ಫೋರ್ಡ್ ಫಿಗೊ ಮತ್ತು ಆಸ್ಪೈರ್ ಕಾರುಗಳ ಮೇಲೆ 1 ಲಕ್ಷ ಡಿಸ್ಕೌಂಟ್..

ಫೋರ್ಡ್ ಸಂಸ್ಥೆಯು ಮುಂಬರುವ ತಿಂಗಳು ಫಿಗೊ ಹ್ಯಾಚ್‌ಬ್ಯಾಕ್ ಮತ್ತು ಆಸ್ಪೈರ್ ಕಂಪ್ಯಾಕ್ಟ್ ಸೆಡಾನ್ ಕಾರುಗಳ ಮೇಲೆ ವಿಶೇಷ ರಿಯಾಯ್ತಿ ಘೋಷಣೆ ಮಾಡಿದ್ದು, ಹೊಸ ಕಾರುಗಳ ಖರೀದಿ ಮೇಲೆ ಬರೋಬ್ಬರಿ ರೂ.1 ಲಕ್ಷ ತನಕ ರಿಯಾಯ್ತಿಯನ್ನು ಪಡೆದುಕೊಳ್ಳಬಹುದು.

By Praveen Sannamani

ಫೋರ್ಡ್ ಸಂಸ್ಥೆಯು ಮುಂಬರುವ ತಿಂಗಳು ಫಿಗೊ ಹ್ಯಾಚ್‌ಬ್ಯಾಕ್ ಮತ್ತು ಆಸ್ಪೈರ್ ಕಂಪ್ಯಾಕ್ಟ್ ಸೆಡಾನ್ ಕಾರುಗಳ ಮೇಲೆ ವಿಶೇಷ ರಿಯಾಯ್ತಿ ಘೋಷಣೆ ಮಾಡಿದ್ದು, ಹೊಸ ಕಾರುಗಳ ಖರೀದಿ ಮೇಲೆ ಬರೋಬ್ಬರಿ ರೂ. 1 ಲಕ್ಷ ತನಕ ರಿಯಾಯ್ತಿಯನ್ನು ಪಡೆದುಕೊಳ್ಳಬಹುದಾಗಿದೆ.

ಫೋರ್ಡ್ ಫಿಗೊ ಮತ್ತು ಆಸ್ಪೈರ್ ಕಾರುಗಳ ಮೇಲೆ 1 ಲಕ್ಷ ಡಿಸ್ಕೌಂಟ್..

ಫೋರ್ಡ್ ಸಂಸ್ಥೆಯು ಸದ್ಯದಲ್ಲೇ ಫಿಗೊ ಹಾಗೂ ಆಸ್ಪೈರ್ ಕಾರುಗಳ 2018ರ ಆವೃತ್ತಿಯನ್ನು ಬಿಡುಗಡೆ ಮಾಡುತ್ತಿದ್ದು, ಈ ಹಿನ್ನೆಲೆ ಸ್ಟಾಕ್ ಖಾಲಿಯಾಗುವ ತನಕ 2017ರ ಮಾದರಿಗಳ ಖರೀದಿ ಮೇಲೆ ಆಫರ್ ನೀಡಲು ನಿರ್ಧರಿಸಿದೆ. ಹೀಗಾಗಿ ಹೊಸ ಆಫರ್‌ಗಳು ಸ್ಟಾಕ್ ಮುಗಿಯುವ ತನಕ ಮಾತ್ರ ಲಭ್ಯವಿರಲಿದ್ದು, 2018ರ ಆವೃತ್ತಿಗಳ ಮೇಲೆ ಪ್ರಸ್ತುತ ಬೆಲೆ ಪಟ್ಟಿಗಳೇ ಅನ್ವಯವಾಗಲಿವೆ.

ಫೋರ್ಡ್ ಫಿಗೊ ಮತ್ತು ಆಸ್ಪೈರ್ ಕಾರುಗಳ ಮೇಲೆ 1 ಲಕ್ಷ ಡಿಸ್ಕೌಂಟ್..

ಇನ್ನು ಫೋರ್ಡ್ ಸಂಸ್ಥೆಯ ನೀಡುತ್ತಿರುವ ಆಫರ್‌ಗಳ ಪಟ್ಟಿಯಲ್ಲಿ ಫಿಗೊ ಕಾರುಗಳ ಮೇಲೆ ಗರಿಷ್ಠ 80 ಸಾವಿರ ಮತ್ತು ಆಸ್ಪೈರ್ ಕಾರುಗಳ ಮೇಲೆ 1 ಲಕ್ಷ ಆಫರ್ ಸಿಗಲಿದ್ದು, ಇದು ವಿವಿಧ ನಗರಗಳಲ್ಲಿ ಬೇರೆ ಬೇರೆ ದರ ನಿಗದಿಯಾಗುವ ಸಾಧ್ಯತೆಗಳಿವೆ.

ಫೋರ್ಡ್ ಫಿಗೊ ಮತ್ತು ಆಸ್ಪೈರ್ ಕಾರುಗಳ ಮೇಲೆ 1 ಲಕ್ಷ ಡಿಸ್ಕೌಂಟ್..

ಸುದ್ದಿ ಮೂಲಗಳ ಪ್ರಕಾರ, ದೆಹಲಿಯಲ್ಲಿ ಫೋರ್ಡ್ ಫಿಗೊ ಮತ್ತು ಆಸ್ಪೈರ್ ಕಾರುಗಳ ಮೇಲಿನ ಹೆಚ್ಚಿನ ಮಟ್ಟದ ಆಫರ್‌ಗಳಿದ್ದು, ಮುಂಬೈ, ಕೋಲ್ಕತ್ತಾ, ಹೈದ್ರಾಬಾದ್‌ನಲ್ಲೂ ಈ ಆಫರ್‌ಗಳು ಲಭ್ಯವಿದ್ದು, ಬೆಂಗಳೂರಿನಲ್ಲಿ ಲಭ್ಯವಿರುವ ಆಫರ್ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ.

ಫೋರ್ಡ್ ಫಿಗೊ ಮತ್ತು ಆಸ್ಪೈರ್ ಕಾರುಗಳ ಮೇಲೆ 1 ಲಕ್ಷ ಡಿಸ್ಕೌಂಟ್..

ಆದ್ರೆ, ಫಿಗೊ ಮತ್ತು ಆಸ್ಪೈರ್ ಕಾರುಗಳ ಸ್ಟಾಕ್ ಖಾಲಿ ಮಾಡಲು ದೇಶದ ಎಲ್ಲಾ ಡೀಲರ್ಸ್‌ಗಳಲ್ಲೂ ಹೊಸ ಆಫರ್ ಲಭ್ಯವಿದೆ ಎನ್ನಲಾಗಿದ್ದು, ಸೀಮಿತ ಅವಧಿಗೆ ಲಭ್ಯವಿರುವ ಹೊಸ ಆಫರ್‌ನಿಂದಾಗಿ ಸಾವಿರಾರು ಗ್ರಾಹಕರು ಫೋರ್ಡ್ ಅಧಿಕೃತ ಡಿಲರ್ಸ್‌ಗಳ ಬಳಿ ಮಾಹಿತಿ ಪಡೆದುಕೊಳ್ಳುತ್ತಿದ್ದಾರೆ.

ಫೋರ್ಡ್ ಫಿಗೊ ಮತ್ತು ಆಸ್ಪೈರ್ ಕಾರುಗಳ ಮೇಲೆ 1 ಲಕ್ಷ ಡಿಸ್ಕೌಂಟ್..

ಸದ್ಯದ ಬೆಲೆಗಳು (ಆಫರ್ ಬೆಲೆಗಳು ಸೇರಿ)

ದೆಹಲಿ ಎಕ್ಸ್‌ಶೋರಂ ಪ್ರಕಾರ ಫಿಗೊ ಕಾರುಗಳು ರೂ.5.44 ಲಕ್ಷದಿಂದ ರೂ.7.74 ಲಕ್ಷಕ್ಕೆ ಲಭ್ಯವಿದ್ದು, ಆಸ್ಪೈರ್ ಕಾರುಗಳ ಬೆಲೆಯು ರೂ.5.72 ಲಕ್ಷದಿಂದ ರೂ.8.69 ಲಕ್ಷಕ್ಕೆ ಖರೀದಿ ಮಾಡಬಹುದಾಗಿದೆ .

ಫೋರ್ಡ್ ಫಿಗೊ ಮತ್ತು ಆಸ್ಪೈರ್ ಕಾರುಗಳ ಮೇಲೆ 1 ಲಕ್ಷ ಡಿಸ್ಕೌಂಟ್..

ಇನ್ನು ಫಿಗೊ ಮತ್ತು ಆಸ್ಪೈರ್ ಕಾರುಗಳು ತಾಂತ್ರಿಕವಾಗಿ ಇತರೆ ಕಾರುಗಳಿಂತ ವಿಭಿನ್ನವಾಗಿದ್ದು, 1.2-ಲೀಟರ್ ಪೆಟ್ರೋಲ್ ಎಂಜಿನ್ ಮತ್ತು 1.5-ಲೀಟರ್ ಡಿಸೇಲ್ ಎಂಜಿನ್ ಹೊಂದಿವೆ. ಈ ಮೂಲಕ ಉತ್ತಮ ಪರ್ಫಾಮೆನ್ಸ್ ಸಹ ಹಿಂದಿರುಗಿಸಬಲ್ಲವು.

ಫೋರ್ಡ್ ಫಿಗೊ ಮತ್ತು ಆಸ್ಪೈರ್ ಕಾರುಗಳ ಮೇಲೆ 1 ಲಕ್ಷ ಡಿಸ್ಕೌಂಟ್..

ಒಟ್ಟಿನಲ್ಲಿ ಫೋರ್ಡ್ ಸಂಸ್ಥೆಯು ನೀಡಿರುವ ಸೀಮಿತ ಅವಧಿಯ ಆಫರ್‌ಗಳು ಕಾರು ಖರೀದಿಗೆ ಎದುರು ನೋಡುತ್ತಿರುವ ಗ್ರಾಹಕರಿಗೆ ಸುವರ್ಣಾವಕಾಶ ಎನ್ನಬಹುದಾಗಿದ್ದು, ಕಾರು ಖರೀದಿಗೂ ಮುನ್ನ ಅಧಿಕೃತ ಡೀಲರ್ಸ್‌ಗಳಲ್ಲಿ ಹೊಸ ಆಫರ್‌ಗಳ ಬಗೆಗೆ ಕೂಲಂಕುಶವಾಗಿ ಚರ್ಚಿಸುವುದು ಒಳೀತು.

Source: AutoCar India

More from DriveSpark

Article Published On: Tuesday, June 12, 2018, 16:27 [IST]
English summary
Ford Figo, Aspire get discounts up to Rs 1 lakh.
Read more on ford hatchback
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+