ತನ್ನ ತಂದೆಯ 50ನೇ ಹುಟ್ಟುಹಬ್ಬಕ್ಕೆ ಮಗನಿಂದ ಸರ್ಪ್ರೈಸ್ ಗಿಫ್ಟ್

ಹೆತ್ತವರು ಪ್ರತ್ಯೇಕವಾದ ವಸ್ತು ಒಂದನ್ನು ತಮ್ಮದಾಗಿಸಿಕೊಳ್ಳಬೇಕೆಂಬ ಮಹಾದಾಸೆಯನ್ನು ಪಕ್ಕಕಿಟ್ಟು, ಕೇವಲ ತಮ್ಮ ಮಕ್ಕಳಿಗಾಗಿ ತಮ್ಮ ಆಸೆಗಳನ್ನು ಕೂಡಾ ಲೆಕ್ಕಹಾಕದೆ ಶ್ರಮಿಸಿ ಮಕ್ಕಳನ್ನು ಸರಿಯಾದ ಜೀವನದ ಹಾದಿಯಲ್ಲಿ ನಡೆಸುತ್ತಾರೆ. ಅಂತಹ ಸಂದರ್ಭದಲ್ಲಿ ಮಕ್ಕಳು ತಮ್ಮ ಸ್ವಂತ ಕಾಲಿನ ಮೇಲೆ ನಿಂತುಕೊಂಡ ಬಳಿಕ ಹೆತ್ತವರಿಗೆ ಇಷ್ಟ ಪಟ್ಟ ಆ ವಸ್ತುವನ್ನು ಸರ್ಪ್ರೈಸ್ ಆಗಿ ನೀಡುವುದಲ್ಲಿರುವ ಖುಷಿಯೇ ಬೇರೆ.

ತನ್ನ ತಂದೆಯ 50ನೇ ಹುಟ್ಟುಹಬ್ಬಕ್ಕೆ ಮಗನಿಂದ ಸರ್ಪ್ರೈಸ್ ಗಿಫ್ಟ್

ಇಂತಹ ಘಟನೆಯೆ ತೆಲೆಂಗಾಣ ರಾಜ್ಯದಲ್ಲು ನಡೆದಿದ್ದು, ತಮಾನನ ಲೋಹಿತ್ ಎಂಬಾತ ತನ್ನ ತಂದೆಯ 50ನೇ ವರ್ಷದ ಹುಟ್ಟುಹಬ್ಬಕ್ಕೆ ತಂದೆ ಬಯಸಿದ ಕಾರನ್ನು ಖರೀದಿಸಿ ಉಡುಗೊರೆಯಾಗಿ ನೀಡಿದ್ದಾನೆ. ಈ ಕುರಿತಾತ ವಿಡಿಯೋ ಒಂದು ಸಾಮಾಜಿಕ ತಾಲಣಗಳಲ್ಲಿ ಹರಿದಾಡುತ್ತಿದ್ದು, ಬಹುತೇಕರ ಕಣ್ಣೀರಿಗೆ ಕಾರಣವಾಗಿದೆ.

ತನ್ನ ತಂದೆಯ 50ನೇ ಹುಟ್ಟುಹಬ್ಬಕ್ಕೆ ಮಗನಿಂದ ಸರ್ಪ್ರೈಸ್ ಗಿಫ್ಟ್

ಲೋಹಿತ್‍ನ ತಂದೆಯು ತನ್ನ ಮಗನನು ಬೆಳೆದು ಬಂದಾಗ ಒಂಡು ದೊಡ್ದ ಕಾರನ್ನು ಖರೀದಿಸಲು ಬಯಸಿದ್ದರು. ಲೋಹಿತ್‍ನನ್ನು ಉನ್ನತ್ತ ಸ್ಥಾನಕ್ಕೆ ಬೆಳೆಸಲು ತನ್ನ ಕನಸುಗಳನ್ನು ಮತ್ತು ಬಹುತೇಕ ತ್ಯಾಗಗಳನ್ನು ಮಾಡಿ ತಾನು ಖರೀದಿಸಲಾಗ್ದ ಆ ಕಾರನ್ನು ತನ್ನ ಮಗ ದೊಡ್ಡವನಾದ ಮೇಲೆ ಖರೀದಿಸಲು ಇಚ್ಛಿಸಿದರಂತೆ.

ತನ್ನ ತಂದೆಯ 50ನೇ ಹುಟ್ಟುಹಬ್ಬಕ್ಕೆ ಮಗನಿಂದ ಸರ್ಪ್ರೈಸ್ ಗಿಫ್ಟ್

ಈ ನಿಟ್ಟಿನಲ್ಲಿ ತಂದೆಯ ಆಸೆಯನ್ನು ಗಂಭೀರವಾಗಿ ತೆಗೆದುಕೊಂಡ ಲೋಹಿತ್ ಕೊನೆಗು ತನ್ನ ತಂದೆಯ 50ನೇ ಹುಟ್ಟುಹಬ್ಬದ ಪ್ರಯುಕ್ತ ಕಾರನ್ನು ಖರೀದಿಸಿ ಉಡುಗೊರೆಯಾಗಿ ನೀಡಿದ್ದಾನೆ. ಇದನ್ನು ತನ್ನ ತಂದೆಗೆ ಸರ್ಪ್ರೈಸ್ ಆಗಿ ತೋರಿಸಲು ಒಂದು ವಿಶಾಲವಾದ ಜಾಗದಲ್ಲಿ ಕಾರನ್ನು ಇರಿಸಿ ಆ ಜಾಗಕ್ಕೆ ತನ್ನ ತಂದೆಯ ಕಣ್ಣುಗಳನ್ನು ಕೈಗಳಿಂದ ಮುಚ್ಚಿ ಕರೆದುಕೊಂಡು ಹೋಗುತ್ತಾನೆ.

MOST READ: ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಇಳಿಕೆಯ ಹಿಂದಿನ ಕೇಂದ್ರದ ಪ್ಲ್ಯಾನ್ ಏನು?

ಉಡುಗೊರೆಯಾಗಿ ತಂದ ಕಾರಿನ ಕೀಲಿಗಳನ್ನು ತನ್ನ ತಂದೆಯ ಕೈಗೆ ಹಸ್ತಾಂತರಿಸಿದ ಕ್ಷಣದಲ್ಲಿ ಆ ತಂದೆಯ ಕಣ್ಣಲ್ಲಿ ಕಂಡ ಆ ಖುಷಿಗೆ ಬೇರೆ ಮಾತಿಲ್ಲ. ಹ್ಯುಂಡೈ ವೆರ್ನಾ ಕಾರನ್ನು ನೋಡಿ ಅದರಲ್ಲಿ ಕೂತು ಖುಷಿಯನ್ನು ವ್ಯಕ್ತಪಡಿಸಿದ ವೀಡಿಯೊ ಇಲ್ಲಿದೆ ನೋಡಿ..

ತನ್ನ ತಂದೆಯ 50ನೇ ಹುಟ್ಟುಹಬ್ಬಕ್ಕೆ ಮಗನಿಂದ ಸರ್ಪ್ರೈಸ್ ಗಿಫ್ಟ್

ಉಡುಗರೆಯನ್ನು ಪಡೆದ ಖುಷಿಯನ್ನು ಕೊಂಡಾಡಿ ಕೊನೆಗೆ 50ನೇ ಹುಟ್ಟುಹಬ್ಬದ ಕೇಕ್ ಅನ್ನು ಕಟ್ ಮಾಡಿ ಅಲ್ಲಿದ್ದ ಕುಟುಂಬ ಸದಸ್ಯರ ಜೊತೆ ಹಂಚಿಕೊಂಡಿದ್ದಾರೆ. ಮಗನು ತಂದ ಉಡುಗೊರೆಯನ್ನು ಹೊಗಳುತ್ತಾ ತನ್ನ ಭಾವನೆಗಳನ್ನು ವೀಡಿಯೋ ಅನ್ನು ನೋಡಿದವರಿಗೂ ಸಹ ಕಣ್ತುಂಬಿ ಬರುವುದು ಖಚಿತ.

ತನ್ನ ತಂದೆಯ 50ನೇ ಹುಟ್ಟುಹಬ್ಬಕ್ಕೆ ಮಗನಿಂದ ಸರ್ಪ್ರೈಸ್ ಗಿಫ್ಟ್

ಇನ್ನು ಲೋಹಿತ್ ತನ್ನ ತಂದೆಗೆ ಉಡುಗೊರೆಯಾಗಿ ನೀಡಿದ ಹ್ಯುಂಡೈ ವೆರ್ನಾ ಕಾರಿನ ಬಗ್ಗೆ ಹೇಳುವುದಾದರೆ, ಈ ಕಾರು ಸಿ-ಸೆಗ್ಮೆಂಟ್‍ ಸೆಡಾನ್ ಕಾರಿನ ಸರಣಿಯಲ್ಲಿ ಹೆಚ್ಚು ಜನಪ್ರಿಯತೆಯನ್ನು ಪಡೆದುಕೊಂಡಿದೆ. ಹ್ಯುಂಡೈ ವೆರ್ನಾ ಎರಡು ಪೆಟ್ರೋಲ್ ಮತ್ತು ಒಂದು ಡೀಸೆಲ್ ಎಂಜಿನ್ ಮಾದರಿಗಳಲ್ಲಿ ಖರೀದಿಗೆ ಲಭ್ಯವಿದೆ.

ತನ್ನ ತಂದೆಯ 50ನೇ ಹುಟ್ಟುಹಬ್ಬಕ್ಕೆ ಮಗನಿಂದ ಸರ್ಪ್ರೈಸ್ ಗಿಫ್ಟ್

ಕಾರಿನಲ್ಲಿನ 1.4 ಲೀಟರ್ ಪೆಟ್ರೋಲ್ ಎಂಜಿನ್ 99ಬಿಹೆಚ್‍‍ಪಿ ಮತ್ತು 132ಎನ್ಎಮ್ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದುಕೊಂದಿದ್ದು, ಎಂಜಿನ್ ಅನ್ನು 6 ಸ್ಪೀಡ್ ಗೇರ್‍‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ. ಇನ್ನು 1.6 ಲೀಟರ್‍‍ನ ಪೆಟ್ರೋಲ್ ಎಂಜಿನ್ 121ಬಿಹೆಚ್‍ಪಿ ಮತ್ತು 151ಎನ್ಎಮ್ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಹೊಂದಿದ್ದು, ಎಂಜಿನ್ ಅನ್ನು 6 ಸ್ಪೀಡ್ ಮ್ಯಾನುವಲ್ ಅಥವಾ ಆಟೋಮ್ಯಾಟಿಕ್ ಗೇರ್‍‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ.

ತನ್ನ ತಂದೆಯ 50ನೇ ಹುಟ್ಟುಹಬ್ಬಕ್ಕೆ ಮಗನಿಂದ ಸರ್ಪ್ರೈಸ್ ಗಿಫ್ಟ್

ವಿಡಿಯೋನಲ್ಲಿ ಕಂಡು ಬಂದ ಹ್ಯುಂಡೈ ವೆರ್ನಾ ಕಾರು ಡೀಸೆಲ್ ಮಾದರಿಯದಾಗಿದ್ದು, ಈ ಕಾರಿನಲ್ಲಿನ 1.6 ಲೀಟರ್ ಡೀಸೆಲ್ ಎಂಜಿನ್ ಸಹಾಯದಿಂದ 126ಬಿಹೆಚ್‍ಪಿ ಮತ್ತು 260ಎನ್ಎಮ್ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದಿದ್ದು, ಎಂಜಿನ್ ಅನ್ನು 6 ಸ್ಪೀಡ್ ಮ್ಯಾನುವಲ್ ಅಥವಾ ಆಟೋಮ್ಯಾಟಿಕ್ ಗೇರ್‍‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ.

MOST READ: ಹಬ್ಬಕ್ಕೆ ಹೊಸ ಕಾರು ಖರೀದಿಸುವವರಿಗೆ ಮಾರುತಿ ಸುಜುಕಿ ಇಂದ ಭಾರೀ ರಿಯಾಯಿತಿ..

ತನ್ನ ತಂದೆಯ 50ನೇ ಹುಟ್ಟುಹಬ್ಬಕ್ಕೆ ಮಗನಿಂದ ಸರ್ಪ್ರೈಸ್ ಗಿಫ್ಟ್

ಪ್ರಸ್ತುತ ಮಾರುಕಟ್ಟೆಯಲ್ಲಿ ದೆಹಲಿಯ ಎಕ್ಸ್ ಶೋರಂ ಪ್ರಕಾರ ರೂ. 8.76 ಲಕ್ಷದ ಪ್ರಾರಂಭಿಕ ಬೆಲೆಯಲ್ಲಿ ಮಾರಾಟಗುಳ್ಳುತ್ತಿರುವ ಈ ಕಾರು 4400 ಉದ್ದ, 1475ಎಂಎಂ ಎತ್ತರ, 1729ಎಂಎಂ ಅಗಲ, 2600ಎಂಎಂ ವ್ಹೀಲ್‍‍ಬೇಸ್, 170ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಮತ್ತು 465 ಲೀಟರ್‍‍ನ ಬೂಟ್ ಸ್ಪೇಸ್ ಅನ್ನು ಪಡೆದುಕೊಂಡಿದೆ.

ತನ್ನ ತಂದೆಯ 50ನೇ ಹುಟ್ಟುಹಬ್ಬಕ್ಕೆ ಮಗನಿಂದ ಸರ್ಪ್ರೈಸ್ ಗಿಫ್ಟ್

ಪ್ರಯಾಣಿಕರ ಸುರಕ್ಷತೆಗಾಗಿ ಹ್ಯುಂಡೈ ವೆರ್ನಾ ಕಾರಿನಲ್ಲಿ ಫ್ರಂಟ್ ಸೈಡ್, ಫ್ರಂಟ್ ಮತ್ತು ಪ್ಯಾಸಂಜರ್ ಏರ್‍‍ಬ್ಯಾಗ್, ಎಬಿಎಸ್, ಎಂಜಿನ್ ಇಮ್ಮೊಬಿಲೈಜರ್, ಸೆಂಟ್ರಲ್ ಲಾಕಿಂಗ್, ಚೈಲ್ಡ್ ಲಾಕಿಂಗ್, ಚೈಲ್ಡ್ ಸೇಫ್ಟಿ ಲಾಕ್, ಎಲೆಕ್ಟ್ರಾನಿಕ್ ಬ್ರೇಕ್ ಫೋರ್ಸ್ ಡಿಸ್ಟ್ರಿಬ್ಯೂಷನ್ ಎಂಬ ಹಲವಾರು ವೈಶಿಷ್ಟ್ಯತೆಗಳನ್ನು ಅಳವಡಿಸಲಾಗಿದೆ.

Most Read Articles

Kannada
Read more on off beat new car hyundai verna
English summary
Surprise! Son gifts father a Hyundai Verna, happiness all around
Story first published: Friday, October 5, 2018, 11:39 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X