2019ರ ಆರಂಭದಲ್ಲಿ ಬಿಡುಗಡೆಯಾದ ಹ್ಯುಂಡೈ ಹೊಸ ಕಾರು ಕಾರ್ಲಿನೋ

ಸದ್ಯ ದೇಶಿಯ ಮಾರುಕಟ್ಟೆಯಲ್ಲಿ ಹ್ಯುಂಡೈ ಮತ್ತು ಮಾರುತಿ ಸುಜುಕಿ ನಡುವೆ ಸಾಕಷ್ಟು ಪೈಪೋಟಿ ಇದ್ದು, ಟಾಪ್ 10ರ ಪಟ್ಟಿಯಲ್ಲಿ ಒಟ್ಟು ಆರು ಕಾರುಗಳು ಮಾರುತಿ ಸುಜುಕಿ ನಿರ್ಮಾಣದ ಕಾರುಗಳಿದ್ದಲ್ಲಿ ಹ್ಯುಂಡೈ ನಿರ್ಮಾಣದ ನಾಲ್ಕು ಕಾರುಗಳು ಸ್ಥಾನ ಪಡೆದಿವೆ. ಹೀಗಾಗಿ ಎರಡು ಸಂಸ್ಥೆಗಳ ನಡುವೆ ತೀವ್ರ ಪೈಪೋಟಿ ಇದ್ದು, ಇದೀಗ ಬಿಡುಗಡೆಗೆ ಸಜ್ಜಾಗಿರುವ ಹ್ಯುಂಡೈ ಕಾರ್ಲಿನೋ ಕಾರು ಭಾರೀ ನೀರಿಕ್ಷೆ ಹುಟ್ಟುಹಾಕಿದೆ.

2019ರ ಆರಂಭದಲ್ಲಿ ಬಿಡುಗಡೆಯಾದ ಹ್ಯುಂಡೈ ಹೊಸ ಕಾರು ಕಾರ್ಲಿನೋ

ಕಂಪ್ಯಾಕ್ಟ್ ಎಸ್‌ಯುವಿ ವೈಶಿಷ್ಟ್ಯತೆಗಳೊಂದಿಗೆ ಬಿಡುಗಡೆಗೆ ಸಿದ್ಧಗೊಂಡಿರುವ ಕಾರ್ಲಿನೋ ಕಾರು ಈಗಾಗಲೇ ಭಾರತದಲ್ಲಿ ಬಿಡುಗಡೆಯ ಉದ್ದೇಶಕ್ಕಾಗಿ ಹಲವು ಬಾರಿ ಎಂಜಿನ್ ಕಾರ್ಯಕ್ಷಮತೆಯ ಕುರಿತಾಗಿ ಸ್ಪಾಟ್ ಟೆಸ್ಟಿಂಗ್ ನಡೆಸಿದ್ದು, ನಿನ್ನೆಯು ಕೂಡಾ ಚೆನ್ನೈ ಬಳಿ ಸ್ಪಾಟ್ ಟೆಸ್ಟಿಂಗ್ ನಡೆಸುವ ಮೂಲಕ ಮುಂದಿನ ಕೆಲವೇ ದಿನಗಳಲ್ಲಿ ಬಿಡುಗಡೆಯ ಸುಳಿವು ನೀಡಿದೆ.

2019ರ ಆರಂಭದಲ್ಲಿ ಬಿಡುಗಡೆಯಾದ ಹ್ಯುಂಡೈ ಹೊಸ ಕಾರು ಕಾರ್ಲಿನೋ

ಹ್ಯುಂಡೈ ಸಂಸ್ಥೆಯು ಕ್ರೆಟಾ ಮತ್ತು ಕೊನಾ ಎಸ್‍‍ಯುವಿ ಕಾರುಗಳ ಭರ್ಜರಿ ಯಶಸ್ವಿ ನಂತರ ಕಾರ್ಲಿನೋ ಕಾರುಗಳ ಬಿಡುಗಡೆಗಾಗಿ ಯೋಜನೆ ರೂಪಿಸುತ್ತಿದ್ದು, ಹಲವು ವಿಶೇಷತೆಗಳಿಗಳಿಗೆ ಕಾರಣವಾಗಿರುವ ಹೊಸ ಕಾರು ಮಾರುಕಟ್ಟೆಗೆ ಲಗ್ಗೆಯಿಡುತ್ತಿರುವುದು ಮಧ್ಯಮ ವರ್ಗದ ಕಾರು ಪ್ರಿಯರಲ್ಲಿ ಕುತೂಹಲಕ್ಕೆ ಕಾರಣವಾಗಿದೆ.

2019ರ ಆರಂಭದಲ್ಲಿ ಬಿಡುಗಡೆಯಾದ ಹ್ಯುಂಡೈ ಹೊಸ ಕಾರು ಕಾರ್ಲಿನೋ

ಹ್ಯುಂಡೈ ಹೊಸ ಕಂಪ್ಯಾಕ್ಟ್ ಎಸ್‍‍ಯುವಿ ಅರ್ಬನ್ ಕಮ್ಯೂಟರ್ ವಿಭಾಗಕ್ಕಾಗಿಯೇ ವಿಶೇಷವಾಗಿ ವಿನ್ಯಾಸ ಮಾಡಲಾಗಿದ್ದು, ಕ್ರಾಸ್‍ ಓವರ್ ವಿನ್ಯಾಸದೊಂದಿಗೆ ಕ್ರೆಟಾ ಹಾಗೂ ಕೊನಾ ಕಾರುಗಳ ಮಧ್ಯದ ಕಾರು ಮಾದರಿಯಾಗಿ ಮಾರಾಟಗೊಳ್ಳಲಿದೆ.

2019ರ ಆರಂಭದಲ್ಲಿ ಬಿಡುಗಡೆಯಾದ ಹ್ಯುಂಡೈ ಹೊಸ ಕಾರು ಕಾರ್ಲಿನೋ

ಹೊಸ ಕಾರಿನ ಎಂಜಿನ್ ಕುರಿತಾಗಿ ಈಗಾಗಲೇ ಹಲವು ಸುತ್ತಿನ ಸ್ಪಾಟ್ ನಡೆಯುತ್ತಿದ್ದು, ಹ್ಯುಂಡೈ ಸಂಸ್ಥೆಯು ಈ ಹೊಸ ಕಾರಿಗಾಗಿ ಪ್ರತ್ಯೇಕವಾದ ಪ್ಲ್ಯಾಟ್‍‍ಫಾರ್ಮ್ ಅನ್ನೇ ಸಿದ್ದಪಡಿಸಿದೆ. ಈ ಮೂಲಕ ಭಾರೀ ಪ್ರಮಾಣದ ಬೇಡಿಕೆ ಪಡೆದುಕೊಳ್ಳುವ ವಿಶ್ವಾಸದಲ್ಲಿರುವ ಈ ಕಾರ್ಲಿನೋ ಕಾರುಗಳು ಮಾರುತಿ ಸುಜುಕಿ ಬ್ರೆಝಾ, ಟಾಟಾ ನೆಕ್ಸಾನ್ ಮತ್ತು ಫೋರ್ಡ್ ಇಕೊಸ್ಪೋರ್ಟ್ ಕಾರಿಗಳಿಗೆ ನೇರ ಪ್ರತಿಸ್ಪರ್ಧಿಸಲಾಗಲಿದೆ.

2019ರ ಆರಂಭದಲ್ಲಿ ಬಿಡುಗಡೆಯಾದ ಹ್ಯುಂಡೈ ಹೊಸ ಕಾರು ಕಾರ್ಲಿನೋ

ಪ್ರಸ್ತುತ ಮಾಹಿತಿಗಳ ಪ್ರಕಾರ, ಈ ಹೊಸ ಕಾರು 2019ರ ಆರಂಭದಲ್ಲಿ ಯುಎಸ್ ಮಾರುಕಟ್ಟೆಯಲ್ಲಿ ಮೊದಲು ಬಿಡುಗಡೆಗೊಳ್ಳಲಿದ್ದು, ತದನಂತರವಷ್ಟೇ ಭಾರತ ಸೇರಿದಂತೆ ಪ್ರಮುಖ ಅಂತಾರಾಷ್ಟ್ರೀಯ ಮಾರುಕಟ್ಟೆಗಳಲ್ಲೂ ಈ ಕಾರು ಬಿಡುಗಡೆಗೊಳ್ಳಲಿದೆ.

2019ರ ಆರಂಭದಲ್ಲಿ ಬಿಡುಗಡೆಯಾದ ಹ್ಯುಂಡೈ ಹೊಸ ಕಾರು ಕಾರ್ಲಿನೋ

ಕಂಪ್ಯಾಕ್ಟ್ ಎಸ್‍‍ಯುವಿ ವಿನ್ಯಾಸ ಆಧಾರಿತ ಕಾರ್ಲಿನೊ ಪರಿಕಲ್ಪನೆಯನ್ನು ಮೊದಲು ಹ್ಯುಂಡೈ ಸಂಸ್ಥೆಯು 2016ರ ದೆಹಲಿ ಆಟೋ ಎಕ್ಸ್ ಪೋ ಮೇಳದಲ್ಲಿ ಪ್ರದರ್ಶಿಸಲಾಗಿತ್ತು. ಆದ್ರೆ ಕಾರಣಾಂತರಗಳಿಂದ ಹೊಸ ಕಾರಿನ ಉತ್ಪಾದನಾ ಪ್ರಕ್ರಿಯೆಯನ್ನು ಮೂಂದುಡಿಕೆ ಮಾಡುತ್ತಾ ಬಂದಿದ್ದ ಹ್ಯುಂಡೈ ಇದೀಗ ಕಾರ್ಲಿನೋ ಬಿಡುಗಡೆ ಮಾಡುವ ಇರಾದೆಯಲ್ಲಿದೆ.

2019ರ ಆರಂಭದಲ್ಲಿ ಬಿಡುಗಡೆಯಾದ ಹ್ಯುಂಡೈ ಹೊಸ ಕಾರು ಕಾರ್ಲಿನೋ

ಇದಲ್ಲದೇ ಹ್ಯುಂಡೈ ಸಂಸ್ಥೆಯ ಕ್ಯೂಎಕ್ಸ್ಐ ಹೆಸರಿನ ಮತ್ತೊಂದು ಹೊಸ ಕಾರು ಮಾದರಿಯನ್ನು 2019ರ ಅಂತ್ಯದಲ್ಲಿ ಬಿಡುಗಡೆಗೊಳಿಸುವ ಯೋಜನೆಯಲ್ಲಿದ್ದು, ಅದೇ ಕಾರಿನ ಎಂಜಿನ್ ಮಾದರಿಯನ್ನು ಕಾರ್ಲಿನೋ ಕಾರಗಳಲ್ಲೂ ಬಳಕೆ ಮಾಡಲಾಗಿದೆ ಎನ್ನಲಾಗಿದೆ.

MOST READ: ಭಾರತದಲ್ಲಿ ಬಿಡುಗಡೆಯಾಗಲಿರುವ ಈ ಕಿಯಾ ಎಲೆಕ್ಟ್ರಿಕ್ ಕಾರಿನ ಮೈಲೇಜ್ ಎಷ್ಟು ಗೊತ್ತಾ?

2019ರ ಆರಂಭದಲ್ಲಿ ಬಿಡುಗಡೆಯಾದ ಹ್ಯುಂಡೈ ಹೊಸ ಕಾರು ಕಾರ್ಲಿನೋ

ಇದರಿಂದಾಗಿ ಕಾರ್ಲಿನೋ ಕಾರುಗಳು 1.0 ಲೀಟರ್ ಟಿ-ಜಿಡಿಐ ಪೆಟ್ರೋಲ್ ಎಂಜಿನ್ ಮತ್ತು 1.4 ಲೀಟರ್ ಡೀಸೆಲ್ ಎಂಜಿನ್ ಅನ್ನು ಪಡೆದುಕೊಳ್ಳುವ ಸಾಧ್ಯತೆಗಳಿದ್ದು, ಕ್ರೆಟಾ ಮತ್ತು ಗ್ರ್ಯಾಂಡ್ ಐ10 ನಿಂದಲೂ ಹಲವಾರು ಫೀಚರ್ಸ್‌ಗಳನ್ನು ಹೊಸ ಕಾರಿನಲ್ಲಿ ಎರವಲು ಪಡೆದುಕೊಳ್ಳಲಾಗಿದೆಯೆಂತೆ.

2019ರ ಆರಂಭದಲ್ಲಿ ಬಿಡುಗಡೆಯಾದ ಹ್ಯುಂಡೈ ಹೊಸ ಕಾರು ಕಾರ್ಲಿನೋ

ಬಿಡುಗಡೆಯ ಅವಧಿ ಮತ್ತು ಕಾರಿನ ಬೆಲೆಗಳು(ಅಂದಾಜು)

2019ರ ಜನವರಿ ಅಂತ್ಯಕ್ಕೆ ಯುಎಸ್ಎ ಮಾರುಕಟ್ಟೆಯಲ್ಲಿ ಬಿಡುಗಡೆಯಾಗುವ ಹೊಸ ಕಾರ್ಲಿನೋ ಕಾರುಗಳು ಭಾರತದಲ್ಲಿ 2019ರ ಮಾರ್ಚ್ ಇಲ್ಲವೇ ಎಪ್ರಿಲ್ ಆರಂಭದಲ್ಲಿ ಅವಧಿಯಲ್ಲಿ ಬಿಡುಗಡೆಯಾಗುವ ನೀರಿಕ್ಷೆಗಳಿದ್ದು, ಕಾರಿನ ಬೆಲೆಯು ಎಕ್ಸ್‌ಶೋರೂಂ ಪ್ರಕಾರ ರೂ.7 ಲಕ್ಷದಿಂದ ರೂ.11 ಲಕ್ಷ ಇರಬಹುದೆಂದು ಅಂದಾಜಿಸಲಾಗಿದೆ.

Source: IAB

MOST READ: ಫಲ ನೀಡಿದ 'ಮೇಡ್ ಇನ್ ಇಂಡಿಯಾ'- ವಾಹನ ಉದ್ಯಮದಲ್ಲಿ ಶುರುವಾಗಿದೆ ಭಾರೀ ಸಂಚಲನ..!

2019ರ ಆರಂಭದಲ್ಲಿ ಬಿಡುಗಡೆಯಾದ ಹ್ಯುಂಡೈ ಹೊಸ ಕಾರು ಕಾರ್ಲಿನೋ

ಡ್ರೈವ್‍ಸ್ಪಾರ್ಕ್ ಅಭಿಪ್ರಾಯ

ಹತ್ತು ಹಲವು ವಿಶೇಷತೆಗಳೊಂದಿಗೆ ಬಿಡುಗಡೆಯಾಗುತ್ತಿರುವ ಹ್ಯುಂಡೈ ಕಾರ್ಲಿನೋ ಕಂಪ್ಯಾಕ್ಟ್ ಎಸ್‌ಯುವಿ ಕಾರುಗಳು ಕಂಪ್ಯಾಕ್ಟ್ ಎಸ್‌ಯುವಿ ಕಾರುಗಳ ವಿಭಾಗದಲ್ಲಿ ಉತ್ತಮ ಬೇಡಿಕೆ ಪಡೆದುಕೊಳ್ಳುವ ಎಲ್ಲಾ ಗುಣಲಕ್ಷಣಗಳನ್ನು ಹೊಂದಿದ್ದು, ಟಾಪ್ 10ರ ಪಟ್ಟಿಯಲ್ಲಿ ಸ್ಥಾನ ಪಡೆದುಕೊಳ್ಳುವಲ್ಲಿ ಯಾವುದೇ ಅನುಮಾನವಿಲ್ಲ.

Article Published On: Tuesday, December 11, 2018, 17:43 [IST]
English summary
Hyundai Carlino SUV (Styx) Spied Testing Ahead Of Launch. Read in Kannda.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+