ಎಎಂಟಿ ವರ್ಷನ್ ಫ್ರೀ ಸ್ಟೈಲ್ ಬಿಡುಗಡೆ ಮಾಡಲಿದೆ ಫೋರ್ಡ್

By Praveen Sannamani

ಕಳೆದ ಏಪ್ರಿಲ್ ಕೊನೆಯಲ್ಲಿ ಬಿಡುಗಡೆಯಾಗಿ ಉತ್ತಮ ಬೇಡಿಕೆ ಪಡೆದುಕೊಳ್ಳುತ್ತಿರುವ ಫ್ರೀ ಸ್ಟೈಲ್ ಯುಟಿಲಿಟಿ ಕಾರುಗಳು ಸದ್ಯ ಮ್ಯಾನುವಲ್ ಗೇರ್‌ಬಾಕ್ಸ್ ಆವೃತ್ತಿಯಲ್ಲಿ ಮಾತ್ರವೇ ಖರೀದಿಗೆ ಲಭ್ಯವಿದ್ದು, ಗ್ರಾಹಕರಿಂದ ಬೇಡಿಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸದ್ಯದಲ್ಲೇ ಆಟೋಮ್ಯಾಟೆಡ್ ಮ್ಯಾನುವಲ್ ಗೇರ್‌ಬಾಕ್ಸ್ ಪ್ರೇರಿತ ಮಾದರಿಯನ್ನ ಪರಿಚಯಿಸುವ ಸುಳಿವು ನೀಡಿದೆ.

ಎಎಂಟಿ ವರ್ಷನ್ ಫ್ರೀ ಸ್ಟೈಲ್ ಬಿಡುಗಡೆ ಮಾಡಲಿದೆ ಫೋರ್ಡ್

ಫೋರ್ಡ್ ಫಿಗೊ ಹ್ಯಾಚ್‌ಬ್ಯಾಕ್ ಮತ್ತು ಇಕೋ ಸ್ಪೋರ್ಟ್ ಕಾರು ಆವೃತ್ತಿಗಳ ಮಧ್ಯದಲ್ಲಿ ಬರುವ ಫ್ರೀ ಸ್ಟೈಲ್ ಕಾರುಗಳು ಗ್ರಾಹಕರ ಆದ್ಯತೆ ಮೇರೆಗೆ ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್‌ಗಳಲ್ಲಿ ಆಯ್ಕೆ ಮಾಡಬಹುದಾಗಿದ್ದು, ಇದರಲ್ಲಿ ಒಟ್ಟು ನಾಲ್ಕು ವಿವಿಧ ವೆರಿಯೆಂಟ್‌ಗಳು ಲಭ್ಯವಿವೆ.

ಎಎಂಟಿ ವರ್ಷನ್ ಫ್ರೀ ಸ್ಟೈಲ್ ಬಿಡುಗಡೆ ಮಾಡಲಿದೆ ಫೋರ್ಡ್

ಆರಂಭಿಕವಾಗಿ ರೂ.5.09 ಲಕ್ಷ ಬೆಲೆ ಹೊಂದಿರುವ ಫ್ರೀ ಸ್ಟೈಲ್ ಕಾರುಗಳು ಹೆಚ್ಚಿನ ಗುಣಮಟ್ಟದ ಸುರಕ್ಷಾ ಸೌಲಭ್ಯ ಹೊಂದಿರುವ ಟಾಪ್ ಎಂಡ್ ಫ್ರೀ ಸ್ಟೈಲ್ ಕಾರುಗಳು ದೆಹಲಿ ಎಕ್ಸ್‌ಶೋರಂ ಪ್ರಕಾರ ರೂ. 7.89 ಲಕ್ಷ ಬೆಲೆ ಪಡೆದುಕೊಂಡಿದ್ದು, ಎಎಂಟಿ ವರ್ಷನ್‌ಗಳು ಮ್ಯಾನುವಲ್ ಆವೃತ್ತಿಗಿಂತಲೂ ತುಸು ಹೆಚ್ಚಿನ ಬೆಲೆ ಪಡೆದುಕೊಳ್ಳಲಿವೆ.

ಎಎಂಟಿ ವರ್ಷನ್ ಫ್ರೀ ಸ್ಟೈಲ್ ಬಿಡುಗಡೆ ಮಾಡಲಿದೆ ಫೋರ್ಡ್

ಫೋರ್ಡ್ ನಿರ್ಮಾಣದ ಕಾರುಗಳಲ್ಲಿ ಸಾಂಪ್ರದಾಯಿಕವಾಗಿ ಕಂಡು ಬರುವ ಆ್ಯಂಬಿಯೆಂಟ್, ಟ್ರೆಂಡ್, ಟೈಟಾನಿಯಂ ಮತ್ತು ಟೈಟಾನಿಯಂ ಪ್ಲಸ್ ಆವೃತ್ತಿಗಳಲ್ಲಿ ಫ್ರೀ ಸ್ಟೈಲ್ ಕಾರುಗಳು ಖರೀದಿಗೆ ಲಭ್ಯವಿದ್ದು, ಇದರಲ್ಲಿ ಟೈಟಾನಿಯಂ ಪ್ಲಸ್ ಮಾದರಿಯು ಉನ್ನತ ಕಾರು ಆವೃತ್ತಿಯಾಗಿದೆ.

ಎಎಂಟಿ ವರ್ಷನ್ ಫ್ರೀ ಸ್ಟೈಲ್ ಬಿಡುಗಡೆ ಮಾಡಲಿದೆ ಫೋರ್ಡ್

ಡಿಸೈನ್ ಮತ್ತು ಸ್ಟೈಲ್

ಫೋರ್ಡ್ ಒಡೆತನದ ಕೆನೆಟಿಕ್ ಡಿಸೈನ್ ಲಾಗ್ವೆಂಜ್ ಆಧಾರದ ಮೇಲೆ ಸಿದ್ದವಾಗಿರುವ ಫೋರ್ಡ್ ಫ್ರೀ ಸ್ಟೈಲ್ ಕಾರುಗಳು ಯುಟಿಲಿಟಿ ವೆಹಿಕಲ್ ಗುಣಲಕ್ಷಣಗಳನ್ನು ಹೊಂದಿದೆ. ಈ ಮೂಲಕ ಫಿಗೊ ಕಾರಿಗಿಂತ 16ಎಂಎಂ ಹೆಚ್ಚುವರಿ ಗ್ರೌಂಡ್ ಕ್ಲಿಯೆರೆನ್ಸ್ ಹೊಂದಿರುವ ಫ್ರೀ ಸ್ಟೈಲ್ ಕಾರುಗಳು 190ಎಂಎಂ ಗ್ರೌಂಡ್ ಕ್ಲಿಯೆರೆನ್ಸ್ ಹೊಂದಿವೆ.

ಎಎಂಟಿ ವರ್ಷನ್ ಫ್ರೀ ಸ್ಟೈಲ್ ಬಿಡುಗಡೆ ಮಾಡಲಿದೆ ಫೋರ್ಡ್

ಇನ್ನೊಂದು ಪ್ರಮುಖ ವಿಚಾರ ಅಂದ್ರೆ ಮಹೀಂದ್ರಾ ಎಕ್ಸ್‌ಯುವಿ500ಗಿಂತ ಕೇವಲ 10ಎಂಎಂ ಕಡಿಮೆ ಕ್ಲಿಯೆರೆನ್ಸ್ ಪಡೆದಿರುವ ಫ್ರೀ ಸ್ಟೈಲ್ ಕಾರುಗಳು ಎಸ್‌ಯುವಿ ಮಾದರಿಯಲ್ಲೇ ಸಿದ್ದಗೊಂಡಿದ್ದು, 15-ಇಂಚಿನ 4 ಸ್ಪೋಕ್ ಅಲಾಯ್ ಚಕ್ರಗಳ ಮೂಲಕ ಮಧ್ಯಮ ಗಾತ್ರದ ಎಸ್‌ಯುವಿಗಳಿಗೂ ಪೈಪೋಟಿ ನೀಡುತ್ತಿವೆ.

ಎಎಂಟಿ ವರ್ಷನ್ ಫ್ರೀ ಸ್ಟೈಲ್ ಬಿಡುಗಡೆ ಮಾಡಲಿದೆ ಫೋರ್ಡ್

ಇದಲ್ಲದೇ ಸ್ಪೋಟಿ ಲುಕ್ ಹೊಂದಿರುವ ಫ್ರೀ ಸ್ಟೈಲ್ ಕಾರುಗಳು ಹೆಕ್ಸಾಗೊನಲ್ ಹನಿಕೊಂಬೊ ಮಾದರಿಯ ಗ್ರಿಲ್ ಜೋಡಣೆಯು ಹೊಸ ಕಾರಿನ ಹೊರ ನೋಟವನ್ನು ಹೆಚ್ಚಿಸಿದ್ದು, ಹೊಸ ನಮೂನೆಯ ಬ್ಯಾನೆಟ್, ಬಂಪರ್, ಬ್ಲ್ಯಾಕ್ ಕ್ಲ್ಯಾಂಡಿಂಗ್, ಫಾಗ್ ಲ್ಯಾಂಪ್ಸ್ ನೀಡಲಾಗಿದೆ.

ಎಎಂಟಿ ವರ್ಷನ್ ಫ್ರೀ ಸ್ಟೈಲ್ ಬಿಡುಗಡೆ ಮಾಡಲಿದೆ ಫೋರ್ಡ್

ಬಹುತೇಕ ಫಿಗೊ ಕಾರುಗಳ ಹೋಲಿಕೆ ಇದ್ದರೂ ಚಕ್ರಗಳು, ಸೈಡ್ ಗ್ರಾರ್ನಿಷ್, ಟೈಲ್ ಲ್ಯಾಂಪ್, ಗ್ರಾಫಿಕ್ಸ್ ಡಿಸೈನ್, ಒವಿಎಂಆರ್ ವಿಭಾಗದಲ್ಲಿ ಗುರುತರ ಬದಲಾವಣೆ ಹೊಂದಿವೆ. ಜೊತೆಗೆ ಸ್ಕೀಡ್ ಪ್ಲೇಟ್ ಮತ್ತು ಫ್ಲಕ್ಸ್ ಕ್ಲ್ಯಾಂಡಿಂಗ್ ಸಹ ಹೊಂದಿವೆ.

ಎಎಂಟಿ ವರ್ಷನ್ ಫ್ರೀ ಸ್ಟೈಲ್ ಬಿಡುಗಡೆ ಮಾಡಲಿದೆ ಫೋರ್ಡ್

ಎಂಜಿನ್ ಸಾಮರ್ಥ್ಯ

1.2-ಲೀಟರ್ 3 ಸಿಲಿಂಡರಿನ ಪೆಟ್ರೋಲ್ ಎಂಜಿನ್ ಮತ್ತು 1.5-ಲೀಟರ್ 4 ಸಿಲಿಂಡರ್ ಪೆಟ್ರೋಲ್ ಎಂಜಿನ್ ಹೊಂದಿರುವ ಫ್ರೀ ಸ್ಟೈಲ್ ಕಾರುಗಳು, 1.2-ಲೀಟರ್ ಮಾದರಿಯಲ್ಲಿ 94.6 ಬಿಎಚ್‌ಪಿ, 120 ಎನ್ಎಂ ಟಾರ್ಕ್ ಹಾಗೂ 1.5-ಲೀಟರ್ ಮಾದರಿಯಲ್ಲಿ 100 ಬಿಎಚ್‌ಪಿ ಮತ್ತು 250 ಎನ್ಎಂ ಟಾರ್ಕ್ ಉತ್ಪಾದಿಸಬಲ್ಲವು.

ಎಎಂಟಿ ವರ್ಷನ್ ಫ್ರೀ ಸ್ಟೈಲ್ ಬಿಡುಗಡೆ ಮಾಡಲಿದೆ ಫೋರ್ಡ್

ಇನ್ನು 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಆವೃತ್ತಿಯಲ್ಲಿ ಮಾತ್ರವೇ ಖರೀದಿಗೆ ಲಭ್ಯವಿರುವ ಫ್ರೀ ಸ್ಟೈಲ್ ಕಾರುಗಳು ಉತ್ತಮ ಮೈಲೇಜ್‌, ಪರ್ಫಾಮೆನ್ಸ್ ನೀಡಬಲ್ಲವು. ಈ ಮೂಲಕ ಬೆಸ್ಟ್ ಪರ್ಫಾಮೆನ್ಸ್ ಹೊಂದಿದ ಕಾರು ಮಾದರಿ ಇದಾಗಿದ್ದು, ಕ್ರಾಸ್ ಓವರ್ ಹ್ಯಾಚ್‌ಬ್ಯಾಕ್ ಕಾರುಗಳಿಂತಲೂ ಹೆಚ್ಚಿನ ಗುಣವೈಶಿಷ್ಟ್ಯತೆಗಳನ್ನು ಹೊಂದಿಕೊಂಡಿದೆ.

ಎಎಂಟಿ ವರ್ಷನ್ ಫ್ರೀ ಸ್ಟೈಲ್ ಬಿಡುಗಡೆ ಮಾಡಲಿದೆ ಫೋರ್ಡ್

ಇದೇ ಕಾರಣಕ್ಕೆ ಸಣ್ಣ ಕಾರು ಪ್ರಿಯರು ಫ್ರೀ ಸ್ಟೈಲ್ ಖರೀದಿಗೆ ಮುಂದಾಗುತ್ತಿದ್ದು, ಬಹುತೇಕ ಗ್ರಾಹಕರು ಎಎಂಟಿ ವರ್ಷನ್‌ಗಳಿಗೆ ಬೇಡಿಕೆಯಿಡುತ್ತಿದ್ದಾರೆ. ಇದಕ್ಕೆ ಸಕರಾತ್ಮಕವಾಗಿಯೇ ಪ್ರತಿಕ್ರಿಯಿಸಿರುವ ಫೋರ್ಡ್ ಸಂಸ್ಥೆಯು ಮುಂದಿನ ದಸರಾ ಅಥವಾ ದೀಪಾವಳಿ ಹೊತ್ತಿಗೆ ಎಎಂಟಿ ವರ್ಷನ್‌ಗಳನ್ನ ಬಿಡುಗಡೆಗೊಳಿಸುತ್ತಿರುವುದಾಗಿ ಹೇಳಲಾಗುತ್ತಿದೆ.

ಎಎಂಟಿ ವರ್ಷನ್ ಫ್ರೀ ಸ್ಟೈಲ್ ಬಿಡುಗಡೆ ಮಾಡಲಿದೆ ಫೋರ್ಡ್

ಸದ್ಯ ಲಭ್ಯಲಿರುವ ಬಣ್ಣಗಳು

ಕೆನಾಯಿನ್ ರಿಡ್ಜ್, ಮೂನ್‌ಡಸ್ಟ್ ಸಿಲ್ವರ್, ಸ್ಮೋಕಿ ಗ್ರೇ, ವೈಟ್ ಗೊಲ್ಡ್, ಆಕ್ಸ್‌ಫರ್ಡ್ ವೈಟ್ ಮತ್ತು ಬ್ಲ್ಯಾಕ್ ಬಣ್ಣಗಳಲ್ಲಿ ಫ್ರೀ ಸ್ಟೈಲ್ ಕಾರುಗಳು ಖರೀದಿಗೆ ಲಭ್ಯವಿವೆ.

ಎಎಂಟಿ ವರ್ಷನ್ ಫ್ರೀ ಸ್ಟೈಲ್ ಬಿಡುಗಡೆ ಮಾಡಲಿದೆ ಫೋರ್ಡ್

ಫ್ರೀ ಸ್ಟೈಲ್ ಕಾರಿನ ಮೈಲೇಜ್

ಡ್ರ್ಯಾಗನ್ ಪೆಟ್ರೋಲ್ ಎಂಜಿನ್ ಹೊಂದಿರುವ ಫ್ರೀ ಸ್ಟೈಲ್ ಕಾರುಗಳು ಪ್ರತಿ ಲೀಟರ್ ಪೆಟ್ರೋಲ್‌ಗೆ 19 ಕಿ.ಮೀ ಮೈಲೇಜ್ ನೀಡಲಿದ್ದು, ಡೀಸೆಲ್ ಎಂಜಿನ್ ಪ್ರೇರಿತ ಫ್ರೀ ಸ್ಟೈಲ್ ಕಾರುಗಳು ಪ್ರತಿ ಲೀಟರ್ ಡೀಸೆಲ್‌ಗೆ 24.4 ಕಿ.ಮೀ ಮೈಲೇಜ್ ನೀಡುತ್ತಿವೆ.

Article Published On: Friday, July 20, 2018, 16:45 [IST]
English summary
Ford Freestyle to get an Automatic variant soon.
Read more on ford ಫೋರ್ಡ್
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+