ಸ್ಕಾರ್ಪಿಯೋ ಗ್ರಾಹಕನಿಗೆ ಶೋರಂನ ಸಿಬ್ಬಂದಿಯಿಂದ ಮೋಸ

ಹೊಸ ಕಾರನ್ನು ಖರೀದಿಸಲು ಹೋದ ಗ್ರಾಹಕನಿಗೆ ಮಹೀಂದ್ರಾ ಶೋರಂನ ಇಬ್ಬರು ಸಿಬ್ಬಂದಿಯು ಮೋಸ ಮಾಡಿರುವ ಸಂಗತಿಯು ಇದೀಗ ಬೆಳಕಿಗೆ ಬಂದಿದ್ದು, ಮೋಸ ಮಾಡಿದ ಆ ಇಬ್ಬರು ಸಿಬ್ಬಂದಿಯ ಮೇಲೆ ಎಫ್‍ಐಆರ್ ದಾಖಲಾಗಿದೆ. ಈ ಲೇಖನದಲ್ಲಿ ಈ ಘಟನೆಯ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯಿರಿ.

ಸ್ಕಾರ್ಪಿಯೋ ಗ್ರಾಹಕನಿಗೆ ಶೋರಂನ ಸಿಬ್ಬಂದಿಗಳಿಂದ ಮೋಸ

ಗುರುಗಾವ್‍‍‍ನಲ್ಲಿನ ಬಜ್ಗೆರಾ ಪ್ರಾಂತ್ಯಕ್ಕೆ ಸೇರಿದ ಹರಿಓಂ ಎಂಬಾತ 23 ಡಿಸೆಂಬರ್ 2016 ರಂದು ದೆಹಲಿಯ ಸೆಕ್ಟಾರ್ 18ರಲ್ಲಿನ ಮಹೀಂದ್ರಾ ಶೋರಂನಲ್ಲಿ ಹೊಸ ಸ್ಕಾರ್ಪಿಯೋ ಕಾರನ್ನು ಖರೀದಿಸಿದ್ದಾರೆ.

ಸ್ಕಾರ್ಪಿಯೋ ಗ್ರಾಹಕನಿಗೆ ಶೋರಂನ ಸಿಬ್ಬಂದಿಗಳಿಂದ ಮೋಸ

ಖರೀದಿಸಿದ 10 ದಿನಗಳ ನಂತರ ಅಂದರೆ 3ಜನವರಿ 2017ರಂದು ಹರಿಓಂ ಕೈಗೆ ಹೊಸ ಸ್ಕಾರ್ಪಿಯೋ ಕಾರನ್ನು ಹಸ್ತಾಂತರಿಸಲಾಗಿದ್ದು, ಹರಿ ಓಂರವರು ರೂ.11.05 ಲಕ್ಷದ ಮೊತ್ತವನ್ನು ಪಾವತಿಸುವುದರ ಜೊತೆಗೆ ರೂ. 1.09 ಲಕ್ಷದ ಮೊತ್ತವನ್ನು ರಿಜಿಸ್ಟ್ರೇಷನ್‍ಗಾಗಿ ಪಾವತಿಸಿದ್ದರು.

ಸ್ಕಾರ್ಪಿಯೋ ಗ್ರಾಹಕನಿಗೆ ಶೋರಂನ ಸಿಬ್ಬಂದಿಗಳಿಂದ ಮೋಸ

ವಾಹನ ನೋಂದಾವಣಿಗೆ ನೀಡಿದ ಹಣದಿಂದ ಹರಿಓಂರವರ ಹೊಸ ಸ್ಕಾರ್ಪಿಯೊ ಕಾರಿಗೆ HR26-DC-7485 ಸಂಖ್ಯೆಯು ದೊರಕುತ್ತದೆ. ಆದರೆ 2018ರ ಫೆಬ್ರವರಿ ತಿಂಗಳಿನಲ್ಲಿ ಪಂಜಾಬಿ ಭಾಗ್‍ನಲ್ಲಿ ಹರಿ ಓಂರವರ ಕಾರು ಕಳ್ಳತನವಾಗುತ್ತದೆ.

MOST READ: ತನ್ನ ತಂದೆಯ 50ನೇ ಹುಟ್ಟುಹಬ್ಬಕ್ಕೆ ಮಗನಿಂದ ಸರ್ಪ್ರೈಸ್ ಗಿಫ್ಟ್

ಸ್ಕಾರ್ಪಿಯೋ ಗ್ರಾಹಕನಿಗೆ ಶೋರಂನ ಸಿಬ್ಬಂದಿಗಳಿಂದ ಮೋಸ

ಕಳ್ಳತನವಾದ ಕಾರಿನ ಕುರಿತಾಗಿ ಪಂಜಾಬಿ ಭಾಗ್‍‍ನಲ್ಲಿನ ಪೊಲೀಸ್ ಸ್ಟೇಷನ್‍‍ಗೆ ಹೋದಾಗ ಅಲ್ಲಿನ ಅಧಿಕಾರಿಗಳು ಹರಿ ಓಮ್‍ರವರಿಗೆ ಕಾರಿನ ಡಾಕ್ಯುಮೆಂಟ್‍‍ಗಳನ್ನು ನೀಡಲು ಹೇಳುತ್ತಾರೆ. ಸ್ಕಾರ್ಪಿಯೊ ಮಾಲಿಕರ ಹತ್ತಿರ ಡಾಕ್ಯುಮೆಂಟ್ ಇರುವುದಿಲ್ಲ.

ಸ್ಕಾರ್ಪಿಯೋ ಗ್ರಾಹಕನಿಗೆ ಶೋರಂನ ಸಿಬ್ಬಂದಿಗಳಿಂದ ಮೋಸ

ಡಾಕ್ಯುಮೆಂಟ್ ಇಲ್ಲದಿರುವ ಕಾರಣ ಹರಿಓಂ ಅವರು ತಕ್ಷಣವೆ ತಮ್ಮ ಕಾರಿನ ರಿಜಿಸ್ಟ್ರೆಷನ್ ಸಂಖ್ಯೆಯ ಸಹಾಯದಿಂದ ಕಾರನ್ನು ಹುಡುಕುವ ಕಾರ್ಯಕ್ಕೆಂದು ಹೋದಾಗ, ಹರಿಓಂ ತಮ್ಮ ಹೊಸ ಕಾರಿಗಾಗಿ ಪಡೆದ HR26-DC-7485 ನೋಂದಣಿ ಸಂಖ್ಯೆಯಲ್ಲಿ ದ್ವಿಚಕ್ರ ವಾಹನದ ರಿಜಿಸ್ಟ್ರೇಷನ್ ಆಗಿರುತ್ತದೆ.

ಸ್ಕಾರ್ಪಿಯೋ ಗ್ರಾಹಕನಿಗೆ ಶೋರಂನ ಸಿಬ್ಬಂದಿಗಳಿಂದ ಮೋಸ

ರೂ. 1.09 ಲಕ್ಷದ ವಾಹನಗಳ ನೋಂದಣಿ ಕಾರ್ಯಕ್ಕಾಗಿ ನೀಡಿರುವ ಹಣವು ವ್ಯರ್ಥವಾಗಿದೆ ಎಂದು ಮತ್ತು ಹೊಸ ಕಾರು ಖರೀದಿಸಲು ಹೋದಾಗ ತಮಗೆ ಆ ಕಾರನ್ನು ಮಾರಿದ ಸೇಲ್ಸ್ ಮ್ಯಾನ್ ಹಾಗು ಮ್ಯಾನೇಜರ್‍‍ ಮೋಸ ಮಾಡಿರುವುದಾಗಿ ತಿಳಿದು ಬರುತ್ತದೆ.

ಸ್ಕಾರ್ಪಿಯೋ ಗ್ರಾಹಕನಿಗೆ ಶೋರಂನ ಸಿಬ್ಬಂದಿಗಳಿಂದ ಮೋಸ

ಹೀಗಾದ ನಂತರ ಹರಿಓಂರವರು ತಾವು ಹೊಸ ಸ್ಕಾರ್ಪಿಯೊ ಕಾರನ್ನು ಖರೀದಿಸಿದ ಶೋರಂಗೆ ಹೋದಾಗ ತಮಗೆ ಕಾರನ್ನು ಮಾರಿದ ಸೇಲ್ಸ್ ಮ್ಯಾನ್ ಮತ್ತು ಮ್ಯಾನೇಜರ್ ಇಬ್ಬರೂ ಅಲ್ಲಿಂದ ಕೆಲಸ ಬಿಟ್ಟಿರುವುದಾಗಿ ಹೇಳುತ್ತಾರೆ.

ಸ್ಕಾರ್ಪಿಯೋ ಗ್ರಾಹಕನಿಗೆ ಶೋರಂನ ಸಿಬ್ಬಂದಿಗಳಿಂದ ಮೋಸ

ಈ ಕುರಿತಾಗಿ ಹರಿಓಂರವರು ತಕ್ಷಣವೇ ತಮಗೆ ಮೋಸ ಮಾಡಿದ ಆ ಇಬ್ಬರು ಸಿಬ್ಬಂದಿಗಳ ಮೇಲೆ ಕಂಪ್ಲೈಂಟ್ ಮಾಡಲು ಮುಂದಾಗಿದ್ದು, ಅಲ್ಲಿನ ಅಧಿಕಾರಿಗಳು ಆ ಇಬ್ಬರು ಸಿಬ್ಬಂದಿಗಳ ಮೇಲೆ ಸೆಕ್ಷನ್ 406 (ಸುಳ್ಳುಪತ್ರ) ಮತ್ತು 420 (ಮೋಸಗಾರಿಕೆ)ಯ ಅಡಿಯಲ್ಲಿ ಕೇಸ್ ಅನ್ನು ನಮೂದಿಸಲಾಗಿದೆ.

MOST READ: ಬೈಕ್ ಮೂಲಕವೇ ಬೆಂಗಳೂರು ಟು ಸಿಡ್ನಿಗೆ ಹೊರಟಿರುವ ಹುಬ್ಬಳ್ಳಿ ಹುಡುಗಿಯ ಕನಸು ಏನು?

ಸ್ಕಾರ್ಪಿಯೋ ಗ್ರಾಹಕನಿಗೆ ಶೋರಂನ ಸಿಬ್ಬಂದಿಗಳಿಂದ ಮೋಸ

ಶೋರಂನಲ್ಲಿನ ಹೊಸ ಸಿಬ್ಬಂದಿಗಳು ನಮಗೂ ಅವರಿಗೂ ಯಾವುದೇ ಮಾತುಕತೆ ಇಲ್ಲವೆಂದು ಹೇಳಿಕೊಂಡಿರುವುದಾಗಿದ್ದು, ಈಗ ಪ್ರಸ್ತುತ ಅಲ್ಲಿನ ಪೊಲೀಸರು ಆ ಇಬ್ಬರು ಸಿಬ್ಬಂದಿಗಾಗಿ ಬಲೆ ಬೀಸಿದ್ದು, ಹೊಸ ಕಾರು ಖರೀದಿ ವೇಳೆ ಇಂತಹ ಪ್ರಕರಣಗಳ ಬಗ್ಗೆ ಎಚ್ಚರವಾಗಿರುವುದು ಒಳಿತು.

Article Published On: Friday, October 5, 2018, 17:53 [IST]
English summary
The showroom staff who rolled out 1.09 lakh rupees to the car owner.
Read more on auto news new car
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+