ಆಸ್ಪೈರ್ ಎಲೆಕ್ಟ್ರಿಕ್ ಕಾರು ಮಾದರಿಯನ್ನು ಬಿಡುಗಡೆ ಮಾಡಲಿದೆ ಫೋರ್ಡ್

ಫೋರ್ಡ್ ತನ್ನ ಆಸ್ಪೈರ್ ಕಾಂಪ್ಯಾಕ್ಟ್ ಸೆಡಾನ್ ಕಾರನ್ನು ಎಲೆಕ್ಟ್ರಿಕ್ ಆವೃತ್ತಿಯೊಂದಿಗೆ ಬಿಡುಗಡೆ ಮಾಡುವ ಸುಳಿವು ನೀಡಿದ್ದು, ಇದಕ್ಕಾಗಿ ದೇಶಿಯ ಕಾರು ಉತ್ಪಾದನಾ ಸಂಸ್ಥೆಯಾದ ಮಹೀಂದ್ರಾ ಎಲೆಕ್ಟ್ರಿಕ್ ಜೊತೆ ಕೈಜೊಡಿಸಿದೆ.

By Praveen Sannamani

ಅಮೆರಿಕದ ಪ್ರಸಿದ್ದ ವಾಹನ ತಯಾರಕಾ ಸಂಸ್ಥೆಯಾದ ಫೋರ್ಡ್ ತನ್ನ ಆಸ್ಪೈರ್ ಕಾಂಪ್ಯಾಕ್ಟ್ ಸೆಡಾನ್ ಕಾರನ್ನು ಎಲೆಕ್ಟ್ರಿಕ್ ಆವೃತ್ತಿಯೊಂದಿಗೆ ಬಿಡುಗಡೆ ಮಾಡುವ ಸುಳಿವು ನೀಡಿದ್ದು, ಇದಕ್ಕಾಗಿ ದೇಶಿಯ ಕಾರು ಉತ್ಪಾದನಾ ಸಂಸ್ಥೆಯಾದ ಮಹೀಂದ್ರಾ ಎಲೆಕ್ಟ್ರಿಕ್ ಜೊತೆ ಕೈಜೊಡಿಸಿದೆ.

ಆಸ್ಪೈರ್ ಎಲೆಕ್ಟ್ರಿಕ್ ಕಾರು ಮಾದರಿಯನ್ನು ಬಿಡುಗಡೆ ಮಾಡಲಿದೆ ಫೋರ್ಡ್

ಈ ಹಿಂದಷ್ಟೇ ಫೋರ್ಡ್ ಸಂಸ್ಥೆಯು ತನ್ನ ಹೊಸ ಫಿಗೊ ಹ್ಯಾಚ್ ಬ್ಯಾಕ್ ಮತ್ತು ಆಸ್ಪೈರ್ ಕಾಂಪ್ಯಾಕ್ಟ್ ಸೆಡಾನ್ ಕ್ರೀಡಾ ಕಾರು ಆವೃತ್ತಿಗಳನ್ನು ಬಿಡುಗಡೆಗೊಳಿಸಿದ್ದು, ಇದೀಗ ಎಲೆಕ್ಟ್ರಿಕ್ ಮಾದರಿಯನ್ನು ಅಭಿವೃದ್ಧಿಗೊಳಿಸುತ್ತಿರುವುದು ಹೊಸ ಸಂಚಲನಕ್ಕೆ ಕಾರಣವಾಗಿದೆ.

Recommended Video

2018 ನೆಕ್ಸಾನ್ ಎಎಂಟಿ | Tata Nexon AMT Details & Specifications - DriveSpark
ಆಸ್ಪೈರ್ ಎಲೆಕ್ಟ್ರಿಕ್ ಕಾರು ಮಾದರಿಯನ್ನು ಬಿಡುಗಡೆ ಮಾಡಲಿದೆ ಫೋರ್ಡ್

ಫೋರ್ಡ್ ಅಭಿವೃದ್ಧಿ ಮಾಡಲಿರುವ ಆಸ್ಪೈರ್ ಮಾದರಿಗೆ ಮಹೀಂದ್ರಾ ಸಂಸ್ಥೆಯು ಎಂಜಿನ್ ವ್ಯವಸ್ಥೆಯನ್ನು ಕಲ್ಪಿಸಲಿದ್ದು, ಈ ಮೂಲಕ ಅತ್ಯುತ್ತಮ ಮೈಲೇಜ್ ಕಾರು ಮಾದರಿಯನ್ನು ಸಿದ್ಧಗೊಳಿಸಲಿದೆ.

ಆಸ್ಪೈರ್ ಎಲೆಕ್ಟ್ರಿಕ್ ಕಾರು ಮಾದರಿಯನ್ನು ಬಿಡುಗಡೆ ಮಾಡಲಿದೆ ಫೋರ್ಡ್

ಸದ್ಯ ಮಾರುಕಟ್ಟೆಯಲ್ಲಿ ಲಭ್ಯವಿರುವ ಮಹೀಂದ್ರಾ ಇವಿ ವೆರಿಟೊ ಕಾರು ಮಾದರಿಗಿಂತಲೂ ಆಸ್ಪೈರ್ ಕಾರುಗಳಿಗೆ ಸುಧಾರಿತ ಎಲೆಕ್ಟ್ರಿಕ್ ಎಂಜಿನ್ ಒದಗಿಸಲಿರುವ ಮಹೀಂದ್ರಾ ಸಂಸ್ಥೆಯು, ಪ್ರತಿ ಚಾರ್ಜಿಂಗ್‌ಗೆ ಕನಿಷ್ಠ 200 ಕಿಮಿ ಮೈಲೇಜ್ ಸಾಮರ್ಥ್ಯದ ಬ್ಯಾಟರಿ ಸಿದ್ದಪಡಿಸಲಿದೆ.

ಆಸ್ಪೈರ್ ಎಲೆಕ್ಟ್ರಿಕ್ ಕಾರು ಮಾದರಿಯನ್ನು ಬಿಡುಗಡೆ ಮಾಡಲಿದೆ ಫೋರ್ಡ್

ಮಹೀಂದ್ರಾ ಬಿಡುಗಡೆ ಮಾಡಲಿರುವ ಆಸ್ಪೈರ್ ಇವಿ ಆವೃತ್ತಿಯು 2019ರ ಆರಂಭದಲ್ಲಿ ಮಾರುಕಟ್ಟೆಗೆ ಪ್ರವೇಶಿಸುವ ಸಾಧ್ಯತೆಗಳಿದ್ದು, 72 ವಿ ಲಿಥಿಯಂ ಅಯಾನ್ ಬ್ಯಾಟರಿ ಹೊಂದಿರಲಿದೆ ಎಂಬ ಮಾಹಿತಿ ಲಭ್ಯಲಾಗಿದೆ.

ಆಸ್ಪೈರ್ ಎಲೆಕ್ಟ್ರಿಕ್ ಕಾರು ಮಾದರಿಯನ್ನು ಬಿಡುಗಡೆ ಮಾಡಲಿದೆ ಫೋರ್ಡ್

ಜೊತೆಗೆ ಕಾರಿನಲ್ಲಿರುವ ತಾಂತ್ರಿಕ ಸೌಲಭ್ಯಗಳನ್ನು ಕೂಡಾ ಇವಿ ಮಾದರಿಯಲ್ಲಿ ಉನ್ನತಿಕರಿಸುವ ಬಗ್ಗೆ ಸುಳಿವು ನೀಡಿರುವ ಫೋರ್ಡ್, ಎಲೆಕ್ಟ್ರಿಕ್ ಕಾರು ಉತ್ಪಾದನೆಯಲ್ಲಿ ಮುನ್ನಡೆ ಸಾಧಿಸಿರುವ ಮಹೀಂದ್ರಾ ಜೊತೆ ಕೈಜೊಡಿಸಿರುವುದಕ್ಕೆ ಸಂತಸ ವ್ಯಕ್ತಪಡಿಸಿದೆ.

ಆಸ್ಪೈರ್ ಎಲೆಕ್ಟ್ರಿಕ್ ಕಾರು ಮಾದರಿಯನ್ನು ಬಿಡುಗಡೆ ಮಾಡಲಿದೆ ಫೋರ್ಡ್

ಹೀಗಾಗಿ 2019ರ ಮೊದಲಾರ್ಧದಲ್ಲಿ ಆಸ್ಪೈರ್ ಇವಿ ಕಾರುಗಳು ರಸ್ತೆಗಿಳಿಯುವ ತವಕದಲ್ಲಿದ್ದು, ಹೊಸ ಕಾರಿನ ಬಗ್ಗೆ ಸದ್ಯದಲ್ಲಿ ಫೋರ್ಡ್ ಸಂಸ್ಥೆಯು ಮತ್ತಷ್ಟು ಮಾಹಿತಿ ಹೊರಹಾಕಲಿದೆ.

Trending On DriveSpark Kannada:

ಪ್ರಧಾನಿ ನರೇಂದ್ರ ಮೋದಿ ಚಾಲನೆ ಮಾಡಿದ ಈ ಎಲೆಕ್ಟ್ರಿಕ್ ಕಾರಿನ ವಿಶೇಷತೆ ಏನು?

10 ಲಕ್ಷದೊಳಗೆ ಖರೀದಿಸಬಹುದಾದ ಟಾಪ್ 10 ಕಾರುಗಳಿವು..

ಹೊಸ ಕೆಟಿಎಂ ಡ್ಯೂಕ್ 390 ಖರೀದಿಸಿದ ತಪ್ಪಿಗೆ ಅಲೆದಾಡುತ್ತಿರುವ ಬೈಕರ್...

Most Read Articles

Kannada
English summary
Ford Aspire Electric Sedan In The Works — Launch Details Revealed.
Story first published: Wednesday, February 28, 2018, 19:34 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X