ಪ್ರತಿ ಚಾರ್ಜ್‌ಗೆ 200ಕಿ.ಮೀ ಮೈಲೇಜ್ ನೀಡುತ್ತೆ ಈ ಎಲೆಕ್ಟ್ರಿಕ್ ಬಸ್..!!
ಎಲೆಕ್ಟ್ರಿಕ್ ಎಂಜಿನ್ ಪ್ರೇರಿತ ವಾಹನಗಳಿಗೆ ಸಾಕಷ್ಟು ಬೇಡಿಕೆ ಸೃಷ್ಠಿಯಾಗುತ್ತಿದ್ದು, ಈ ಹಿನ್ನೆಲೆ ಹಿಮಾಚಲಪ್ರದೇಶದಲ್ಲಿ ಮೊದಲ ಬಾರಿಗೆ ಸಾರ್ವಜನಿಕ ಸಾರಿಗೆ ವಲಯದಲ್ಲೂ ಎಲೆಕ್ಟ್ರಿಕ್ ಬಸ್‌ಗಳ ಸಂಚಾರಕ್ಕೆ ಹಸಿರು ನಿಶಾನೆ ತೊರಲಾಗಿದೆ.
ಎಲೆಕ್ಟ್ರಿಕ್ ಎಂಜಿನ್ ಪ್ರೇರಿತ ವಾಹನಗಳಿಗೆ ಸಾಕಷ್ಟು ಬೇಡಿಕೆ ಸೃಷ್ಠಿಯಾಗುತ್ತಿದ್ದು, ಈ ಹಿನ್ನೆಲೆ ಹಿಮಾಚಲಪ್ರದೇಶದಲ್ಲಿ ಮೊದಲ ಬಾರಿಗೆ ಸಾರ್ವಜನಿಕ ಸಾರಿಗೆ ವಲಯದಲ್ಲೂ ಎಲೆಕ್ಟ್ರಿಕ್ ಬಸ್‌ಗಳ ಸಂಚಾರಕ್ಕೆ ಹಸಿರು ನಿಶಾನೆ ತೊರಲಾಗಿದೆ.

ಮಾಲಿನ್ಯ ರಹಿತ ಎಂಜಿನ್ ವೈಶಿಷ್ಟ್ಯತೆಗಳೊಂದಿಗೆ ಅಭಿವೃದ್ಧಿಯಾಗಿರುವ ಗೋಲ್ಡ್‌ಸ್ಟೋನ್ ಲಿಮಿಟೆಡ್ ನಿರ್ಮಾಣದ ಎಲೆಕ್ಟ್ರಿಕ್ ಬಸ್‌ಗಳು ಹತ್ತು ಹಲವು ವಿಶೇಷತೆಗಳನ್ನು ಹೊಂದಿದ್ದು, 25+1 ಆಧಾರದಲ್ಲಿ ಪ್ರಯಾಣಿಕರು ಹೊತ್ತುಯ್ಯುವ ಸಾಮರ್ಥ್ಯದೊಂದಿಗೆ ಪ್ರತಿ ಚಾರ್ಚ್‌ಗೆ 200 ಕಿ.ಮೀ ಮೈಲೇಜ್ ರೇಂಜ್ ಪಡೆದುಕೊಂಡಿರುವುದು ಮತ್ತೊಂದು ವಿಶೇಷ.

ಸದ್ಯ ಹಿಮಾಚಲ ಪ್ರದೇಶದಲ್ಲಿ ಸಂಚಾರಕ್ಕೆ ಮುಕ್ತವಾಗಿರುವ ಗೋಲ್ಡ್ ಸ್ಟೋನ್ ಎಲೆಕ್ಟ್ರಿಕ್ ಬಸ್‌ಗಳು ಕುಲ್ಲು-ಮನಾಲಿ-ರೋಹ್ಟಂಗ್ ಮಧ್ಯೆ ಸಂಚರಿಸಿದ್ದು, ಅಗತ್ಯಕ್ಕೆ ಅನುಗುಣವಾಗಿ ಎಲೆಕ್ಟ್ರಿಕ್ ಚಾರ್ಜಿಂಗ್ ಸ್ಟೇಷನ್‌ಗಳನ್ನು ಕೂಡಾ ನಿರ್ಮಾಣ ಮಾಡಲಾಗಿದೆ.

ಒಂದು ಬಾರಿ ಚಾರ್ಜಿಂಗ್ ಮಾಡಿದಲ್ಲಿ 200 ಕಿಮಿ ಮೈಲೇಜ್ ಸಾಮರ್ಥ್ಯ ಹೊಂದಿರುವ ಗೋಲ್ಡ್‌ಸ್ಟೋನ್ ಲಿಮಿಟೆಡ್ ನಿರ್ಮಾಣದ ಎಲೆಕ್ಟ್ರಿಕ್ ಬಸ್‌ಗಳು, ಪೂರ್ಣ ಪ್ರಮಾಣದ ಚಾರ್ಜಿಂಗ್ ಪಡೆಯಲು ನಾಲ್ಕು ಗಂಟೆಗಳ ಕಾಲಾವಧಿ ಪಡೆದುಕೊಳ್ಳುತ್ತವೆ.

ಇನ್ನು ಪ್ರತಿಷ್ಠಿತ ಎಲೆಕ್ಟ್ರಿಕ್ ಎಂಜಿನ್ ಅಭಿವೃದ್ಧಿ ಸಂಸ್ಥೆಯಾಗಿರುವ ಬಿವೈಡಿ ಆಟೋ ಲಿಮಿಟೆಡ್ ಸಂಸ್ಥೆ ಜೊತೆಗೂಡಿ ಎಲೆಕ್ಟ್ರಿಕ್ ಬಸ್‌ಗಳನ್ನು ನಿರ್ಮಾಣ ಮಾಡಿರುವ ಗೋಲ್ಡ್‌ಸ್ಟೋನ್ ಲಿಮಿಟೆಡ್ ಸಂಸ್ಥೆಯು, ಹೊಸ ಬಸ್ ಮಾದರಿಗಳ ಗುಣಮಟ್ಟ ಕುರಿತಂತೆ ಆಟೋಮೆಟಿವ್ ರಿಸರ್ಚ್ ಅಸೋಶಿಯೆಷನ್ ಆಫ್ ಇಂಡಿಯಾದಿಂದಲೂ ಪ್ರಮಾಣ ಪತ್ರ ಪಡೆದಿದೆ.

ಹೀಗಾಗಿ ಅತ್ಯುತ್ತಮ ಕಾರ್ಯಕ್ಷಮತೆಯನ್ನು ಹೊಂದಿರುವ ಎಲೆಕ್ಟ್ರಿಕ್ ಬಸ್ ಮಾದರಿಗಳಲ್ಲಿ ಗೋಲ್ಡ್‌ಸ್ಟೋನ್ ಬಸ್‌ಗಳು ಮುಂಚೂಣಿಯಲ್ಲಿದ್ದು, ಈಗಾಗಲೇ ಭಾರೀ ಪ್ರಮಾಣದ ಬಸ್‌ಗಳ ನಿರ್ಮಾಣಕ್ಕೆ ಬೇಡಿಕೆ ಬಂದಿರುವುದು ಮತ್ತೊಂದು ವಿಶೇಷ ಎನ್ನಬಹುದು.

ಗೋಲ್ಡ್ ಸ್ಟೋನ್ ನಿರ್ಮಾಣದ ಎಲೆಕ್ಟ್ರಿಕ್ ಬಸ್ಸುಗಳಿಗೆ ಇ ಬಜ್ ಕೆ6 ಎಂದು ಹೆಸರಿಸಲಾಗಿದ್ದು, 2020ರ ವೇಳೆಗೆ ಶೇ.30ರಷ್ಟು ಗೋಲ್ಡ್‌ಸ್ಟೋನ್ ಬಸ್ಸುಗಳನ್ನು ರಸ್ತೆಗಿಳಿಸುವ ಗುರಿಯೊಂದಿಗೆ ಯೋಜನೆ ರೂಪಿಸಲಾಗುತ್ತಿರುವುದು ಹಲವು ವಿಶೇಷಗಳಿಗೆ ಕಾರಣವಾಗಿದೆ.

ಬ್ಯಾಟರಿ ಸಾಮರ್ಥ್ಯ
ಗೋಲ್ಡ್‌ಸ್ಟೋನ್ ಎಲೆಕ್ಟ್ರಿಕ್ ಬಸ್‌ಗಳಲ್ಲಿ ಲೀಥಿಯಂ ಅಯಾನ್ ಫ್ರೊಸ್ಪೆಟ್ ಬ್ಯಾಟರಿ ಬಳಕೆ ಮಾಡಲಾಗಿದ್ದು, 214 ಬಿಎಚ್‌ಪಿ ಮತ್ತು 1500ಎನ್ಎಂ ಟಾರ್ಕ್ ಉತ್ಪಾದಿಸಬಲ್ಲವು. ಈ ಮೂಲಕ ಪ್ರತಿ ಗಂಟೆಗೆ 80ಕಿ.ಮಿ ವೇಗ ಸಾಧಿಸಿರುವ ಈ ಎಲೆಕ್ಟ್ರಿಕ್ ಬಸ್‌ಗಳು, ಆಲ್ ವೀಲ್ಹ್ ಡಿಸ್ಕ್ ಬ್ರೇಕ್ ಮತ್ತು ಎಬಿಎಸ್ ಹೊಂದಿರಲಿವೆ.

ಡ್ರೈವ್ ಸ್ಪಾರ್ಕ್ ಅಭಿಪ್ರಾಯ
ದೇಶಾದ್ಯಂತ ಈಗಾಗಲೇ ಹಲವಾರು ವಾಹನ ಉತ್ಪಾದಕರು ಎಲೆಕ್ಟ್ರಿಕ್ ಬಸ್ ನಿರ್ಮಾಣಕ್ಕೆ ಬೃಹತ್ ಯೋಜನೆಗಳನ್ನು ರೂಪಿಸುತ್ತಿದ್ದು, ಇದೀಗ ಗೋಲ್ಡ್ ಸ್ಟೋನ್ ಸಂಸ್ಥೆಯು ಹಿಮಾಚಲಪ್ರದೇಶದಲ್ಲಿ ಮೊದಲ ಬಾರಿಗೆ ವಾಣಿಜ್ಯ ಸಂಚಾರ ಆರಂಭಿಸುವ ಮೂಲಕ ಬದಲಾವಣೆ ಪರ್ವಕ್ಕೆ ನಾಂದಿ ಹಾಡಿರುವುದು ಗಮನಾರ್ಹ.


Click it and Unblock the Notifications








