ರಾಜಕಾರಣಿಗಳ ಹಾಟ್ ಫೇವರಿಟ್ ಎಸ್‌ಯುವಿ ಮಾದರಿಯಾದ ಜೀಪ್ ಕಂಪಾಸ್

By Praveen Sannamani

ಮಧ್ಯಮ ಗಾತ್ರದ ಎಸ್‌ಯುವಿ ಕಾರುಗಳಲ್ಲಿ ಜನಪ್ರಿಯ ಸಾಧಿಸುತ್ತಿರುವ ಜೀಪ್ ಕಂಪಾಸ್ ಕಾರುಗಳು ಇದೀಗ ರಾಜಕಾರಣಿಗಳ ಹಾಟ್ ಫೇವರಿಟ್ ಎಸ್‌ಯುವಿ ಮಾದರಿಯಾಗಿ ಹೊರಹೊಮ್ಮಿದ್ದು, ಕಳೆದ ವಾರವಷ್ಟೇ ದೆಹಲಿ ಉಪಮುಖ್ಯಮಂತ್ರಿ ಮನಿಷ್ ಸಿಸೋಡಿಯಾ ಅವರಿಗೂ ಸಹ ಸರ್ಕಾರದ ವತಿಯಿಂದಲೇ ಜೀಪ್ ಕಂಪಾಸ್ ಕಾರನ್ನು ವಿತರಣೆ ಮಾಡಲಾಗಿದೆ.

ರಾಜಕಾರಣಿಗಳ ಹಾಟ್ ಫೇವರಿಟ್ ಎಸ್‌ಯುವಿ ಮಾದರಿಯಾದ ಜೀಪ್ ಕಂಪಾಸ್

ಕಳೆದ ನವೆಂಬರ್‌ನಲ್ಲಿ ಮೆಕ್ ಇನ್ ಇಂಡಿಯಾ ಯೋಜನೆಯಡಿ ಪೂರ್ಣ ಪ್ರಮಾಣದಲ್ಲಿ ಭಾರತದಲ್ಲೇ ಸಿದ್ದಗೊಂಡಿದ್ದ ಜೀಪ್ ಕಂಪಾಸ್ ಎಸ್‌ಯುವಿ ಕಾರುಗಳು ಮಧ್ಯಮ ವರ್ಗದ ಗ್ರಾಹಕರನ್ನು ಸೆಳೆಯುವಲ್ಲಿ ಯಶಸ್ವಿಯಾಗುತ್ತಿದ್ದು, ಕ್ರೇಟಾ ಹಾಗೂ ಮಹೀಂದ್ರಾ ಎಕ್ಸ್‌ಯುವಿ500 ಎಸ್‌ಯುವಿ ಕಾರುಗಳಿಗಳಿಗೂ ಪೈಪೋಟಿ ನೀಡುತ್ತಿವೆ.

ರಾಜಕಾರಣಿಗಳ ಹಾಟ್ ಫೇವರಿಟ್ ಎಸ್‌ಯುವಿ ಮಾದರಿಯಾದ ಜೀಪ್ ಕಂಪಾಸ್

ಇದಕ್ಕೆ ನಿದರ್ಶನ ಎಂಬುವಂತೆ ಇದೀಗ ರಾಜಕಾರಣಿಗಳನ್ನು ತನ್ನತ್ತ ಸೆಳೆಯುತ್ತಿರುವ ಜೀಪ್ ಕಂಪಾಸ್ ಕಾರುಗಳು ಉತ್ತಮ ಗುಣಮಟ್ಟದೊಂದಿಗೆ ಭಾರೀ ಬೇಡಿಕೆ ಪಡೆದುಕೊಳ್ಳುತ್ತಿದ್ದು, ಈಗಾಗಲೇ ಭಾರತದಲ್ಲಿ 55 ಸಾವಿರಕ್ಕೂ ಹೆಚ್ಚು ಹೊಸ ಜೀಪ್ ಕಂಪಾಸ್ ಕಾರುಗಳು ಮಾರಾಟವಾಗಿರುವುದು ಅವುಗಳ ಜನಪ್ರಿಯತೆಗೆ ಹಿಡಿದ ಕೈನ್ನಡಿ.

ರಾಜಕಾರಣಿಗಳ ಹಾಟ್ ಫೇವರಿಟ್ ಎಸ್‌ಯುವಿ ಮಾದರಿಯಾದ ಜೀಪ್ ಕಂಪಾಸ್

ಇದೀಗ ದೆಹಲಿ ಉಪಮುಖ್ಯಮಂತ್ರಿ ಮನಿಷ್ ಸಿಸೋಡಿಯಾ ಅವರು ಸಹ ಮಧ್ಯಮ ಕ್ರಮಾಂಕದ ಕಾರು ಆವೃತ್ತಿಯಾದ ಜೀಪ್ ಕಂಪಾಸ್ ಸ್ಪೋರ್ಟ್ 2.0 ಡೀಸೆಲ್ ಮಾದರಿಯನ್ನು ಖರೀದಿ ಮಾಡಿದ್ದು, ಹೊಸ ಕಾರಿನ ನೋಂದಣಿ ಸಂಖ್ಯೆಯು '0017' ಎನ್ನುವ ಮಾಹಿತಿ ಕೂಡಾ ಲಭ್ಯವಾಗಿದೆ.

ರಾಜಕಾರಣಿಗಳ ಹಾಟ್ ಫೇವರಿಟ್ ಎಸ್‌ಯುವಿ ಮಾದರಿಯಾದ ಜೀಪ್ ಕಂಪಾಸ್

ಒಟ್ಟಿನಲ್ಲಿ ಜೀಪ್ ಸಂಸ್ಥೆಯ ಬಹುನೀರಿಕ್ಷಿತ ಕಂಪಾಸ್ ಎಸ್‌ಯುವಿ ಮಾದರಿಯೂ ಗ್ರಾಹಕರು ನೀರಿಕ್ಷಿಸಿದ್ದಕ್ಕಿಂತಲೂ ಹೆಚ್ಚಿನ ಸೌಲಭ್ಯ ಹೊಂದುವ ಮೂಲಕ ಜನಪ್ರಿಯತೆಗೆ ಕಾರಣವಾಗುತ್ತಿದ್ದು, ದೆಹಲಿ ಎಕ್ಸ್‌ಶೋರಂ ಪ್ರಕಾರ ಆರಂಭಿಕ ಕಾರು ಮಾದರಿಯ ಬೆಲೆಯು ರೂ.15.18 ಲಕ್ಷಕ್ಕೆ ಮತ್ತು ಉನ್ನತ ಶ್ರೇಣಿಯ ಕಾರಿನ ಬೆಲೆ ರೂ.21.94 ಲಕ್ಷಕ್ಕೆ ಲಭ್ಯವಿದೆ.

ರಾಜಕಾರಣಿಗಳ ಹಾಟ್ ಫೇವರಿಟ್ ಎಸ್‌ಯುವಿ ಮಾದರಿಯಾದ ಜೀಪ್ ಕಂಪಾಸ್

ಸ್ಪೋರ್ಟ್, ಲ್ಯಾಂಗಿಟ್ಯುಡ್ ಮತ್ತು ಲಿಮಿಟೆಡ್ ಎಂಬ ಮೂರು ಪ್ರಮುಖ ಆವೃತ್ತಿಗಳಲ್ಲಿ ಜೀಪ್ ಕಂಪಾಸ್ ಖರೀದಿಗೆ ಲಭ್ಯವಿದ್ದು, ಡೀಸೆಲ್ ಆವೃತ್ತಿಯಲ್ಲಿ ಮಾತ್ರ 4x4 ಡ್ರೈವ್ ಟೆಕ್ನಾಲಜಿ ಮಾದರಿಯನ್ನು ಪರಿಚಯಿಸಲಾಗಿದೆ. ಜೊತೆಗೆ ಪ್ರೋಜೆಕ್ಟರ್ ಹೆಡ್‌ಲ್ಯಾಂಪ್ ಜೊತೆ ಎಲ್‌ಇಡಿ ಡಿಆರ್‌ಎಲ್‌ಗಳ ಅಳವಡಿಕೆ ಹೊಂದಿದೆ.

ರಾಜಕಾರಣಿಗಳ ಹಾಟ್ ಫೇವರಿಟ್ ಎಸ್‌ಯುವಿ ಮಾದರಿಯಾದ ಜೀಪ್ ಕಂಪಾಸ್

ಎಂಜಿನ್ ವೈಶಿಷ್ಟ್ಯತೆ

ಡೀಸೆಲ್ ಮತ್ತು ಪೆಟ್ರೋಲ್ ಎರಡು ಆವೃತ್ತಿಯಲ್ಲಿ ಲಭ್ಯವಿರುವ ಜೀಪ್ ಕಂಪಾಸ್, ಡೀಸೇಲ್ ಆವೃತ್ತಿಯಲ್ಲಿ 2.0-ಲೀಟರ್ ಟರ್ಬೋ ಮತ್ತು ಪೆಟ್ರೋಲ್ ಆವೃತ್ತಿಯಲ್ಲಿ 1.4-ಲೀಟರ್ ಟರ್ಬೋ ಎಂಜಿನ್ ಪಡೆದುಕೊಂಡಿದೆ. ಹೀಗಾಗಿ ಡಿಸೇಲ್ ಕಾರು ಆವೃತ್ತಿಯು 171-ಬಿಎಚ್‌ಪಿ, 350ಎನ್ಎಂ ಟಾರ್ಕ್ ಉತ್ಪಾದಿಸಿದರೆ ಅದೇ ರೀತಿಯಾಗಿ ಪೆಟ್ರೋಲ್ ಆವೃತ್ತಿಗಳು 160-ಬಿಎಚ್‌ಪಿ, 250-ಎನ್ಎಂ ಟಾರ್ಕ್ ಉತ್ಪಾದನಾ ಶಕ್ತಿ ಹೊಂದಿದೆ.

ರಾಜಕಾರಣಿಗಳ ಹಾಟ್ ಫೇವರಿಟ್ ಎಸ್‌ಯುವಿ ಮಾದರಿಯಾದ ಜೀಪ್ ಕಂಪಾಸ್

ಡೀಸೆಲ್ ಆವೃತ್ತಿಗಳಲ್ಲಿ 6-ಸ್ಪೀಡ್ ಗೇರ್‌ಬಾಕ್ಸ್ ಮತ್ತು ಪೆಟ್ರೋಲ್ ಆವೃತ್ತಿಗಳಲ್ಲಿ 7-ಸ್ಪೀಡ್ ಗೇರ್‌ಬಾಕ್ಸ್ ವ್ಯವಸ್ಥೆಯನ್ನು ಕಲ್ವಿಸಿರುವ ಜೀಪ್ ಕಾಂಪಾಸ್, ಆಟೋ , ಸ್ನೋ, ಸ್ಯಾಂಡ್ ಮತ್ತು ಮಡ್ ಮೂಡ್‌ಗಳಲ್ಲಿ ಚಾಲನೆಗೆ ಅವಕಾಶ ನೀಡಿದೆ.

ರಾಜಕಾರಣಿಗಳ ಹಾಟ್ ಫೇವರಿಟ್ ಎಸ್‌ಯುವಿ ಮಾದರಿಯಾದ ಜೀಪ್ ಕಂಪಾಸ್

ಕಾರಿನ ವಿನ್ಯಾಸ ಮತ್ತು ವೈಶಿಷ್ಟ್ಯತೆಗಳು

ಹಿಂದೆಂದಿಗಿಂತಲೂ ಉತ್ತಮ ವಿನ್ಯಾಸಗಳನ್ನು ಹೊಚ್ಚ ಹೊಸ ಜೀಪ್ ಕಂಪಾಸ್ ಪಡೆದುಕೊಂಡಿದ್ದು, ಎಲ್ಇಡಿ ಟೈಲ್ ಲ್ಯಾಂಪ್‌ಗಳ ಮೇಲೆ ದೊಡ್ಡದಾದ ಜೀಪ್ ಬ್ಯಾಡ್ಜ್‌ಗಳನ್ನು ಪಡೆದುಕೊಂಡಿರುವುದು ಮತ್ತಷ್ಟು ಆಕರ್ಷಣೆಗೆ ಕಾರಣವಾಗಿದೆ.

ರಾಜಕಾರಣಿಗಳ ಹಾಟ್ ಫೇವರಿಟ್ ಎಸ್‌ಯುವಿ ಮಾದರಿಯಾದ ಜೀಪ್ ಕಂಪಾಸ್

ಕಪ್ಪು ಬಣ್ಣದ ಡ್ಯಾಶ್‌ಬೋರ್ಡ್, ಆಫ್ ವೈಟ್ ಬಣ್ಣದೊಂದಿಗೆ ಕೂಡಿದ ಸೀಟುಗಳು ಮತ್ತು ಮೇಲ್ಛಾವಣೆ, ಅತ್ಯುತ್ತಮ ಆಸನ ವ್ಯವಸ್ಥೆ, ಹಿಂಭಾಗದ ಸೀಟಿನ ಮಧ್ಯದ ಆರ್ಮ್ ರೆಸ್ಟ್, 5-ಇಂಚಿನ ಟಚ್ ಸ್ಕ್ರಿನ್ ಇನ್ಪೋಟೈನ್‌ಮೆಂಟ್ ಸಿಸ್ಟಂ, ಕಾರ್ ಪ್ಲೇ, ಆಂಡ್ರಾಯಿಡ್ ಆಟೋ, ಯುಎಸ್‌ಬಿ ಸೇರಿದಂತೆ ಪ್ರಸ್ತುತ ಸೌಲಭ್ಯಗಳನ್ನು ಹೊಂದಿದೆ.

ರಾಜಕಾರಣಿಗಳ ಹಾಟ್ ಫೇವರಿಟ್ ಎಸ್‌ಯುವಿ ಮಾದರಿಯಾದ ಜೀಪ್ ಕಂಪಾಸ್

ಇದರೊಂದಿಗೆ ಜೀಪ್ ಕಂಪಾಸ್ ಮಾದರಿಗಳಲ್ಲಿ ಸುರಕ್ಷತೆಗೂ ಹೆಚ್ಚಿನ ಆದ್ಯತೆ ನೀಡಲಾಗಿದ್ದು, 6 ಏರ್‌ಬ್ಯಾಗ್, ಡ್ಯುಯಲ್ ಸ್ಟೇಜ್ ಆಕ್ಟಿವೇಷನ್, ಟಿಸಿಎಸ್, ಇಬಿಡಿ, ಇಎಸ್‌ಪಿ ಮತ್ತು ಎಬಿಎಸ್ ತಂತ್ರಜ್ಞಾನಗಳ ಜೋಡಣೆ ಮಾಡಲಾಗಿದೆ. ಇದಲ್ಲದೇ ಕೀ ಲೇಸ್ ಡ್ರೈವಿಂಗ್, ಎಂಜಿನ್ ಸ್ಟಾರ್ಟ್/ಸ್ಟಾಪ್ ಬಟನ್, ರಿವರ್ಸ್ ಪಾರ್ಕಿಂಗ್ ಕ್ಯಾಮೆರಾ, ಡ್ಯುಯಲ್ ಜೋನ್ ಕ್ಲೈಮೆಟ್ ಕಂಟ್ರೋಲರ್ ಮತ್ತು ಎಲೆಕ್ಟ್ರಾನಿಕ್ ಪಾರ್ಕಿಂಗ್ ಬ್ರೇಕ್ ಒದಗಿಸಲಾಗಿದೆ.

ರಾಜಕಾರಣಿಗಳ ಹಾಟ್ ಫೇವರಿಟ್ ಎಸ್‌ಯುವಿ ಮಾದರಿಯಾದ ಜೀಪ್ ಕಂಪಾಸ್

ಇತರೆ ಸೌಲಭ್ಯಗಳು

ಗ್ರಾಹಕರನ್ನು ಸೆಳೆಯಲು ಹೊಸ ಯೋಜನೆ ರೂಪಿಸಿರುವ ಜೀಪ್ ಕಂಪಾಸ್, ಮೂರು ವರ್ಷಗಳ ಕಾಲ ಹೊಸ ಕಾರುಗಳ ಮೇಲೆ ರೋಡ್ ಸೈಡ್ ಅಸಿಸ್ಟೇನ್ಸ್ ಸೌಲಭ್ಯ ನೀಡಲಾಗುತ್ತಿದೆ.

Article Published On: Wednesday, July 25, 2018, 19:45 [IST]
English summary
Delhi Government Bought a New Jeep Compass SUV for Manish Sisodia.
Read more on jeep suv
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+