ಫಲ ನೀಡಿದ 'ಮೇಡ್ ಇನ್ ಇಂಡಿಯಾ'- ವಾಹನ ಉದ್ಯಮದಲ್ಲಿ ಶುರುವಾಗಿದೆ ಭಾರೀ ಸಂಚಲನ..!

ಪ್ರಧಾನಿ ಮೋದಿಯವರ ಕನಸಿನ 'ಮೇಡ್ ಇನ್ ಇಂಡಿಯಾ' ಯೋಜನೆಯು ಇಂದು ದೇಶದ ಆರ್ಥಿಕ ಕ್ಷೇತ್ರದಲ್ಲಿ ಹಲವು ಹೊಸತನಗಳಿಗೆ ಕಾರಣವಾಗಿದೆ. ಅದರಲ್ಲೂ ಉತ್ಪಾದನಾ ಕ್ಷೇತ್ರದಲ್ಲಿ ಆದ ಕ್ರಾಂತಿಕಾರಿ ಬದಲಾವಣೆಯು ಇಂದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸುವಂತೆ ಮಾಡಿರುವುದು ಭಾರತದ ಪಾಲಿಗೆ ಹೆಮ್ಮೆಯ ವಿಚಾರ.

ಫಲ ನೀಡಿದ 'ಮೇಡ್ ಇನ್ ಇಂಡಿಯಾ'- ವಾಹನ ಉದ್ಯಮದಲ್ಲಿ ಶುರುವಾಗಿದೆ ಭಾರೀ ಸಂಚಲನ..!

'ಮೇಡ್ ಇನ್ ಇಂಡಿಯಾ' ನೀತಿ ಅನುಸರಿಸಿ ಸ್ಥಳೀಯವಾಗಿ ಹೊಸ ಉತ್ಪನ್ನಗಳನ್ನು ಅಭಿವೃದ್ಧಿಗೊಳಿಸುತ್ತಿರುವ ಸಂಸ್ಥೆಗಳಿಗೆ ಕೇಂದ್ರ ಸರ್ಕಾರವು ಹೆಚ್ಚಿನ ಪ್ರೋತ್ಸಾಹ ನೀಡುತ್ತಿದ್ದು, ವಾಹನ ಉತ್ಪಾದನಾ ಸಂಸ್ಥೆಗಳಿಗೂ ಸಹ ಭರ್ಜರಿ ಆಫರ್ ನೀಡಲಾಗುತ್ತಿರುವುದು ಮತ್ತಷ್ಟು ಬದಲಾವಣೆ ಕಾರಣವಾಗಿದೆ ಎನ್ನಬಹುದು.

ಫಲ ನೀಡಿದ 'ಮೇಡ್ ಇನ್ ಇಂಡಿಯಾ'- ವಾಹನ ಉದ್ಯಮದಲ್ಲಿ ಶುರುವಾಗಿದೆ ಭಾರೀ ಸಂಚಲನ..!

ಭಾರತದಲ್ಲೇ ನಿರ್ಮಾಣ ಮಾಡಿ ಎನ್ನುವ ಪ್ರಧಾನಿ ನರೇಂದ್ರ ಮೋದಿ ಕರೆಗೆ ಓಗೊಟ್ಟು ಸ್ಥಳೀಯವಾಗಿ ವಾಹನಗಳ ಅಭಿವೃದ್ಧಿಗೆ ಒತ್ತು ನೀಡುತ್ತಿರುವ ಸಂಸ್ಥೆಗಳಿಗೆ ಹೊಸ ಆಫರ್ ನೀಡಿರುವ ಕೇಂದ್ರ ಸರ್ಕಾರವು, ಸರ್ಕಾರಿ ವಲಯದ ಅಧಿಕಾರಿಗಳು 'ಮೇಡ್ ಇನ್ ಇಂಡಿಯಾ' ನಿರ್ಮಾಣದ ವಾಹನಗಳ ಬಳಕೆಗೆ ಹೆಚ್ಚಿನ ಒತ್ತು ನೀಡುವಂತೆ ಈ ಹಿಂದೆಯೇ ಸುತ್ತೊಲೆ ಹೊರಡಿಸಿತ್ತು.

ಫಲ ನೀಡಿದ 'ಮೇಡ್ ಇನ್ ಇಂಡಿಯಾ'- ವಾಹನ ಉದ್ಯಮದಲ್ಲಿ ಶುರುವಾಗಿದೆ ಭಾರೀ ಸಂಚಲನ..!

ಇದರ ಪರಿಣಾಮವಾಗಿ ಇಂದು ಮೇಡ್ ಇನ್ ಇಂಡಿಯಾ ಯೋಜನೆಯಡಿ ನಿರ್ಮಾಣಗೊಳ್ಳುತ್ತಿರುವ ವಾಹನಗಳನ್ನೇ ಸರ್ಕಾರಿ ಅಧಿಕಾರಿಗಳಿಗೆ ಒದಗಿಸಲಾಗುತ್ತಿದ್ದು, ಸ್ವದೇಶಿ ನಿರ್ಮಿತ ವಾಹನಗಳ ಬಳಕೆಗೆ ಇಷ್ಟು ಮಹತ್ವ ನೀಡಿರುವುದು ಇದೇ ಮೊದಲು.

ಫಲ ನೀಡಿದ 'ಮೇಡ್ ಇನ್ ಇಂಡಿಯಾ'- ವಾಹನ ಉದ್ಯಮದಲ್ಲಿ ಶುರುವಾಗಿದೆ ಭಾರೀ ಸಂಚಲನ..!

ಇದಷ್ಟೇ ಅಲ್ಲದೇ ಭಾರತೀಯ ಸೇನಾಪಡೆಯಲ್ಲೂ ಸಾಕಷ್ಟು ಬದಲಾವಣೆ ತಂದಿರುವ ಕೇಂದ್ರ ಸರ್ಕಾರವು ಕಳೆದ ತಿಂಗಳು ಹಿಂದಷ್ಟೇ 3 ಸಾವಿರ ಕೋಟಿ ವೆಚ್ಚದಲ್ಲಿ ಮೇಡ್ ಇನ್ ಇಂಡಿಯಾ ನಿರ್ಮಿತ ವಿವಿಧ ಮಾದರಿಯ 4 ಸಾವಿರಕ್ಕೂ ಹೆಚ್ಚು ಸೇನಾ ವಾಹನಗಳನ್ನು ಖರೀದಿ ಮಾಡಿತ್ತು.

ಫಲ ನೀಡಿದ 'ಮೇಡ್ ಇನ್ ಇಂಡಿಯಾ'- ವಾಹನ ಉದ್ಯಮದಲ್ಲಿ ಶುರುವಾಗಿದೆ ಭಾರೀ ಸಂಚಲನ..!

ಹೀಗಾಗಿ ಪ್ರಧಾನಿ ಕನಸಿನ ಯೋಜನೆಯು ಇಂದು ಫಲನೀಡುತ್ತಿದ್ದು, ಭಾರತೀಯ ಸಂಸ್ಥೆಗಳಿಗೆ ದೇಶದಲ್ಲಿ ಹೆಚ್ಚಿನ ಪ್ರಾಶಸ್ತ್ಯದ ನೀಡುತ್ತಿರುವ ಉತ್ತಮ ಬೆಳವಣಿಗೆಯಾಗಿದೆ. ಹಾಗಾದ್ರೆ ಮೋದಿಯವರು ಬಳಕೆ ಮಾಡುತ್ತಿರುವ ಕಾರುಗಳು ಮೇಡ್ ಇನ್ ಇಂಡಿಯಾ ಪಟ್ಟಿಯಲ್ಲಿ ಇದೆಯಾ ಎನ್ನುವ ಪ್ರಶ್ನೆ ಹಲವರಲ್ಲಿ ಮೂಡದೇ ಇರಲಾರದು.

ಫಲ ನೀಡಿದ 'ಮೇಡ್ ಇನ್ ಇಂಡಿಯಾ'- ವಾಹನ ಉದ್ಯಮದಲ್ಲಿ ಶುರುವಾಗಿದೆ ಭಾರೀ ಸಂಚಲನ..!

ಮೋದಿ ರೇಂಜ್ ರೋವರ್ ಆಯ್ಕೆ ಹಿಂದಿದೆ ಒಂದು ಸ್ಟೋರಿ..!

ಪ್ರಧಾನಿ ನರೇಂದ್ರ ಮೋದಿಯವರು ಅಧಿಕೃತವಾಗಿ ಬಳಸುತ್ತಿದ್ದ ತಮ್ಮ ನೆಚ್ಚಿನ ಬಿಎಂಡಬ್ಲ್ಯು 7 ಸಿರೀಸ್ ಕಾರ್‌ನ್ನು ಕೈಬಿಟ್ಟಿದ್ದು, ಇದೀಗ ಅತ್ಯುತ್ತಮ ರಕ್ಷಣಾ ವೈಶಿಷ್ಟ್ಯತೆಗಳನ್ನು ಹೊಂದಿರುವ ರೇಂಜ್ ರೋವರ್ ಕಾರ್‌ನ್ನು ತಮ್ಮ ಅಧಿಕೃತ ವಾಹನವನ್ನಾಗಿ ಬಳಕೆ ಮಾಡುತ್ತಿರುವುದು ಬಹುತೇಕರಿಗೆ ಗೊತ್ತಿಲ್ಲದ ವಿಚಾರ.

ಫಲ ನೀಡಿದ 'ಮೇಡ್ ಇನ್ ಇಂಡಿಯಾ'- ವಾಹನ ಉದ್ಯಮದಲ್ಲಿ ಶುರುವಾಗಿದೆ ಭಾರೀ ಸಂಚಲನ..!

ಝಡ್ ಪ್ಲಸ್ ಸೇರಿದಂತೆ ಹತ್ತು ಹಲವು ಗುಪ್ತಚರ ದಳ ರಕ್ಷಣೆಯೊಂದಿಗೆ ಬಿಎಂಡಬ್ಲ್ಯು 7 ಸಿರೀಸ್ ಐಷಾರಾಮಿ ಕಾರುನ್ನು ಬಳಕೆ ಮಾಡುತ್ತಿದ್ದ ಪ್ರಧಾನಿ ನರೇಂದ್ರ ಮೋದಿಯವರು ಇದ್ದಕ್ಕಿದ್ದಂತೆ ತಮ್ಮ ಫೇವೆರಿಟ್ ಕಾರುನ್ನು ಬದಲಿಸಿದ್ದು, ರೇಂಜ್ ರೋವರ್ ಎಸ್‌ಯುವಿ ಕಾರಿನ ಮೇಲೆ ಆಸಕ್ತಿ ತೊರಿದ್ದಾರೆ.

ಫಲ ನೀಡಿದ 'ಮೇಡ್ ಇನ್ ಇಂಡಿಯಾ'- ವಾಹನ ಉದ್ಯಮದಲ್ಲಿ ಶುರುವಾಗಿದೆ ಭಾರೀ ಸಂಚಲನ..!

'ಮೇಕ್ ಇನ್ ಇಂಡಿಯಾ' ಯೋಜನೆಗೆ ಉತ್ತೇಜನ ನೀಡುವ ಮೂಲಕ ಸದಾ ಸ್ವದೇಶಿ ಮಂತ್ರ ಪಠಿಸುವ ಭಾರತ ಪ್ರಧಾನ ಮಂತ್ರಿ ನರೇಂದ್ರ ಮೋದಿ ತಮ್ಮ ಅಧಿಕೃತ ಪ್ರಯಾಣಕ್ಕೆ ವಿದೇಶಿ ಮೂಲದ ಕಾರನ್ನು ಏಕೆ ಬಳಕೆ ಮಾಡುತ್ತಿದ್ದಾರೆ ಎಂಬುದು ಬಹಳಷ್ಟು ಚರ್ಚೆಗೆ ಎಡೆ ಮಾಡಿಕೊಟ್ಟಿತ್ತು.

ಫಲ ನೀಡಿದ 'ಮೇಡ್ ಇನ್ ಇಂಡಿಯಾ'- ವಾಹನ ಉದ್ಯಮದಲ್ಲಿ ಶುರುವಾಗಿದೆ ಭಾರೀ ಸಂಚಲನ..!

ಅಧಿಕಾರಕ್ಕೂ ಮುನ್ನ ಮಹೀಂದ್ರ ಆಂಡ್ ಮಹೀಂದ್ರದ ಸ್ಕಾರ್ಪಿಯೊ ಕ್ರೀಡಾ ಬಳಕೆಯ ವಾಹನವನ್ನು ಬಳಕೆ ಮಾಡುತ್ತಿದ್ದ ನರೇಂದ್ರ ಮೋದಿ ಅವರು ಪ್ರಧಾನಿ ಗದ್ದುಗೇರಿದ ಬಳಿಕ ಬಿಎಂಡಬ್ಲ್ಯು 7 ಸಿರೀಸ್ ಹೈ ಸೆಕ್ಯೂರಿಟಿ ಎಡಿಷನ್ ಕಾರು ಬಳಕೆಗೆ ಮೋರೆ ಹೋಗಿದ್ದು ಭಾರೀ ಚರ್ಚೆಯನ್ನೇ ಹುಟ್ಟುಹಾಕಿತ್ತು.

MOST READ: ಹೆದ್ದಾರಿ ದರೋಡೆಕೋರರ ಹೆಡೆಮುರಿ ಕಟ್ಟಲು ಡಿಸಿಪಿ ಅಣ್ಣಾಮಲೈ ಮಾಡಿದ ಪ್ಲ್ಯಾನ್ ಹೇಗಿತ್ತು ಗೊತ್ತಾ?

ಫಲ ನೀಡಿದ 'ಮೇಡ್ ಇನ್ ಇಂಡಿಯಾ'- ವಾಹನ ಉದ್ಯಮದಲ್ಲಿ ಶುರುವಾಗಿದೆ ಭಾರೀ ಸಂಚಲನ..!

ರೇಂಜ್ ರೋವರ್ ಆಯ್ಕೆ ಯಾಕೆ?

ನಿಮಗೆಲ್ಲಾ ತಿಳಿದುವಂತೆ ರೇಂಜ್ ರೋವರ್ ಸಂಸ್ಥೆಯು ದೇಶದ ಜನಪ್ರಿಯ ಕಾರು ಉತ್ಪಾದನಾ ಸಂಸ್ಥೆಯಾದ ಟಾಟಾ ಮೋಟಾರ್ಸ್‌ನ ಅಂಗ ಸಂಸ್ಥೆಯಾಗಿ ಭಾರತದಲ್ಲಿ ಕಾರ್ಯನಿರ್ವಹಣೆ ಮಾಡುತ್ತಿದ್ದು, ಟಾಟಾ ಕಾರುಗಳ ಡಿಸೈನ್ ಮತ್ತು ತಂತ್ರಜ್ಞಾನ ಅಭಿವೃದ್ದಿಯ ಹೊಣೆ ಹೊತ್ತಿದೆ.

ಫಲ ನೀಡಿದ 'ಮೇಡ್ ಇನ್ ಇಂಡಿಯಾ'- ವಾಹನ ಉದ್ಯಮದಲ್ಲಿ ಶುರುವಾಗಿದೆ ಭಾರೀ ಸಂಚಲನ..!

ಜೊತೆಗೆ ರೇಂಜ್ ರೋವರ್, ಜಾಗ್ವಾರ್, ಲ್ಯಾಂಡ್ ರೋವರ್ ಕಾರುಗಳನ್ನು ಇದೀಗ ದೇಶಿಯವಾಗಿಯೇ ಟಾಟಾ ಸಹಯೋಗದೊಂದಿಗೆ ಉತ್ಪಾದನೆ ಮಾಡಲಾಗುತ್ತಿದ್ದು, ಇದೇ ಕಾರಣಕ್ಕಾಗಿ ದೇಶಿಯಾಗಿ ಉತ್ಪಾದನೆಯಾಗುತ್ತಿರುವ ಐಷಾರಾಮಿ ಕಾರುಗಳ ಉತ್ಪಾದನೆಗೆ ಉತ್ತೇಜನ ನೀಡುವ ಉದ್ದೇಶದಿಂದ ರೇಂಜ್ ರೋವರ್ ಆಯ್ಕೆ ಮಾಡಿದ್ದಾರೆ ಎನ್ನಬಹುದು.

ಫಲ ನೀಡಿದ 'ಮೇಡ್ ಇನ್ ಇಂಡಿಯಾ'- ವಾಹನ ಉದ್ಯಮದಲ್ಲಿ ಶುರುವಾಗಿದೆ ಭಾರೀ ಸಂಚಲನ..!

ಸುರಕ್ಷತೆಗಾಗಿ ವಿಶೇಷ ವಿನ್ಯಾಸ

ಮಾಜಿ ಪಿಎಂ ರಾಜೀವ್ ಗಾಂಧಿ ಬಳಿಕ ದೇಶದ ಅತ್ಯಂತ ಹೆಚ್ಚು ಅಪಾಯ ಆಹ್ವಾನಿತ ಪ್ರಧಾನಿ ಎಂದು ಗುರುತಿಸಿಕೊಂಡಿರುವ ನರೇಂದ್ರ ಮೋದಿ ಅವರಿಗೆ ಗರಿಷ್ಠ ಭದ್ರತೆ ಒದಗಿಸುವ ಹೊಣೆ ಹೊತ್ತಿರುವ ಎನ್ಎಸ್ಐ ಸಂಸ್ಥೆಯು ವಿಶೇಷ ರಕ್ಷಾಣಾ ವಿನ್ಯಾಸ ಹೊಂದಿರುವ ರೇಂಜ್ ರೋವರ್ ಆಯ್ಕೆಗೆ ಗ್ರೀನ್ ಸಿಗ್ನಲ್ ನೀಡಿದೆ.

MOST READ: ದೇಶದಲ್ಲಿ ನಿರ್ಮಾಣವಾಗಲಿದೆ ವಿಶ್ವದ ಅತಿ ಉದ್ದದ ಜಲಾಂತರ್ಗಾಮಿ ರೈಲ್ವೆ ಯೋಜನೆ..!

ಫಲ ನೀಡಿದ 'ಮೇಡ್ ಇನ್ ಇಂಡಿಯಾ'- ವಾಹನ ಉದ್ಯಮದಲ್ಲಿ ಶುರುವಾಗಿದೆ ಭಾರೀ ಸಂಚಲನ..!

ದೆಹಲಿ ಕೆಂಪು ಕೋಟೆಯಲ್ಲಿ ನಡೆದ 71ನೇ ಸ್ವಾತಂತ್ರ್ಯ ದಿನಾಚರಣೆ ಸಂಭ್ರಮದಲ್ಲಿ ಮೊದಲ ಬಾರಿಗೆ ರೇಂಜ್ ರೋವರ್ ಕಾರಿನಲ್ಲೇ ಆಗಮಿಸಿದ್ದ ಪ್ರಧಾನಿ ಮೋದಿಯವರು, ಸ್ವದೇಶಿ ಮಂತ್ರ ಪಠಿಸಿ ವಿದೇಶಿ ಸಂಸ್ಥೆಯ ಬಿಎಂಡಬ್ಲ್ಯು 7 ಸೀರಿಸ್ ಕಾರು ಬಳಕೆ ಮಾಡುತ್ತಿದ್ದಾರೆ ಎನ್ನುವ ವಿರೋಧಿ ಗುಂಪಿಗೆ ಪರೋಕ್ಷವಾಗಿ ಟಾಂಗ್ ಕೊಟ್ಟಿದ್ದರು.

ಫಲ ನೀಡಿದ 'ಮೇಡ್ ಇನ್ ಇಂಡಿಯಾ'- ವಾಹನ ಉದ್ಯಮದಲ್ಲಿ ಶುರುವಾಗಿದೆ ಭಾರೀ ಸಂಚಲನ..!

ಇನ್ನು ಮೋದಿಯವರು ಬಳಕೆ ಮಾಡುತ್ತಿರುವ ಕಾರಿನ ಬಗೆಗೆ ಹೇಳುವುದಾದ್ರೆ, ಹೊಸ ಕಾರಿನಲ್ಲಿ ಇಂಧನ ಟ್ಯಾಂಕ್‌ಗಳನ್ನು ವಿಶೇಷ ಕವಚಗಳಾಗಿ ವಿನ್ಯಾಸಗೊಳಿಸಲಾಗಿದ್ದು, ಎಂತಹುದೇ ಶಕ್ತಿಶಾಲಿ ಬಾಂಬ್ ದಾಳಿಯಲ್ಲೂ ಸ್ಪೋಟಗೊಳ್ಳುವುದಿಲ್ಲ. ಅಷ್ಟೇ ಅಲ್ಲದೆ ಇದರ ಕ್ಯಾಬಿನ್‌ನಲ್ಲಿ ಆಳವಡಿಸಲಾಗಿರುವ ಗ್ಯಾಸ್ ಫ್ರೂಪ್ ಚೇಂಬರ್ ನಿರಂತರ ಆಮ್ಲಜನಕವನ್ನು ಒದಗಿಸುತ್ತದೆ.

ಫಲ ನೀಡಿದ 'ಮೇಡ್ ಇನ್ ಇಂಡಿಯಾ'- ವಾಹನ ಉದ್ಯಮದಲ್ಲಿ ಶುರುವಾಗಿದೆ ಭಾರೀ ಸಂಚಲನ..!

ವೈಯಕ್ತಿಕರಣಗೊಳಿಸಿದ ಮೋದಿ ಬಳಸುವ ಕಾರು ಅತ್ಯುನ್ನತ್ತ ವೈಶಿಷ್ಟ್ಯಗಳನ್ನು ಪಡೆದಿದೆ. ಆದ್ರೆ ಭದ್ರತಾ ದೃಷ್ಟಿಯ ಹಿನ್ನಲೆಯಲ್ಲಿ ವಿಶಿಷ್ಟತೆಗಳನ್ನು ಗೌಪ್ಯವಾಗಿಡಲಾಗಿದ್ದು, ಈ ಪೈಕಿ ಬೆಂಗಾವಲು ಪಡೆಯಲ್ಲಿ ನಕಲಿ ರೇಂಜ್ ರೋವರ್ ಕಾರುಗಳ ಸೇರ್ಪಡೆ ಕೂಡಾ ಇರುತ್ತೆ.

MOST READ: ಇನ್ಮುಂದೆ ಬೇರೆಯವರ ಕೈಗೆ ನಿಮ್ಮ ವಾಹನಗಳನ್ನು ನೀಡುವುದಕ್ಕೂ ಮುನ್ನ ಹತ್ತು ಬಾರಿ ಯೋಚಿಸಿ..!

ಫಲ ನೀಡಿದ 'ಮೇಡ್ ಇನ್ ಇಂಡಿಯಾ'- ವಾಹನ ಉದ್ಯಮದಲ್ಲಿ ಶುರುವಾಗಿದೆ ಭಾರೀ ಸಂಚಲನ..!

ಒಟ್ಟಿನಲ್ಲಿ ದೇಶಿವಾಗಿ ಸಿದ್ಧಗೊಳ್ಳುವ ಉತ್ಪನ್ನಗಳಿಗೆ ಪರೋಕ್ಷವಾಗಿ ಬೆಂಬಲ ಸೂಚಿಸುತ್ತಿರುವ ಮೋದಿಯುವರು ಈ ಮೂಲಕ ಪರದೇಶಿ ಕಂಪನಿಗಳ ಮೇಲಿನ ಅವಲಂಬನೆಯನ್ನು ತಗ್ಗಿಸುವತ್ತ ಮಹತ್ವದ ಹೆಜ್ಜೆಇಟ್ಟಿರುವುದು ಗಮನಾರ್ಹ ಸಂಗತಿ.

More from DriveSpark

Article Published On: Monday, December 10, 2018, 15:07 [IST]
English summary
Central Government Mandates Preference To Made In India Vehicles In Public Procurement. Read in kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+