ಮುಂಬೈನಲ್ಲಿ ಗಗನಕ್ಕೇರಿದ ಡೀಸೆಲ್‍ನ ಬೆಲೆ.. ಬೆಂಗಳೂರಿನಲ್ಲು ಕೂಡಾ.??

ದೇಶಾದ್ಯಂತ ಡೀಸೆಲ್ ಬೆಲೆ ಏರಿಕೆಯಾಗಿದೆ. ದೆಹಲಿ ಹಾಗು ಮುಂಬೈ ಮುಂತಾದ ಪ್ರಮುಖ ನಗರಗಳಲ್ಲಿ ಡೀಸೆಲ್‍ನ ಬೆಲೆಯು ಸಾರ್ವಕಾಲಿಕ ಉನ್ನತ ಮಟ್ಟವನ್ನು ತಲುಪಿದೆ.

By Rahul Ts

ದೇಶಾದ್ಯಂತ ಡೀಸೆಲ್ ಬೆಲೆ ಮತ್ತೆ ಏರಿಕೆಯಾಗಿದೆ. ದೆಹಲಿ ಹಾಗೂ ಮುಂಬೈ ಸೇರಿದಂತೆ ಪ್ರಮುಖ ನಗರಗಳಲ್ಲಿ ಡೀಸೆಲ್‍ನ ಬೆಲೆಯು ಇಂದು ಸಾರ್ವಕಾಲಿಕ ಗರಿಷ್ಠ ಮಟ್ಟವನ್ನು ತಲುಪಿದ್ದು, ಮುಂದಿನ ದಿನಗಳಲ್ಲಿ ಪೆಟ್ರೋಲ್ ಬೆಲೆಗಳು ಕೂಡಾ ಅಧಿಕವಾಗುವುದು ಸಾಧ್ಯತೆಗಳಿವೆ.

ಮುಂಬೈನಲ್ಲಿ ಗಗನಕ್ಕೇರಿದ ಡೀಸೆಲ್‍ನ ಬೆಲೆ.. ಬೆಂಗಳೂರಿನಲ್ಲು ಕೂಡಾ.??

ಪ್ರಸ್ತುತ ಡೀಸೆಲ್ ಬೆಲೆ ಮುಂಬೈನಲ್ಲಿ ಗರಿಷ್ಠ ಮಟ್ಟದಲ್ಲಿದ್ದು, ಮತ್ತು ಬೆಲೆ ಲೀಟರ್‍‍ಗೆ ರೂ.73.79ಕ್ಕೆ ದೊರೆಯುತ್ತಿದೆ. ಅದೇ ರೀತಿ, ದೆಹಲಿಯಲ್ಲಿ ಡೀಸೆಲ್ ದರ ಲೀಟರ್‍‍ಗೆ ರೂ. 69.51 ಇದ್ದು, ದಾಖಲೆಯ ಬೆಲೆ ಏರಿಕೆಯನ್ನು ಕಂಡಿದೆ. ಪೆಟ್ರೋಲ್ ಬೆಲೆಗಳು ಆಕಾಶಕ್ಕೆ ಏರುತ್ತಿದ್ದು ಮುಂಬೈನಲ್ಲಿ ಲೀಟರ್‍‍ಗೆ ರೂ.85.38 ಮತ್ತು ದೆಹಲಿಯಲ್ಲಿ ಲೀಟರ್‍‍ಗೆ ರೂ.77.96 ಮಾರಾಟವಾಗುತ್ತಿದೆ.

ಮುಂಬೈನಲ್ಲಿ ಗಗನಕ್ಕೇರಿದ ಡೀಸೆಲ್‍ನ ಬೆಲೆ.. ಬೆಂಗಳೂರಿನಲ್ಲು ಕೂಡಾ.??

ಯುಎಸ್ ಡಾಲರ್ ಎದುರು ರುಪಾಯಿ ಮೌಲ್ಯ ಕುಸಿತವೇ ಇದಕ್ಕೆ ಪ್ರಮುಖ ಕಾರಣವಾಗಿದ್ದು, ವಾಹನ ಸವಾರರು ಕಂಗೆಟ್ಟು ಹೊಗಿದ್ದಾರೆ. ಇದಲ್ಲದೇ ಇಂಧನ ಬೆಲೆಗಳ ಮೇಲೆ ಪ್ರಭಾವ ಬೀರುವ ಇತರ ಅಂಶಗಳಾದ ಯುನೈಟೆಡ್ ಸ್ಟೇಟ್ಸ್ ಮತ್ತು ಇರಾನ್ ವಿರುದ್ಧ ಯುನೈಟೆಡ್ ಸ್ಟೇಟ್ಸ್ ನ ನಿರ್ಬಂಧಗಳ ನಡುವಿನ ವ್ಯಾಪಾರದ ಯುದ್ಧವಾಗಿದೆ.

ಮುಂಬೈನಲ್ಲಿ ಗಗನಕ್ಕೇರಿದ ಡೀಸೆಲ್‍ನ ಬೆಲೆ.. ಬೆಂಗಳೂರಿನಲ್ಲು ಕೂಡಾ.??

ಕೇವಲ ಮುಂಬೈ ಮತ್ತು ದೆಹಲಿಯಲ್ಲಿ ಮಾತ್ರವಲ್ಲದೆ ರಾಷ್ಟ್ರದಲ್ಲಿನ ಇನ್ನಿತರೆ ಪ್ರಮುಖ ನಗರಗಳಲ್ಲಿ ಇಂಧನದ ಬೆಲೆಯು ಹೆಚ್ಚಾಗಿದೆ. ಕೊಲ್ಕತ್ತಾ ನಗರದಲ್ಲಿ ಡೀಸೆಲ್‍‍ನ ಬೆಲೆಯು ಲೀಟರ್‍‍ಗೆ ರೂ. 72.35 ಮತ್ತು ಪೆಟೋಲ್‍‍ನ ಬೆಲೆಯು ರೂ.80.39ಕ್ಕೆ ಏರಿದೆ. ತಮಿಳು ನಾಡಿನ ಚೆನ್ನೈ ನಗರದಲ್ಲಿಯು ಕೂಡಾ ಲೀಟರ್‍‍ಗೆ ಡೀಸೆಲ್‍‍ನ ಬೆಲೆಯು ರೂ. 73.43 ಮತ್ತು ಪೆಟ್ರೋಲ್‍‍ನ ಬೆಲೆಯು ರೂ.80.99ಕ್ಕೆ ಏರಿದೆ.

ಮುಂಬೈನಲ್ಲಿ ಗಗನಕ್ಕೇರಿದ ಡೀಸೆಲ್‍ನ ಬೆಲೆ.. ಬೆಂಗಳೂರಿನಲ್ಲು ಕೂಡಾ.??

ಇನ್ನು ನಮ್ಮ ಬೆಂಗಳೂರಿನಲ್ಲಿ ಒಂದು ಲೀಟರ್ ಡೀಸೆಲ್‍ ರೂ. 71.43 ಮತ್ತು ಒಂದು ಲೀಟರ್ ಪೆಟ್ರೋಲ್ ರೂ.80.49ಕ್ಕೆ ದೊರೆಯುತ್ತಿದೆ. ಕಳೆದ ಹತ್ತು ದಿನಗಳಿಂದ ಇಂಧನಗಳ ಬೆಲೆಯು ಏರುತ್ತಿದ್ದು, ಮುಂಬರುವ ಕೆಲ ದಿನಗಳವರೆಗು ಹೀಗೆ ಅಧಿಕವಾಗಲಿದೆ ಎಂಬ ಸುದ್ಧಿ ಕೇಳಿ ಬರುತ್ತಿದೆ.

ಮುಂಬೈನಲ್ಲಿ ಗಗನಕ್ಕೇರಿದ ಡೀಸೆಲ್‍ನ ಬೆಲೆ.. ಬೆಂಗಳೂರಿನಲ್ಲು ಕೂಡಾ.??

ಈ ಹಿಂದೆ, ಮಾರುಕಟ್ಟೆಯ ಪರಿಸ್ಥಿತಿಗಳ ಆಧಾರದ ಮೇಲೆ ಪೆಟ್ರೋಲ್ ಮತ್ತು ಡೀಸೆಲ್‍‍ಗಳ ಬೆಲೆಗಳನ್ನು ಪ್ರತಿ ತಿಂಗಳ 1 ಮತ್ತು 16 ರಂದು ಹೆಚ್ಚಿಸಲಾಯಿತು. ಈಗ, ಇಂಧನ ಕಂಪನಿಗಳು ಪ್ರತಿದಿನ 6 ಗಂಟೆಗೆ ಇಂಧನ ಬೆಲೆಗಳನ್ನು ಪರಿಷ್ಕರಿಸುತ್ತವೆ. ಮೇಲೆ ತಿಳಿಸಲಾದ ಕಾರಣಗಳಿಂದ ದಿನಕ್ಕೆ ದಿನಕ್ಕೆ ಕ್ರಮೇಣ ಹೆಚ್ಚಳವಾಗಬಹುದು ಎಂದು ನಾವು ನಿರೀಕ್ಷಿಸಬಹುದು.

ಮುಂಬೈನಲ್ಲಿ ಗಗನಕ್ಕೇರಿದ ಡೀಸೆಲ್‍ನ ಬೆಲೆ.. ಬೆಂಗಳೂರಿನಲ್ಲು ಕೂಡಾ.??

ಡ್ರೈವ್‍‍ಸ್ಪಾರ್ಕ್ ಅಭಿಪ್ರಾಯ

ಇಂಧನ ಸಂಸ್ಥೆಗಳು ರಾಷ್ಟ್ರಾದ್ಯಂತ ಮತ್ತೊಮ್ಮೆ ಪೆಟ್ರೋಲ್ ಹಾಗು ಡೀಸೆಲ್ ಬೆಲೆಗಳನ್ನು ಅಧಿಕಗೊಳಿಸಿದೆ. ಮುಂಬೈ ನಗರದಲ್ಲಿ ಎಂದೂ ಕಾಣದ ಮಟ್ಟದಲ್ಲಿ ಡೀಸೆಲ್‍‍ನ ಬೆಲೆಯು ಅಧಿಕವಾಗಿದ್ದು, ಶೀಘ್ರವೇ ಪೆಟ್ರೋಲ್‍‍ನ ಬೆಲೆಯು ಕೂಡಾ ಅಧಿಕವಾಗಲಿದೆ. ತೈಲ ಕಂಪೆನಿಗಳು ಮತ್ತು ಗ್ರಾಹಕರಿಗೆ ಇದು ಬಹಳ ಕಷ್ಟಕರ ಪರಿಸ್ಥಿತಿ. ಡೀಸೆಲ್ ಬೆಲೆಯ ಹೆಚ್ಚಳವು ದೇಶದಲ್ಲಿನ ಎಲ್ಲಾ ಪ್ರಮುಖ ವಲಯಗಳ ಮೇಲೆ ವಿರೋಧದ ಪರಿಣಾಮವನ್ನು ಬೀರುತ್ತದೆ.

More from DriveSpark

Article Published On: Tuesday, August 28, 2018, 13:50 [IST]
English summary
Diesel Price Hits Record High In Mumbai.
Read more on auto news petrol diesel price
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+