ನರೇಂದ್ರ ಮೋದಿಯವರ ನೆಚ್ಚಿನ ಆಯ್ಕೆ ರೇಂಜ್ ರೋವರ್ ವೊಗ್ ಸ್ಪೆಷಲ್ ಏನು?
ನರೇಂದ್ರ ಮೋದಿಯವರು 17ನೇ ಲೋಕಸಭಾ ಚುನಾವಣೆಯಲ್ಲಿ ಭಾರೀ ಬಹುಮತದೊಂದಿಗೆ ಎರಡನೇ ಬಾರಿಗೆ ಪ್ರಧಾನಿ ಹುದ್ದೆಯನ್ನು ಅಲಂಕರಿಸಲು ಉತ್ಸುಕರಾಗಿದ್ದು, ಇದಕ್ಕೂ ಮುನ್ನ ವಾರಣಾಸಿಯಲ್ಲಿ ತಮ್ಮ ನೆಚ್ಚಿನ ರೇಂಜ್ ರೋವರ್ ವೊಗ್ ಕಾರಿನಲ್ಲೇ ರೋಡ್ ಶೋ ನಡೆಸಿದ್ದು ವಿಶೇಷವಾಗಿತ್ತು.

ಈ ಹಿಂದೆ 2014ರಲ್ಲಿ ಪ್ರಧಾನಿ ಹುದ್ದೆ ಅಲಂಕರಿಸಿದ ಸಂದರ್ಭದಲ್ಲಿ ಝಡ್ ಪ್ಲಸ್ ಸೇರಿದಂತೆ ಹತ್ತು ಹಲವು ಗುಪ್ತಚರ ದಳ ರಕ್ಷಣೆ ಹೊಂದಿದ್ದ ಬಿಎಂಡಬ್ಲ್ಯು 7 ಸಿರೀಸ್ ಐಷಾರಾಮಿ ಕಾರುನ್ನು ಬಳಕೆ ಮಾಡುತ್ತಿದ್ದ ನರೇಂದ್ರ ಮೋದಿಯವರು ಕೆಲವೇ ದಿನಗಳಲ್ಲಿ ಅತ್ಯಾಧುನಿಕ ರಕ್ಷಣಾ ಕಾರನ್ನು ಬಿಟ್ಟು ರೇಂಜ್ ರೋವರ್ ವೊಗ್ ಎಸ್‌ಯುವಿ ಕಾರನ್ನು ಆಯ್ಕೆ ಮಾಡಿ ಸುದ್ದಿಯಾಗಿದ್ದರು. ಹಾಗಾದ್ರೆ ಬಿಎಂಡಬ್ಲ್ಯು 7 ಸಿರೀಸ್ ಬಿಟ್ಟು ರೇಂಜ್ ರೋವರ್ ವೊಗ್ ಕಾರನ್ನೇ ಆಯ್ಕೆ ಮಾಡಿದ್ದರ ಹಿಂದಿನ ಅಸಲಿ ಕಾರಣ ಏನು ಗೊತ್ತಾ?

'ಮೇಕ್ ಇನ್ ಇಂಡಿಯಾ' ಯೋಜನೆಗೆ ಜೈ
ಮಹತ್ವಾಕಾಂಕ್ಷಿ ಮೇಕ್ ಇನ್ ಇಂಡಿಯಾ ಯೋಜನೆಯನ್ನು ಉತ್ತೇಜನ ನೀಡುವ ಮೂಲಕ ಸದಾ ಸ್ವದೇಶಿ ಮಂತ್ರ ಪಠಿಸುತ್ತಿದ್ದ ನರೇಂದ್ರ ಮೋದಿಯವರಿಗೆ ಬಿಎಂಡಬ್ಲ್ಯು 7 ಸೀರಿಸ್ ಕಾರು ಬಳಕೆಯು ವಿರೋಧಿಗಳ ಟೀಕಾಸ್ತ್ರವಾಗಿ ಬದಲಾಗ ತೊಡಗಿತು.

ಮೇಕ್ ಇನ್ ಇಂಡಿಯಾ ಮಂತ್ರ ಪಠಿಸುವ ಪ್ರಧಾನಿ ತಮ್ಮ ಅಧಿಕೃತ ಪ್ರಯಾಣಕ್ಕೆ ವಿದೇಶಿ ಮೂಲದ ಕಾರನ್ನು ಏಕೆ ಬಳಕೆ ಮಾಡುತ್ತಿದ್ದಾರೆ ಎಂಬುದು ಬಹಳಷ್ಟು ಚರ್ಚೆಗೆ ಎಡೆ ಮಾಡಿಕೊಟ್ಟಿತ್ತು. ಹೀಗಾಗಿ ವಿರೋಧಿಗಳ ಟೀಕೆ ಮತ್ತೊಂದು ಹಂತಕ್ಕೆ ಹೋಗುವ ಮುನ್ನವೇ ನರೇಂದ್ರ ಮೋದಿ ಮಹತ್ವದ ನಿರ್ಧಾರವೊಂದನ್ನು ತೆಗೆದುಕೊಂಡಿದ್ದರು.

ರೇಂಜ್ ರೋವರ್ ವೊಗ್‌ಗೆ ಗ್ರೀನ್ ಸಿಗ್ನಲ್
ನಿಮಗೆಲ್ಲಾ ತಿಳಿದುವಂತೆ ರೇಂಜ್ ರೋವರ್ ಸಂಸ್ಥೆಯು ದೇಶದ ಜನಪ್ರಿಯ ಕಾರು ಉತ್ಪಾದನಾ ಸಂಸ್ಥೆಯಾದ ಟಾಟಾ ಮೋಟಾರ್ಸ್‌ನ ಅಂಗ ಸಂಸ್ಥೆಯಾಗಿದ್ದು, ದೇಶಿಯಾಗಿ ಉತ್ಪಾದನೆಯಾಗುತ್ತಿರುವ ಐಷಾರಾಮಿ ಕಾರು ಉತ್ಪಾದನೆಗೆ ಉತ್ತೇಜನ ನೀಡುವ ಉದ್ದೇಶದಿಂದ ರೇಂಜ್ ರೋವರ್ ಆಯ್ಕೆ ಮಾಡಿ ತಮ್ಮ ವಿರೋಧಿಗಳ ಬಾಯಿ ಮುಚ್ಚಿಸುವಲ್ಲಿ ನರೇಂದ್ರ ಮೋದಿ ಯಶಸ್ವಿಯಾಗಿದ್ದರು.

ಸುರಕ್ಷತೆಗಾಗಿ ವಿಶೇಷ ವಿನ್ಯಾಸ
ಮಾಜಿ ಪಿಎಂ ದಿ. ರಾಜೀವ್ ಗಾಂಧಿ ಬಳಿಕ ದೇಶದ ಅತ್ಯಂತ ಹೆಚ್ಚು ಅಪಾಯ ಆಹ್ವಾನಿತ ಪ್ರಧಾನಿ ಎಂದು ಗುರುತಿಸಿಕೊಂಡಿರುವ ನರೇಂದ್ರ ಮೋದಿ ಅವರಿಗೆ ಗರಿಷ್ಠ ಭದ್ರತೆ ಒದಗಿಸುವ ಹೊಣೆ ಹೊತ್ತಿರುವ ಎನ್ಎಸ್ಐ ಸಂಸ್ಥೆಯು ಬಿಎಂಡಬ್ಲ್ಯು 7 ಸೀರಿಸ್ ನಂತರ ಗರಿಷ್ಠ ಭದ್ರತೆ ನೀಡಬಲ್ಲ ವಿಶೇಷ ರಕ್ಷಾಣಾ ವಿನ್ಯಾಸ ಹೊಂದಿರುವ ರೇಂಜ್ ರೋವರ್ ವೊಗ್ ಆಯ್ಕೆಗೆ ಗ್ರೀನ್ ಸಿಗ್ನಲ್ ನೀಡಿದೆ.

ವೈಯಕ್ತಿಕರಣಗೊಳಿಸಿದ ಮೋದಿಯವರು ಬಳಸುವ ಕಾರು ಅತ್ಯುನ್ನತ್ತ ಸುರಕ್ಷಾ ವೈಶಿಷ್ಟ್ಯಗಳನ್ನು ಪಡೆದಿದ್ದು, ಭದ್ರತಾ ದೃಷ್ಟಿಯ ಹಿನ್ನಲೆಯಲ್ಲಿ ಕಾರಿನ ಕೆಲವು ವಿಶಿಷ್ಟತೆಗಳನ್ನು ಗೌಪ್ಯವಾಗಿಡಲಾಗಿದೆ. ಈ ಪೈಕಿ ಬೆಂಗಾವಲು ಪಡೆಯಲ್ಲಿ ನಕಲಿ ರೇಂಜ್ ರೋವರ್ ಕಾರುಗಳ ಸೇರ್ಪಡೆ ಸಹ ಮಾಡಲಾಗಿದ್ದು, ಎಂತಹುದೇ ಶಕ್ತಿಶಾಲಿ ಬಾಂಬ್ ದಾಳಿಯಲ್ಲೂ ಕಾರು ಛಿದ್ರಗೊಳ್ಳದಂತೆ ಕಾರಿನ ಬಾಡಿ ಕಿಟ್ ಒದಗಿಸಲಾಗಿದೆ.

ಎಂಜಿನ್ ಸಾಮರ್ಥ್ಯ
3.0-ಲೀಟರ್(2,995 ಸಿಸಿ) ವಿ6 ಸೂಪರ್ ಚಾರ್ಜ್ಡ್ ಪೆಟ್ರೋಲ್ ಎಂಜಿನ್ ಹೊಂದಿರುವ ರೇಂಜ್ ರೋವರ್ ವೊಗ್ ಕಾರು ಮಾದರಿಯು 8-ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್‌ಮಿಷನ್ ಸೌಲಭ್ಯದೊಂದಿಗೆ 340-ಬಿಎಚ್‌ಪಿ ಮತ್ತು 450-ಎನ್ಎಂ ಟಾರ್ಕ್ ಉತ್ಪಾದನಾ ಗುಣ ಹೊಂದಿದೆ.
MOST READ: ದೇವೇಗೌಡರ ಕನಸಿನ ಯೋಜನೆಯನ್ನು ಸಹಕಾರಗೊಳಿಸಿದ ಪ್ರಧಾನಿ ಮೋದಿ..!

ಈ ಮೂಲಕ 7.8 ಸೇಕೆಂಡುಗಳಲ್ಲಿ ಸೊನ್ನೆಯಿಂದ 100 ಕಿ.ಮಿ ವೇಗದಲ್ಲಿ ಚಲಿಸಬಲ್ಲ ರೇಂಜ್ ರೋವರ್ ವೊಗ್ ಕಾರು ಪ್ರತಿ ಗಂಟೆಗೆ 209 ಕಿ.ಮಿ ಟಾಪ್ ಸ್ಪೀಡ್ ಪಡೆದುಕೊಂಡಿದ್ದು, ದೆಹಲಿ ಎಕ್ಸ್‌ಶೋರೂಂ ಪ್ರಕಾರ ಈ ಕಾರು ರೂ.2.11 ಕೋಟಿ ಬೆಲೆ ಹೊಂದಿದೆ.

ಆದ್ರೆ ಪ್ರಧಾನಿ ಬಳಕೆಯ ರೇಂಜ್ ರೋವರ್ ವೊಗ್ ಕಾರು ಕೆಲವು ಗರಿಷ್ಠ ಮಟ್ಟದ ಸುರಕ್ಷಾ ಸೌಲಭ್ಯಗಳನ್ನು ಪಡೆದುಕೊಂಡಿದ್ದು, ಸಾಮಾನ್ಯ ಮಾದರಿಯ ವೊಗ್ ಕಾರಿಗಿಂತಲೂ ತುಸು ದುಬಾರಿಯಾಗಿರುವ ವೊಗ್ ಕಸ್ಟಮೈಜ್ಡ್ ಕಾರಿನ ಹಲವು ಅತ್ಯಾಧುನಿಕ ಸೌಲಭ್ಯಗಳ ಮಾಹಿತಿಯನ್ನು ಗೌಪ್ಯವಾಗಿ ಇಡಲಾಗಿದೆ.
MOST READ: ಪ್ರಾಯೋಗಿಕ ಪರೀಕ್ಷೆಯಲ್ಲಿ ಅಬ್ಬರಿಸಿದ ಜಗತ್ತಿನ ಅತಿ ವೇಗದ ಬುಲೆಟ್ ಟ್ರೈನ್..!

ಇನ್ನು ರೇಂಜ್ ರೋವರ್, ಜಾಗ್ವಾರ್, ಲ್ಯಾಂಡ್ ರೋವರ್(ಜೆಎಲ್ಆರ್) ಸಂಸ್ಥೆಯು ಇದೀಗ ದೇಶಿಯವಾಗಿಯೇ ಕಾರು ನಿರ್ಮಾಣ ಮಾಡುವ ಸಂಬಂಧ ಟಾಟಾ ಜೊತೆ ಕೈಜೊಡಿಸಿದ್ದು, ಕಾರು ಉತ್ಪಾದನೆಯಲ್ಲಿ ಭಾರೀ ಬದಲಾವಣೆ ತರುವ ಉದ್ದೇಶದಿಂದ ತನ್ನ ಹೊಸ ಕಾರು ಉತ್ಪಾದನಾ ತಂತ್ರವನ್ನು ಟಾಟಾ ಕಾರುಗಳಲ್ಲಿ ಬಳಕೆ ಮಾಡುವ ಮೂಲಕ ಕಾರು ಖರೀದಿದಾರರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ.


Click it and Unblock the Notifications








