ಆಟೋ ಎಕ್ಸ್ ಪೋ 2018: ದೇಶಿಯ ಮಾರುಕಟ್ಟೆಗೆ ಮರಳಿ ಬಂದ ಹೋಂಡಾ ಸಿವಿಕ್

ಕಾರಣಾಂತರಗಳಿಂದ ಉತ್ಪಾದನೆ ಸ್ಥಗಿತಗೊಳಿಸಲಾಗಿದ್ದ ಹೋಂಡಾ ಸಿವಿಕ್ ಸೆಡಾನ್ ಕಾರುಗಳು ಮತ್ತೆ ಖರೀದಿಗೆ ಲಭ್ಯವಾಗುತ್ತಿದ್ದು, ಇದಕ್ಕೂ ಮುನ್ನ 2018ರ ಆಟೋ ಎಕ್ಸ್ ಪೋದಲ್ಲಿ ಹೊಸ ಶೈಲಿಯ ಸಿವಿಕ್ ಕಾರುಗಳನ್ನು ಅನಾವರಣಗೊಳಿಸಲಾಗಿದೆ.

By Praveen

ಈ ಹಿಂದೆ ಭಾರತೀಯ ಮಾರುಕಟ್ಟೆಯಲ್ಲಿ ಜನಪ್ರಿಯತೆ ಸಾಧಿಸಿ ಕಾರಣಾಂತರಗಳಿಂದ ಉತ್ಪಾದನೆ ಸ್ಥಗಿತಗೊಳಿಸಲಾಗಿದ್ದ ಹೋಂಡಾ ಸಿವಿಕ್ ಸೆಡಾನ್ ಕಾರುಗಳು ಮತ್ತೆ ಖರೀದಿಗೆ ಲಭ್ಯವಾಗುತ್ತಿದ್ದು, ಇದಕ್ಕೂ ಮುನ್ನ 2018ರ ಆಟೋ ಎಕ್ಸ್ ಪೋದಲ್ಲಿ ಹೊಸ ಶೈಲಿಯ ಸಿವಿಕ್ ಕಾರುಗಳನ್ನು ಅನಾವರಣಗೊಳಿಸಲಾಗಿದೆ.

ಆಟೋ ಎಕ್ಸ್ ಪೋ 2018: ದೇಶಿಯ ಮಾರುಕಟ್ಟೆಗೆ ಮರಳಿ ಬಂದ ಹೋಂಡಾ ಸಿವಿಕ್

ಸೆಡಾನ್ ಆವೃತ್ತಿಗಳಿಗೆ ವಿಶೇಷ ಬೇಡಿಕೆ ಹಿನ್ನೆಲೆ ಹೋಂಡಾ ಇಂಡಿಯಾ ಸಂಸ್ಥೆಯು ತನ್ನ ಸಿವಿಕ್ ಮಾದರಿಗಳನ್ನು ಹೊಸತನದೊಂದಿಗೆ ಮರು ಅಭಿವೃದ್ಧಿಗೊಳಿಸಿದ್ದು, ನವೆಂಬರ್ ಇಲ್ಲವೇ ಡಿಸೆಂಬರ್ ಅಂತ್ಯಕ್ಕೆ ಬಿಡುಗಡೆಗೊಳಿಸುವ ಬಗ್ಗೆ ಸುಳಿವು ನೀಡಿದೆ.

ಆಟೋ ಎಕ್ಸ್ ಪೋ 2018: ದೇಶಿಯ ಮಾರುಕಟ್ಟೆಗೆ ಮರಳಿ ಬಂದ ಹೋಂಡಾ ಸಿವಿಕ್

10ನೇ ತಲೆಮಾರಿನ ವೈಶಿಷ್ಟ್ಯತೆಗಳೊಂದಿಗೆ ಸಿವಿಕ್ ಕಾರುಗಳನ್ನು ಅಭಿವೃದ್ಧಿ ಮಾಡಲಾಗಿದ್ದು, ವಿದೇಶಿ ಮಾರುಕಟ್ಟೆಯಲ್ಲಿ ಸದ್ಯಕ್ಕೆ ಲಭ್ಯವಿರುವ ಸಿವಿಕ್ ಕಾರು ಮಾದರಿಗಳಿಂತಲೂ ಹೆಚ್ಚಿನ ಮಟ್ಟದ ಸಿವಿಕ್ ಆವೃತ್ತಿಗಳನ್ನು ಹೊರತರುತ್ತಿದೆ.

ಆಟೋ ಎಕ್ಸ್ ಪೋ 2018: ದೇಶಿಯ ಮಾರುಕಟ್ಟೆಗೆ ಮರಳಿ ಬಂದ ಹೋಂಡಾ ಸಿವಿಕ್

ಸದ್ಯ ವಿದೇಶಿ ಮಾರುಕಟ್ಟೆಯಲ್ಲಿರುವ ಸಿವಿಕ್ ಕಾರುಗಳು 4 ಸಿಲಿಂಡರ್ ಸೌಲಭ್ಯದೊಂದಿಗೆ ಮೂರು ವಿವಿಧ ಪೆಟ್ರೋಲ್ ಆವೃತ್ತಿಗಳು ಮತ್ತು ಡೀಸೆಲ್ ಆವೃತ್ತಿಯಲ್ಲಿ ಒಂದು ಆವೃತ್ತಿ ಲಭ್ಯವಿದ್ದು, ಭಾರತದಲ್ಲಿ ಬಿಡುಗಡೆಯಾಗಲಿರುವ ಸಿವಿಕ್ ಕಾರುಗಳು ಕೊಂಚ ಬದಲಾವಣೆ ಹೊಂದಲಿವೆ.

ಆಟೋ ಎಕ್ಸ್ ಪೋ 2018: ದೇಶಿಯ ಮಾರುಕಟ್ಟೆಗೆ ಮರಳಿ ಬಂದ ಹೋಂಡಾ ಸಿವಿಕ್

ಮಾಹಿತಿಗಳ ಪ್ರಕಾರ ಭಾರತೀಯ ಮಾದರಿಯ ಸಿವಿಕ್ ಕಾರುಗಳು 2.0-ಲೀಟರ್ ಪೆಟ್ರೋಲ್ ಎಂಜಿನ್ ಮತ್ತು 1. 6- ಡೀಸೆಲ್ ಎಂಜಿನ್ ಹೊಂದಿರಲಿದ್ದು, ಪೆಟ್ರೋಲ್ ವರ್ಷನ್ 158 ಬಿಎಚ್‌ಪಿ, 187 ಎನ್ಎಂ ಟಾರ್ಕ್ ಮತ್ತು ಡೀಸೆಲ್ ವರ್ಷನ್ 118 ಬಿಎಚ್‌ಪಿ, 300 ಎನ್ಎಂ ಟಾರ್ಕ್ ಉತ್ಪಾದಿಸಬಲ್ಲವು.

ಆಟೋ ಎಕ್ಸ್ ಪೋ 2018: ದೇಶಿಯ ಮಾರುಕಟ್ಟೆಗೆ ಮರಳಿ ಬಂದ ಹೋಂಡಾ ಸಿವಿಕ್

ಜೊತೆಗೆ 10ನೇ ಜನರೇಷನ್ ವೈಶಿಷ್ಟ್ಯತೆ ಹೊಂದಿರುವ ಸಿವಿಕ್ ಕಾರುಗಳಲ್ಲಿ 6-ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಇಲ್ಲವೇ 6-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಅಳವಡಿಕೆ ಇರಲಿದ್ದು, ಎಲ್ಇಡಿ ಟೈಲ್ ಲೈಟ್ಸ್, ಡ್ಯುಯಲ್ ಟೋನ್ ಇಂಟಿರಿಯರ್, ಟಚ್ ಸ್ಕ್ರೀನ್ ಇನ್ಪೋಟೈನ್‌ಮೆಂಟ್ ಇರಲಿದೆ.

ಆಟೋ ಎಕ್ಸ್ ಪೋ 2018: ದೇಶಿಯ ಮಾರುಕಟ್ಟೆಗೆ ಮರಳಿ ಬಂದ ಹೋಂಡಾ ಸಿವಿಕ್

ಇನ್ನು ಹೊಸ ಕಾರುಗಳಲ್ಲಿ ಸುರಕ್ಷತೆಗೂ ಹೆಚ್ಚಿನ ಒತ್ತು ನೀಡಲಾಗಿದ್ದು, ಎಬಿಎಸ್, ಇಬಿಡಿ, ಲಾರ್ಜ್ ಕ್ರೋಮ್ ಗ್ರಿಲ್, ಅಲಾಯ್ ಚಕ್ರಗಳು ಮತ್ತು 8 ಏರ್ ಬ್ಯಾಗ್ ವ್ಯವಸ್ಥೆ ಇರುವುದು ಸೆಡಾನ್ ಪ್ರಿಯರ ಆಯ್ಕೆಗೆ ಮತ್ತೊಂದು ಪ್ಲಸ್ ಪಾಯಿಂಟ್ ಆಗಲಿದೆ.

ಆಟೋ ಎಕ್ಸ್ ಪೋ 2018: ದೇಶಿಯ ಮಾರುಕಟ್ಟೆಗೆ ಮರಳಿ ಬಂದ ಹೋಂಡಾ ಸಿವಿಕ್

ಹೀಗಾಗಿ ಹೊಸ ಕಾರಿನ ಬೆಲೆಯು ದೆಹೆಲಿ ಎಕ್ಸ್ ಶೋರಂ ಪ್ರಕಾರ 24 ಲಕ್ಷದಿಂದ 28 ಲಕ್ಷ ಇರಬಹುದೆಂದು ಅಂದಾಜಿಸಲಾಗಿದ್ದು, ವರ್ಷಾಂತ್ಯದಲ್ಲಿ ಬಿಡುಗಡೆಯಾಗುವ ಹೊಸ ಕಾರುಗಳು ಎಷ್ಟರ ಮಟ್ಟಿಗೆ ಬೇಡಿಕೆ ಪಡೆಯಲಿವೆ ಎನ್ನುವುದನ್ನು ಕಾಯ್ದು ನೋಡಬೇಕಿದೆ.

More from DriveSpark

Article Published On: Friday, February 9, 2018, 10:40 [IST]
English summary
Auto Expo 2018: Honda Civic Showcased - Expected Price, Launch Date, Specs, Features & Images.
Read more on auto expo 2018
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+