದಿ ಗೊಂದಲಗಳು: ಎಲ್ಲಾ ಪ್ರಶ್ನೆಗಳಿಗೆ ಉತ್ತರ... ಈ 5 ವಿಷಯಗಳು ಯಾರೂ ಹೇಳಲ್ಲ!

ಇಂಧನ ಬೆಲೆಗಳ ಏರಿಕೆಯಿಂದಾಗಿ ಜನ ಎಲೆಕ್ಟ್ರಿಕ್ ಸ್ಕೂಟರ್‌ಗಳತ್ತ ಮುಖ ಮಾಡಿದ್ದಾರೆ. ಇವಿ ಮಾರುಕಟ್ಟೆಯು ಈಗ ವೇಗವಾಗಿ ಬೆಳೆಯುತ್ತಿದ್ದು, ಹಲವು ಬ್ರ್ಯಾಂಡ್‌ಗಳು ಈ ವಿಭಾಗದಲ್ಲಿ ಪೈಪೋಟಿಯೊಂದಿಗೆ ಮುನ್ನುಗ್ಗುತ್ತಿವೆ. ಆದರೆ ಬಜಾಜ್ ತನ್ನ ಐಕಾನಿಕ್ ಚೇತಕ್ ಸ್ಕೂಟರ್ ಮೂಲಕ ಎಲೆಕ್ಟ್ರಿಕ್ ವಿಭಾಗಕ್ಕೆ ರೀ-ಎಂಟ್ರಿ ಕೊಟ್ಟು ಉತ್ತಮ ಬೇಡಿಕೆ ಪಡೆದುಕೊಂಡಿದೆ. ಪ್ರಸ್ತುತ ಚೇತಕ್ ಎಲೆಕ್ಟ್ರಿಕ್ ಸ್ಕೂಟರ್‌ಗಳ ಖರೀದಿ ಹೆಚ್ಚಾಗಿದ್ದು, ಹಲವರಿಗೆ ಈ ಸ್ಕೂಟರ್ ಕುರಿತು ಸಂಪೂರ್ಣ ತಿಳಿದಿಲ್ಲ. ಅಂದರೆ ಯಾವ ವೇರಿಯೆಂಟ್ ಅವರ ಆದ್ಯತೆಗಳಿಗೆ ಹೊಂದಿಕೊಳ್ಳುತ್ತದೆ ಎಂಬುದರ ವಿವರಗಳನ್ನು ತಿಳಿದುಕೊಳ್ಳಲು ಬಯಸುತ್ತಿದ್ದಾರೆ. ಅಂಥವರಿಗಾಗಿ ಇಲ್ಲಿ ಚೇತಕ್ ಕುರಿತ ಸಂಪೂರ್ಣ ಮಾಹಿತಿ ಒದಗಿಸಲಾಗಿದೆ.

ಕೇವಲ ಒಂದು ಅಥವಾ ಎರಡು ವೇ‌ರಿಯೆಂಟ್‌ಗಳಲ್ಲಿ ಬರುವ ಅನೇಕ ಎಲೆಕ್ಟ್ರಿಕ್ ಸ್ಕೂಟರ್‌ಗಳಿಗಿಂತ ಭಿನ್ನವಾಗಿ, ಚೇತಕ್ ಈಗ ವಿಭಿನ್ನ ಬ್ಯಾಟರಿ ಸೈಜ್‌ಗಳು, ಫೀಚರ್‌ಗಳು ಮತ್ತು ಕಾರ್ಯಕ್ಷಮತೆಯೊಂದಿಗೆ ಐದು ವೇರಿಯೆಂಟ್‌ಗಳಲ್ಲಿ ಬರುತ್ತದೆ. ನೀವು ಮೊದಲ ಬಾರಿಗೆ ಈ ಸ್ಕೂಟರ್ ಖರೀದಿಸುತಿದ್ದರೆ, ಸರಿಯಾದದನ್ನು ಆಯ್ಕೆ ಮಾಡುವುದು ಸ್ವಲ್ಪ ಗೊಂದಲಮಯವಾಗಿಸುತ್ತದೆ. ಹಾಗಾಗಿ ನೀವು ತಿಳಿದುಕೊಳ್ಳಬೇಕಾದ ಐದು ವಿಷಯಗಳು ಇಲ್ಲಿವೆ.

bajaj-chetak-electric-scooter-price-features-battery-and-range-explained

ಬ್ಯಾಟರಿ ಮತ್ತು ರೇಂಜ್: ಚೇತಕ್ 2501 ವೇರಿಯೆಂಟ್ 2.5 kWh ಬ್ಯಾಟರಿ ಪ್ಯಾಕ್‌ನ್ನು ಹೊಂದಿದ್ದು, ಒಮ್ಮೆ ಚಾರ್ಜ್ ಮಾಡಿದರೆ 113 ಕಿ.ಮೀ ಓಡುತ್ತದೆ. ಚೇತಕ್ 3001 ವೇರಿಯೆಂಟ್ 3.0 kWh ಬ್ಯಾಟರಿ ಪ್ಯಾಕ್‌ನ್ನು ಹೊಂದಿದ್ದು, ಒಮ್ಮೆ ಚಾರ್ಜ್ ಮಾಡಿದರೆ 127 ಕಿ.ಮೀ ಓಡುತ್ತದೆ. ಚೇತಕ್ 3503 ವೇರಿಯೆಂಟ್ 3.5 kWh ಬ್ಯಾಟರಿ ಪ್ಯಾಕ್‌ನ್ನು ಹೊಂದಿದ್ದು, ಒಮ್ಮೆ ಚಾರ್ಜ್ ಮಾಡಿದರೆ 151 ಕಿ.ಮೀ ಓಡುತ್ತದೆ.

ಹಾಗೆಯೇ ಟಾಪ್ ವೇರಿಯೆಂಟ್‌ಗಳಾದ ಚೇತಕ್ 3502 ವೇರಿಯೆಂಟ್ 3.5 kWh ಬ್ಯಾಟರಿ ಪ್ಯಾಕ್‌ನ್ನು ಹೊಂದಿದ್ದು, ಒಮ್ಮೆ ಚಾರ್ಜ್ ಮಾಡಿದರೆ 153 ಕಿ.ಮೀ ಓಡುತ್ತದೆ. ಚೇತಕ್ 3501 ವೇರಿಯೆಂಟ್ 3.5 kWh ಬ್ಯಾಟರಿ ಪ್ಯಾಕ್‌ನ್ನು ಹೊಂದಿದ್ದು, ಒಮ್ಮೆ ಚಾರ್ಜ್ ಮಾಡಿದರೆ 153 ಕಿ.ಮೀ ಓಡುತ್ತದೆ ಎಂದು ಬಜಾಜ್ ಕಂಪನಿಯು ಹೇಳಿಕೊಂಡಿದೆ.

bajaj-chetak-electric-scooter-price-features-battery-and-range-explained

ವೇರಿಯೆಂಟ್ ಅವಲಂಬಿಸಿ ಟಾಪ್ ಸ್ಪೀಡ್: 2501 ವೇರಿಯೆಂಟ್ 60 ಕಿ.ಮೀ/ಗಂ, 3001 ವೇರಿಯೆಂಟ್ 63 ಕಿಮೀ/ಗಂ, 3503 ವೇರಿಯೆಂಟ್ 63 ಕಿಮೀ/ಗಂ, 3502 ವೇರಿಯೆಂಟ್ 73 ಕಿಮೀ/ಗಂ, 3501 ವೇರಿಯೆಂಟ್ 73 ಕಿಮೀ/ಗಂ, ಎರಡು ಟಾಪ್ ವೇರಿಯೆಂಟ್‌ಗಳಾದ 3501 ಮತ್ತು 3502 ಮುಂಭಾಗದಲ್ಲಿ ಡಿಸ್ಕ್ ಬ್ರೇಕ್ ಪಡೆದರೆ, ಉಳಿದ ವೇರಿಯೆಂಟ್‌ಗಳು ಡ್ರಮ್ ಬ್ರೇಕ್‌ಗಳನ್ನು ಪಡೆದಿವೆ.

ಚಾರ್ಜಿಂಗ್ ಸಮಯ: ಚಾರ್ಜಿಂಗ್ ಸಮಯವು ಬ್ಯಾಟರಿ ಸಾಮರ್ಥ್ಯವನ್ನು ಅವಲಂಬಿಸಿ ಬದಲಾಗುತ್ತದೆ. ಚೇತಕ್ 2501 ವೇರಿಯೆಂಟ್ 2 ಗಂಟೆ 25 ನಿಮಿಷಗಳು, 3001 ವೇರಿಯೆಂಟ್ 3 ಗಂಟೆ 50 ನಿಮಿಷಗಳು, 3503 ವೇರಿಯೆಂಟ್ 3 ಗಂಟೆ 25 ನಿಮಿಷಗಳು, 3502 ವೇರಿಯೆಂಟ್ 3 ಗಂಟೆ 25 ನಿಮಿಷಗಳು, 3501 ವೇರಿಯೆಂಟ್ 3 ಗಂಟೆ ತೆಗೆದುಕೊಳ್ಳುತ್ತದೆ.

bajaj-chetak-electric-scooter-price-features-battery-and-range-explained

ಟಾಪ್‌ ವೇರಿಯೆಂಟ್‌ಗಳಲ್ಲಿ ಹೆಚ್ಚಿನ ಫೀಚರ್ಸ್: 2501 ವೇರಿಯೆಂಟ್‌ನಲ್ಲಿ ಯಾವುದೇ ಅಪ್ಲಿಕೇಶನ್ ಸಂಪರ್ಕವಿಲ್ಲ. 3001 ಹಾಗೂ 3503 ವೇರಿಯೆಂಟ್‌ಗಳಲ್ಲಿ ಬ್ಲೂಟೂತ್ ಸಂಪರ್ಕ ನೀಡಲಾಗಿದೆ. ಟಾಪ್‌ ವೇರಿಯೆಂಟ್‌ಗಳಾದ 3502 ಹಾಗೂ 3501 ಗಳಲ್ಲಿ ಪೂರ್ಣ ಅಪ್ಲಿಕೇಶನ್ ಸಂಪರ್ಕ ಹಾಗೂ ಇತರ ವೇರಿಯೆಂಟ್‌ನಾದ್ಯಂತ ನೀಡಲಾಗುವ ಇತರ ವೈಶಿಷ್ಟ್ಯಗಳು ಸಹ ಇವುಗಳಲ್ಲಿ ಸಿಗಲಿವೆ.

ವೇರಿಯೆಂಟ್ ಮತ್ತು ಬೆಲೆ: ಬಜಾಜ್ ಪ್ರಸ್ತುತ ಚೇತಕ್ ಎಲೆಕ್ಟ್ರಿಕ್‌ನ್ನು ಐದು ವೇರಿಯೆಂಟ್‌ಗಳಲ್ಲಿ ಸಿಗಲಿದ್ದು, ಬ್ಯಾಟರಿ ಮತ್ತು ಫೀಚರ್‌ಗಳನ್ನು ಅವಲಂಬಿಸಿ ಬೆಲೆ ಬಲಾಗುತ್ತದೆ. 'ಚೇತಕ್ 2501' ವೇರಿಯೆಂಟ್ ಬೆಲೆಯು-ರೂ.87,100, 'ಚೇತಕ್ 3001' ವೇರಿಯೆಂಟ್ ಬೆಲೆಯು-ರೂ.1,02,505, 'ಚೇತಕ್ 3503' ವೇರಿಯೆಂಟ್ ಬೆಲೆಯು-ರೂ.1,09,605, 'ಚೇತಕ್ 3502' ವೇರಿಯೆಂಟ್ ಬೆಲೆಯು-ರೂ.1,22,605, 'ಚೇತಕ್ 3501' ವೇರಿಯೆಂಟ್ ಬೆಲೆಯು-ರೂ.1,34,605 ಇದೆ. (ಎಲ್ಲವೂ ಎಕ್ಸ್‌ ಶೋರೂಂ ಬೆಲೆಗಳು).

More from DriveSpark

Article Published On: Monday, March 16, 2026, 10:20 [IST]
English summary
Bajaj chetak electric scooter price features battery and range explained
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+