Just In
- 1 hr ago Honda: ಬಡವರ ಕನಸು ನನಸು.. ಕಡಿಮೆ ಬೆಲೆಗೆ ಸಿಗುತ್ತವೆ ಈ ಬೈಕ್ಗಳು
- 1 hr ago ಬಹುಕೋಟಿ ಬೆಲೆಯ ಕಾರುಗಳಿದ್ದರೂ ಸಾಮಾನ್ಯ ಮಾರುತಿ ಕಾರಿನಲ್ಲಿ ಓಡಾಡಿದ ರೋಹಿತ್ ಶರ್ಮಾ: ಕಾರಣವೇನು?
- 3 hrs ago HSRP ನಂಬರ್ ಪ್ಲೇಟ್ನಲ್ಲಿ ನಡೆಯುತ್ತಿದೆ ಭಾರೀ ಮೋಸ: ಬುಕ್ ಮಾಡದವರು ಇದನ್ನು ಗಮನಿಸಿ!
- 3 hrs ago Nissan Magnite: ಕಾಮಧೇನುವಾದ ನಿಸ್ಸಾನ್ ಮ್ಯಾಗ್ನೈಟ್.. 6 ಲಕ್ಷ ಬೆಲೆ, 20 ಕಿ.ಮೀ ಮೈಲೇಜ್
Don't Miss!
- Lifestyle ಪುಟ್ಟ ಕಂದಮ್ಮಗಳ ಮುಖದಲ್ಲಿ ನಗು ತರಿಸಲು ಟೀಚರ್ ಮಾಡಿದ ಕೆಲಸ ನೋಡಿ, ಮಕ್ಕಳ ಪಾಲಿನ ದೇವತೆ ಇವರು
- News Siddaramaiah: ಹುಬ್ಬಳ್ಳಿಯ ನೇಹಾ ಹಿರೇಮಠ ನಿವಾಸಕ್ಕೆ ಸಿಎಂ ಭೇಟಿ: ಸಿದ್ದರಾಮಯ್ಯ ಕೊಟ್ಟ ಭರವಸೆ ಏನು?
- Movies ''ಹೆಣ್ಮಕ್ಕಳು ಎಲ್ಲೆಲ್ಲೋ ಹೋದರು'' ಎಂದ ಶ್ರುತಿಗೆ ಮಹಿಳಾ ಆಯೋಗ ನೋಟಿಸ್ ; 07 ದಿನದ ಗಡುವು..!
- Sports IPL 2024: ಹೈದರಾಬಾದ್ ಅಂಗಳದಲ್ಲಿ ಗೆಲ್ಲುವುದೆ ಆರ್ಸಿಬಿ: ಟಾಸ್ ವರದಿ ಹೀಗಿದೆ
- Technology Sennheiser: ಭಾರತದಲ್ಲಿ ಸೆನ್ಹೈಸರ್ ಮೊಮೆಂಟಮ್ ಟ್ರೂ ವೈರ್ಲೆಸ್ 4 ಲಾಂಚ್! ಬೆಲೆ 20 ಸಾವಿರ
- Finance ಒಂದೆರಡಲ್ಲ ಒಂಬತ್ತು ಬಾರಿ ಉದ್ಯಮದಲ್ಲಿ ವಿಫಲತೆ, ಮಾನಸಿಕ ಖಿನ್ನತೆ ಸವಾಲುಗಳನ್ನು ಮೆಟ್ಟಿ ನಿಂತ ಉದ್ಯಮಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ತಾಂತ್ರಿಕ ದೋಷ- ಹೊಸ ಇಕೋಸ್ಪೋರ್ಟ್ ಕಾರುಗಳನ್ನು ಹಿಂಪಡೆಯಲಿದೆ ಫೋರ್ಡ್
ಹೊಸ ವೈಶಿಷ್ಟ್ಯತೆಗಳೊಂದಿಗೆ ಉತ್ತಮ ಬೇಡಿಕೆ ಪಡೆದುಕೊಳ್ಳುತ್ತಿರುವ 2018ರ ಇಕೋಸ್ಪೋರ್ಟ್ ಕಾರುಗಳು ಸದ್ಯ ಗ್ರಾಹಕರನ್ನು ಸೆಳೆಯುವಲ್ಲಿ ಯಶಸ್ವಿಯಾಗುತ್ತಿದ್ದು, ಇದೇ ವೇಳೆ ಹೊಸ ಕಾರುಗಳಲ್ಲಿ ತಾಂತ್ರಿಕ ದೋಷ ಕಂಡುಬಂದಿರುವುದು ಗ್ರಾಹಕರಲ್ಲಿ ಆತಂಕಕ್ಕೆ ಕಾರಣವಾಗಿದೆ.
ಕಾರಿನ ಫ್ರಂಟ್ ಲೋವರ್ ಆರ್ಮ್ನಲ್ಲಿರುವ ಕಂಡುಬಂದಿರುವ ತಾಂತ್ರಿಕ ದೋಷದ ಬಗ್ಗೆ ಸ್ವತಃ ಫೋರ್ಡ್ ಸಂಸ್ಥೆಯೇ ಗ್ರಾಹಕರಿಗೆ ತಿಳಿಸಿದ್ದು, ಸದ್ಯದಲ್ಲೇ ಸಮಸ್ಯೆಯನ್ನು ಬಗೆಹರಿಸುವುದಾಗಿ ಭರವಸೆ ನೀಡಿದೆ. ವರದಿಗಳ ಪ್ರಕಾರ ಚೆನ್ನೈನಲ್ಲಿರುವ ಫೋರ್ಡ್ ಉತ್ಪಾದನಾ ಘಟಕದಲ್ಲಿ ಮೇ ಮತ್ತು ಜೂನ್ ಅವಧಿಯಲ್ಲಿ ಸಿದ್ದವಾಗಿದ್ದ ಕಾರುಗಳಲ್ಲಿ ಮಾತ್ರ ಈ ತಾಂತ್ರಿಕ ದೋಷ ಕಂಡುಬಂದಿದೆ ಎನ್ನಲಾಗಿದೆ.
ಜೂನ್ ಮತ್ತು ಜುಲೈ ಅವಧಿಯಲ್ಲಿ ಮಾರಾಟಗೊಂಡಿರುವ ಒಟ್ಟು 4,379 ಕಾರುಗಳಲ್ಲಿ ಫ್ರಂಟ್ ಲೋವರ್ ಆರ್ಮ್ ದೋಷ ಕಂಡುಬಂದಿದ್ದು, ಸ್ಟಿರಿಂಗ್ ಕಂಟ್ರೊಲ್ ಮೇಲೆ ಇದು ಪರಿಣಾಮ ಬೀರುಬಹುದು ಎನ್ನಲಾಗಿದೆ.
ಹೀಗಾಗಿ ತಾಂತ್ರಿಕ ದೋಷ ಹೊಂದಿರುವ ಕಾರು ಮಾದರಿಯ ಮಾಲೀಕರನ್ನ ಸಂಪರ್ಕಿಸಿರುವ ಫೋರ್ಡ್ ಸಂಸ್ಥೆಯು ಆದ ಸಮಸ್ಯೆ ಬಗ್ಗೆ ಕ್ಷಮಾಪಣೆ ಕೋರಿದ್ದಲ್ಲದೇ ಶೀಘ್ರದಲ್ಲೇ ದೋಷರೂಪಿತ ಕಾರುಗಳಲ್ಲಿ ಸಮಸ್ಯೆಯನ್ನು ಉಚಿತವಾಗಿ ಬಗೆಹರಿಸಿಕೊಡುವ ಭರವಸೆ ನೀಡಿದೆ.
ಅಷ್ಟಕ್ಕೂ ಇದು ದೊಡ್ಡ ಸಮಸ್ಯೆ ಏನು ಅಲ್ಲಾ. ಇದಲ್ಲದೇ ಹೊಸ ಕಾರುಗಳಲ್ಲಿನ ತಾಂತ್ರಿಕ ಸಮಸ್ಯೆಗಳು ಸಾಮಾನ್ಯವಾಗಿದ್ದು, ಕಾರು ಉತ್ಪಾದನಾ ಘಟಕಗಳಲ್ಲಿ ಆಗುವ ಕೆಲವು ದೋಷಗಳಿಂದಾಗಿ ಅದು ಕಾರಿನ ತಾಂತ್ರಿಕ ಅಂಶಗಳ ಜೋಡಣೆ ಸಂದರ್ಭದಲ್ಲಿ ಈ ರೀತಿಯ ಲೋಪ ಉಂಟಾಗುತ್ತವೆ.
ಇದರಿಂದಾಗಿ ಇಕೋಸ್ಪೋರ್ಟ್ ಗ್ರಾಹಕರು ಯಾವುದೇ ಭಯಪಡುವ ಅಗತ್ಯವಿಲ್ಲ ಎಂದಿರುವ ಫೋರ್ಡ್ ಸಂಸ್ಥೆಯು ಅಧಿಕೃತ ಡೀಲರ್ಸ್ ಬಳಿ ಕಂಡುಬಂದಿರುವ ತಾಂತ್ರಿಕ ಸಮಸ್ಯೆಯನ್ನು ಬಗೆಹರಿಸಿಕೊಳ್ಳುವಂತೆ ಸಲಹೆ ನೀಡಿದ್ದು, ಮಾರಾಟವಾಗಿರುವ ಕೆಲವೇ ಕೆಲವು ಇಕೋಸ್ಪೋರ್ಟ್ ಕಾರುಗಳಲ್ಲಿ ಮಾತ್ರ ಈ ಸಮಸ್ಯೆ ಕಂಡುಬಂದಿದೆ.
ಒಂದು ವೇಳೆ ನೀವು ಕೂಡಾ ಇಕೋಸ್ಪೋರ್ಟ್ ಗ್ರಾಹಕರಾಗಿದ್ದಲ್ಲಿ ಈ ಬಗ್ಗೆ ಯಾವುದೇ ಸಂಕೋಚವಿಲ್ಲದೇ ನಿಮ್ಮ ಅಧಿಕೃತ ಡೀಲರ್ಸ್ಗಳನ್ನು ಸಂಪರ್ಕ್ ಮಾಡಿ ಮಾಹಿತಿ ಪಡೆಯಬಹುದಾಗಿದ್ದು, ಯಾವುದೇ ಕಾರಣಕ್ಕೂ ತಾಂತ್ರಿಕ ಸಮಸ್ಯೆಗಳಿದ್ದಾಗ ವಾಹನ ಚಾಲನೆ ವೇಳೆ ತುಂಬಾ ಎಚ್ಚರಿಕೆಯಿಂದ ಸಾಗಿರಿ.
ಇನ್ನು ಫೋರ್ಡ್ ಇಕೋ ಸ್ಪೋರ್ಟ್ ಫೇಸ್ಲಿಫ್ಟ್ ಕಾರುಗಳು ಈ ಹಿಂದೆ 2017ರ ನವೆಂಬರ್ ತಿಂಗಳಲ್ಲಿ ಬಿಡುಗಡೆಗೊಂಡಿದ್ದು, ಬಿಡುಗಡೆಯ ನಂತರ ಹತ್ತಾರು ಬದಲಾವಣೆಗಳನ್ನು ಕಂಡಿದೆ. ಹೀಗಾಗಿ ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಪ್ರಮುಖ ವೆರಿಯೆಂಟ್ಗಳನ್ನು ಅಭಿವೃದ್ಧಿ ಮಾಡಲಾಗಿದೆ.
ಇಕೊಸ್ಪೋರ್ಟ್ ಕಾರುಗಳಲ್ಲಿ ಆ್ಯಂಬಿಯೆಂಟ್, ಟ್ರೆಂಡ್, ಟ್ರೆಂಡ್+, ಟೈಟಾನಿಯಂ ಮತ್ತು ಟೈಟಾನಿಯಂ+ ಎಂಬ ಐದು ವೆರಿಯಂಟ್ಗಳಲ್ಲಿ ಲಭ್ಯವಿದ್ದು, ಹೊಸದಾಗಿ ಟೈಟಾನಿಯಂ ಎಸ್ ಮತ್ತು ಸಿಗ್ನಿಚೆರ್ ಎಂಬ ಟಾಪ್ ಎಂಡ್ ವೆರಿಯಂಟ್ ಕಾರುಗಳನ್ನು ಪರಿಚಯಿಸಲಾಗಿದೆ.
ಎಂಜಿನ್ ಸಾಮರ್ಥ್ಯ
ಹೊಸ ಫೋರ್ಡ್ ಇಕೊಸ್ಪೋರ್ಟ್ ಟೈಟಾನಿಯಂ ಎಸ್ ಮತ್ತು ಸಿಗ್ನಿಚೆರ್ ವೆರಿಯೆಂಟ್ ಕಾರುಗಳು 1.5 ಲೀಟರ್ ಟಿಡಿಸಿಐ ಡೀಸೆಲ್ ಎಂಜಿನ್ ಸಹಾಯದಿಂದ 99ಬಿಹೆಚ್ಪಿ ಮತ್ತು 205ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದಿದ್ದು, 1.5 ಲೀಟರ್ ಪೆಟ್ರೋಲ್ ಎಂಜಿನ್ ಸಹಾಯದಿಂದ 123ಬೆಹೆಚ್ಪಿ ಮತ್ತು 150ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತವೆ. ಎರಡು ಎಂಜಿನ್ಗಳನ್ನು ಮ್ಯಾನುವಲ್ ಅಥವಾ ಆಟೋಮ್ಯಾಟಿಕ್ ಟ್ರಾನ್ಸ್ ಮಿಶನ್ಗಳೊಂದಿಗೆ ಜೋಡಿಸಲಾಗಿದೆ.