ಕಂಪ್ಯಾಕ್ಟ್ ಸೆಡಾನ್ ವಿಭಾಗದಲ್ಲಿ ಹೊಸ ಟ್ರೆಂಡ್ ಸೃಷ್ಠಿಸಿದ ಹೋಂಡಾ ನ್ಯೂ ಅಮೇಜ್..!

ಕಳೆದ ಮೇ 16ರಂದು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಂಡಿರುವ 2018ರ ಅಮೇಜ್ ಕಂಪ್ಯಾಕ್ಟ್ ಸೆಡಾನ್ ಕಾರುಗಳು ದೇಶದಲ್ಲಿ ಹೊಸ ಟ್ರೆಂಡ್ ಸೃಷ್ಠಿಸುತ್ತಿದ್ದು, ಬಿಡುಗಡೆಗೊಂಡ ಕೆಲವೇ ತಿಂಗಳ ಅವಧಿಯಲ್ಲಿ ದಾಖಲೆ ಪ್ರಮಾಣದ ಕಾರುಗಳು ಮಾರಾಟಗೊಂಡಿರುವುದು ಆಟೋ ಉದ್ಯಮದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.

ಕಂಪ್ಯಾಕ್ಟ್ ಸೆಡಾನ್ ವಿಭಾಗದಲ್ಲಿ ಹೊಸ ಟ್ರೆಂಡ್ ಸೃಷ್ಠಿಸಿದ ಹೋಂಡಾ ನ್ಯೂ ಅಮೇಜ್..!

ಹೋಂಡಾ ಕಾರ್ಸ್ ಇಂಡಿಯಾ ಸಂಸ್ಥೆಯು ದೇಶಿಯ ಗ್ರಾಹಕರ ಅಭಿರುಚಿಗೆ ಅನುಗುಣವಾಗಿ ನ್ಯೂ ಅಮೇಜ್ ಕಂಪ್ಯಾಕ್ಟ್ ಸೆಡಾನ್ ಕಾರುಗಳನ್ನು ಪರಿಚಯಿಸಿದ್ದು, ಗ್ರಾಹಕರ ಆಕರ್ಷಣೆಗೆ ಕಾರಣವಾಗಿರುವ ಹೊಸ ಕಾರುಗಳ ಮಾರಾಟ ಪ್ರಮಾಣದಲ್ಲೂ ಭಾರೀ ಏರಿಕೆ ಕಂಡಿರುವುದು ಸ್ವತಃ ಹೋಂಡಾ ಸಂಸ್ಥೆಗೆ ಅಚ್ಚರಿ ತರಿಸಿದೆ.

ಕಂಪ್ಯಾಕ್ಟ್ ಸೆಡಾನ್ ವಿಭಾಗದಲ್ಲಿ ಹೊಸ ಟ್ರೆಂಡ್ ಸೃಷ್ಠಿಸಿದ ಹೋಂಡಾ ನ್ಯೂ ಅಮೇಜ್..!

ಹೊಸ ಅಮೇಜ್ ಬಿಡುಗಡೆಯಾದ ದಿನದಿಂದಲೂ ಇದುವರೆಗೂ ದಿನೇ ದಿನೇ ಕಾರು ಮಾರಾಟದಲ್ಲಿ ಏರಿಕೆ ಕಂಡುಬರುತ್ತಿದ್ದು, ಕೇವಲ 5 ತಿಂಗಳ ಅವಧಿಯಲ್ಲಿ ಬರೋಬ್ಬರಿ 50 ಸಾವಿರ ಕಾರುಗಳು ಮರಾಟವಾಗಿರುವುದು ಮಾರುತಿ ಸುಜುಕಿ ಡಿಜೈರ್ ಕಾರಿಗೆ ಟಕ್ಕರ್ ನೀಡುತ್ತಿದೆ.

ಕಂಪ್ಯಾಕ್ಟ್ ಸೆಡಾನ್ ವಿಭಾಗದಲ್ಲಿ ಹೊಸ ಟ್ರೆಂಡ್ ಸೃಷ್ಠಿಸಿದ ಹೋಂಡಾ ನ್ಯೂ ಅಮೇಜ್..!

ಹೊಸ ಅಮೇಜ್ ಕಾರುಗಳಲ್ಲಿ ಒದಗಿಸಲಾಗಿರುವ ಆಕರ್ಷಕ ಡಿಸೈನ್‌ಗಳು, ಐಷಾರಾಮಿ ಇಂಟಿರಿಯರ್ ವಿನ್ಯಾಸಗಳು, ಸುಧಾರಿತ ಎಂಜಿನ್ ತಂತ್ರಜ್ಞಾನ ಸೌಲಭ್ಯಗಳೇ ಕಾರು ಖರೀದಿಗೆ ಹೆಚ್ಚಿನ ಗ್ರಾಹಕರು ಮುಗಿಬಿದ್ದಿದ್ದು, ಮುಂಬರುವ ದಿನಗಳಲ್ಲಿ ಇದು ಮತ್ತಷ್ಟು ಹೊಸ ದಾಖಲೆಗೆ ಕಾರಣವಾಗಲಿದೆ ಎನ್ನುವುದು ಹೋಂಡಾ ಲೆಕ್ಕಾಚಾರ.

ಕಂಪ್ಯಾಕ್ಟ್ ಸೆಡಾನ್ ವಿಭಾಗದಲ್ಲಿ ಹೊಸ ಟ್ರೆಂಡ್ ಸೃಷ್ಠಿಸಿದ ಹೋಂಡಾ ನ್ಯೂ ಅಮೇಜ್..!

ಇನ್ನು 2018ರ ದೆಹಲಿ ಆಟೋ ಎಕ್ಸ್‌ಪೋ ಪ್ರದರ್ಶನಗೊಳ್ಳುವ ಮೂಲಕ ಕಾರು ಉತ್ಪಾದಕರಲ್ಲಿ ಕುತೂಹಲ ಹುಟ್ಟುಹಾಕಿದ್ದ ನ್ಯೂ ಹೋಂಡಾ ಅಮೇಜ್ ಕಾರುಗಳು ಇದೀಗ ವಿನೂತನ ತಾಂತ್ರಿಕ ಅಂಶಗಳೊಂದಿಗೆ ಮರಳಿ ಮಾರುಕಟ್ಟೆಗೆ ಲಗ್ಗೆಯಿಟ್ಟಿದ್ದು, ಹೊಸ ಕಾರುಗಳು ಸಿಟಿ ಸೆಡಾನ್ ಮಾದರಿಯಲ್ಲೇ ವಿನ್ಯಾಸಗಳನ್ನು ಪಡೆದುಕೊಂಡಿರುವುದು ಆಕರ್ಷಣೆಗೆ ಕಾರಣವಾಗಿದೆ.

ಕಂಪ್ಯಾಕ್ಟ್ ಸೆಡಾನ್ ವಿಭಾಗದಲ್ಲಿ ಹೊಸ ಟ್ರೆಂಡ್ ಸೃಷ್ಠಿಸಿದ ಹೋಂಡಾ ನ್ಯೂ ಅಮೇಜ್..!

ಅಮೇಜ್ ಕಾರುಗಳು ಒಟ್ಟು ನಾಲ್ಕು ಮಾದರಿಯಲ್ಲಿ ಖರೀದಿ ಲಭ್ಯವಿದ್ದು, ಗ್ರಾಹಕರು ತಮ್ಮ ಬೇಡಿಕೆಗೆ ಅನುಗುಣವಾಗಿ ಇ, ಎಸ್, ವಿ ಮತ್ತು ವಿಎಕ್ಸ್ ವೆರಿಯೆಂಟ್‌ಗಳನ್ನು ಆಯ್ಕೆ ಮಾಡಬಹುದಾಗಿದೆ. ಹೀಗಾಗಿ ವೆರಿಯೆಂಟ್‌ಗಳಿಗೆ ಅನುಗುಣವಾಗಿ ಕಾರಿನ ಬೆಲೆಗಳು ನಿಗದಿ ಮಾಡಲಾಗಿದೆ.

ಕಂಪ್ಯಾಕ್ಟ್ ಸೆಡಾನ್ ವಿಭಾಗದಲ್ಲಿ ಹೊಸ ಟ್ರೆಂಡ್ ಸೃಷ್ಠಿಸಿದ ಹೋಂಡಾ ನ್ಯೂ ಅಮೇಜ್..!

ಸದ್ಯ ದೆಹಲಿ ಎಕ್ಸ್‌ಶೋರೂಂ ಪ್ರಕಾರ ಪೆಟ್ರೋಲ್ ಆವೃತ್ತಿಯ ಆರಂಭಿಕ ಬೆಲೆಯು ರೂ. 5.81 ಲಕ್ಷಕ್ಕೆ ಮತ್ತು ಡೀಸೆಲ್ ಆವೃತ್ತಿಯ ಆರಂಭಿಕ ಬೆಲೆ ರೂ.6.90 ಲಕ್ಷ ಬೆಲೆ ಪಡೆದುಕೊಂಡಿದ್ದು, ಮಾರುತಿ ಡಿಜೈರ್ ಮತ್ತು ಹ್ಯುಂಡೈ ಎಕ್ಸ್‌ಸೆಂಟ್ ಕಾರುಗಳಿಂತಲೂ ಆಕರ್ಷಕ ಬೆಲೆ ಹೊಂದಿದೆ.

ಕಂಪ್ಯಾಕ್ಟ್ ಸೆಡಾನ್ ವಿಭಾಗದಲ್ಲಿ ಹೊಸ ಟ್ರೆಂಡ್ ಸೃಷ್ಠಿಸಿದ ಹೋಂಡಾ ನ್ಯೂ ಅಮೇಜ್..!

ಕಾರಿನ ವಿನ್ಯಾಸಗಳು

ಸ್ಪೋರ್ಟಿ ಲುಕ್ ಹೊಂದಿರುವ ಅಮೇಜ್ ಕಾರುಗಳು ಎರಡನೇ ತಲೆಮಾರಿನ ಶಾರ್ಪರ್ ಆಂಗಲ್ಸ್, ಬೋಲ್ಡರ್ ಡಿಸೈನ್ ಹಾಗೂ ಆಂಗ್ಯೂಲರ್ ಹೆಡ್‍‍ಲ್ಯಾಂಪ್‍‍ಗಳನ್ನು ಪಡೆದುಕೊಂಡಿದ್ದು, 15 ಇಂಚಿನ ಅಲಾಯ್ ವೀಲ್‍‍ಗಳು, ಹಿಂಭಾಗದ ವಿನ್ಯಾಸದಲ್ಲಿ ಹೊಸ ಪ್ರೇರಣೆಯ ಕ್ರೋಮ್ ಸ್ಟ್ರಿಪ್, ಸಿ ಟೈಪ್ ಟೈಲ್‍ ಲೈಟ್ಸ್ ಗಳನ್ನು ಪಡೆದಿದಿರುವುದು ಆಕರ್ಷಕವಾಗಿದೆ.

MOST READ: ಎಲ್ಲೆಂದರಲ್ಲೇ ಪಾರ್ಕಿಂಗ್ ಮಾಡುವ ಮುನ್ನ ಹುಷಾರ್- ನಿಮ್ಮ ವಾಹನಕ್ಕೂ ಇದೇ ಪರಿಸ್ಥಿತಿ ಬರಬಹುದು..!

ಕಂಪ್ಯಾಕ್ಟ್ ಸೆಡಾನ್ ವಿಭಾಗದಲ್ಲಿ ಹೊಸ ಟ್ರೆಂಡ್ ಸೃಷ್ಠಿಸಿದ ಹೋಂಡಾ ನ್ಯೂ ಅಮೇಜ್..!

ಎಂಜಿನ್ ವೈಶಿಷ್ಟ್ಯತೆಗಳು

ಹೊಸ ಅಮೇಜ್ ಕಾರುಗಳು 1.2-ಲೀಟರ್ ಪೆಟ್ರೋಲ್ ಮತ್ತು 1.5-ಲೀಟರ್ ಡೀಸೆಲ್ ಎಂಜಿನ್‌ನಲ್ಲಿ ಖರೀದಿಸಬಹುದಾಗಿದ್ದು, ಪೆಟ್ರೋಲ್ ಆವೃತ್ತಿಯು 89-ಬಿಎಚ್‌ಪಿ, 110-ಎನ್ಎಂ ಟಾರ್ಕ್ ಉತ್ಪಾದನೆ ಮಾಡಿದಲ್ಲಿ ಡಿಸೇಲ್ ಆವೃತ್ತಿಯು 99-ಬಿಎಚ್‌ಪಿ, 200-ಎನ್ಎಂ ಉತ್ಪಾದನೆ ಮಾಡಬಲ್ಲವು.

ಕಂಪ್ಯಾಕ್ಟ್ ಸೆಡಾನ್ ವಿಭಾಗದಲ್ಲಿ ಹೊಸ ಟ್ರೆಂಡ್ ಸೃಷ್ಠಿಸಿದ ಹೋಂಡಾ ನ್ಯೂ ಅಮೇಜ್..!

ಅಮೇಜ್ ಕಾರಿನ ಮೈಲೇಜ್

*ಮ್ಯಾನುವಲ್ ಗೇರ್‌ಬಾಕ್ಸ್ ಕಾರುಗಳು- ಪೆಟ್ರೋಲ್ ಆವೃತ್ತಿ- 19.5 ಕಿ.ಮೀ (ಪ್ರತಿ ಲೀಟರ್‌ಗೆ), ಡಿಸೇಲ್ ಆವೃತ್ತಿ- 27.8 ಕಿ.ಮಿ (ಪ್ರತಿ ಲೀಟರ್‌ಗೆ)

*ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಕಾರುಗಳು- ಪೆಟ್ರೋಲ್ ಆವೃತ್ತಿ- 19 ಕಿ.ಮೀ (ಪ್ರತಿ ಲೀಟರ್‌ಗೆ), ಡಿಸೇಲ್ ಆವೃತ್ತಿ- 23.8 ಕಿ.ಮಿ (ಪ್ರತಿ ಲೀಟರ್‌ಗೆ)

MOST READ: ದೇಶಾದ್ಯಂತ ಏಕರೂಪದಲ್ಲಿ ಜಾರಿಗೆ ಬರುತ್ತಿರುವ ಡಿಎಲ್ ಮತ್ತು ಆರ್‌ಸಿಯಿಂದ ಏನು ಲಾಭ ಗೊತ್ತಾ?

ಕಂಪ್ಯಾಕ್ಟ್ ಸೆಡಾನ್ ವಿಭಾಗದಲ್ಲಿ ಹೊಸ ಟ್ರೆಂಡ್ ಸೃಷ್ಠಿಸಿದ ಹೋಂಡಾ ನ್ಯೂ ಅಮೇಜ್..!

ಖರೀದಿಗೆ ಲಭ್ಯವಿರುವ ಬಣ್ಣಗಳು

ಮಾರುಕಟ್ಟೆಯಲ್ಲಿ ಬೇಡಿಕೆಗೆ ಅನುಗುಣವಾಗಿ ಒಟ್ಟು 5 ಬಣ್ಣಗಳಲ್ಲಿ ಲಭ್ಯವಿರುವ ಹೊಸ ಅಮೇಜ್ ಕಾರುಗಳು ರೆಡಿಯೆಂಟ್ ರೆಡ್, ವೈಟ್ ಆರ್ಕಿಡ್ ಪರ್ಲ್, ಲೂನಾರ್ ಸಿಲ್ವರ್ ಮೆಟಾಲಿಕ್, ಗೊಲ್ಡನ್ ಬ್ರೌನ್ ಮೆಟಾಲಿಕ್ ಮತ್ತು ಮಾರ್ಡನ್ ಸ್ಟ್ರಿಲ್ ಮೆಟಾಲಿಕ್ ಬಣ್ಣಗಳಲ್ಲಿ ಖರೀದಿಸಬಹುದಾಗಿದೆ.

Kannada
English summary
Honda Amaze Sales Figures To Hit 50,000 Units In October 2018: Inching Closer To The Maruti Dzire.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X