ಪ್ರಧಾನಿ ಮೋದಿ ಪ್ರಯಾಣಕ್ಕಾಗಿ ಅತ್ಯಾಧುನಿಕ ಸುರಕ್ಷಾ ಸೌಲಭ್ಯವುಳ್ಳ ದುಬಾರಿ ಕಾರು ಸೇರ್ಪಡೆ

ವಿಶೇಷ ಸಂದರ್ಭಗಳಲ್ಲಿ ಹಲವಾರು ಹೊಸ ಸುರಕ್ಷಾ ಫೀಚರ್ಸ್ ಹೊಂದಿರುವ ಐಷಾರಾಮಿ ಕಾರುಗಳಲ್ಲಿ ಕಾಣಿಸಿಕೊಂಡಿರುವ ಪ್ರಧಾನಿ ನರೇಂದ್ರ ಮೋದಿಯವರು ಇದೀಗ ಮತ್ತೊಂದು ಹೊಸ ಕಾರಿನಲ್ಲಿ ಪ್ರಯಾಣಿಸಿರುವುದು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯಾಗುತ್ತಿದೆ.

ಪ್ರಧಾನಿ ಮೋದಿ ಪ್ರಯಾಣಕ್ಕಾಗಿ ಅತ್ಯಾಧುನಿಕ ಸುರಕ್ಷಾ ಸೌಲಭ್ಯವುಳ್ಳ ದುಬಾರಿ ಕಾರು ಸೇರ್ಪಡೆ

ಪ್ರಧಾನಿ ನರೇಂದ್ರ ಮೋದಿಯವವರ ಅಧಿಕೃತ ಪ್ರಯಾಣಕ್ಕಾಗಿ ಬಿಎಂಡಬ್ಲ್ಯು 7 ಸೀರಿಸ್, ಟೊಟಯೊಟಾ ಲ್ಯಾಂಡ್ ಕ್ರೂಸರ್ ತದನಂತರದಲ್ಲಿ ರೇಂಜ್ ರೋವರ್ ವೊಗ್ ಕಾರುಗಳು ಸ್ಥಾನ ಪಡೆದುಕೊಂಡಿದ್ದು, ಇದೀಗ ಮತ್ತೊಂದು ಹೊಸ ಕಾರು ಪ್ರಧಾನಿಯವರ ಅಧಿಕೃತ ಪ್ರಯಾಣಕ್ಕಾಗಿ ಸೇರ್ಪಡೆಗೊಂಡಿದೆ.

ಪ್ರಧಾನಿ ಮೋದಿ ಪ್ರಯಾಣಕ್ಕಾಗಿ ಅತ್ಯಾಧುನಿಕ ಸುರಕ್ಷಾ ಸೌಲಭ್ಯವುಳ್ಳ ದುಬಾರಿ ಕಾರು ಸೇರ್ಪಡೆ

ನರೇಂದ್ರ ಮೋದಿ ಅವರ ಭದ್ರತಾ ಹೊಣೆ ಹೊತ್ತಿರುವ ಎಸ್‌ಪಿಜಿಯು ಇತ್ತೀಚೆಗೆ ಹೊಸ ತಲೆಮಾರಿನ ಟೊಯೊಟಾ ಲ್ಯಾಂಡ್ ಕ್ರೂಸರ್ ಜೊತೆಗೆ ಮತ್ತೊಂದು ಬಹುಕೋಟಿ ಮೌಲ್ಯದ ಮರ್ಸಿಡಿಸ್-ಮೇಬ್ಯಾಕ್ ಎಸ್650(Mercedes-Maybach S650) ಮಾದರಿಯನ್ನು ಅಧಿಕೃತ ಪ್ರಯಾಣಕ್ಕಾಗಿ ಖರೀದಿ ಮಾಡಿದೆ.

ಪ್ರಧಾನಿ ಮೋದಿ ಪ್ರಯಾಣಕ್ಕಾಗಿ ಅತ್ಯಾಧುನಿಕ ಸುರಕ್ಷಾ ಸೌಲಭ್ಯವುಳ್ಳ ದುಬಾರಿ ಕಾರು ಸೇರ್ಪಡೆ

ಭಾರತಕ್ಕೆ ಮೊನ್ನೆಯಷ್ಟೇ ಭೇಟಿ ನೀಡಿದ್ದ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರನ್ನು ಭೇಟಿ ಮಾಡಲು ಪ್ರಧಾನಿ ನರೇಂದ್ರ ಮೋದಿಯವರು ಹೈದರಾಬಾದ್‌ ಹೌಸ್‌ಗೆ ಹೊಸ ಮರ್ಸಿಡಿಸ್-ಮೇಬ್ಯಾಚ್ ಎಸ್650 ಕಾರಿನಲ್ಲಿಯೇ ಪ್ರಯಾಣಿಸಿ ಗಮನಸೆಳೆದಿದ್ದಾರೆ.

ಪ್ರಧಾನಿ ಮೋದಿ ಪ್ರಯಾಣಕ್ಕಾಗಿ ಅತ್ಯಾಧುನಿಕ ಸುರಕ್ಷಾ ಸೌಲಭ್ಯವುಳ್ಳ ದುಬಾರಿ ಕಾರು ಸೇರ್ಪಡೆ

ಆಧುನಿಕ ಸುರಕ್ಷಾ ತಂತ್ರಜ್ಞಾನ ಪ್ರೇರಣೆಯೊಂದಿಗೆ ಅತಿ ಹೆಚ್ಚು ರಕ್ಷಣಾ ಸೌಲಭ್ಯಗಳನ್ನು ಹೊಂದಿರುವ ಹೊಸ ಮರ್ಸಿಡಿಸ್-ಮೇಬ್ಯಾಚ್ ಎಸ್650 ಕಾರು ಪ್ರಧಾನಿಯವರಿಗೆ ಹೆಚ್ಚಿನ ಭದ್ರತೆ ಜೊತೆ ಅರಾಮದಾಯಕವಾದ ಪ್ರಯಾಣವನ್ನು ಒದಗಿಸುತ್ತದೆ.

ಪ್ರಧಾನಿ ಮೋದಿ ಪ್ರಯಾಣಕ್ಕಾಗಿ ಅತ್ಯಾಧುನಿಕ ಸುರಕ್ಷಾ ಸೌಲಭ್ಯವುಳ್ಳ ದುಬಾರಿ ಕಾರು ಸೇರ್ಪಡೆ

ಮರ್ಸಿಡೆಸ್-ಮೇಬ್ಯಾಚ್ ಎಸ್600 ಗಾರ್ಡ್ ವಾಹನವು ಕಳೆದ ವರ್ಷ ಭಾರತದಲ್ಲಿ ಬಿಡುಗಡೆಯಾಗಿದ್ದು, ಮರ್ಸಿಡಿಸ್ ಕಂಪನಿಯು ಮೇಬ್ಯಾಕ್ ವಿಭಾಗವು ಸಾಮಾನ್ಯ ಐಷಾರಾಮಿ ಕಾರುಗಳಿಂತಲೂ ಎಸ್ ಸರಣಿ ಕಾರುಗಳನ್ನು ವಿಐಪಿಗಳಿಗೆ ಕಸ್ಟಮೈಜ್ ಮಾಡಿ ಮಾರಾಟ ಮಾಡುತ್ತದೆ.

ಪ್ರಧಾನಿ ಮೋದಿ ಪ್ರಯಾಣಕ್ಕಾಗಿ ಅತ್ಯಾಧುನಿಕ ಸುರಕ್ಷಾ ಸೌಲಭ್ಯವುಳ್ಳ ದುಬಾರಿ ಕಾರು ಸೇರ್ಪಡೆ

ಹೊಸ ಮರ್ಸಿಡೆಸ್-ಮೇಬ್ಯಾಚ್ ಎಸ್650 ಅಲ್ಟ್ರಾ ಲಗ್ಷುರಿ ಸೆಡಾನ್ ಕಾರು ಮಾದರಿಯು ಆರಂಭಿಕವಾಗಿ ಭಾರತದಲ್ಲಿ ರೂ.12 ಕೋಟಿ ಬೆಲೆ ಹೊಂದಿದ್ದು, ಪ್ರಧಾನಿ ನರೇಂದ್ರ ಮೋದಿ ಭದ್ರತೆಗಾಗಿ ಒದಗಿಸಲಾಗಿರುವ ಕಾರು ಮಾದರಿಯು ಕೆಲವು ಆತಂರಿಕ ಭದ್ರತಾ ವೈಶಿಷ್ಟ್ಯತೆಗಳೊಂದಿಗೆ ಮತ್ತಷ್ಟು ದುಬಾರಿಯಾಗಿರಲಿದೆ.

ಪ್ರಧಾನಿ ಮೋದಿ ಪ್ರಯಾಣಕ್ಕಾಗಿ ಅತ್ಯಾಧುನಿಕ ಸುರಕ್ಷಾ ಸೌಲಭ್ಯವುಳ್ಳ ದುಬಾರಿ ಕಾರು ಸೇರ್ಪಡೆ

ಮರ್ಸಿಡಿಸ್-ಮೇಬ್ಯಾಚ್ ಎಸ್650 ಗಾರ್ಡ್ ಕಾರು ಮಾದರಿಯು ಯುರೋ 6 ವೈಶಿಷ್ಟ್ಯತೆಯ 6.0 ಲೀಟರ್ ಟ್ವಿನ್-ಟರ್ಬೋ ವಿ12 ಪೆಟ್ರೋಲ್ ಎಂಜಿನ್ ಹೊಂದಿದ್ದು, ಇದು 7-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ನೊಂದಿಗೆ ಗರಿಷ್ಠ 516-ಬಿಎಚ್‌ಪಿ ಮತ್ತು 900-ಎನ್‌ಎಂ ಟಾರ್ಕ್ ಉತ್ಪಾದನೆಯೊಂದಿಗೆ ಗರಿಷ್ಠ 160 ಕಿ.ಮೀ ಟಾಪ್ ಸ್ಪೀಡ್ ಹೊಂದಿದೆ.

ಪ್ರಧಾನಿ ಮೋದಿ ಪ್ರಯಾಣಕ್ಕಾಗಿ ಅತ್ಯಾಧುನಿಕ ಸುರಕ್ಷಾ ಸೌಲಭ್ಯವುಳ್ಳ ದುಬಾರಿ ಕಾರು ಸೇರ್ಪಡೆ

ಹೊಸ ಮರ್ಸಿಡಿಸ್-ಮೇಬ್ಯಾಕ್ ಎಸ್650 ಕಾರು ಮಾದರಿಯು ಸಂಪೂರ್ಣವಾಗಿ ಬುಲೆಟ್‌ ಪ್ರೂಫ್‌ ವೈಶಿಷ್ಟ್ಯತೆ ಹೊಂದಿದ್ದು, ಉತ್ಕೃಷ್ಟ ಗುಣಮಟ್ಟದ ಬಾಡಿಯೊಂದಿಗೆ ಬುಲೆಟ್‌ಗಳನ್ನು ಎದುರಿಸುವಷ್ಟು ಸಾಮರ್ಥ್ಯವನ್ನು ಈ ಕಾರು ಹೊಂದಿದೆ.

ಪ್ರಧಾನಿ ಮೋದಿ ಪ್ರಯಾಣಕ್ಕಾಗಿ ಅತ್ಯಾಧುನಿಕ ಸುರಕ್ಷಾ ಸೌಲಭ್ಯವುಳ್ಳ ದುಬಾರಿ ಕಾರು ಸೇರ್ಪಡೆ

ಈ ಮೂಲಕ ಪ್ರಬಲವಾದ ಬಾಂಬ್ ಸ್ಪೋಟಗಳನ್ನು ಎದರಿಸುವ ಶಕ್ತಿ ಹೊಂದಿರುವ ಹೊಸ ಕಾರು ಎಕೆ-47 ರೈಫಲ್‌ಗಳ ದಾಳಿಯನ್ನು ಕೂಡಾ ತಡೆದುಕೊಳ್ಳಬಹುದಾದ ಸಾಮರ್ಥ್ಯ ಹೊಂದಿದ್ದು, ಎರಡು ಮೀಟರ್‌ ದೂರದಲ್ಲಿ 15 ಕೆಜಿಯಷ್ಟು ಟಿಎನ್‌ಟಿ ಸ್ಫೋಟ ಆದರೂ ಕೂಡಾ ಅದರಿಂದ ಈ ಕಾರಿಗೆ ಯಾವುದೇ ಹಾನಿಯಾಗದಂತೆ ರಕ್ಷಣೆ ನೀಡುತ್ತದೆ.

ಪ್ರಧಾನಿ ಮೋದಿ ಪ್ರಯಾಣಕ್ಕಾಗಿ ಅತ್ಯಾಧುನಿಕ ಸುರಕ್ಷಾ ಸೌಲಭ್ಯವುಳ್ಳ ದುಬಾರಿ ಕಾರು ಸೇರ್ಪಡೆ

ಹಾಗೆಯೇ ಹೊಸ ಕಾರಿನ ಕಿಟಕಿಗಳ ಒಳಭಾಗದಲ್ಲಿ ಪಾಲಿಕಾರ್ಬೊನೇಟ್ ಲೇಪನವನ್ನು ನೀಡಿರುವುದರಿಂದ ಒಳಭಾಗದಲ್ಲಿರುವರಿಗೆ ನೇರ ಸ್ಫೋಟದಿಂದ ರಕ್ಷಿಸಲು ಹೆಚ್ಚು ಶಸ್ತ್ರಸಜ್ಜಿತವಾಗಿದ್ದು, ಐಷಾರಾಮಿ ಆದ ಒಳಾಂಗಣ ವಿನ್ಯಾಸ ಕೂಡಾ ಈ ಕಾರಿನ ಪ್ರಮುಖ ಆಕರ್ಷಣೆಯಾಗಿದೆ.

ಪ್ರಧಾನಿ ಮೋದಿ ಪ್ರಯಾಣಕ್ಕಾಗಿ ಅತ್ಯಾಧುನಿಕ ಸುರಕ್ಷಾ ಸೌಲಭ್ಯವುಳ್ಳ ದುಬಾರಿ ಕಾರು ಸೇರ್ಪಡೆ

ಇದರೊಂದಿಗೆ ಹೊಸ ಕಾರಿನಲ್ಲಿ ಇಂಧನ ಟ್ಯಾಂಕ್‌ ಕೂಡಾ ವಿಶೇಷ ವಸ್ತುಗಳಿಂದ ನಿರ್ಮಾಣಗೊಂಡಿದ್ದು, ಸ್ಪೋಟದಿಂದ ಕಾರನ್ನು ರಕ್ಷಿಸಲು ಸಹಕಾರಿಯಾಗಿದೆ. ಬಾಂಬ್ ದಾಳಿಯಿಂದ ಉಂಟಾಗುವ ರಂಧ್ರಗಳನ್ನು ಈ ವಾಹನವು ಕೂಡಲೇ ಮುಚ್ಚವುದಲ್ಲದೆ ಗರಿಷ್ಠ ಭದ್ರತೆ ಖಚಿತಪಡಿಸಲಿದ್ದು, ಟೈಯರ್‌ಗಳಿಗೆ ಹಾನಿ ಉಂಟಾದರೂ ನೂರಾರು ಕಿ.ಮೀ ನಷ್ಟು ಫ್ಲಾಟ್‌ ಟೈರ್‌ಗಳಲ್ಲಿ ಚಲಿಸುವ ಸಾಮರ್ಥ್ಯ ಹೊಂದಿದೆ.

ಪ್ರಧಾನಿ ಮೋದಿ ಪ್ರಯಾಣಕ್ಕಾಗಿ ಅತ್ಯಾಧುನಿಕ ಸುರಕ್ಷಾ ಸೌಲಭ್ಯವುಳ್ಳ ದುಬಾರಿ ಕಾರು ಸೇರ್ಪಡೆ

ಇನ್ನು ಮೋದಿಯವರು ಮುಖ್ಯಮಂತ್ರಿಯಾಗಿದ್ದಾಗ ಮಹೀಂದ್ರಾ ನಿರ್ಮಾಣದ ಸ್ಕಾರ್ಪಿಯೋದಿಂದ ಹಿಡಿದು ಪ್ರಧಾನ ಮಂತ್ರಿ ಸ್ಥಾನಕ್ಕೇರುವ ತನಕ ಹಂತ-ಹಂತವಾಗಿ ಹಲವು ಕಾರು ಮಾದರಿಗಳನ್ನು ತಮ್ಮ ಅಧಿೃತ ಕಾರು ಮಾದರಿಯಾಗಿ ಬಳಕೆ ಮಾಡಿದ್ದು, ಪ್ರಧಾನಿ ಹುದ್ದೆ ಅಲಂಕರಿಸಿದ ನಂತರ ಹೆಚ್ಚಿನ ಭದ್ರತೆ ಒದಗಿಸುವುದು ಕೆಲವೇ ಕೆಲವು ಕಾರು ಮಾದರಿಗಳನ್ನು ಭದ್ರತಾ ಸಂಸ್ಥೆಗಳ ಸಲಹೆ ಮೇರೆಗೆ ಬಳಸುತ್ತಿದ್ದಾರೆ.

ಪ್ರಧಾನಿ ಮೋದಿ ಪ್ರಯಾಣಕ್ಕಾಗಿ ಅತ್ಯಾಧುನಿಕ ಸುರಕ್ಷಾ ಸೌಲಭ್ಯವುಳ್ಳ ದುಬಾರಿ ಕಾರು ಸೇರ್ಪಡೆ

ವೈಯಕ್ತಿಕರಣಗೊಳಿಸಿದ ಮೋದಿಯವರ ಕಾರುಗಳು ಅತ್ಯುನ್ನತ್ತ ಸುರಕ್ಷಾ ವೈಶಿಷ್ಟ್ಯಗಳನ್ನು ಪಡೆದುಕೊಂಡಿರಲಿದ್ದು, ಭದ್ರತಾ ದೃಷ್ಟಿಯ ಹಿನ್ನಲೆಯಲ್ಲಿ ಕಾರಿನ ಕೆಲವು ವಿಶಿಷ್ಟತೆಗಳನ್ನು ಗೌಪ್ಯವಾಗಿಡಲಾಗುತ್ತದೆ.

ಪ್ರಧಾನಿ ಮೋದಿ ಪ್ರಯಾಣಕ್ಕಾಗಿ ಅತ್ಯಾಧುನಿಕ ಸುರಕ್ಷಾ ಸೌಲಭ್ಯವುಳ್ಳ ದುಬಾರಿ ಕಾರು ಸೇರ್ಪಡೆ

ಈ ಪೈಕಿ ಬೆಂಗಾವಲು ಪಡೆಯಲ್ಲಿ ನಕಲಿ ಕಾರು ಮಾದರಿಗಳ ಸೇರ್ಪಡೆ ಸಹ ಒಂದಾಗಿದ್ದು, ಇವುಗಳು ಎಂತಹುದೇ ಶಕ್ತಿಶಾಲಿ ಬಾಂಬ್ ದಾಳಿಯಲ್ಲೂ ಕಾರು ಛಿದ್ರಗೊಳ್ಳದಂತೆ ಬುಲೆಟ್ ಪ್ರೂಪ್ ಬಾಡಿ ಕಿಟ್ ಹೊಂದಿರುತ್ತವೆ. ನರೇಂದ್ರ ಮೋದಿಯವರು ಪ್ರಧಾನಿ ಸ್ಥಾನ ಅಲಂಕರಿಸಿದ ನಂತರ ಹಲವು ಕಾರು ಮಾದರಿಗಳ ಬಳಕೆಯನ್ನು ಬದಲಿಸಿದ್ದು, ಇದೀಗ ನೂತನವಾಗಿ ಖರೀದಿ ಮಾಡಲಾಗಿರುವ ಹೊಸ ಮರ್ಸಿಡಿಸ್-ಮೇಬ್ಯಾಕ್ ಎಸ್650 ಗಮನಸೆಳೆದಿದೆ.

Most Read Articles

Kannada
English summary
Prime minister narendra modi gets new mercedes benz maybach 650 guard sedan details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X