ಮ್ಯಾನುವಲ್ ಗೇರ್‌ಬಾಕ್ಸ್ ಪಡೆದ ಇಕೋಸ್ಪೋರ್ಟ್ ಪೆಟ್ರೋಲ್ ಟೈಟಾನಿಯಂ ಪ್ಲಸ್ ಟ್ರಿಮ್

ಪೆಟ್ರೋಲ್ ಎಂಜಿನ್ ಪ್ರೇರಿತ ಟೈಟಾನಿಯಂ ಪ್ಲಸ್ ಟ್ರಿಮ್ ಆವೃತ್ತಿಯಲ್ಲಿ 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಮಾದರಿಯನ್ನು ಬಿಡುಗಡೆ ಮಾಡಲಾಗಿದೆ.

By Praveen Sannamani

ಕಳೆದ ನವೆಂಬರ್‌ನಲ್ಲಿ ಭರ್ಜರಿ ಬಿಡುಗಡೆಯಾಗಿದ್ದ ಫೋರ್ಡ್ ಇಕೋಸ್ಪೋರ್ಟ್ ಫೇಸ್‌ಲಿಫ್ಟ್ ಎಸ್‌ಯುವಿ ಮಾದರಿಗಳಲ್ಲಿ ಇದೀಗ ಹೊಸ ಗೇರ್‌ಬಾಕ್ಸ್ ಆಯ್ಕೆಯೊಂದನ್ನು ಒದಗಿಸಲಾಗಿದ್ದು, ಪೆಟ್ರೋಲ್ ಎಂಜಿನ್ ಪ್ರೇರಿತ ಟೈಟಾನಿಯಂ ಪ್ಲಸ್ ಟ್ರಿಮ್ ಆವೃತ್ತಿಯಲ್ಲಿ 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಮಾದರಿಯನ್ನು ಬಿಡುಗಡೆ ಮಾಡಲಾಗಿದೆ.

ಮ್ಯಾನುವಲ್ ಗೇರ್‌ಬಾಕ್ಸ್ ಪಡೆದ ಇಕೋಸ್ಪೋರ್ಟ್ ಪೆಟ್ರೋಲ್ ಟೈಟಾನಿಯಂ ಪ್ಲಸ್ ಟ್ರಿಮ್

ಈ ಹಿಂದೆ ಪೆಟ್ರೋಲ್ ಎಂಜಿನ್ ಪ್ರೇರಿತ ಟೈಟಾನಿಯಂ ಪ್ಲಸ್ ಟ್ರಿಮ್ ಆವೃತ್ತಿಗಳು ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಸೌಲಭ್ಯ ಹೊಂದಿದ ಮಾದರಿಗಳು ಲಭ್ಯವಿದ್ದವು. ಆದರೇ ಹೊಸ ಕಾರುಗಳ ಬಿಡುಗಡೆ ನಂತರ ಮ್ಯಾನುವಲ್ ಕಾರುಗಳಿಗೆ ಹೆಚ್ಚಿನ ಬೇಡಿಕೆ ಬಂದ ಹಿನ್ನೆಲೆ 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಒದಗಿಸಲಾಗಿದೆ.

ಮ್ಯಾನುವಲ್ ಗೇರ್‌ಬಾಕ್ಸ್ ಪಡೆದ ಇಕೋಸ್ಪೋರ್ಟ್ ಪೆಟ್ರೋಲ್ ಟೈಟಾನಿಯಂ ಪ್ಲಸ್ ಟ್ರಿಮ್

ದೆಹಲಿ ಎಕ್ಸ್‌ಶೋರಂ ಪ್ರಕಾರ ಮ್ಯಾನುವಲ್ ಗೇರ್‌ಬಾಕ್ಸ್ ಪ್ರೇರಿತ ಟೈಟಾನಿಯಂ ಪ್ಲಸ್ ಟ್ರಿಮ್ ಆವೃತ್ತಿಯ ಬೆಲೆಯನ್ನು ರೂ.10.47ಲಕ್ಷಕ್ಕೆ ನಿಗದಿ ಮಾಡಲಾಗಿದ್ದು, ಇತರೆ ಅಗ್ಗದ ಬೆಲೆಯ ಟೈಟಾನಿಯಂ ಪ್ಲಸ್ ಟ್ರಿಮ್ ಆವೃತ್ತಿಗಳಿಂತ ಹೊಸ ಕಾರಿನ ವಿನ್ಯಾಸದಲ್ಲಿ ಕೊಂಚ ಬದಲಾವಣೆ ತರಲಾಗಿದೆ.

ಮ್ಯಾನುವಲ್ ಗೇರ್‌ಬಾಕ್ಸ್ ಪಡೆದ ಇಕೋಸ್ಪೋರ್ಟ್ ಪೆಟ್ರೋಲ್ ಟೈಟಾನಿಯಂ ಪ್ಲಸ್ ಟ್ರಿಮ್

ಪ್ರೋಜೆಕ್ಟರ್ ಹೆಡ್‌ಲ್ಯಾಂಪ್ ಮತ್ತು ಚಕ್ರಗಳ ಗಾತ್ರದಲ್ಲಿ ಬದಲಾವಣೆಯಾಗಿದ್ದು, 17 ಇಂಚಿನ ಅಲಾಯ್ ಚಕ್ರಗಳು, ಕ್ರೂಸ್ ಕಂಟ್ರೊಲರ್, ರಿಯರ್ ವ್ಯೂ ಕ್ಯಾಮೆರಾ, ರೈನ್ ಸೆನ್ಸಿಂಗ್ ವೈಪರ್ ಸೇರಿದಂತೆ ಎಲ್‌ಇಡಿ ಡೇ ಟೈಮ್ ರನ್ನಿಂಗ್ ಲೈಟ್ ಸೌಲಭ್ಯ ಒದಗಿಸಲಾಗಿದೆ.

ಮ್ಯಾನುವಲ್ ಗೇರ್‌ಬಾಕ್ಸ್ ಪಡೆದ ಇಕೋಸ್ಪೋರ್ಟ್ ಪೆಟ್ರೋಲ್ ಟೈಟಾನಿಯಂ ಪ್ಲಸ್ ಟ್ರಿಮ್

ಇನ್ನು ಕಾರಿನೊಳಗೆ ಎಂಟು ಇಂಚಿನ ಟಚ್ ಸ್ಕ್ರೀನ್, ಸಿಂಕ್ 3 ಇನ್ಪೋಟೈನ್ಮೆಂಟ್ ಸಿಸ್ಟಂ, ಬ್ಲೂಟೂತ್, ಯುಎಸ್‌ಬಿ, ಆಕ್ಸ್, ಆಂಡ್ರಾಯ್ಡ್ ಆಟೋ, ಆ್ಯಪಲ್ ಕ್ಲಾರ್ ಪ್ಲೇ ಸೌಲಭ್ಯವಿದ್ದು, ಸೆಂಟ್ರಲ್ ಕನ್ಸೊಲ್ ತಾಜಾತನ ಪಡೆದಿದೆ. ಆದ್ರೆ ಬೇಸ್ ವೆರಿಯಂಟ್‌ಗಳಲ್ಲಿ 6.5 ಇಂಚುಗಳ ಟಚ್ ಸ್ಕ್ರೀನ್ ಲಭ್ಯವಾಗಲಿದೆ.

ಮ್ಯಾನುವಲ್ ಗೇರ್‌ಬಾಕ್ಸ್ ಪಡೆದ ಇಕೋಸ್ಪೋರ್ಟ್ ಪೆಟ್ರೋಲ್ ಟೈಟಾನಿಯಂ ಪ್ಲಸ್ ಟ್ರಿಮ್

ಎಂಜಿನ್ ಸಾಮರ್ಥ್ಯ

ಟೈಟಾನಿಯಂ ಪ್ಲಸ್ ಟ್ರಿಮ್ 1.5 ಲೀಟರ್ ತ್ರಿ ಸಿಲಿಂಡರ್ ಪೆಟ್ರೋಲ್ ಎಂಜಿನ್ ಹೊಂದಿದ್ದು, 122ಬಿಎಚ್‌ಪಿ ಮತ್ತು 150ಎನ್ಎಂ ಟಾರ್ಕ್ ಉತ್ಪಾದಿಸಲಿವೆ. ಜೊತೆಗೆ 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಜೊತೆಗೆ 6-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಹೊಂದಿರಲಿವೆ.

ಮ್ಯಾನುವಲ್ ಗೇರ್‌ಬಾಕ್ಸ್ ಪಡೆದ ಇಕೋಸ್ಪೋರ್ಟ್ ಪೆಟ್ರೋಲ್ ಟೈಟಾನಿಯಂ ಪ್ಲಸ್ ಟ್ರಿಮ್

ಅಂತೆಯೇ 1.5 ಲೀಟರ್ ಡೀಸೆಲ್ ಎಂಜಿನ್ ಕೂಡಾ ಫೈವ್ ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಪಡೆಯಲಿದ್ದು, 205 ಎನ್‌ಎಂ ತಿರುಗುಬಲದಲ್ಲಿ 98.6 ಅಶ್ವಶಕ್ತಿ ಉತ್ಪಾದಿಸಲಿದೆ. ಹೀಗಾಗಿ ಡೀಸೆಲ್ ಎಂಜಿನ್‌ನಲ್ಲಿ ಬದಲಾವಣೆ ಕಂಡುಬಂದಿಲ್ಲ. ಆದ್ರೆ ಪ್ರತಿ ಲೀಟರ್‌ಗೆ 23 ಕೀ.ಮೀ ಮೈಲೇಜ್ ನೀಡುವ ಸಾಮರ್ಥ್ಯ ಹೊಂದಿರುತ್ತದೆ.

ಮ್ಯಾನುವಲ್ ಗೇರ್‌ಬಾಕ್ಸ್ ಪಡೆದ ಇಕೋಸ್ಪೋರ್ಟ್ ಪೆಟ್ರೋಲ್ ಟೈಟಾನಿಯಂ ಪ್ಲಸ್ ಟ್ರಿಮ್

ಸುರಕ್ಷಾ ಕ್ರಮಗಳು

ಹೊಸ ಕಾರಿನಲ್ಲಿ ಸುರಕ್ಷತೆಗೂ ಹೆಚ್ಚಿನ ಆದ್ಯತೆ ಕೊಡಲಾಗಿದ್ದು, ಆರು ಏರ್ ಬ್ಯಾಗ್, ಎಬಿಎಸ್ ಸ್ಟ್ಯಾಂಡರ್ಡ್ ಆಗಿ ಲಭ್ಯವಾಗಿದ್ದು, ಎಲೆಕ್ಟ್ರಾನಿಕ್ ಸ್ಟ್ಯಾಬಿಲಿಟಿ ಕಂಟ್ರೋಲರ್, ತುರ್ತು ಬ್ರೇಕ್ ಸೌಲಭ್ಯ, ಇಬಿಡಿ, ಹಿಲ್ ಸ್ಟಾರ್ಟ್ ಅಸಿಸ್ಟ್ ಅನ್ನು ಕೂಡಾ ಒದಗಿಸಲಾಗಿದೆ.

ಮ್ಯಾನುವಲ್ ಗೇರ್‌ಬಾಕ್ಸ್ ಪಡೆದ ಇಕೋಸ್ಪೋರ್ಟ್ ಪೆಟ್ರೋಲ್ ಟೈಟಾನಿಯಂ ಪ್ಲಸ್ ಟ್ರಿಮ್

ಲಭ್ಯವಿರುವ ಬಣ್ಣಗಳು

ಹೊಸ ಇಕೋಸ್ಪೋರ್ಟ್ ಕಾರುಗಳು ವಿವಿಧ 7 ಬಣ್ಣಗಳಲ್ಲಿ ಆಯ್ಕೆ ಮಾಡಬಹುದಾಗಿದ್ದು, ಲೈಟಿಂಗ್ ಬ್ಲೂ, ಕ್ಯಾನ್ಯಾನ್ ರಿಡ್ಜ್, ಡೈಮಂಡ್ ವೈಟ್, ಮೂನ್‌ಡಸ್ಟ್ ಸಿಲ್ವರ್, ರೇಸ್ ರೆಡ್, ಅಬ್ಸೊಲ್ಯೂಟ್ ಬ್ಲ್ಯಾಕ್ ಮತ್ತು ಸ್ಪೋಕ್ ಗ್ರೇ ನಲ್ಲಿ ಖರೀದಿ ಮಾಡಬಹುದಾಗಿದೆ.

ಮ್ಯಾನುವಲ್ ಗೇರ್‌ಬಾಕ್ಸ್ ಪಡೆದ ಇಕೋಸ್ಪೋರ್ಟ್ ಪೆಟ್ರೋಲ್ ಟೈಟಾನಿಯಂ ಪ್ಲಸ್ ಟ್ರಿಮ್

ಪ್ರತಿಸ್ಪರ್ಧಿಗಳು

ಸದ್ಯ ಮಾರುಕಟ್ಟೆಯಲ್ಲಿ ಮಧ್ಯಮ ಗಾತ್ರದ ಎಸ್‌ಯುವಿಗಳಿಗೆ ಸಾಕಷ್ಟು ಬೇಡಿಕೆ ಇದ್ದು, ಈ ಹಿನ್ನೆಲೆ ಜನಪ್ರಿಯ ಮಾದರಿಗಳಾದ ಮಾರುತಿ ಸುಜುಕಿ ವಿಟಾರಾ ಬ್ರಿಝಾ, ರೆನಾಲ್ಟ್ ಡಸ್ಟರ್, ಟಾಟಾ ನೆಕ್ಸನ್ ಮಾದರಿಗಳು ಹೊಸ ಇಕೋ ಸ್ಪೋರ್ಟ್ ಮಾದರಿಗೆ ತೀವ್ರ ಸ್ಪರ್ಧೆ ಒಡ್ಡುವ ಸಾಧ್ಯತೆಗಳಿವೆ.

Most Read Articles

Kannada
Read more on ford suv
English summary
Ford EcoSport Petrol Titanium+ Trim Gets 5-Speed Manual Gearbox.
Story first published: Tuesday, March 20, 2018, 17:57 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X