ಫೋರ್ಡ್ ಇಕೋ ಸ್ಪೋರ್ಟ್‌ನಲ್ಲಿ ಬರಲಿದೆ ಫೌರ್ ವೀಲ್ಹ್ ಡ್ರೈವ್ ವೆರಿಯೆಂಟ್
ಜನಪ್ರಿಯ ಇಕೋ ಸ್ಪೋರ್ಟ್ ಮಾದರಿಗಳಲ್ಲಿ ಆಲ್ಹ್ ವೀಲ್ಹ್ ಡ್ರೈವ್ ವೆರಿಯೆಂಟ್ ಪರಿಚಯಿಸಲು ಮುಂದಾಗಿರುವ ಫೋರ್ಡ್ ಸಂಸ್ಥೆಯು ಹೊಸ ಕಾರುಗಳನ್ನು ಸ್ಪಾಟ್ ಟೆಸ್ಟಿಂಗ್ ನಡೆಸುತ್ತಿದೆ.
ಆಪ್ ರೋಡ್ ಇಷ್ಟಪಡುವ ಎಸ್‌ಯುವಿ ಪ್ರಿಯರಿಗೆ ಆಲ್ಹ್ ವೀಲ್ಹ್ ಡ್ರೈವ್ ವೆರಿಯೆಂಟ್‌ಗಳ ಖರೀದಿಗೆ ಹೆಚ್ಚಿನ ಒಲವು ಹೊಂದಿರುತ್ತಾರೆ. ಇದೇ ಕಾರಣಕ್ಕೆ ತನ್ನ ಜನಪ್ರಿಯ ಇಕೋ ಸ್ಪೋರ್ಟ್ ಮಾದರಿಗಳಲ್ಲಿ ಆಲ್ಹ್ ವೀಲ್ಹ್ ಡ್ರೈವ್ ವೆರಿಯೆಂಟ್ ಪರಿಚಯಿಸಲು ಮುಂದಾಗಿರುವ ಫೋರ್ಡ್ ಸಂಸ್ಥೆಯು ಹೊಸ ಕಾರುಗಳನ್ನು ಸ್ಪಾಟ್ ಟೆಸ್ಟಿಂಗ್ ನಡೆಸುತ್ತಿದೆ.

ಫೋರ್ಡ್ ಸಂಸ್ಥೆಯು ಪುದಚೇರಿಯ ಪ್ರಮುಖ ಕಡೆಗಳಲ್ಲಿ ಹೊಸ ಇಕೋ ಸ್ಪೋರ್ಟ್ ಹೊಸ ಕಾರುಗಳನ್ನು ಸ್ಪಾಟ್ ಟೆಸ್ಟಿಂಗ್ ಕೈಗೊಂಡಿದ್ದು, ಕಂಪ್ಯಾಕ್ಟ್ ಎಸ್‌ಯುವಿ ಕಾರುಗಳಲ್ಲಿ ಮೊದಲ ಬಾರಿಗೆ ಆಲ್ ವೀಲ್ಹ್ ಡ್ರೈವ್ ಸಿಸ್ಟಂ ಜೋಡಣೆ ಮಾಡಿದೆ. ಇದು ಭಾರತದಲ್ಲಿ ಇದುವರೆಗೆ ಯಾವುದೇ ಕಾರು ಉತ್ಪಾದನಾ ಸಂಸ್ಥೆಗಳು ಸಹ ಕಂಪ್ಯಾಕ್ಟ್ ಎಸ್‌ಯುವಿಗಳಲ್ಲಿ ಆಲ್ ವೀಲ್ಹ್ ಡ್ರೈವ್ ಟೆಕ್ನಾಲಜಿಯನ್ನು ಬಳಕೆ ಮಾಡಿಲ್ಲ.

ಹೀಗಾಗಿ ಫೋರ್ಡ್ ಸಂಸ್ಥೆಯು ಬಿಡುಗಡೆ ಮಾಡುತ್ತಿರುವ ಆಲ್ ವೀಲ್ಹ್ ಡ್ರೈವ್ ಇಕೋ ಸ್ಪೋರ್ಟ್ ಕಾರುಗಳು ಅಧಿಕ ಮಟ್ಟದ ಎಂಜಿನ್ ಸಾಮರ್ಥ್ಯದೊಂದಿಗೆ ಮಾರುಕಟ್ಟೆಗೆ ಲಗ್ಗೆಯಿಡಲಿದ್ದು, ಸದ್ಯ ಮಾರಾಟವಾಗುತ್ತಿರುವ ಇಕೋ ಸ್ಪೋರ್ಟ್ ಇತರೆ ವೆರಿಯೆಂಟ್‌ಗಳಿಂತಲೂ ಇದು ಹೆಚ್ಚು ಬಲಿಷ್ಠವಾಗಲಿದೆ.

ಆಲ್ ವೀಲ್ಹ್ ಡ್ರೈವ್ ಅಂದ್ರೆ ಏನು?
ಸಾಮಾನ್ಯವಾಗಿ ಟು ವೀಲ್ಹ್ ಡ್ರೈವ್ ಸಿಸ್ಟಂ ಪ್ರತಿಯೊಂದು ಕಾರಿನಲ್ಲೂ ಕಂಡುಬರುವ ಒಂದು ತಾಂತ್ರಿಕ ಅಂಶವಾಗಿದ್ದು, ವಿಶೇಷವಾಗಿ ಟಾಪ್ ಎಂಡ್ ಎಸ್‌ಯುವಿ ಕಾರುಗಳಲ್ಲಿ ಮಾತ್ರ ಆಲ್ ವೀಲ್ಹ್ ಡ್ರೈವ್ ಸಿಸ್ಟಂ ಮಾತ್ರ ಜೋಡಣೆ ಹೊಂದಿರುತ್ತವೆ.

ಆಲ್ ಡ್ರೈವ್ ಟೆಕ್ನಾಲಜಿ ಇದ್ದಲ್ಲಿ ಆಪ್ ರೋಡ್ ಕೌಶಲ್ಯಗಳನ್ನು ಪ್ರದರ್ಶನಕ್ಕೆ ಸಹಕಾರಿಯಾಗಲಿದ್ದು, ಈ ವಿನೂತನ ತಂತ್ರಜ್ಞಾನವಿದ್ದಲ್ಲಿ ಎಂಜಿನ್ ಸಾಮರ್ಥ್ಯವು ಕಾರಿನ ಪ್ರತಿ ಚಕ್ರಕ್ಕೂ ಪ್ರತ್ಯೇಕವಾಗಿ ಬಲ ಪ್ರಯೋಗಿಸಲು ಸಹಕರಿಸುತ್ತದೆ. ಹೀಗಾಗಿಯೇ ಗುಡ್ಡಗಾಡು ಪ್ರದೇಶಗಳಲ್ಲಿ ಆಲ್ ವೀಲ್ಹ್ ಡ್ರೈವ್ ಸಿಸ್ಟಂ ಹೆಚ್ಚು ಪರಿಣಾಮಕಾರಿ ಕಾರ್ಯನಿರ್ವಹಣೆ ಮಾಡುತ್ತವೆ.

ಇದೇ ಕಾರಣಕ್ಕಾಗಿಯೇ ತನ್ನ ಕಂಪ್ಯಾಕ್ಟ್ ಎಸ್‌ಯುವಿಗಳಲ್ಲೂ ಆಲ್ ವೀಲ್ಹ್ ಡ್ರೈವ್ ಸೌಲಭ್ಯ ಒದಗಿಸಲು ಮುಂದಾಗಿರುವ ಫೋರ್ಡ್ ಸಂಸ್ಥೆಯು ಭಾರತಕ್ಕೆ ಅಷ್ಟೇ ಅಲ್ಲದೇ ಯುಎಸ್ಎ ಮಾರುಕಟ್ಟೆಗೂ ಇಲ್ಲಿಂದಲೇ ತನ್ನ ಹೊಸ ಕಾರುಗಳನ್ನು ರಫ್ತು ಮಾಡುವ ಯೋಜನೆ ಹೊಂದಿದೆ.

ಸದ್ಯ ಮಾರುಕಟ್ಟೆಯಲ್ಲಿ ಖರೀದಿಗೆ ಲಭ್ಯವಿರುವ ಇಕೋ ಸ್ಪೋರ್ಟ್ ಕಾರುಗಳು 1.5 ಲೀಟರ್ ಟಿಡಿಸಿಐ ಡೀಸೆಲ್ ಎಂಜಿನ್ ಸಹಾಯದಿಂದ 99ಬಿಹೆಚ್‍ಪಿ ಮತ್ತು 205ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದಿದ್ದು, 1.5 ಲೀಟರ್ ಪೆಟ್ರೋಲ್ ಎಂಜಿನ್ ಸಹಾಯದಿಂದ 123ಬೆಹೆಚ್‍ಪಿ ಮತ್ತು 150ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತವೆ. ಎರಡು ಎಂಜಿನ್‍ಗಳನ್ನು ಮ್ಯಾನುವಲ್ ಅಥವಾ ಆಟೋಮ್ಯಾಟಿಕ್ ಟ್ರಾನ್ಸ್ ಮಿಶನ್‍ಗಳೊಂದಿಗೆ ಜೋಡಿಸಲಾಗಿದೆ.

ಆದ್ರೆ, ಆಲ್ ವೀಲ್ಹ್ ಡ್ರೈವ್ ಸಿಸ್ಟಂ ಹೊಂದಿರುವ ಕಾರುಗಳು 2.0-ಲೀಟರ್ ಪೆಟ್ರೋಲ್ ಎಂಜಿನ್ ಹೊಂದಿದ್ದು, 163-ಬಿಎಚ್‌ಪಿ ಮತ್ತು 202-ಎನ್ಎಂ ಟಾರ್ಕ್ ಉತ್ಪಾದನಾ ಶಕ್ತಿಯನ್ನು ಹೊಂದಿದ್ದು, ಕಾರಿನ ಹಿಂಬದಿಯಲ್ಲಿ 4WD ಬ್ಯಾಡ್ಜ್ ಹೊಂದಿರಲಿವೆ.

ಇದರ ಜೊತೆಗೆ ಸಾಮಾನ್ಯ ಮಾದರಿಗಳಿಂತ ಕಾರು ವಿನ್ಯಾಸದಲ್ಲೂ ತುಸು ಬದಲಾವಣೆ ಪಡೆದಿರುವ ಆಲ್ ವೀಲ್ಹ್ ಡ್ರೈವ್ ಸಿಸ್ಟಂ ಪ್ರೇರಣೆಯ ಇಕೋಸ್ಪೋರ್ಟ್ ಕಾರುಗಳು ಪಾರ್ಕಿಂಗ್ ಸೆನ್ಸಾರ್ಸ್, ಸ್ಪೀಡ್ ಸೆನ್ಸಿಂಗ್, ಆಟೋ ಡೋರ್ ಲಾಕ್ ಮತ್ತು ಪ್ಯಾಸೆಂಜೆರ್ ಸೀಟ್ ಬೆಲ್ಟ್ ರಿಮೈಂಡರ್ ವೈಶಿಷ್ಟ್ಯತೆಗಳನ್ನು ಅಳವಡಿಸಲಾಗಿದೆ.

ಡ್ರೈವ್‌ಸ್ಪಾರ್ಕ್ ಅಭಿಪ್ರಾಯ
ಫೋರ್ಡ್ ಸಂಸ್ಥೆಯು ಸದ್ಯ ಆಲ್ ವೀಲ್ಹ್ ಡ್ರೈವ್ ಸಿಸ್ಟಂ ಪ್ರೇರಣೆಯ ಇಕೋ ಸ್ಪೋರ್ಟ್ ಕಾರುಗಳ ಬಿಡುಗಡೆಯ ಬಗೆಗೆ ಯಾವುದೇ ಮಾಹಿತಿ ಬಿಟ್ಟುಕೊಟ್ಟಿಲ್ಲವಾದರೂ ಭಾರತೀಯ ಮಾರುಕಟ್ಟೆಗಾಗಿಯೇ ಹೊಸ ಕಾರುಗಳನ್ನು ಅಭಿವೃದ್ಧಿಯಾಗಿವೆ ಎನ್ನಲಾಗಿದ್ದು, ಇನ್ನು ಕೆಲವು ಮಾಹಿತಿಗಳ ಪ್ರಕಾರ ಯಎಸ್ಎ ಮಾರುಕಟ್ಟೆಗಾಗಿ ಮಾತ್ರ ಹೊಸ ಕಾರುಗಳನ್ನ ಸಿದ್ದಪಡಿಸಲಾಗಿದೆ ಎನ್ನಲಾಗಿದೆ. ಹೀಗಾಗಿ ಫೋರ್ಡ್ ಸಂಸ್ಥೆಯೇ ಹೊಸ ಕಾರುಗಳ ಬಗೆಗೆ ಅಧಿಕೃತ ಮಾಹಿತಿ ನೀಡುವ ತನಕ ಹೊಸ ಕಾರುಗಳ ಬಿಡುಗಡೆಯ ಬಗ್ಗೆ ಖಚಿತತೆ ಇಲ್ಲ.


Click it and Unblock the Notifications