ಬಜಾಜ್ ಚೇತಕ್ VS ಟಿವಿಎಸ್ ಆರ್ಬಿಟರ್: ಕಮ್ಮಿ ಬೆಲೆಯ ಪರ್ಫೆಕ್ಟ್ ಸ್ಕೂಟರ್ ಯಾವುದು?

ಟಿವಿಎಸ್ ಆರ್ಬಿಟರ್ ಹಾಗೂ ಚೇತಕ್ C2501 ಸ್ಕೂಟರ್‌ಗಳು ಸದ್ಯ ಭಾರತದಲ್ಲಿ ಅತ್ಯಂತ ಕೈಗೆಟುಕುವ ಎಲೆಕ್ಟ್ರಿಕ್ ಸ್ಕೂಟರ್‌ಗಳಾಗಿವೆ. ಉತ್ತಮ ರೇಂಜ್, ಅತ್ಯುತ್ತಮ ಡಿಸೈನ್ ಹಾಗೂ ಆಕರ್ಷಕ ಫೀಚರ್ಸ್‌ನೊಂದಿಗೆ ನಗರ ಬಳಕೆಎ ಸೂಕ್ತ ಆಯ್ಕೆಯಾಗಿವೆ. ಆದರೆ ಇವೆರಲ್ಲಿ ಯಾವುದು ಬೆಸ್ಟ್, ಯಾವ ಸ್ಕೂಟರ್ ಏನೆಲ್ಲಾ ವಿಶೇಷತೆಗಳನ್ನು ಒಳಗೊಂಡಿದೆ ಎಂಬುದರ ಬಗ್ಗೆ ವಿವಿರಗಳು ಇಲ್ಲಿವೆ. ಹಾಗಾದ್ರೆ ಬನ್ನಿ ಇವುಗಳಲ್ಲಿ ಯಾವುದು ಉತ್ತಮ ರೇಂಜ್, ಫೀಚರ್ಸ್, ಅಗ್ಗದ ಬೆಲೆಯನ್ನು ಹೊಂದಿದೆ ಎಂಬುದನ್ನು ನೋಡೋಣ.

ಬೆಲೆ: ಬಜಾಜ್ ಚೇತಕ್ C2501 ಬೆಲೆ ರೂ.91,399 (ಎರಡು ಎಕ್ಸ್-ಶೋರೂಂ) ಹಾಗೂ ಟಿವಿಎಸ್ ಆರ್ಬಿಟರ್ ಬೆಲೆ ರೂ.1,06,251 ಇದೆ. ಎರಡರ ನಡುವಿನ ವ್ಯತ್ಯಾಸ ರೂ.14,852 ಇದೆ. ಡಿಸೈನ್ ವಿಷಯಕ್ಕೆ ಬಂದರೆ ಬಜಾಜ್ ಚೇತಕ್ ರೆಟ್ರೊ-ಪ್ರೇರಿತ ವಿನ್ಯಾಸವನ್ನು ಹೊಂದಿದೆ. ಡೈಮೆಂಡ್ ಆಕಾರದ ಹೆಡ್‌ಲೈಟ್ ಮತ್ತು ಇತರ ಚೇತಕ್ ಮಾದರಿಗಳಲ್ಲಿರುವ ಏಪ್ರನ್‌ಗೆ ವಿರುದ್ಧವಾಗಿ ಟರ್ನ್-ಇಂಡಿಕೇಟರ್‌ಗಳನ್ನು ಹೆಡ್‌ಲೈಟ್ ಕೌಲ್‌ಗೆ ಸೇರಿಸಲಾಗಿದೆ.

bajaj-chetak-c25-vs-tvs-orbiter-comparison-price-features-range

ಮತ್ತೊಂದೆಡೆ, ಟಿವಿಎಸ್ ಆರ್ಬಿಟರ್ ಆಧುನಿಕ ಡಿಸೈನ್ ಅಳವಡಿಸಿಕೊಂಡಿದೆ. ಇದು ಫ್ಯೂಚರಿಸ್ಟಿಕ್ ಆಗಿ ಕಾಣುವುದರಿಂದ ಸ್ಕೂಟರ್ ಸಾಕಷ್ಟು ಚೆನ್ನಾಗಿ ಲುಕ್ ನೀಡುತ್ತದೆ, ಆಧುನಿಕ ನೋಟವು ಯುವ ಸವಾರರಿಗೆ ಆಕರ್ಷಕವಾಗಿಸುತ್ತದೆ. ಈ ಸ್ಕೂಟರ್ ನಾವು ಸಾಮಾನ್ಯವಾಗಿ ಕುಟುಂಬ - ಆಧಾರಿತ ಸ್ಕೂಟರ್‌ಗಳಿಂದ ನಿರೀಕ್ಷಿಸುವಂತೆ ಬಾಕ್ಸಿ ವಿನ್ಯಾಸವನ್ನು ಹೊಂದಿದೆ.

ಫೀಚರ್ಸ್: ಟಿವಿಎಸ್ ಆರ್ಬಿಟರ್ ಆಯತಾಕಾರದ ಕನ್ಸೋಲ್ ಹೊಂದಿದ್ದರೇ, ಬಜಾಜ್ ಚೇತಕ್ ವೃತ್ತಾಕಾರದ ಕಲರ್ LCD ಕನ್ಸೋಲ್ ಪಡೆದಿದೆ. ಎರಡೂ ಎಲ್ಲಾ ಅಗತ್ಯ ಮಾಹಿತಿಗಳನ್ನು ಪ್ರದರ್ಶಿಸುತ್ತವೆ. ಆರ್ಬಿಟರ್‌ನ ಕನ್ಸೋಲ್ ಕರೆ/ಎಸ್‌ಎಂಎಸ್ ಎಚ್ಚರಿಕೆಗಳು, ಟರ್ನ್-ಬೈ-ಟರ್ನ್ ನ್ಯಾವಿಗೇಷನ್ ಮತ್ತು OTA (ಓವರ್-ದಿ-ಏರ್) ಅಪ್‌ಡೇಟ್‌ಗಳನ್ನು ಸ್ಟ್ಯಾಂಡರ್ಡ್ ಆಗಿ ನೀಡಲಾಗಿದೆ.

bajaj-chetak-c25-vs-tvs-orbiter-comparison-price-features-range

ಚೇತಕ್ ಸಂಪರ್ಕಿತ ವೈಶಿಷ್ಟ್ಯಗಳಿಗಾಗಿ ನೀವು ಟೆಕ್‌ಪ್ಯಾಕ್‌ ಪಡೆಯಬೇಕು ಇದಕ್ಕಾಗಿ ರೂ.3,000 ಪಾವತಿಸಬೇಕಾಗುತ್ತದೆ. ಆರ್ಬಿಟರ್ 34-ಲೀಟರ್ ಅಂಡರ್ ಸೀಟ್ ಸ್ಟೋರೇಜ್, ಚೇತಕ್ 25-ಲೀಟರ್ ಅಂಡರ್‌ಸೀಟ್ ಸ್ಟೋರೇಜ್ ಹೊಂದಿದೆ. ಆರ್ಬಿಟರ್ ಕ್ರೂಸ್ ಕಂಟ್ರೋಲ್ ಸಹ ಪಡೆಯುತ್ತದೆ, ಇದು ಸಾಂದರ್ಭಿಕ ಹೆದ್ದಾರಿಗಳಲ್ಲಿ ಸಹಾಯಕವಾಗಿರುತ್ತದೆ.

ಪರ್ಫಾಮೆನ್ಸ್: ಬಜಾಜ್ ಚೇತಕ್ 2.2kW ಹಬ್-ಮೌಂಟೆಡ್ ಮೋಟಾರ್ ಹೊಂದಿದ್ದು, 55 ಕಿ.ಮೀ ಟಾಪ್ ಸ್ಪೀಡ್ ಹೋಗಬಲ್ಲದು. ಇದು 2.5kWh ಬ್ಯಾಟರಿ ಪ್ಯಾಕ್‌ ಹೊಂದಿದ್ದು, ಇದನ್ನು ಒಮ್ಮೆ ಚಾರ್ಜ್‌ ಮಾಡಿ 113 ಕಿ.ಮೀ ಓಡಿಸಬಹುದು. ಟಿವಿಎಸ್ ಆರ್ಬಿಟರ್ 2.5kW ಮೋಟಾರ್ ಹೊಂದಿದ್ದು, 68 ಕಿ.ಮೀ ಟಾಪ್ ಸ್ಪೀಡ್ ಹೋಗಬಲ್ಲದು. 3.1kWh ಬ್ಯಾಟರಿ ಪ್ಯಾಕ್ ಹೊಂದಿದ್ದು, ಇದನ್ನು ಒಮ್ಮೆ ಚಾರ್ಜ್‌ ಮಾಡಿ 158 ಕಿ.ಮೀ ಓಡಿಸಬಹುದು.

bajaj-chetak-c25-vs-tvs-orbiter-comparison-price-features-range

ಹಾರ್ಡ್‌ವೇರ್: ಎರಡೂ ಸ್ಕೂಟರ್‌ಗಳು ಟೆಲಿಸ್ಕೋಪಿಕ್ ಫೋರ್ಕ್ ಮತ್ತು ಟ್ವಿನ್ ರಿಯರ್ ಶಾಕ್ ಅಬ್ಸಾರ್ಬರ್ ಸೆಟಪ್ ಅನ್ನು ಹೊಂದಿವೆ. ಆದರೆ ಆರ್ಬಿಟರ್ ಎರಡೂ ತುದಿಗಳಲ್ಲಿ ಡ್ರಮ್ ಬ್ರೇಕ್‌ಗಳನ್ನು ಹೊಂದಿದೆ, ಚೇತಕ್ C2501 ಮುಂಭಾಗದಲ್ಲಿ ಡಿಸ್ಕ್ ಬ್ರೇಕ್ ಅನ್ನು ಹೊಂದಿದೆ. ಇದು ಬ್ರೇಕಿಂಗ್ ಕಾರ್ಯಕ್ಷಮತೆಯನ್ನು ಹೆಚ್ಚಿಸುತ್ತದೆ. ಹಾಗೆಯೇ ಆರ್ಬಿಟರ್ 14-ಇಂಚಿನ ಮುಂಭಾಗ ಮತ್ತು 12-ಇಂಚಿನ ಹಿಂಭಾಗದ ಅಲಾಯ್ ವೀಲ್ ಸೆಟಪ್‌ನಲ್ಲಿ ಬರುತ್ತದೆ.

ಬಜಾಜ್ (Bajaj) ಕಂಪನಿಯು ಇತ್ತೀಚೆಗಷ್ಟೆ 'ಚೇತಕ್ C2501' ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ ಮಾಡಿದ್ದು, ಇದು ಬಜಾಜ್ ಚೇತಕ್ ಸಿರೀಸ್‌ನಲ್ಲಿಯೇ ಅತ್ಯಂತ ಕೈಗೆಟುಕುವ ಎಲೆಕ್ಟ್ರಿಕ್ ಸ್ಕೂಟರ್ ಆಗಿದೆ. ಪ್ರಸ್ತುತ ಮಾರುಕಟ್ಟೆಯಲ್ಲಿ ಇದಕ್ಕೆ ನೇರ ಪ್ರತಿಸ್ಪರ್ಧಿಯಾಗಿ 'ಟಿವಿಎಸ್ ಆರ್ಬಿಟರ್' (TVS Orbiter) ಪೈಪೋಟಿ ನೀಡುತ್ತದೆ. ಇದು ಈಗಾಗಲೇ ತುಂಬಾ ಹೆಸರು ಮಾಡಿದೆ.

ನಗರ ಪ್ರಯಾಣ ಮತ್ತು ದಿನಸಿ ವಸ್ತುಗಳನ್ನು ನಿಭಾಯಿಸಬಲ್ಲ ಸರಳ ಎಲೆಕ್ಟ್ರಿಕ್ ಸ್ಕೂಟರ್ ಹುಡುಕುತ್ತಿರುವವರಿಗೆ ಬಜಾಜ್ ಚೇತಕ್ C2501 ಬೆಸ್ಟ್ ಆಯ್ಕೆಯಾಗಿದೆ. ಉತ್ತಮ ಪರ್ಫಾಮೆನ್ಸ್, ಹೆಚ್ಚಿನ ಫೀಚರ್ಸ್ ಮತ್ತು ಸ್ವಲ್ಪ ದೂರದ ಪ್ರಯಾಣ ಬಯಸುವವರಿಗೆ ಟಿವಿಎಸ್ ಆರ್ಬಿಟರ್ ಸೂಕ್ತವಾಗಿರುತ್ತದೆ. ಈ ಎರಡೂ ಸ್ಕೂಟರ್‌ಗಳ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಕಮೆಂಟ್‌ನಲ್ಲಿ ತಿಳಿಸಿ.

More from DriveSpark

Article Published On: Saturday, February 21, 2026, 15:42 [IST]
English summary
Bajaj chetak c25 vs tvs orbiter comparison price features range
Read more on bajaj india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+