ಮಾರುಕಟ್ಟೆಗೆ ಬರಲಿದೆ ಹೋಂಡಾ ಸಂಸ್ಥೆಯ ಮತ್ತೊಂದು ಎಸ್‍‍ಯುವಿ ಕಾರು..

ಜಪಾನ್ ಮೂಲದ ವಾಹನ ತಯಾರಕ ಸಂಸ್ಥೆಯಾದ ಹೋಂಡಾ ಕೆಲ ದಿನಗಳ ಹಿಂದಷ್ಟೆ ತಮ್ಮ ಅಮೇಜ್ ಕಾರನ್ನು ಬಿಡುಗಡೆಗೊಳಿಸಿದ್ದು, ಈಗ 5 ಆಸನವುಳ್ಳ ಹೆಚ್‍ಆರ್‍‍‍ವಿ ಪ್ರೀಮಿಯಮ್ ಎಸ್‍‍ಯುವಿ ಕಾರನ್ನು ಬಿಡುಗಡೆಗೊಳಿಸಲಿದೆ.

By Rahul Ts

ಜಪಾನ್ ಮೂಲದ ವಾಹನ ತಯಾರಕ ಸಂಸ್ಥೆಯಾದ ಹೋಂಡಾ ಕೆಲ ದಿನಗಳ ಹಿಂದಷ್ಟೆ ತಮ್ಮ ಅಮೇಜ್ ಕಾರನ್ನು ಬಿಡುಗಡೆಗೊಳಿಸಿದ್ದು, ಈಗ 5 ಆಸನವುಳ್ಳ ಹೆಚ್‍ಆರ್‍‍‍ವಿ ಪ್ರೀಮಿಯಮ್ ಎಸ್‍‍ಯುವಿ ಕಾರನ್ನು ಬಿಡುಗಡೆಗೊಳಿಸಲಿದೆ. ಲಗ್ಗೆಯಿಡಲಿರುವ ಈ ಕಾರು ಹೋಂಡಾ ಸಂಸ್ಥೆಯಲ್ಲಿನ ಬಿಆರ್‍‍ವಿ ಮತ್ತು ಸಿಆರ್‍‍ವಿ ಕಾರುಗಳ ನಡುವಲ್ಲಿ ಸ್ಥಾನವನ್ನು ಪಡೆದುಕೊಂಡಿರಲಿದೆ.

ಮಾರುಕಟ್ಟೆಗೆ ಬರಲಿದೆ ಹೋಂಡಾ ಸಂಸ್ಥೆಯ ಮತ್ತೊಂದು ಎಸ್‍‍ಯುವಿ ಕಾರು..

ಮಾರುಕಟ್ಟೆಯಲ್ಲಿ ಹೆಚ್‍ಆರ್‍‍‍ವಿ ಪ್ರೀಮಿಯಮ್ ಎಸ್‍‍ಯುವಿ ಕಾರು ಹ್ಯುಂಡೈ ಕ್ರೆಟಾ, ರೆನಾಲ್ಟ್ ಡಸ್ಟರ್ ಮತ್ತು ಜೀಪ್ ಕಂಪಾಸ್ ಕಾರುಗಳಿಗೆ ಪೈಪೋಟಿ ನೀಡಲಿದ್ದು, ಈ ಕಾರು ಮೊದಲಿಗೆ 2014ರಲ್ಲಿ ಬಿಡುಗಡೆಗೊಂಡು ಇದೀಗ ಹೊಸದಾಗಿ ವಿನ್ಯಾಸಗೊಂಡು ಫೇಸ್‍‍ಲಿಫ್ಟ್ ಮಾದರಿಯಲ್ಲಿ ಮತ್ತೆ ಎಂಟ್ರಿ ಕೊಡಲಿದೆ.

ಮಾರುಕಟ್ಟೆಗೆ ಬರಲಿದೆ ಹೋಂಡಾ ಸಂಸ್ಥೆಯ ಮತ್ತೊಂದು ಎಸ್‍‍ಯುವಿ ಕಾರು..

ಈಗಾಗಲೆ ಈ ಕಾರು ಜಪಾನ್ ಮಾರುಕಟ್ಟೆಯಲ್ಲಿ ಹೋಂಡಾ ವೆಝೆಲ್ ಎಂಬ ಹೆಸರಿನಲ್ಲಿ ಮಾರಾಟಗೊಳ್ಳುತ್ತಿದ್ದು, ಜಾಝ್ ಪ್ಲಾಟ್‍‍‍ಫಾರ್ಮ್‍‍ನಲ್ಲಿ ಹೋಂಡಾ HRV ಅನ್ನು ನಿರ್ಮಿಸಲಾಗಿದೆ ಮತ್ತು ಅದು ಸಿಟಿ ಮತ್ತು ಹೋಂಡಾ ಡಬ್ಲ್ಯೂಆರ್‍‍ವಿ ಸಹ ಒಳಪಟ್ಟಿರುತ್ತದೆ.

ಮಾರುಕಟ್ಟೆಗೆ ಬರಲಿದೆ ಹೋಂಡಾ ಸಂಸ್ಥೆಯ ಮತ್ತೊಂದು ಎಸ್‍‍ಯುವಿ ಕಾರು..

ಹೋಂಡಾ ಕಂಪನಿಯು ತನ್ನ 1.6-ಲೀಟರ್ ಐ-ಡಿಟಿಇಸಿ ಡೀಸೆಲ್ ಎಂಜಿನ್ ಅನ್ನು ರಾಜಸ್ಥಾನದ ತಪಕರಾ ಘಟಕದಲ್ಲಿ ಈಗಾಗಲೇ ಪ್ರಾರಂಭಿಸಿದೆ. ಅದೇ ಎಂಜಿನ್ HRV ಮತ್ತು ಹೊಸ ಸಿವಿಕ್ ಕಾರುಗಳಿಗೆ ಶಕ್ತಿ ನೀಡುತ್ತದೆ. ಎಸ್ಯುವಿ ಪೆಟ್ರೋಲ್ ಆವೃತ್ತಿಯು ಅದರ ಎಂಜಿನ್‍ ಅನ್ನು ಸಿಟಿ ಸೆಡಾನ್ ಕಾರುಗಳಿಗೆ ಮೂಲವಾಗಿಸುತ್ತದೆ.

ಮಾರುಕಟ್ಟೆಗೆ ಬರಲಿದೆ ಹೋಂಡಾ ಸಂಸ್ಥೆಯ ಮತ್ತೊಂದು ಎಸ್‍‍ಯುವಿ ಕಾರು..

2013ರ ಡೆಟ್ರಾಯ್ಟ್ ಮೋಟಾರ್ ಶೋನಲ್ಲಿ ಅನಾವರಣಗೊಂಡ ಈ ಕಾರು ಆಕ್ರಮಣಕಾರಿ ಮಾರು ಆಕರ್ಷಿತ ವಿನ್ಯಾಸವನ್ನು ಪದೆದುಕೊಂಡಿದ್ದು, ಅಗಲವಾದ ಗ್ರಿಲ್, ಹೊಸ ಎಲ್ಇಡಿ ಹೆಡ್‍‍ಲ್ಯಾಂಪ್‍‍ಗಳು, ಟ್ವೀಕ್ಡ್ ಫಾಗ್ ಲ್ಯಾಂಪ್, ಡೇ ಟೈಮ್ ರನ್ನಿಂಗ್ ಲೈಟ್ಸ್ ಹಾಗು ಹೊಸ ಫ್ರಂಟ್ ಬಂಪರ್ ಅನ್ನು ಅಳವಡಿಸಲಾಗಿದೆ.

ಮಾರುಕಟ್ಟೆಗೆ ಬರಲಿದೆ ಹೋಂಡಾ ಸಂಸ್ಥೆಯ ಮತ್ತೊಂದು ಎಸ್‍‍ಯುವಿ ಕಾರು..

ಇನ್ನು ಕಾರಿನ ಒಳಭಾಗದಲ್ಲಿ ಹೋಂಡಾ ಸಂಸ್ಥೆಯ ಸ್ಯಾಟೆಲೈಟ್ ನ್ಯಾವಿಗೆಷನ್, ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್ ಪ್ಲೇ ಆಯ್ಕೆಗಳನ್ನು ಒಳಗೊಂಡ ಇನ್ಫೋಟೈನ್ಮೆಂಟ್ ಸಿಸ್ಟಮ್ ಅನ್ನು ಅಳವಡಿಸಲಾಗಿದೆ.

ಮಾರುಕಟ್ಟೆಗೆ ಬರಲಿದೆ ಹೋಂಡಾ ಸಂಸ್ಥೆಯ ಮತ್ತೊಂದು ಎಸ್‍‍ಯುವಿ ಕಾರು..

ಇದಲ್ಲದೆ ಪ್ರಯಾಣಿಕರ ಸುರಕ್ಷತೆಗಾಗಿ ಈ ಕಾರಿನಲ್ಲಿ ಸ್ಟೀರಿಂಗ್ ಮೌಂಟೆಡ್ ಕಂಟ್ರೋಲ್ಸ್, ರಿಯರ್ ಪಾರ್ಕಿಂಗ್ ಸೆನ್ಸಾರ್ಸ್, ಕೀಲೆಸ್ ಎಂಟ್ರಿ, ಡ್ಯುಯಲ್ ಫ್ರಂಟ್ ಏರ್‍‍ಬ್ಯಾಗ್ಸ್ ಹಾಗು ಸೈಡ್ ಏರ್‍‍ಬ್ಯಾಗ್ಸ್, ಎಬಿಎಸ್, ಇಬಿಡಿ, ವೆಹಿಕಲ್ ಸ್ಟೆಬಿಲಿಟಿ ಅಸ್ಸಿಸ್ಟ್, ಟ್ರಾಕ್ಷನ್ ಕಂಟ್ರೋಲ್ ಮತ್ತು ಟೈರ್ ಪ್ರೆಶ್ಶುರ್ ಮಾನಿಟರಿಂಗ್ ಸಿಸ್ಟಂ ನಂತಹ ವೈಶಿಷ್ಟ್ಯತೆಗಳನ್ನು ಅಳವಡಿಸಲಾಗಿದೆ.

ಮಾರುಕಟ್ಟೆಗೆ ಬರಲಿದೆ ಹೋಂಡಾ ಸಂಸ್ಥೆಯ ಮತ್ತೊಂದು ಎಸ್‍‍ಯುವಿ ಕಾರು..

ಹೊಸ ಹೋಂಡಾ ಹೆಚ್‍ಆರ್‍‍ವಿ ಫೇಸ್‍‍ಲಿಫ್ಟ್ ಕಾರು 4,295ಎಮ್ಎಮ್ ಉದ್ದ, 1,770ಎಮ್ಎಮ್ ಅಗಲ ಮತ್ತು 1,605ಎಮ್ಎಮ್ ಎತ್ತರವನ್ನು ಪಡೆದಿದ್ದು, 2,610ಎಮ್ಎಮ್ ವ್ಹೀಲ್‍‍ಬೇಸ್ ಹಾಗು 470 ಲೀಟರ್‍‍ನ ಬೂಟ್ ಸ್ಪೇಸ್ ಅನ್ನು ಹೊಂದಿದೆ.

ಮಾರುಕಟ್ಟೆಗೆ ಬರಲಿದೆ ಹೋಂಡಾ ಸಂಸ್ಥೆಯ ಮತ್ತೊಂದು ಎಸ್‍‍ಯುವಿ ಕಾರು..

ಎಂಜಿನ್ ಸಾಮರ್ಥ್ಯ

ಲಗ್ಗೆಯಿಡಲಿರುವ ಈ ಕಾರುಗಳು 1.5 ಲೀಟರ್ ಐ-ವಿಟೆಕ್ ಪೆಟೋಲ್ ಮತ್ತು 1.6 ಲೀಟರ್ ಐ-ವಿಟೆಕ್ ಡೀಸೆಲ್ ಎಂಜಿನ್ ಆಯ್ಕೆಗಳಲ್ಲಿ ಬರಲಿದ್ದು, ಪೆಟ್ರೋಲ್ ಎಂಜಿನ್‍‍ಗಳು 175ಬಿಹೆಚ್‍‍ಪಿ ಮತ್ತು 220ಎನ್ಎಮ್ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡಿದಿದೆ.

ಮಾರುಕಟ್ಟೆಗೆ ಬರಲಿದೆ ಹೋಂಡಾ ಸಂಸ್ಥೆಯ ಮತ್ತೊಂದು ಎಸ್‍‍ಯುವಿ ಕಾರು..

ಇನ್ನು ಡೀಸೆಲ್ ಎಂಜಿನ್‍‍ಗಳು 118ಬಿಹೆಚ್‍‍ಪಿ ಮತ್ತು 300ಎನ್ಎಮ್ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದಿದ್ದು, ಎರಡು ಎಂಜಿನ್‍‍ಗಳನ್ನು 6 ಸ್ಪೀಡ್ ಮ್ಯನುವಲ್ ಅಥವ ಆಟೋಮ್ಯಾಟಿಕ್ ಗೇರ್‍‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ. ಪೆಟ್ರೋಲ್ ಎಂಜಿನ್‍‍ಗಳು ಪ್ರತೀ ಲೀಟರ್‍‍ಗೆ 17-18 ಕಿಲೋಮೀಟರ್ ಮತ್ತು ಡೀಸೆಲ್ ಎಂಜಿನ್ 20-22 ಕಿಲೋಮೀಟರ್ ಮೈಲೇಜ್ ನೀಡಲಿದೆ.

ಮಾರುಕಟ್ಟೆಗೆ ಬರಲಿದೆ ಹೋಂಡಾ ಸಂಸ್ಥೆಯ ಮತ್ತೊಂದು ಎಸ್‍‍ಯುವಿ ಕಾರು..

ಹೊಸ ಕಾರಿನ ಬೆಲೆಗಳು

ಹೋಂಡಾ ಹೆಚ್‍ಆರ್‍‍ವಿ ಕಾರಿನ ಬೇಸ್ ಮಾಡಲ್ ದೆಹಲಿಯ ಎಕ್ಸ್ ಶೋರಂ ಪ್ರಕಾರ ರೂ. 15 ಲಕ್ಷ ಮತ್ತು ಟಾಪ್ ಮಾಡಲ್‍‍ನ ಬೆಲೆಯು 20 ಲಕ್ಷ ಇರಬಹುದೆಂದು ಅಂದಾಜಿಸಲಾಗುತ್ತಿದೆ.

ಮಾರುಕಟ್ಟೆಗೆ ಬರಲಿದೆ ಹೋಂಡಾ ಸಂಸ್ಥೆಯ ಮತ್ತೊಂದು ಎಸ್‍‍ಯುವಿ ಕಾರು..

ಮಾಹಿತಿಗಳ ಪ್ರಕಾರ ಇದೇ ಫೆಬ್ರವರಿಯಲ್ಲಿ ನಡೆದ 2018ರ ಆಟೋ ಎಕ್ಸ್ ಪೋ ಮೇಳದಲ್ಲಿ ಈ ಕಾರನ್ನು ಪರಿಚಯಿಸಲು ಸಂಸ್ಥೆಯು ಯೋಜಿಸಿತ್ತು ಆದರೆ ತಾಂತ್ರಿಕ ದೋಷಗಳಿಂದ ಪ್ರದರ್ಶಿಸಲು ಆಗಲಿಲ್ಲ ಎಂದು ಸಂಸ್ಥೆಯ ಮುಖ್ಯಸ್ಥರು ಹೇಳಿಕೊಂಡಿದ್ದಾರೆ. ಮತ್ತು ಈ ಕಾರು 2019ರ ಮೂರನೆಯ ತ್ರೈಮಾಸಿಕ ಅವಧಿಯಲ್ಲಿ ಬಿಡಗಡೆಗೊಳ್ಳುವ ಸಾಧ್ಯತೆಗಳಿವೆ.

Most Read Articles

Kannada
Read more on honda suv new car
English summary
Honda HRV SUV India Launch, Expected Price, Specs & Details.
Story first published: Saturday, June 30, 2018, 18:53 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X