ಸರ್ಕಾರಿ ಅಧಿಕಾರಿಗಳು ಎಲೆಕ್ಟ್ರಿಕ್ ಕಾರುಗಳ ಬಳಕೆಗೆ ಹಿಂದೇಟು ಹಾಕುತ್ತಿರುವುದು ಏಕೆ?

By Praveen Sannamani

ದೇಶದಲ್ಲಿ ಮಾಲಿನ್ಯ ಪ್ರಮಾಣವನ್ನು ತಡೆಯುವ ಉದ್ದೇಶದಿಂದ ಬೃಹತ್ ಯೋಜನೆಯೊಂದನ್ನು ಜಾರಿಗೊಳಿಸಿರುವ ಕೇಂದ್ರ ಸರ್ಕಾರವು ಉನ್ನತ ಅಧಿಕಾರಿಗಳಿಗೆ ಎಲೆಕ್ಟ್ರಿಕ್ ಕಾರುಗಳ ಅವಕಾಶವನ್ನು ಒದಗಿಸುತ್ತಿದೆ. ಆದ್ರೆ ಎಲೆಕ್ಟ್ರಿಕ್ ಕಾರುಗಳ ಬಗೆಗೆ ಅಸಮಾಧಾನ ಹೊರಹಾಕಿರುವ ಅಧಿಕಾರಿಗಳು ಸರ್ಕಾರವು ನೀಡುತ್ತಿರುವ ಇವಿ ಕಾರುಗಳ ಸಹವಾಸವೇ ಸಾಕು ಎನ್ನತ್ತಿದ್ದಾರೆ.

ಸರ್ಕಾರಿ ಅಧಿಕಾರಿಗಳು ಎಲೆಕ್ಟ್ರಿಕ್ ಕಾರುಗಳ ಬಳಕೆಗೆ ಹಿಂದೇಟು ಹಾಕುತ್ತಿರುವುದು ಏಕೆ?

ನೀತಿ ಆಯೋಗದ ಸಲಹೆಯೆಂತೆ ಸರ್ಕಾರಿ ಬಳಕೆಯ ಉದ್ದೇಶಕ್ಕಾಗಿ 20 ಸಾವಿರ ವಿದ್ಯುತ್‌ ವಾಹನಗಳನ್ನು ಖರೀದಿಸಲು ಎನರ್ಜಿ ಎಫಿಸಿಯನ್ಸಿ ಸರ್ವೀಸಸ್‌ (ಇಇಎಸ್‌ಎಲ್‌) ಸಂಸ್ಥೆಯು ಸುಮಾರು 2400 ಕೋಟಿ ಹೂಡಿಕೆಯೊಂದಿಗೆ ವಿವಿಧ ಮಾದರಿಯ ಇವಿ ಕಾರುಗಳನ್ನು ಖರೀದಿಸಿ ಸರ್ಕಾರಿ ಅಧಿಕಾರಿಗಳಿಗೆ ಹಂಚಿಕೆ ಮಾಡುತ್ತಿದ್ದು, ಅಧಿಕಾರಿಗಳು ಮಾತ್ರ ಎಲೆಕ್ಟ್ರಿಕ್ ಕಾರುಗಳ ಎಂಜಿನ್ ಕಾರ್ಯಕ್ಷಮತೆಯನ್ನು ಕಂಡು ಇವಿ ಕಾರುಗಳು ನಮಗೆ ಬೇಡವೇ ಬೇಡ ಎನ್ನುವ ಮಾತುಗಳನ್ನಾಡುತ್ತಿದ್ದಾರೆ.

ಸರ್ಕಾರಿ ಅಧಿಕಾರಿಗಳು ಎಲೆಕ್ಟ್ರಿಕ್ ಕಾರುಗಳ ಬಳಕೆಗೆ ಹಿಂದೇಟು ಹಾಕುತ್ತಿರುವುದು ಏಕೆ?

ಎನರ್ಜಿ ಎಫಿಸಿಯನ್ಸಿ ಸರ್ವೀಸಸ್‌ ಸಂಸ್ಥೆಯು ಸದ್ಯ ಮಹೀಂದ್ರಾ ಇ ವೆರಿಟೊ ಮತ್ತು ಟಾಟಾ ಟಿಗೋರ್ ಇವಿ ಕಾರುಗಳನ್ನು ಖರೀದಿ ಮಾಡುತ್ತಿದ್ದು, ಕೇಂದ್ರ ಸರ್ಕಾರದ ಅಧೀನದ ವಿವಿಧ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ಹಂಚಿಕೆ ಮಾಡಿದೆ.

ಸರ್ಕಾರಿ ಅಧಿಕಾರಿಗಳು ಎಲೆಕ್ಟ್ರಿಕ್ ಕಾರುಗಳ ಬಳಕೆಗೆ ಹಿಂದೇಟು ಹಾಕುತ್ತಿರುವುದು ಏಕೆ?

ಮೊದಲ ಹಂತವಾಗಿ 500 ಟಾಟಾ ಟಿಗೋರ್ ಎಲೆಕ್ಟ್ರಿಕ್ ಕಾರುಗಳನ್ನು ಹಂಚಿಕೆ ಮಾಡಲಾಗಿದ್ದು, ಮಹೀಂದ್ರಾ ಸಂಸ್ಥೆಯು ಕೂಡಾ ಭಾರೀ ಪ್ರಮಾಣದಲ್ಲಿ ಇ ವೆರಿಟೊ ಕಾರುಗಳನ್ನು ಪೂರೈಕೆ ಮಾಡಿದೆ. ಆದ್ರೆ ಕಾರು ಉತ್ಪಾದಕರು ಹೇಳಿಕೊಂಡಿರುವಷ್ಟು ಮೈಲೇಜ್ ಪ್ರಮಾಣ ಇದೀಗ ಬರುತ್ತಿಲ್ಲ ಎನ್ನುವುದು ಅಧಿಕಾರಿಗಳ ಅಳಲು.

ಸರ್ಕಾರಿ ಅಧಿಕಾರಿಗಳು ಎಲೆಕ್ಟ್ರಿಕ್ ಕಾರುಗಳ ಬಳಕೆಗೆ ಹಿಂದೇಟು ಹಾಕುತ್ತಿರುವುದು ಏಕೆ?

ಕನಿಷ್ಠ ಮಟ್ಟದಲ್ಲೂ ಮೈಲೇಜ್ ನೀಡಲು ಅಸಮರ್ಥವಾಗಿರುವ ಎಲೆಕ್ಟ್ರಿಕ್ ಕಾರುಗಳನ್ನು ಪೂರೈಕೆ ಮಾಡುತ್ತಿದ್ದಾರೆ ಎಂದು ಆರೋಪಿಸಿರುವ ಹಿರಿಯ ಸರ್ಕಾರಿ ಅಧಿಕಾರಿಗಳು ನಮಗೆ ನೀವು ಕೊಟ್ಟಿರುವ ಎಲೆಕ್ಟ್ರಿಕ್ ಕಾರುಗಳು ಬೇಡವೇ ಬೇಡ ಎಂದಿದ್ದಾರೆ.

ಸರ್ಕಾರಿ ಅಧಿಕಾರಿಗಳು ಎಲೆಕ್ಟ್ರಿಕ್ ಕಾರುಗಳ ಬಳಕೆಗೆ ಹಿಂದೇಟು ಹಾಕುತ್ತಿರುವುದು ಏಕೆ?

ಕಾರುಗಳ ಪೂರೈಕೆಗೂ ಮುನ್ನ ಪ್ರತಿ ಚಾರ್ಜಿಂಗ್‌ಗೆ 120 ಕಿ.ಮೀ ನಿಂದ 130 ಕಿ.ಮೀ ಮೈಲೇಜ್ ಭರವಸೆ ನೀಡಿದ್ದ ಟಾಟಾ ಮತ್ತು ಮಹೀಂದ್ರಾ ಸಂಸ್ಥೆಗಳು ಇದೀಗ ಪ್ರತಿ ಚಾರ್ಜಿಂಗ್‌ಗೆ 80ರಿಂದ 85ಕಿ.ಮೀ ಮೈಲೇಜ್ ನೀಡಲು ಸಹ ಅಶಕ್ತ ಕಾರುಗಳಾಗಿವೆ ಎನ್ನಲಾಗಿದೆ.

ಸರ್ಕಾರಿ ಅಧಿಕಾರಿಗಳು ಎಲೆಕ್ಟ್ರಿಕ್ ಕಾರುಗಳ ಬಳಕೆಗೆ ಹಿಂದೇಟು ಹಾಕುತ್ತಿರುವುದು ಏಕೆ?

ಹಾಗಾದ್ರೆ ಬ್ಯಾಟರಿ ಕಾರ್ಯಕ್ಷಮತೆ ಬಗೆಗೆ ಪರೀಕ್ಷೆ ನಡೆಸಿದ್ದ ಎಆರ್‌ಎಐ ಸಂಸ್ಥೆಗೂ ಟಾಟಾ ಮತ್ತು ಮಹೀಂದ್ರಾ ಸಂಸ್ಥೆಗಳು ಸುಳ್ಳು ಮಾಹಿತಿ ನೀಡಿರಬಹುದಾ? ಎನ್ನುವ ಅನುಮಾನಗಳು ಶುರುವಾಗಿದ್ದು, ಎಲೆಕ್ಟ್ರಿಕ್ ಕಾರುಗಳ ಬಗೆಗೆ ಇದ್ದ ಕ್ರೇಜ್ ಇದೀಗ ಮಣ್ಣಪಾಲಾಗುವಂತೆ ಮಾಡುತ್ತಿದೆ.

ಸರ್ಕಾರಿ ಅಧಿಕಾರಿಗಳು ಎಲೆಕ್ಟ್ರಿಕ್ ಕಾರುಗಳ ಬಳಕೆಗೆ ಹಿಂದೇಟು ಹಾಕುತ್ತಿರುವುದು ಏಕೆ?

ತಾಂತ್ರಿಕ ಅಂಶಗಳ ಪ್ರಕಾರ, ಟಾಟಾ ಟಿಗೋರ್ ಇವಿ ಮತ್ತು ಮಹೀಂದ್ರಾ ಇ ವೆರಿಟೊ ಕಾರುಗಳು ಕನಿಷ್ಠ ಅಂದ್ರು ಪ್ರತಿ ಚಾರ್ಜಿಂಗ್‌ಗೆ 120ಕಿ.ಮಿ ಮೈಲೇಜ್ ನೀಡುವಂತ ಗುಣಲಕ್ಷಣ ಹೊಂದಿರಬೇಕಾದ ಅವಶ್ಯಕತೆಯಿದ್ದು, ಇವು ವಾಸ್ತವಾಗಿ 80ರಿಂದ 85 ಕಿ.ಮೀ ಮಾತ್ರ ಮೈಲೇಜ್ ನೀಡುತ್ತಿವೆ.

ಸರ್ಕಾರಿ ಅಧಿಕಾರಿಗಳು ಎಲೆಕ್ಟ್ರಿಕ್ ಕಾರುಗಳ ಬಳಕೆಗೆ ಹಿಂದೇಟು ಹಾಕುತ್ತಿರುವುದು ಏಕೆ?

ಇದಕ್ಕಾಗಿ 6 ಗಂಟೆಗಳ ಕಾಲ ಚಾರ್ಜಿಂಗ್ ಮಾಡಬೇಕಿದ್ದು, ಟಾಟಾ ಟಿಗೋರ್ ಇವಿ ಮತ್ತು ಮಹೀಂದ್ರಾ ಇ ವೆರಿಟೊ ಕಾರುಗಳಲ್ಲಿ 17ಕೆಡಬ್ಲ್ಯು ಬ್ಯಾಟರಿ ಬಳಕೆ ಮಾಡಿರುವುದು ಮೇಲ್ನೋಟಕ್ಕೆ ಅನುಮಾನವೇ ಎನ್ನುವಂತಿದೆ.

ಸರ್ಕಾರಿ ಅಧಿಕಾರಿಗಳು ಎಲೆಕ್ಟ್ರಿಕ್ ಕಾರುಗಳ ಬಳಕೆಗೆ ಹಿಂದೇಟು ಹಾಕುತ್ತಿರುವುದು ಏಕೆ?

ಟಾಟಾ ಸಂಸ್ಥೆಯು ಈಗಾಗಲೇ ಎನರ್ಜಿ ಎಫಿಸಿಯನ್ಸಿ ಸರ್ವೀಸಸ್‌ ಸಂಸ್ಥೆಯಿಂದ 10 ಸಾವಿರ ಕಾರುಗಳನ್ನು ಪೂರೈಸುವ ಗುತ್ತಿಗೆಯನ್ನು ತನ್ನದಾಗಿಸಿಕೊಂಡಿದ್ದು, ಮೊದಲ ಹಂತವಾಗಿ 500 ಟಿಗೋವಿ ಇವಿ ಕಾರುಗಳನ್ನು ಪೂರೈಕೆ ಮಾಡಿದೆ. ಇದರಲ್ಲಿ ಇನ್ನು 9,500 ಕಾರುಗಳು ಪೂರೈಕೆಯಾಗಬೇಕಿದ್ದು, ಅವುಗಳ ಕಥೆ ಏನು ಎನ್ನುವ ಬಗ್ಗೆ ಸರ್ಕಾರಿ ಅಧಿಕಾರಿಗಳಿಗೆ ತಲೆಬೆನೆ ಶುರುವಾಗಿದೆ.

ಸರ್ಕಾರಿ ಅಧಿಕಾರಿಗಳು ಎಲೆಕ್ಟ್ರಿಕ್ ಕಾರುಗಳ ಬಳಕೆಗೆ ಹಿಂದೇಟು ಹಾಕುತ್ತಿರುವುದು ಏಕೆ?

ಯಾಕೆಂದ್ರೆ ಡಿಸೇಲ್ ಕಾರುಗಳು ಹೆಚ್ಚು ಮಾಲಿನ್ಯವನ್ನು ಉಂಟು ಮಾಡುತ್ತವೆ ಎನ್ನುವ ಉದ್ದೇಶದಿಂದ ಎಲೆಕ್ಟ್ರಿಕ್ ಕಾರುಗಳನ್ನು ಖರೀದಿ ಮಾಡಿ ಸರ್ಕಾರಿ ಅಧಿಕಾರಿಗಳ ಸೇವೆಗೆ ಒದಗಿಸಲಾಗುತ್ತಿದ್ದು, ಇಂತಹ ಸಂದರ್ಭದಲ್ಲಿ 6 ರಿಂದ 7 ಗಂಟೆ ಚಾರ್ಜ್ ಮಾಡಿಕೊಂಡ 80ಕಿ.ಮೀ ಮೈಲೇಜ್ ಪಡೆದುಕೊಳ್ಳುವುದರಿಂದ ಏನು ಪ್ರಯೋಜನ ಎನ್ನವುದು ಸರ್ಕಾರಿ ಹಿರಿಯ ಅಧಿಕಾರಿಗಳ ಪ್ರಶ್ನೆಯಾಗಿದೆ.

ಸರ್ಕಾರಿ ಅಧಿಕಾರಿಗಳು ಎಲೆಕ್ಟ್ರಿಕ್ ಕಾರುಗಳ ಬಳಕೆಗೆ ಹಿಂದೇಟು ಹಾಕುತ್ತಿರುವುದು ಏಕೆ?

ಇದಕ್ಕೆ ಟಾಟಾ ಮತ್ತು ಮಹೀಂದ್ರಾ ಸಂಸ್ಥೆಗಳ ಮುಂದಿನ ಕ್ರಮ ಏನು? ಎನ್ನುವ ಇಷ್ಟರಲ್ಲೇ ತಿಳಿಯಲಿದೆ. ಈಗಲಾದ್ರೂ ಉತ್ತಮ ಮೈಲೇಜ್ ನೀಡುವ ಇವಿ ಕಾರುಗಳ ತಯಾರಿಕೆಗೆ ಒತ್ತು ನೀಡುವ ಅವಶ್ಯಕತೆಯಿದೆ ಎನ್ನಬುಹುದು.

Article Published On: Wednesday, June 27, 2018, 19:42 [IST]
English summary
Government Officials Refuse To Use Tata Tigor EV And Mahindra eVerito.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+