ಹೊಸ ಸಿಯಾಜ್ ಫೇಸ್‍‍ಲಿಫ್ಟ್ ಕಾರಿನ ಖರೀದಿಗಾಗಿ ಬುಕ್ಕಿಂಗ್ ಪ್ರಾರಂಭಿಸಿದ ನೆಕ್ಸಾ..

ಮಾರುತಿ ಸುಜುಕಿ ಸಂಸ್ಥೆಯು ತಮ್ಮ ಜನಪ್ರಿಯ ಸಿಯಾಜ್ ಸೆಡಾನ್ ಫೇಸ್‍‍ಲಿಫ್ಟ್ ಕಾರನ್ನು ಮಾರುಕಟ್ಟೆಗೆ ಪರಿಚಯಿಸಲಿದ್ದು, ಇದೆ ಆಗಸ್ಟ್ ತಿಂಗಳಿನಲ್ಲಿ ಸಂಸ್ಥೆಯು ಬಿಡುಗಡೆಗೊಳಿಸಲಿದೆ.

By Rahul Ts

ಮಾರುತಿ ಸುಜುಕಿ ಸಂಸ್ಥೆಯು ತಮ್ಮ ಜನಪ್ರಿಯ ಸಿಯಾಜ್ ಸೆಡಾನ್ ಫೇಸ್‍‍ಲಿಫ್ಟ್ ಕಾರನ್ನು ಮಾರುಕಟ್ಟೆಗೆ ಪರಿಚಯಿಸಲಿದ್ದು, ಇದೆ ಆಗಸ್ಟ್ ತಿಂಗಳಿನಲ್ಲಿ ಸಂಸ್ಥೆಯು ಬಿಡುಗಡೆಗೊಳಿಸಲಿದೆ. ಆದರೆ ಇದೀಗ ಕೆಲ ನೆಕ್ಸಾ ಡೀಲರ್‍‍ಗಳು ತಮ್ಮ ಸಿಯಾಜ್ ಫೇಸ್‍‍ಲಿಫ್ಟ್ ಕಾರಿನ ಖರೀದಿಗಾಗಿ ಬುಕ್ಕಿಂಗ್ ಪ್ರಕ್ರಿಯೆಯನ್ನು ಪ್ರಾರಂಭಿಸಿದ್ದಾರೆ.

ಹೊಸ ಸಿಯಾಜ್ ಫೇಸ್‍‍ಲಿಫ್ಟ್ ಕಾರಿನ ಖರೀದಿಗಾಗಿ ಬುಕ್ಕಿಂಗ್ ಪ್ರಾರಂಭಿಸಿದ ನೆಕ್ಸಾ..

ಬಿಡುಗಡೆಗೊಳ್ಳಲಿರುವ ಸಿಯಾಜ್ ಫೇ‍‍ಸ್‍‍ಲಿಫ್ಟ್ ಕಾರು ಖರೀದಿಗಾಗಿ ಗ್ರಾಹಕರು ಹತ್ತಿರದ ನೆಕ್ಸಾ ಶೋರಂ‍‍ನಲ್ಲಿ ರೂ. 21,000 ಸಾವಿರದ ಮೊತ್ತವನ್ನು ಮುಂಚುಣಿಯಾಗಿ ಪಾವತಿಸಿ ಬುಕ್ಕಿಂಗ್ ಮಾಡಬಹುದಾಗಿದೆ. ಅಷ್ಟೆ ಅಲ್ಲದೇ ಸಂಸ್ಥೆಯು ತಮ್ಮ ಹಿಂದಿನ ತಲೆಮಾರಿನ ಸಿಯಾಜ್ ಕಾರುಗಳ ಮೇಲೆ ಸುಮಾರು ರೂ. 1 ಲಕ್ಷದ ವರೆಗಿನ ರಿಯಾಯಿತಿಯನ್ನು ಕೂಡಾ ನೀಡುತ್ತಿದೆ.

ಹೊಸ ಸಿಯಾಜ್ ಫೇಸ್‍‍ಲಿಫ್ಟ್ ಕಾರಿನ ಖರೀದಿಗಾಗಿ ಬುಕ್ಕಿಂಗ್ ಪ್ರಾರಂಭಿಸಿದ ನೆಕ್ಸಾ..

ಹೊಸ ಸಿಯಾಜ್ ಫೇಸ್‍‍ಲಿಫ್ಟ್ ಕಾರಿನ ಮುಂಭಾಗದಲ್ಲಿ ಮರು ವಿನ್ಯಾಸಗೊಳಿಸಲಾದ ಗ್ರಿಲ್, ಹೊಸದಾಗಿ ವಿನ್ಯಾಸಗೊಳಿಸಿದ ಎಲ್ಇಡಿ ಡಿಆರ್‍ಎಲ್ ಹೆಡ್‍‍ಲ್ಯಾಂಪ್ಸ್, ಸೆಂಟ್ರಲ್ ಏರ್ ಡ್ಯಾಮ್‍ ನೊಂದಿಗೆ ರಿವ್ಯಾಂಪ್ಡ್ ಫ್ರಂಟ್ ಬಂಪರ್ ಮತ್ತು ಸಿ-ಆಕಾರದ ಕ್ರೋಮ್ ಅನ್ನು ಫಾಗ್ ಲ್ಯಾಂಪ್‍‍ನಲ್ಲಿ ಅಳವಡಿಸಲಾಗಿದೆ.

ಹೊಸ ಸಿಯಾಜ್ ಫೇಸ್‍‍ಲಿಫ್ಟ್ ಕಾರಿನ ಖರೀದಿಗಾಗಿ ಬುಕ್ಕಿಂಗ್ ಪ್ರಾರಂಭಿಸಿದ ನೆಕ್ಸಾ..

ಇದಲ್ಲದೆ ಸಿಯಾಜ್ ಫೇಸ್‍‍ಲಿಫ್ಟ್ ಮಲ್ಟಿ ಸ್ಪೋಕ್ ಅಲಾಯ್ ವ್ಹೀಲ್ಸ್, ಕ್ರೋಮ್ ಡೋರ್ ಹ್ಯಾಂಡಲ್ಸ್ ಮತ್ತು ಒಆರ್‍‍ವಿಎಮ್ ಅನ್ನು ಇಂಟಿಗ್ರೇಟೆಡ್ ಟರ್ನ್ ಇಂಡಿಕೇಟರ್ಸ್ ಅನ್ನು ಪ್ರಸ್ಥುತ ಮಾರಾಟಗೊಳ್ಳುತ್ತಿರುವ ಸಿಯಾಜ್ ಕಾರಿನಿಂದ ಆದರಿಸಿದೆ. ಹಾಗೆಯೆ ಮರು ವಿನ್ಯಾಸಗೊಳಿಸಲಾದ ಹಿಂಭಾಗದ ಬಂಪರ್ ಅನ್ನು ಕೂಡ ಅಳವಡಿಸಲಾಗಿದೆ.

ಹೊಸ ಸಿಯಾಜ್ ಫೇಸ್‍‍ಲಿಫ್ಟ್ ಕಾರಿನ ಖರೀದಿಗಾಗಿ ಬುಕ್ಕಿಂಗ್ ಪ್ರಾರಂಭಿಸಿದ ನೆಕ್ಸಾ..

ಮಾರುತಿ ಸಿಯಾಜ್ ಫೇಸ್‍‍ಲಿಫ್ಟ್ ಕಾರು ಹೊಸದಾಗಿ 1.5 ಲೀಟರ್ ಪೆಟ್ರೋಲ್ ಎಂಜಿನ್ ಅನ್ನು ಪಡೆದಿದ್ದು, ಪ್ರಸ್ಥುತ ಇರುವ 1.4 ಲೀಟರ್ ಪೆಟ್ರೋಲ್ ಎಂಜಿನ್ ಅನ್ನು ಭರ್ತಿ ಮಾಡಲಿದೆ. ಇದಲ್ಲದೆ ಡೀಸೆಲ್ ವೇರಿಯಂಟ್ ಕಾರುಗಳು 1.3 ಲೀಟರ್ ಸ್ಮಾರ್ಟ್ ಹೈಬ್ರಿಡ್ ವೆಹಿಕಲ್ ಟೆಕ್ನಾಲಜಿ ಎಂಜಿನ್ ಅನ್ನು ಪಡೆದುಕೊಂಡಿದೆ.

ಹೊಸ ಸಿಯಾಜ್ ಫೇಸ್‍‍ಲಿಫ್ಟ್ ಕಾರಿನ ಖರೀದಿಗಾಗಿ ಬುಕ್ಕಿಂಗ್ ಪ್ರಾರಂಭಿಸಿದ ನೆಕ್ಸಾ..

ಇನ್ನು ಟ್ರಾನ್ಸ್ ಮಿಷನ್ ಬಗ್ಗೆ ಹೇಳುವುದಾದರೆ ಎಂಜಿನ್ ಅನ್ನು 5 ಸ್ಪೀಡ್ ಮ್ಯಾನುವಲ್ ಗೇರ್‍‍ಬಾಕ್ಸ್ ನೊಂದಿಗೆ ಜೋಡಿಸಲಾಗಿದ್ದು, ಇದು ಪ್ರಸ್ಥುತ ಇರುವ 4 ಸ್ಪೀಡ್ ಆಟೋಮ್ಯಾಟಿಕ್ ಗೇರ್‍‍ಬಾಕ್ಸ್ ಅನ್ನು ಭರ್ತಿ ಮಾಡಲಿದೆ.

ಹೊಸ ಸಿಯಾಜ್ ಫೇಸ್‍‍ಲಿಫ್ಟ್ ಕಾರಿನ ಖರೀದಿಗಾಗಿ ಬುಕ್ಕಿಂಗ್ ಪ್ರಾರಂಭಿಸಿದ ನೆಕ್ಸಾ..

ಸಿಯಾಜ್ ಫೇಸ್‍ಲಿಫ್ಟ್ ಕಾರಿನ ಒಳಭಾಗದಲ್ಲಿ ಅಪ್‍‍ಮಾರ್ಕೆಟ್ ಡ್ಯಾಶ್‍‍ಬೋರ್ಡ್, ಸೀಟ್ ಮತ್ತು ಹೊಸ ವೈಶಿಷ್ಟ್ಯತೆಗಳನ್ನು ಪಡೆದಿರಲಿದೆ ಎನ್ನಲಾಗಿದ್ದು, ಇನ್ನು ಹೊಸದಾಗಿ ಬಿಡುಗಡೆಗೊಳ್ಳುವ ಕಾರುಗಳು ಎಲೆಕ್ಟ್ರಿಕ್ ಸನ್‍ರೂಫ್, ಅಡಿಶನಲ್ ಸೇಫ್ಟಿ ಫೀಚರ್ಸ್ ಹಾಗು ಇನ್ನಿತರೆ ಆಯ್ಕೆಗಳನ್ನು ಪಡೆಯಲಿದೆ.

ಹೊಸ ಸಿಯಾಜ್ ಫೇಸ್‍‍ಲಿಫ್ಟ್ ಕಾರಿನ ಖರೀದಿಗಾಗಿ ಬುಕ್ಕಿಂಗ್ ಪ್ರಾರಂಭಿಸಿದ ನೆಕ್ಸಾ..

ಇನ್ನು ಕಾರಿನ ಬೆಲೆಯ ಬಗ್ಗೆ ಯಾವುದೆ ಖಚಿತ ಮಾಹಿತಿಯು ಲಭ್ಯವಾಗಿಲ್ಲವಾದರು ದೆಹಲಿಯ ಎಕ್ಸ್ ಶೋರಂ ಪ್ರಕಾರ ರೂ 8 ರಿಂದ 12 ಲಕ್ಷದ ವರೆಗು ಇರಬಹುದೆಂದು ಎಂದಾಜಿಸಲಾಗಿದ್ದು, ಹೋಂಡಾ ಸಿಟಿ, ಹ್ಯುಂಡೈ ವರ್ನಾ, ವೋಲ್ಕ್ಸ್ ವ್ಯಾಗನ್ ವೆಂಟೊ ಮತ್ತು ಸ್ಕೋಡಾ ರ್‍ಯಾಪಿಡ್ ಕಾರುಗಳಿಗೆ ಪೈಪೋಟಿಯನ್ನು ನೀಡಲಿದೆ.

Source : Twitter

More from DriveSpark

Article Published On: Thursday, July 26, 2018, 11:42 [IST]
English summary
Facelifted Maruti Ciaz bookings open.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+