ಭಾರತಕ್ಕು ಬರಲಿದೆಯೆ ಫೋರ್ಡ್ ಎಂಡೀವರ್ ಫೇಸ್‍‍ಲಿಫ್ಟ್ ಕಾರು..??

Written By: Rahul TS

ಅಮೇರಿಕ ಮೂಲದ ವಾಹನ ತಯಾರಕ ಸಂಸ್ಥೆಯಾದ ಫೋರ್ಡ್ ತಮ್ಮ ಜನಪ್ರಿಯ ಎಂಡೀವರ್ ಕಾರನ್ನು ಬಿಡುಗಡೆಗೊಳಿಸಿತ್ತು, ಇದೀಗ ಗ್ರಾಹಕರಿಗೆ ಹೊಸ ಅನುಭವವನ್ನು ನೀಡಲು ಎಂಡೀವರ್ ಫೇಸ್‍‍ಲಿಫ್ಟ್ ಕಾರನ್ನು ಬಹಿರಂಗಗೊಳಿಸಿದೆ. 2018ರ ಹೊಸ ಎಂಡೀವರ್ ಫೇಸ್‍‍ಲಿಫ್ಟ್ ಕಾರಿನ ಹೊರಭಾಗದಲ್ಲಿ ಹಾಗು ಒಳಭಾಗದಲ್ಲಿ ಹೊಸ ವಿನ್ಯಾಸವನ್ನು ಪಡೆಯಲಿದ್ದು, ಹೊಸ ಎಂಜಿನ್ ಅನ್ನು ಕೂಡ ಪಡೆದುಕೊಳ್ಳಲಿದೆ.

ಭಾರತಕ್ಕು ಬರಲಿದೆಯೆ ಫೋರ್ಡ್ ಎಂಡೀವರ್ ಫೇಸ್‍‍ಲಿಫ್ಟ್ ಕಾರು..??

ಫೋರ್ಡ್ ಎಂಡೀವರ್ ಫೇಸ್‍‍ಲಿಫ್ಟ್ ಕಾರಿನ ಮುಂಭಾಗದಲ್ಲಿ ಅಪ್ಡೇಟೆಡ್ ಗ್ರಿಲ್ಲ್, ಮರುವಿನ್ಯಾಸಗೊಳಿಸಿದ ಹೆಡ್‍‍ಲ್ಯಾಂಪ್ಸ್ ಮತ್ತು ರಿವ್ಯಾಂಪ್ಡ್ ಬಂಪರ್ ಅನ್ನು ಪಡೆದುಕೊಳ್ಳಲಿದೆ.

ಭಾರತಕ್ಕು ಬರಲಿದೆಯೆ ಫೋರ್ಡ್ ಎಂಡೀವರ್ ಫೇಸ್‍‍ಲಿಫ್ಟ್ ಕಾರು..??

ಇನ್ನು ಎಂಡೀವರ್ ಫೇಸ್‍‍ಲಿಫ್ಟ್ ಕಾರಿನ ಹಿಂಭಾಗದಲ್ಲಿ ರಿವೈಸ್ಡ್ ಟೈಲ್‍‍ಲೈಟ್ ಕ್ಲಸ್ಟರ್ ಮತ್ತು ಮರುವಿನ್ಯಾಸಗೊಳಿಸಲಾದ ಬಂಪರ್ ಅನ್ನು ಪಡೆದಿದ್ದು, ಜೊತೆಗೆ 20 ಇಂಚಿನ ಅಲಾಯ್ ಚಕ್ರಗಳನ್ನು ಕೂಡ ಪಡೆದುಕೊಂಡಿರಲಿದೆ.

ಭಾರತಕ್ಕು ಬರಲಿದೆಯೆ ಫೋರ್ಡ್ ಎಂಡೀವರ್ ಫೇಸ್‍‍ಲಿಫ್ಟ್ ಕಾರು..??

ಕಾರಿನ ಒಳಭಾಗದ ಬಗ್ಗೆ ಹೇಳುವುದಾದರೆ ಎಂಡೀವರ್ ಫೇಸ್‍‍ಲಿಫ್ಟ್ ಕಾರು ನವೀಕರಿಸಲಾದ ಫೋರ್ಡ್ ಸಿಂಕ್ 3 ಇಂಟರ್‍‍ಫೇಸ್ ಇನ್ಫೋಟೈನ್ಮೆಂಟ್ ಸಿಸ್ಟಂ ಮತ್ತು ಪ್ರಯಾಣಿಕರ ಸುರಕ್ಷತೆಗಾಗಿ ಅಟಾನಮಸ್ ಎಮರ್ಜೆನ್ಸಿ ಬ್ರೇಕಿಂಗ್‍ ಸಿಸ್ಟಂನೊಂದಿಗೆ ಪೆಡೆಸ್ಟ್ರಿಯನ್ ಡಿಟೆಕ್ಷನ್ ಎಂಬ ವೈಶಿಷ್ಟ್ಯತೆಯನ್ನು ಕೂಡ ಅಳವಡಿಸಲಾಗಿದೆ.

ಭಾರತಕ್ಕು ಬರಲಿದೆಯೆ ಫೋರ್ಡ್ ಎಂಡೀವರ್ ಫೇಸ್‍‍ಲಿಫ್ಟ್ ಕಾರು..??

ವಿದೇಶಗಳಲ್ಲಿ ದೊರೆಯುವ ಫೋರ್ಡ್ ಎಂಡೀವರ್ ಕಾರು ತಮ್ಮದೆಯಾದ ಸಂಸ್ಥೆಯ ರೇಂಜರ್ ಟ್ರಕ್‍‍ನಿಂದ 2 ಲೀಟರ್ ಡೀಸೆಲ್ ಎಂಜಿನ್ ಅನ್ನು ಪಡೆದುಕೊಳ್ಳಲಿದ್ದು, 2 ಲೀಟರ್ ಡೀಸೆಲ್ ಎಂಜಿನ್ ಸಹಾಯದೊಂದಿಗೆ 177ಬಿಹೆಚ್‍ಪಿ ಮತ್ತು 420ಎನ್ಎಂ ಟಾರ್ಕ್ ಹಾಗೆಯೆ ಟ್ವಿನ್ ಟರ್ಬೊ ವೇರಿಯಂಟ್‍‍ಗಳು 210 ಬಿಹೆಚ್‍‍ಪಿ ಮತ್ತು 500ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದಿದ್ದು 10 ಸ್ಪೀಡ್ ಗೇರ್‍‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ.

ಭಾರತಕ್ಕು ಬರಲಿದೆಯೆ ಫೋರ್ಡ್ ಎಂಡೀವರ್ ಫೇಸ್‍‍ಲಿಫ್ಟ್ ಕಾರು..??

ಭಾರತಕ್ಕೆ ಬರಲಿರುವ ಫೋರ್ಡ್ ಎಂಡೀವರ್ ಫೇಸ್‍‍ಲಿಫ್ಟ್ ಕಾರುಗಳು 2 ಲೀಟರ್ ಅನ್ನೆ ಪಡೆಯಲಿದ್ದು, ಇನ್ನಷ್ಟು ವಿವರಗಳಿಗಾಗಿ ಕಾಯುನೋಡಬೇಕಿದೆ. ಫೋರ್ಡ್ ಎಂಡೀವರ್ ಕಾರು ಮೊದಲಿಗೆ ಆಸ್ಟ್ರೀಲಿಯಾದ ಮಾರುಕಟ್ಟೆಯಲ್ಲಿ ಮಾರಾಟವಾಗಲಿದ್ದು, ನಂತರ ಏಷಿಯಾದ ಮಾರುಕಟ್ಟೆಗೆ ಕಾಲಿಡಲಿದೆ.

ಭಾರತಕ್ಕು ಬರಲಿದೆಯೆ ಫೋರ್ಡ್ ಎಂಡೀವರ್ ಫೇಸ್‍‍ಲಿಫ್ಟ್ ಕಾರು..??

ದೇಶಿಯ ಮಾರುಕಟ್ಟೆಗೆ ಕಾಲಿಡಲಿರುವ ಎಂಡೀವರ್ ಕಾರುಗಳು 2.2 ಲೀಟರ್ ಮತ್ತು 3.2 ಲೀಟರ್ ಡೀಸೆಲ್ ಎಂಜಿನ್ ಅನ್ನು ಹೊತ್ತು ಬರಲಿದೆ ಎನ್ನಲಾಗಿದೆ. 2.2 ಲೀಟರ್ ಡೀಸೆಲ್ ಎಂಜಿನ್ ಸಹಾಯದಿಂದ 158ಬಿಹೆಚ್‍‍ಪಿ ಮತ್ತು 385ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದಿದ್ದು, ಇನ್ನು 3.2 ಲೀಟರ್ ಎಂಜಿನ್‍‍ಗಳು 197ಬಿಹೆಚ್‍‍ಪಿ ಮತ್ತು 470 ಎನ್ಎಮ್ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದಿದೆ. 2.2 ಮತ್ತು 3.2 ಲೀಟರ್ ಎಂಜಿನ್ ಅನ್ನು 6 ಸ್ಪೀಡ್ ಆಟೋಮ್ಯಾಟಿಕ್ ಗೇರ್‍‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ.

ಭಾರತಕ್ಕು ಬರಲಿದೆಯೆ ಫೋರ್ಡ್ ಎಂಡೀವರ್ ಫೇಸ್‍‍ಲಿಫ್ಟ್ ಕಾರು..??

ಬಹಿರಂಗಗೊಂಡ ಹೊಸ ಫೋರ್ಡ್ ಎಂಡೀವರ್ ಕಾರುಗಳು ಹೊಸ ವಿನ್ಯಾಸ ಮತ್ತು ಎಂಜಿನ್ ಪಡೆದಿರಲಿದ್ದು, 2019ರಲ್ಲಿ ಭಾರತದ ಮಾರುಕಟ್ಟೆಗೆ ಲಗ್ಗೆಯಿಡಲಿದೆ ಎನ್ನಲಾಗಿದೆ. ಇನ್ನು ಮಾರುಕಟ್ಟೆಗೆ ಕಾಲಿಡಲಿರುವ ಈ ಕಾರುಗಳು ಟೊಯೊಟಾ ಫಾರ್ಚುನರ್, ಮಿಟ್ಸುಬಿಸಿ ಪಜೆರೊ ಸ್ಪೋರ್ಟ್ಸ್ ಮತ್ತು ಇಸುಜು ಎಮ್‍‍ಯು-ಎಕ್ಸ್ ಕಾರುಗಳಿಗೆ ಪೈಪೋಟಿಯನ್ನು ನೀಡಲಿದೆ.

Read more on ford suv
English summary
Ford Endeavour Facelift Revealed.
Story first published: Friday, May 18, 2018, 8:56 [IST]

Latest Photos

ಕರ್ನಾಟಕ ವಿಧಾನಸಭೆ ಚುನಾವಣೆ 2018

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark