Honda Dio: ಮೊನ್ನೆಯಷ್ಟೆ ಬಿಡುಗಡೆ... ಸ್ಪೋರ್ಟಿ ಡಿಯೋ 125 X: ಬೆಲೆಯೆಷ್ಟು, ವಿಶೇಷತೆಗಳೇನು?

ಪ್ರಮುಖ ದ್ವಿಚಕ್ರ ವಾಹನ ತಯಾರಕ ಕಂಪನಿಯಾಗಿರುವ ಹೋಂಡಾ, ಮೊನ್ನೆಯಷ್ಟೆ ತನ್ನ ಹೊಸ ಹೋಂಡಾ ಡಿಯೋ 125 ಎಕ್ಸ್-ಎಡಿಷನ್ (Honda Dio 125 X Edition) ಸ್ಕೂಟರ್‌ನ್ನು ರೂ. 87,733 (ಎಕ್ಸ್-ಶೋರೂಂ) ಬೆಲೆಯಲ್ಲಿ ಬಿಡುಗಡೆ ಮಾಡಿದೆ. ಕಂಪನಿಯ ಪ್ರಕಾರ ಫೀಚರ್ಸ್ ವಿಷಯದಲ್ಲಿ X ಆವೃತ್ತಿಯು ಸಾಮಾನ್ಯ ಡಿಯೋದಂತೆಯೇ ಇರುತ್ತದೆ. ಹೋಂಡಾ ಡಿಯೋ 125ನ ಪ್ರಮುಖ ಗುಣಲಕ್ಷಣಗಳನ್ನು ಬದಲಾಯಿಸದೆಯೇ ಹೊಸ ಲುಕ್ ಹಾಗೂ ಹೊಸ ಗ್ರಾಫಿಕ್ಸ್ ನೀಡಿ ಸ್ಪೋರ್ಟಿಯಾಗಿ ಡಿಸೈನ್ ಮಾಡಲಾಗಿದೆ ಎಂದು ಹೋಂಡಾ ತಿಳಿಸಿದೆ.

ಡಿಯೋ 125 X-ಎಡಿಷನ್ ಡಿಸೈನ್ ವಿಶೇಷತೆಗಳು

ಹೊಸ ಹೋಂಡಾ ಡಿಯೋ 125 ಎಕ್ಸ್-ಎಡಿಷನ್ ನವೀಕರಿಸಿದ ಗ್ರಾಫಿಕ್ಸ್ ಮತ್ತು ವಿನ್ಯಾಸ ಅಂಶಗಳೊಂದಿಗೆ ರಿಫ್ರೆಶ್ ಲುಕ್ ಬಯಸುವ ಸವಾರರಿಗಾಗಿ ವಿನ್ಯಾಸಗೊಳಿಸಲಾಗಿದೆ. ಪರ್ಲ್ ಡೀಪ್ ಗ್ರೌಂಡ್ ಗ್ರೇ ಮತ್ತು ಪರ್ಲ್ ಸೈರನ್ ಬ್ಲೂ ಅನ್ನು ಸಂಯೋಜಿಸುವ ಡ್ಯುಯಲ್ - ಟೋನ್ ಬಣ್ಣದೊಂದಿಗೆ ಸ್ಕೂಟರ್ ಬರುತ್ತದೆ. ಸೈಬರ್ ಡ್ರಿಫ್ಟ್ ಥೀಮ್‌ನಿಂದ ಸ್ಫೂರ್ತಿ ಪಡೆದ ಈ ಬಣ್ಣವು ಸ್ಕೂಟರ್‌ಗೆ ಆಧುನಿಕ ಮತ್ತು ಪವರ್‌ಫುಲ್ ಲುಕ್ ನೀಡುತ್ತದೆ.

honda-dio-125-x-edition-price-features-engine-details

ಈ ಡ್ಯುಯಲ್-ಟೋನ್ ಬಣ್ಣವು ಬಾಡಿ ಪ್ಯಾನೆಲ್‌ಗಳ ಮೇಲೆ ಡಾರ್ಕ್ ಬ್ಲೂ ಬಣ್ಣವನ್ನು ಹೊಂದಿದ್ದು, ಏಪ್ರನ್ ಗ್ರೇ ಬಣ್ಣದಲ್ಲಿ ಬರುತ್ತದೆ. ಇದರ ಜೊತೆಗೆ ಸ್ಕೂಟರ್ ಬಾಡಿ ಪ್ಯಾನೆಲ್‌ಗಳಲ್ಲಿ ಅನ್ವಯಿಸಲಾದ ವಿಶೇಷ X ಎಡಿಷನ್ ಗ್ರಾಫಿಕ್ಸ್‌ ಎದ್ದು ಕಾಣುವಂತೆ ಮಾಡುತ್ತದೆ. ಯೌವ್ವನದ ನೋಟವನ್ನು ನೀಡುವ ಈ ಗ್ರಾಫಿಕ್ಸ್ ಜೊತೆಗೆ ಕೆಂಪು ಬಣ್ಣದ ರಿಮ್‌ಗಳು ಬಾಡಿ ಕಲರ್‌ಗೆ ವ್ಯತಿರಿಕ್ತವಾಗಿದ್ದು, ನೋಡಲು ಉತ್ತಮವಾಗಿ ಕಾಣುತ್ತದೆ.

ಈ ಸ್ಕೂಟರ್ ಅನ್ನು ವಿಶೇಷವಾಗಿ ಜನರೇಷನ್ ಝಡ್ ಸವಾರರು ಮತ್ತು ಯುವಕರು ತಮ್ಮ ಸ್ಕೂಟರ್ ಪ್ರತ್ಯೇಕವಾಗಿ ಕಾಣಲು ಬಯಸುವವರಿಗಾಗಿ ವಿನ್ಯಾಸಗೊಳಿಸಲಾಗಿದೆ. ಎಲ್ಲಕ್ಕಿಂತ ಮುಖ್ಯವಾಗಿ ಮ್ಯಾಟ್ ಫಿನಿಷ್ ಅಲಾಯ್ ವೀಲ್‌ಗಳು ಹೊಸ ಹೋಂಡಾ ಡಿಯೋ 125 ಎಕ್ಸ್ - ಎಡಿಷನ್‌ಗೆ ಸ್ಪೋರ್ಟಿ ಆಕರ್ಷಣೆಯನ್ನು ಮತ್ತಷ್ಟು ಹೆಚ್ಚಿಸುತ್ತವೆ ಎಂದು ಹೋಂಡಾ ಹೇಳಿದೆ.

honda-dio-125-x-edition-price-features-engine-details

ಈ ಹೊಸ ಗ್ರಾಫಿಕ್ಸ್ ಡೆಕಲ್‌ಗಳು ಸ್ಕೂಟರ್‌ಗೆ ತೀಕ್ಷ್ಣವಾದ ಮತ್ತು ಹೆಚ್ಚು ಸ್ಪೋರ್ಟಿ ಲುಕ್ ನೀಡುವ ಮೂಲಕ, ಸಾಮಾನ್ಯ ಡಿಯೋಗಿಂತ ಹೆಚ್ಚು ಸ್ಟೈಲಿಶ್ ಆಗಿ ಕಾಣುವಂತೆ ಮಾಡುತ್ತವೆ. ಒಟ್ಟಾರೆ ಡಿಯೊ 125 ಎಕ್ಸ್-ಎಡಿಷನ್ ಸ್ಟ್ಯಾಂಡರ್ಡ್ ಡಿಯೊ 125 ಕ್ಕೆ ಹೋಲಿಸಿದರೆ ಪರಿಷ್ಕೃತ ವಿನ್ಯಾಸವನ್ನು ಪಡೆದುಕೊಂಡಿದೆ. ಈ ಬಿಡುಗಡೆಯೊಂದಿಗೆ ಕಂಪನಿಯು ಸ್ಕೂಟರ್ ವಿಭಾಗದಲ್ಲಿ ತನ್ನ ಮಾಡಲ್‌ನ್ನು ಹೆಚ್ಚು ಸ್ಪರ್ಧಾತ್ಮಕವಾಗಿ ಇರಿಸುವ ಮೂಲಕ ತನ್ನ ಪ್ರತಿ ಸ್ಪರ್ಧಿಗಳಿಗೆ ಪೈಪೋಟಿ ಹೆಚ್ಚಿಸಲಿದೆ.

ಭಾರತೀಯ ಮಾರುಕಟ್ಟೆಯಲ್ಲಿ ಡಿಯೋ 125 ಎಕ್ಸ್-ಎಡಿಷನ್‌ಗೆ ಬುಕಿಂಗ್‌ಗಳು ಈಗಾಗಲೇ ತೆರೆಯಲಾಗಿದ್ದು, ಫೆಬ್ರವರಿ ಎರಡನೇ ವಾರದಿಂದ ಹೋಂಡಾ ಡೀಲರ್‌ಶಿಪ್‌ಗಳ ಮೂಲಕ ವಿತರಣೆಗಳು ಪ್ರಾರಂಭವಾಗುತ್ತವೆ. ಹೊಸ ಡಿಯೊ 125 ಎಕ್ಸ್ ಆವೃತ್ತಿಯು ಯಾವುದೇ ಯಾಂತ್ರಿಕ ಬದಲಾವಣೆಗಳಿಲ್ಲದೆ ವಿಶಿಷ್ಟ ಡಿಸೈನ್ ಹಾಗೂ ಆಕರ್ಷಕ ಗ್ರಾಫಿಕ್ಸ್ ಹುಡುಕುತ್ತಿರುವವರಿಗೆ ಬೆಸ್ಟ್ ಆಯ್ಕೆಯಾಗಿದೆ. ವಿಶೇಷ ಬಣ್ಣದೊಂದಿಗೆ ಈಗ ಸ್ಕೂಟರ್ ಸ್ಪೋರ್ಟಿಯರ್ ಲುಕ್ ನೀಡುತ್ತದೆ.

honda-dio-125-x-edition-price-features-engine-details

ಎಂಜಿನ್ ವಿಷಯದಲ್ಲಿ ಡಿಯೋ 125 ಎಕ್ಸ್ ಎಡಿಷನ್ ಯಾವುದೇ ಬದಲಾವಣೆ ಪಡೆದಿಲ್ಲ, ಅದೇ 123.92 ಸಿಸಿ ಸಿಂಗಲ್-ಸಿಲಿಂಡರ್, ಫೋರ್-ಸ್ಟ್ರೋಕ್ SI ಎಂಜಿನ್‌ ಹೊಂದಿದ್ದು, 6,500 ಆರ್‌ಪಿಎಂನಲ್ಲಿ 8.1 ಎಚ್‌ಪಿ ಪವರ್ ಮತ್ತು 5,000 ಆರ್‌ಪಿಎಂನಲ್ಲಿ 10.5 ಎನ್‌ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಎಂಜಿನ್ ಸೆಟಪ್ ಮತ್ತು ಮೈಲೇಜ್ ಸಾಮಾನ್ಯ ಡಿಯೋ 125 ರಂತೆಯೇ ಇರುತ್ತವೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Saturday, February 7, 2026, 14:20 [IST]
English summary
Honda dio 125 x edition price features engine details
Read more on honda motorcycle india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+