ಹೊಸ ಫೋರ್ಡ್ ಫ್ರೀ ಸ್ಟೈಲ್ ಕಾರಿನ ಬುಕ್ಕಿಂಗ್ ಈಗ ಅಮೆಜಾನ್‌ನಲ್ಲೂ ಲಭ್ಯ..

ಫೋರ್ಡ್ ಇಂಡಿಯಾ ಸಂಸ್ಥೆಯು ಮುಂಬರುವ ತಿಂಗಳು ತನ್ನ ಹೊಚ್ಚ ಹೊಸ ಕಾರು ಮಾದರಿಯಾದ ಫ್ರೀ ಸ್ಟೈಲ್ ಕಾರನ್ನು ಬಿಡುಗಡೆಗೊಳಿಸುತ್ತಿದ್ದು, ಇದಕ್ಕೂ ಮುನ್ನ ಅಮೆಜಾನ್ ಇಂಡಿಯಾ ಜಾಲತಾಣದಲ್ಲೂ ಹೊಸ ಕಾರುಗಳ ಬುಕ್ಕಿಂಗ್ ಪ್ರಕ್ರಿಯೆ ಚಾಲನೆ ನೀಡಿದೆ.

By Praveen Sannamani

ಫ್ರೀ ಸ್ಟೈಲ್ ಕಾರುಗಳನ್ನು ಖರೀದಿಸುವ ಗ್ರಾಹಕರಿಗೆ ವಿಶೇಷ ಆಫರ್ ಘೋಷಣೆ ಮಾಡಿರುವ ಫೋರ್ಡ್ ಸಂಸ್ಥೆಯು ಹೊಸ ಕಾರು ಬುಕ್ ಮಾಡುವ ಮೊದಲ 100 ಗ್ರಾಹಕರಿಗೆ ಕಾರು ಬಿಡುಗಡೆಯ ನಂತರ ಕಾರು ಪೂರೈಕೆಯ ಸಂದರ್ಭದಲ್ಲಿ ಮೊದಲ ಆದ್ಯತೆ ನೀಡಲಾಗುವುದು ಎಂದಿದೆ. ಇದರಿಂದಾಗಿ ಸಾಮಾನ್ಯ ಬುಕ್ಕಿಂಗ್ ಮಾಡಿದ ಗ್ರಾಹಕರಿಗಿಂತ ಅಮೆಜಾನ್‌ನಲ್ಲಿ ಬುಕ್ ಮಾಡಿದ ಗ್ರಾಹಕರು ನಿಗದಿತ ಅವಧಿಯಲ್ಲಿ ಹೊಸ ತಮ್ಮದಾಗಿಸಿಕೊಳ್ಳಲಿದ್ದಾರೆ.

ಹೊಸ ಫೋರ್ಡ್ ಫ್ರೀ ಸ್ಟೈಲ್ ಕಾರಿನ ಬುಕ್ಕಿಂಗ್ ಈಗ ಅಮೆಜಾನ್‌ನಲ್ಲೂ ಲಭ್ಯ..

ಇನ್ನು ಹೊಸ ಕಾರುಗಳಿಗಾಗಿ ಸಾಮಾನ್ಯವಾಗಿ ಬ್ರಾಂಡ್ ಬೇಡಿಕೆ ಆಧಾರದ ಮೇಲೆ ಬುಕ್ಕಿಂಗ್ ಮಾಡಿದ ನಂತರ ನಾಲ್ಕರಿಂದ ಎಂಟು ವಾರಗಳ ಕಾಲ ಕಾಯಲೇಬೇಕಾದ ಅನಿವಾರ್ಯತೆಯಿದ್ದು, ಇದನ್ನು ತಪ್ಪಿಸುವ ಉದ್ದೇಶದಿಂದ ಫೋರ್ಡ್ ಸಂಸ್ಥೆಯು ಗ್ರಾಹಕರಿಗೆ ವಿಶೇಷ ಆಫರ್ ನೀಡಿದೆ.

ಹೊಸ ಫೋರ್ಡ್ ಫ್ರೀ ಸ್ಟೈಲ್ ಕಾರಿನ ಬುಕ್ಕಿಂಗ್ ಈಗ ಅಮೆಜಾನ್‌ನಲ್ಲೂ ಲಭ್ಯ..

ಒಂದು ವೇಳೆ ನೀವು ಕೂಡಾ ಫ್ರೀ ಸ್ಟೈಲ್ ಯೋಜನೆಯಲ್ಲಿದ್ದರೇ ಅಮೆಜಾನ್ ಇಂಡಿಯಾ ಜಾಲತಾಣದಲ್ಲಿ ರೂ.10 ಸಾವಿರ ಮುಂಗಡದೊಂದಿಗೆ ಹೊಸ ಕಾರನ್ನು ಬುಕ್ಕಿಂಗ್ ಮಾಡಬಹುದಾಗಿದ್ದು, ಏಪ್ರಿಲ್ 14ರಂದು ಮಾತ್ರ ಈ ಎಕ್ಸ್‌ಕ್ಲೂಸಿವ್ ಆಫರ್ ಲಭ್ಯವಿರಲಿದೆ.

ಹೊಸ ಫೋರ್ಡ್ ಫ್ರೀ ಸ್ಟೈಲ್ ಕಾರಿನ ಬುಕ್ಕಿಂಗ್ ಈಗ ಅಮೆಜಾನ್‌ನಲ್ಲೂ ಲಭ್ಯ..

ಇನ್ನು ಭಾರತೀಯ ಮಾರುಕಟ್ಟೆಗಾಗಿ ಹೊಸ ನಮೂನೆಯ ಕಂಪ್ಯಾಕ್ಟ್ ಯುಟಿಲಿಟಿ ಕಾರು ಮಾದರಿಯೊಂದನ್ನು ಅಭಿವೃದ್ಧಿಗೊಳಿಸಿರುವ ಫೋರ್ಡ್ ಇಂಡಿಯಾ ಸಂಸ್ಥೆಯು, ಫಿಗೊ ಹ್ಯಾಚ್‌ಬ್ಯಾಕ್ ಫ್ಯಾಟ್ ಫಾರ್ಮ್ ಅಡಿಯಲ್ಲಿ ಹೊಸ ಕಾರನ್ನು ಅಭಿವೃದ್ಧಿಗೊಳಿಸುವ ಮೂಲಕ ಹೊಸ ಸಂಚಲಯ ಸೃಷ್ಠಿಸಲು ಸಜ್ಜುಗೊಳ್ಳುತ್ತಿದೆ.

ಹೊಸ ಫೋರ್ಡ್ ಫ್ರೀ ಸ್ಟೈಲ್ ಕಾರಿನ ಬುಕ್ಕಿಂಗ್ ಈಗ ಅಮೆಜಾನ್‌ನಲ್ಲೂ ಲಭ್ಯ..

ಫೋರ್ಡ್ ನಿರ್ಮಾಣದ ಇಕೋ ಸ್ಪೋರ್ಟ್ ಮತ್ತು ಫಿಗೊ ಕಾರುಗಳ ನಡುವಿನ ಕಾರು ಮಾದರಿಯಾಗಲಿರುವ ಫ್ರೀ ಸ್ಟೈಲ್ ಕಾರುಗಳು ಹತ್ತು ವಿಶೇಷತೆಗಳಿಂದಾಗಿ ಗ್ರಾಹಕರ ಆಯ್ಕೆಯನ್ನು ಹೆಚ್ಚಿಸುವ ಎಲ್ಲಾ ಲಕ್ಷಣಗಳನ್ನು ಹೊಂದಿದ್ದು, ಫಿಗೊ ಕಾರಿಗಿಂತ 16ಎಂಎಂ (190ಎಂಎಂ) ಗ್ರೌಂಡ್ ಕ್ಲಿಯೆರೆನ್ಸ್ ಹೊಂದಿವೆ.

ಹೊಸ ಫೋರ್ಡ್ ಫ್ರೀ ಸ್ಟೈಲ್ ಕಾರಿನ ಬುಕ್ಕಿಂಗ್ ಈಗ ಅಮೆಜಾನ್‌ನಲ್ಲೂ ಲಭ್ಯ..

ಇದಲ್ಲದೇ ಸ್ಪೋಟಿ ಲುಕ್ ಹೊಂದಿರುವ ಫ್ರೀ ಸ್ಟೈಲ್ ಕಾರುಗಳು ಹೆಕ್ಸಾಗೊನಲ್ ಹನಿಕೊಂಬೊ ಮಾದರಿಯ ಗ್ರಿಲ್ ಜೋಡಣೆಯು ಹೊಸ ಕಾರಿನ ಹೊರ ನೋಟವನ್ನು ಹೆಚ್ಚಿಸಿದ್ದು, ಹೊಸ ನಮೂನೆಯ ಬ್ಯಾನೆಟ್, ಬಂಪರ್, ಬ್ಲ್ಯಾಕ್ ಕ್ಲ್ಯಾಂಡಿಂಗ್, ಫಾಗ್ ಲ್ಯಾಂಪ್ಸ್ ನೀಡಲಾಗಿದೆ.

ಹೊಸ ಫೋರ್ಡ್ ಫ್ರೀ ಸ್ಟೈಲ್ ಕಾರಿನ ಬುಕ್ಕಿಂಗ್ ಈಗ ಅಮೆಜಾನ್‌ನಲ್ಲೂ ಲಭ್ಯ..

1.2-ಲೀಟರ್ 3 ಸಿಲಿಂಡರಿನ ಪೆಟ್ರೋಲ್ ಎಂಜಿನ್ ಮತ್ತು 1.5-ಲೀಟರ್ 4 ಸಿಲಿಂಡರ್ ಪೆಟ್ರೋಲ್ ಎಂಜಿನ್ ಹೊಂದಿರುವ ಫ್ರೀ ಸ್ಟೈಲ್ ಕಾರುಗಳು, 1.2-ಲೀಟರ್ ಮಾದರಿಯಲ್ಲಿ 94.6 ಬಿಎಚ್‌ಪಿ, 120 ಎನ್ಎಂ ಟಾರ್ಕ್ ಹಾಗೂ 1.5-ಲೀಟರ್ ಮಾದರಿಯಲ್ಲಿ 99 ಬಿಎಚ್‌ಪಿ ಮತ್ತು 120 ಎನ್ಎಂ ಟಾರ್ಕ್ ಉತ್ಪಾದಿಸಬಲ್ಲವು.

ಹೊಸ ಫೋರ್ಡ್ ಫ್ರೀ ಸ್ಟೈಲ್ ಕಾರಿನ ಬುಕ್ಕಿಂಗ್ ಈಗ ಅಮೆಜಾನ್‌ನಲ್ಲೂ ಲಭ್ಯ..

ಡ್ರ್ಯಾಗನ್ ಪೆಟ್ರೋಲ್ ಎಂಜಿನ್ ಹೊಂದಿರುವ ಫ್ರೀ ಸ್ಟೈಲ್ ಕಾರುಗಳು ಪ್ರತಿ ಲೀಟರ್ ಪೆಟ್ರೋಲ್‌ಗೆ 19 ಕಿ.ಮೀ ಮೈಲೇಜ್ ನೀಡಲಿದ್ದು, ಡೀಸೆಲ್ ಎಂಜಿನ್ ಪ್ರೇರಿತ ಫ್ರೀ ಸ್ಟೈಲ್ ಕಾರುಗಳು ಪ್ರತಿ ಲೀಟರ್ ಡೀಸೆಲ್‌ಗೆ 24.4 ಕಿ.ಮೀ ಮೈಲೇಜ್ ನೀಡಲಿವೆ ಎಂದು ಫೋರ್ಡ್ ಸಂಸ್ಥೆಯು ಹೇಳಿಕೊಂಡಿದೆ.

ಹೊಸ ಫೋರ್ಡ್ ಫ್ರೀ ಸ್ಟೈಲ್ ಕಾರಿನ ಬುಕ್ಕಿಂಗ್ ಈಗ ಅಮೆಜಾನ್‌ನಲ್ಲೂ ಲಭ್ಯ..

ಒಟ್ಟಿನಲ್ಲಿ ಫ್ರೀಸ್ಟೈಲ್ ಕಾರನ್ನು ಇದೇ ವರ್ಷ ಮೇ ಪ್ರಾರಂಭದಲ್ಲಿ ಬಿಡುಗಡೆ ಮಾಡಲು ಉದ್ದೇಶಿಸಿದ್ದು, ಹೊಸ ಕಾರಿನ ಬೆಲೆಗಳು ಆರಂಭಿಕವಾಗಿ ರೂ.6 ಲಕ್ಷದಿಂದ ರೂ.9 ಲಕ್ಷ ಇರಬಹುದೆಂದು ನೀರಿಕ್ಷಿಸಲಾಗಿದೆ.

ಹೊಸ ಫ್ರೀ ಸ್ಟೈಲ್ ಹೆಚ್ಚಿನ ಮಾಹಿತಿಗಾಗಿ-ಟೆಸ್ಟ್ ಡ್ರೈವ್ ರಿವ್ಯೂ- ಯುಟಿಲಿಟಿ ಕಾರುಗಳಲ್ಲಿ ಹೊಸ ನೀರಿಕ್ಷೆ ಹುಟ್ಟುಹಾಕಿದ ಫೋರ್ಡ್ ಫ್ರೀ ಸ್ಟೈಲ್

Article Published On: Friday, April 13, 2018, 19:51 [IST]
English summary
Ford Freestyle Available On Amazon India — Skip The Queue, Book Online.
Read more on ford
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+