ಬಿಡುಗಡೆಗೊಂಡು ಮೂರು ತಿಂಗಳಾದ್ರು ಮಾರುಕಟ್ಟೆಯಲ್ಲಿ ಇನ್ನು ಹೋಂಡಾ ಅಮೇಜ್‍‍ನದ್ದೆ ಹವಾ..

ಜಪಾನ್ ಮೂಲದ ವಾಹನ ತಯಾರಕ ಸಂಸ್ಥೆಯಾದ ಹೋಂಡಾ ಮೋಟರ್ಸ್, ಫೆಬ್ರವರಿಯಲ್ಲಿ ನಡೆದ 2018ರ ಆಟೋ ಎಕ್ಸ್ ಪೋ ಮೇಳದಲ್ಲಿ ತಮ್ಮ ಕಾಂಪ್ಯಾಕ್ಟ್ ಸೆಡಾನ್ ಅಮೇಜ್ ಕಾರನ್ನು ಪ್ರದರ್ಶಿಸಿ, ಮೇ ತಿಂಗಳಿನಲ್ಲಿ ಬಿಡುಗಡೆಗೊಳಿಸಲಾಯಿತು. ಬಿಡುಗಡೆಗೊಂಡು ಸುಮಾರು ಮ

By Rahul Ts

ಜಪಾನ್ ಮೂಲದ ವಾಹನ ತಯಾರಕ ಸಂಸ್ಥೆಯಾದ ಹೋಂಡಾ ಮೋಟರ್ಸ್, ಫೆಬ್ರವರಿಯಲ್ಲಿ ನಡೆದ 2018ರ ಆಟೋ ಎಕ್ಸ್ ಪೋ ಮೇಳದಲ್ಲಿ ತಮ್ಮ ಕಾಂಪ್ಯಾಕ್ಟ್ ಸೆಡಾನ್ ಅಮೇಜ್ ಕಾರನ್ನು ಪ್ರದರ್ಶಿಸಿ, ಮೇ ತಿಂಗಳಿನಲ್ಲಿ ಬಿಡುಗಡೆಗೊಳಿಸಲಾಯಿತು. ಬಿಡುಗಡೆಗೊಂಡು ಸುಮಾರು ಮೂರು ತಿಂಗಳಾದರೂ ಈ ಕಾರಿಗೆ ಬೇಡಿಕೆಯು ಹೆಚ್ಚುತ್ತಲೇ ಇದೆ.

ಬಿಡುಗಡೆಗೊಂಡು ಮೂರು ತಿಂಗಳಾದ್ರು ಮಾರುಕಟ್ಟೆಯಲ್ಲಿ ಇನ್ನು ಹೋಂಡಾ ಅಮೇಜ್‍‍ನದ್ದೆ ಹವಾ..

ಮೇಲೆ ಹೇಳಿರುವ ಹಾಗೆ ಈ ಕಾರಿನ ಬೇಡಿಕೆಯ ಮೆರೆಗೆ ಹೋಂಡಾ ಮೋಟರ್ಸ್ ಸಂಸ್ಥೆಯು ಆಗಸ್ಟ್ ತಿಂಗಳಿನಲ್ಲಿ ತಮ್ಮ ಡೀಲರ್‍‍ಗಳಿಗೆ 9,644 ಕಾರುಗಳನ್ನು ರವಾನೆ ಮಾಡಲಾಗಿದೆ. ಅಷ್ಟೆ ಅಲ್ಲದೇ ಅಮೇಜ್ ಕಾರುಗಳು ಹೋಂಡಾ ಸಂಸ್ಥೆಯಲ್ಲಿನ ಯಾವ ಕಾರು ಮಾಡಲಾಗದ ದಾಖಲೆಯನ್ನ ಸೃಷ್ಠಿಸಿದೆ. 3 ತಿಂಗಳಿನಲ್ಲಿ ಸುಮಾರು 30,000 ಸಾವಿರಕ್ಕು ಹೆಚ್ಚು ಕಾರುಗಳು ಮಾರಾಟಗೊಂಡಿವೆ.

ಬಿಡುಗಡೆಗೊಂಡು ಮೂರು ತಿಂಗಳಾದ್ರು ಮಾರುಕಟ್ಟೆಯಲ್ಲಿ ಇನ್ನು ಹೋಂಡಾ ಅಮೇಜ್‍‍ನದ್ದೆ ಹವಾ..

ಮೇ 16 ರಂದು ಬಿಡುಗಡೆಗೊಂಡ ಹೋಂಡಾ ಅಮೇಜ್ ಕಾರುಗಳು ದೆಹಲಿಯ ಎಕ್ಸ್ ಶೋರಂ ಪ್ರಕಾರ ರೂ.5.59ರ ಪ್ರಾರಂಭಿಕ ಬೆಲೆಯನ್ನು ಪಡೆದುಕೊಂಡಿದ್ದು, ಇನ್ನು ಉನ್ನತ್ತ ಮಟ್ಟದ ಆವೃತ್ತಿಯ ಬೆಲೆಯನ್ನು ರೂ.899 ಲಕ್ಷಕ್ಕೆ ಮಾರಾಟಗೊಳ್ಳುತ್ತಿದೆ.

ಬಿಡುಗಡೆಗೊಂಡು ಮೂರು ತಿಂಗಳಾದ್ರು ಮಾರುಕಟ್ಟೆಯಲ್ಲಿ ಇನ್ನು ಹೋಂಡಾ ಅಮೇಜ್‍‍ನದ್ದೆ ಹವಾ..

ಹೋಂಡಾ ಸಂಸ್ಥೆಯು ಬಿಡುಗಡೆ ಮಾಡಿರುವ ಅಮೇಜ್ ಕಾರುಗಳು ಒಟ್ಟು ನಾಲ್ಕು ಮಾದರಿಯಲ್ಲಿ ಖರೀದಿ ಲಭ್ಯವಿದ್ದು, ಗ್ರಾಹಕರು ತಮ್ಮ ಬೇಡಿಕೆಗೆ ಅನುಗುಣವಾಗಿ ಇ, ಎಸ್, ವಿ ಮತ್ತು ವಿಎಕ್ಸ್ ವೆರಿಯೆಂಟ್‌ಗಳನ್ನು ಆಯ್ಕೆ ಮಾಡಬಹುದಾಗಿದೆ. ಹೀಗಾಗಿ ವೆರಿಯೆಂಟ್‌ಗಳಿಗೆ ಅನುಗುಣವಾಗಿ ಕಾರಿನ ಬೆಲೆಗಳು ನಿಗದಿ ಮಾಡಲಾಗಿದೆ.

ಬಿಡುಗಡೆಗೊಂಡು ಮೂರು ತಿಂಗಳಾದ್ರು ಮಾರುಕಟ್ಟೆಯಲ್ಲಿ ಇನ್ನು ಹೋಂಡಾ ಅಮೇಜ್‍‍ನದ್ದೆ ಹವಾ..

ಸ್ಪೋರ್ಟಿ ಲುಕ್ ಹೊಂದಿರುವ ಅಮೇಜ್ ಕಾರುಗಳು ಎರಡನೇ ತಲೆಮಾರಿನ ಶಾರ್ಪರ್ ಆಂಗಲ್ಸ್, ಬೋಲ್ಡರ್ ಡಿಸೈನ್ ಹಾಗೂ ಆಂಗ್ಯೂಲರ್ ಹೆಡ್‍‍ಲ್ಯಾಂಪ್‍‍ಗಳನ್ನು ಪಡೆದುಕೊಂಡಿದ್ದು, 15 ಇಂಚಿನ ಅಲಾಯ್ ವೀಲ್‍‍ಗಳು, ಹಿಂಭಾಗದ ವಿನ್ಯಾಸದಲ್ಲಿ ಹೊಸ ಪ್ರೇರಣೆಯ ಕ್ರೋಮ್ ಸ್ಟ್ರಿಪ್, ಸಿ ಟೈಪ್ ಟೈಲ್‍ ಲೈಟ್ಸ್ ಗಳನ್ನು ಪಡೆದಿದಿರುವುದು ಆಕರ್ಷಕವಾಗಿದೆ.

ಬಿಡುಗಡೆಗೊಂಡು ಮೂರು ತಿಂಗಳಾದ್ರು ಮಾರುಕಟ್ಟೆಯಲ್ಲಿ ಇನ್ನು ಹೋಂಡಾ ಅಮೇಜ್‍‍ನದ್ದೆ ಹವಾ..

ಹೊಸ ಅಮೇಜ್ ಕಾರುಗಳು 1.2-ಲೀಟರ್ ಪೆಟ್ರೋಲ್ ಮತ್ತು 1.5-ಲೀಟರ್ ಡೀಸೆಲ್ ಎಂಜಿನ್‌ನಲ್ಲಿ ಖರೀದಿಸಬಹುದಾಗಿದ್ದು, ಪೆಟ್ರೋಲ್ ಆವೃತ್ತಿಯು 89-ಬಿಎಚ್‌ಪಿ, 110-ಎನ್ಎಂ ಟಾರ್ಕ್ ಉತ್ಪಾದನೆ ಮಾಡಿದಲ್ಲಿ ಡಿಸೇಲ್ ಆವೃತ್ತಿಯು 99-ಬಿಎಚ್‌ಪಿ, 200-ಎನ್ಎಂ ಉತ್ಪಾದನೆ ಮಾಡಬಲ್ಲವು.

ಬಿಡುಗಡೆಗೊಂಡು ಮೂರು ತಿಂಗಳಾದ್ರು ಮಾರುಕಟ್ಟೆಯಲ್ಲಿ ಇನ್ನು ಹೋಂಡಾ ಅಮೇಜ್‍‍ನದ್ದೆ ಹವಾ..

ಇದಲ್ಲದೇ ಹೊಸ ಕಾರುಗಳಲ್ಲಿ 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಮತ್ತು 5-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆಯಿದ್ದು, ಮ್ಯಾನುವಲ್‌ಗಿಂತ ಡಿಸೇಲ್ ಆವೃತ್ತಿಗಿಂತ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಹೊಂದಿರುವ ಡಿಸೇಲ್ ಆವೃತ್ತಿಯು 79-ಬಿಎಚ್‌ಪಿ ಮತ್ತು 160-ಎನ್ಎಂ ಟಾರ್ಕ್ ಮಾತ್ರ ಉತ್ಪಾದಿಸಲಿವೆ.

ಬಿಡುಗಡೆಗೊಂಡು ಮೂರು ತಿಂಗಳಾದ್ರು ಮಾರುಕಟ್ಟೆಯಲ್ಲಿ ಇನ್ನು ಹೋಂಡಾ ಅಮೇಜ್‍‍ನದ್ದೆ ಹವಾ..

ಕಾರಿನ ಒಳವಿನ್ಯಾಸ

ಹೊಸ ಅಮೇಜ್ ಕಾರುಗಳು ಎಲ್ಇಡಿ ಡಿಎಲ್‍ಆರ್, ಡ್ಯುಯಲ್ ಟೋನ್ ಡ್ಯಾಶ್‌ಬೋರ್ಡ್, ಆಪಲ್ ಕಾರ್ ಪ್ಲೇ ಹಾಗೂ ಆಂಡ್ರಾಯ್ಡ್ ಆಟೋ ಅನ್ನು ಒಳಗೊಂಡ ಟಚ್ ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಂ, ಕ್ಲೈಮೆಟ್ ಕಂಟ್ರೋಲರ್, ಸ್ಟೀರಿಂಗ್ ಮೌಟೆಂಡ್ ಕಂಟ್ರೋಲರ್ ಮತ್ತು ಪೆಡಲ್ ಶಿಫ್ಟರ್ಸ್ ಅನ್ನು ಅಳವಡಿಸಲಾಗಿದೆ.

ಬಿಡುಗಡೆಗೊಂಡು ಮೂರು ತಿಂಗಳಾದ್ರು ಮಾರುಕಟ್ಟೆಯಲ್ಲಿ ಇನ್ನು ಹೋಂಡಾ ಅಮೇಜ್‍‍ನದ್ದೆ ಹವಾ..

ಜೊತೆಗೆ ಕೀ ಲೇಸ್ ಎಂಟ್ರಿ, ಎಬಿಎಸ್, ಇಬಿಡಿ, ಸೆಂಟ್ರಲ್ ಲಾಕಿಂಗ್, ಡ್ಯುಯಲ್ ಫ್ರಂಟ್ ಏರ್‌ಬ್ಯಾಗ್, ಕ್ರೂಸ್ ಕಂಟ್ರೋಲರ್, ರಿವರ್ಸ್ ಪಾರ್ಕಿಂಗ್ ಕ್ಯಾಮೆರಾ ಜೊತೆ ಸೆನ್ಸಾರ್ ಒದಗಿಸಲಾಗಿದ್ದು, ಮಾರುತಿ ಡಿಜೈರ್, ಹ್ಯುಂಡೈ ಎಕ್ಸ್ಸೆಂಟ್ ಮತ್ತು ಟಾಟಾ ಟಿಗೋರ್ ಕಾರುಗಳಿಗೆ ತ್ರೀವ ಪೈಪೋಟಿ ನೀಡಲಿದೆ.

More from DriveSpark

Article Published On: Friday, September 7, 2018, 9:43 [IST]
English summary
Honda Amaze compact sedan: EVERYONE’s buying it!
Read more on amaze sedan sales
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+