ಕಾಶಿ ಪ್ರಯಾಣದ ವೇಳೆ ಪ್ರಧಾನಿ ನರೇಂದ್ರ ಮೋದಿ ಬಳಸಿದ ಕಾರಿನ ವಿಶೇಷತೆ ಏನು?

ಪ್ರಧಾನಿ ನರೇಂದ್ರ ಮೋದಿ ಇಂದು ತಮ್ಮ ಸ್ವಕ್ಷೇತ್ರ ವಾರಾಣಾಸಿಗೆ ಆಗಮಿಸಿ ಕಾಶಿ ವಿಶ್ವನಾಥ ಕಾರಿಡಾರ್ ಉದ್ಘಾಟನೆ ಮಾಡಿದ್ದು, ಬೃಹತ್ ಕಾರ್ಯಕ್ರಮದ ವೇಳೆ ವಾರಾಣಾಸಿಯ ಬೀದಿಗಳಲ್ಲಿ ಬಿಗಿ ಭದ್ರತೆಯೊಂದಿಗೆ ಕಾರಿನಲ್ಲಿ ಪ್ರಯಾಣಿಸಿದ ನರೇಂದ್ರ ಮೋದಿಯವರಿಗೆ ಭವ್ಯ ಸ್ವಾಗತ ಕೋರಲಾಯ್ತು. ಈ ವೇಳೆ ಸಾರ್ವಜನಿಕರಿಂದ ಸಾಂಪ್ರಾದಾಯಿಕ ಉಡುಗೊರೆ ಸ್ವಿಕರಿಸುತ್ತ ಹೊಸ ಕಾರಿನಲ್ಲಿ ಪ್ರಯಾಣಿಸಿದ್ದು ವಿಶೇಷವಾಗಿತ್ತು.

ಕಾಶಿ ಪ್ರಯಾಣದ ವೇಳೆ ಪ್ರಧಾನಿ ನರೇಂದ್ರ ಮೋದಿ ಬಳಸಿದ ಕಾರಿನ ವಿಶೇಷತೆ ಏನು?

ಉತ್ತರಪ್ರದೇಶದ ವಾರಣಾಸಿಯಲ್ಲಿರುವ ಕಾಶಿ ವಿಶ್ವನಾಥ ದೇವಾಲಯವನ್ನು ಕೇಂದ್ರ ಸರ್ಕಾರವು ಭಾರೀ ಪ್ರಮಾಣದ ವೆಚ್ಚದೊಂದಿಗೆ ಜೀರ್ಣೋದ್ಧಾರಕ್ಕೆ ಚಾಲನೆ ನೀಡಿದ್ದು, ಕಾಶಿ ವಿಶ್ವನಾಥ ದೇವಾಲಯವನ್ನು ಗಂಗಾ ಘಾಟ್‌ಗಳೊಂದಿಗೆ ಸಂಪರ್ಕಿಸಲು ಮೆಗಾ ಕಾರಿಡಾರ್ ಯೋಜನೆ ಆರಂಭಿಸಿತು. ಕಾರ್ಯಕ್ರಮಕ್ಕಾಗಿ ಡಬಲ್ ಡೆಕ್ಕರ್ ದೋಣಿಯಲ್ಲಿ ಕಾಶಿ ವಿಶ್ವನಾಥ ದೇವಸ್ಥಾನಕ್ಕೆ ಭೇಟಿ ಕೊಟ್ಟ ನಂತರ ಕಾರಿನಲ್ಲಿ ಪ್ರಯಾಣಿಸಿದ ನರೇಂದ್ರ ಮೋದಿಯವರು ಗಮನಸೆಳೆದರು.

ಕಾಶಿ ಪ್ರಯಾಣದ ವೇಳೆ ಪ್ರಧಾನಿ ನರೇಂದ್ರ ಮೋದಿ ಬಳಸಿದ ಕಾರಿನ ವಿಶೇಷತೆ ಏನು?

ವಿಶೇಷ ಸಂದರ್ಭಗಳಲ್ಲಿ ಹಲವಾರು ಹೊಸ ಐಷಾರಾಮಿ ಕಾರುಗಳಲ್ಲಿ ಕಾಣಿಸಿಕೊಂಡಿರುವ ಪ್ರಧಾನಿ ನರೇಂದ್ರ ಮೋದಿಯವರು ಇದೀಗ ಮತ್ತೊಂದು ಹೊಸ ಕಾರಿನಲ್ಲಿ ಪ್ರಯಾಣಿಸುತ್ತಿರುವುದು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯಾಗುತ್ತಿದ್ದು, ನರೇಂದ್ರ ಮೋದಿಯವರು ಈ ಹಿಂದಿನ ಬಿಎಂಡಬ್ಲ್ಯು 7 ಸೀರಿಸ್ ಮತ್ತು ಲ್ಯಾಂಡ್ ಕ್ರೂಸರ್ ಸ್ಥಾನದಲ್ಲಿ ನ್ಯೂ ಜನರೇಷನ್ ಟೊಯೊಟಾ ನಿರ್ಮಾಣದ ಲ್ಯಾಂಡ್ ಕ್ರೂಸರ್ ಎಂಟ್ರಿ ಕೊಟ್ಟಿದೆ.

ಕಾಶಿ ಪ್ರಯಾಣದ ವೇಳೆ ಪ್ರಧಾನಿ ನರೇಂದ್ರ ಮೋದಿ ಬಳಸಿದ ಕಾರಿನ ವಿಶೇಷತೆ ಏನು?

ನರೇಂದ್ರ ಮೋದಿ ಅವರಿಗೆ ಗರಿಷ್ಠ ಭದ್ರತೆ ಒದಗಿಸುವ ಹೊಣೆ ಹೊತ್ತಿರುವ ಎಸ್‌ಪಿಜಿಯು ಈ ಹಿಂದಿನ ಲ್ಯಾಂಡ್ ಕ್ರೂಸರ್ ಸೆಂಟಿನಲ್ ಬದಲಾಗಿ ಗರಿಷ್ಠ ಭದ್ರತೆ ನೀಡಬಲ್ಲ ಮತ್ತೊಂದು ವಿಶೇಷ ರಕ್ಷಾಣಾ ವಿನ್ಯಾಸ ಹೊಂದಿರುವ ನ್ಯೂ ಜನರೇಷನ್ ಲ್ಯಾಂಡ್ ಕ್ರೂಸರ್ ಬಳಕೆಗೆ ಗ್ರೀನ್ ಸಿಗ್ನಲ್ ನೀಡಿದೆ.

ಕಾಶಿ ಪ್ರಯಾಣದ ವೇಳೆ ಪ್ರಧಾನಿ ನರೇಂದ್ರ ಮೋದಿ ಬಳಸಿದ ಕಾರಿನ ವಿಶೇಷತೆ ಏನು?

ಮೋದಿಯವರು ಮುಖ್ಯಮಂತ್ರಿಯಾಗಿದ್ದಾಗ ಮಹೀಂದ್ರಾ ನಿರ್ಮಾಣದ ಸ್ಕಾರ್ಪಿಯೋದಿಂದ ಹಿಡಿದು ಪ್ರಧಾನ ಮಂತ್ರಿ ಸ್ಥಾನಕ್ಕೇರುವ ತನಕ ಹಂತ-ಹಂತವಾಗಿ ಹಲವು ಕಾರು ಮಾದರಿಗಳನ್ನು ತಮ್ಮ ಅಧಿೃತ ಕಾರು ಮಾದರಿಯಾಗಿ ಬಳಕೆ ಮಾಡಿದ್ದು, ಪ್ರಧಾನಿ ಹುದ್ದೆ ಅಲಂಕರಿಸಿದ ನಂತರ ಹೆಚ್ಚಿನ ಭದ್ರತೆ ಒದಗಿಸುವುದು ಕೆಲವೇ ಕೆಲವು ಕಾರು ಮಾದರಿಗಳನ್ನು ಭದ್ರತಾ ಸಂಸ್ಥೆಗಳ ಸಲಹೆ ಮೇರೆಗೆ ಬಳಸುತ್ತಿದ್ದಾರೆ.

ಕಾಶಿ ಪ್ರಯಾಣದ ವೇಳೆ ಪ್ರಧಾನಿ ನರೇಂದ್ರ ಮೋದಿ ಬಳಸಿದ ಕಾರಿನ ವಿಶೇಷತೆ ಏನು?

ವೈಯಕ್ತಿಕರಣಗೊಳಿಸಿದ ಮೋದಿಯವರ ಕಾರುಗಳು ಅತ್ಯುನ್ನತ್ತ ಸುರಕ್ಷಾ ವೈಶಿಷ್ಟ್ಯಗಳನ್ನು ಪಡೆದುಕೊಂಡಿರಲಿದ್ದು, ಭದ್ರತಾ ದೃಷ್ಟಿಯ ಹಿನ್ನಲೆಯಲ್ಲಿ ಕಾರಿನ ಕೆಲವು ವಿಶಿಷ್ಟತೆಗಳನ್ನು ಗೌಪ್ಯವಾಗಿಡಲಾಗುತ್ತದೆ.

ಕಾಶಿ ಪ್ರಯಾಣದ ವೇಳೆ ಪ್ರಧಾನಿ ನರೇಂದ್ರ ಮೋದಿ ಬಳಸಿದ ಕಾರಿನ ವಿಶೇಷತೆ ಏನು?

ಈ ಪೈಕಿ ಬೆಂಗಾವಲು ಪಡೆಯಲ್ಲಿ ನಕಲಿ ಕಾರು ಮಾದರಿಗಳ ಸೇರ್ಪಡೆ ಸಹ ಒಂದಾಗಿದ್ದು, ಇವುಗಳು ಎಂತಹುದೇ ಶಕ್ತಿಶಾಲಿ ಬಾಂಬ್ ದಾಳಿಯಲ್ಲೂ ಕಾರು ಛಿದ್ರಗೊಳ್ಳದಂತೆ ಬುಲೆಟ್ ಪ್ರೂಪ್ ಬಾಡಿ ಕಿಟ್ ಹೊಂದಿರುತ್ತವೆ.

ಕಾಶಿ ಪ್ರಯಾಣದ ವೇಳೆ ಪ್ರಧಾನಿ ನರೇಂದ್ರ ಮೋದಿ ಬಳಸಿದ ಕಾರಿನ ವಿಶೇಷತೆ ಏನು?

ನರೇಂದ್ರ ಮೋದಿಯವರು ಪ್ರಧಾನಿ ಸ್ಥಾನ ಅಲಂಕರಿಸಿದ ನಂತರ ಪ್ರಮುಖ ಕಾರು ಮಾದರಿಗಳ ಬಳಕೆಯನ್ನು ಬದಲಿಸಿದ್ದು, ಇದೀಗ ನೂತನವಾಗಿ ಖರೀದಿ ಮಾಡಲಾಗಿರುವ ಹೊಸ ತಲೆಮಾರಿನ ಟೊಯೊಟಾ ಲ್ಯಾಂಡ್ ಕ್ರೂಸರ್‌ನಲ್ಲಿಯೇ ಪ್ರಯಾಣಿಸುತ್ತಿದ್ದಾರೆ.

ಕಾಶಿ ಪ್ರಯಾಣದ ವೇಳೆ ಪ್ರಧಾನಿ ನರೇಂದ್ರ ಮೋದಿ ಬಳಸಿದ ಕಾರಿನ ವಿಶೇಷತೆ ಏನು?

ಪ್ರಧಾನಿ ಮೋದಿಯವರು ಬಳಸುವ ಹೊಸ ಟೊಯೊಟಾ ಲ್ಯಾಂಡ್‌ ಕ್ರೂಸರ್ ಎಸ್‌ಯುವಿಯು ಬಲಶಾಲಿ ಕಾರು ಮಾದರಿಯಾಗಿದ್ದು, ಇದು 4.5 ಲೀಟರ್(4500 ಸಿಸಿ) ವಿ8 ಡೀಸೆಲ್ ಎಂಜಿನ್‌ನಿಂದ ನಿಯಂತ್ರಿಸಲ್ಪಿಟ್ಟಿದೆ. ಈ ಎಂಜಿನ್ ಗರಿಷ್ಠ 262 ಬಿಎಚ್‌ಪಿ ಮತ್ತು 650 ಎನ್ಎನ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಕಾಶಿ ಪ್ರಯಾಣದ ವೇಳೆ ಪ್ರಧಾನಿ ನರೇಂದ್ರ ಮೋದಿ ಬಳಸಿದ ಕಾರಿನ ವಿಶೇಷತೆ ಏನು?

ಹೊಸ ಕಾರಿನಲ್ಲಿ 10-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ನೊಂದಿಗೆ ಆಲ್ ವೀಲ್ ಡ್ರೈವ್ ಸಿಸ್ಟಂ ಕೂಡಾ ನೀಡಲಾಗಿದ್ದು, ಯಾವುದೇ ರೀತಿಯ ರಸ್ತೆ ಪರಿಸ್ಥಿತಿಯಲ್ಲೂ ಸುಲಭವಾಗಿ ಚಲಿಸುವ ಸಾಮರ್ಥ್ಯ ಹೊಂದಿದೆ.

ಕಾಶಿ ಪ್ರಯಾಣದ ವೇಳೆ ಪ್ರಧಾನಿ ನರೇಂದ್ರ ಮೋದಿ ಬಳಸಿದ ಕಾರಿನ ವಿಶೇಷತೆ ಏನು?

ಜೊತೆಗೆ ಈ ಕಾರಿನ ಹಲವಾರು ಆಧುನಿಕ ಫೀಚರ್ಸ್‌ಗಳನ್ನು ನೀಡಲಾಗಿದ್ದು, ವಿವಿಧ ಡ್ರೈವ್ ಮೋಡ್‌ಗಳು, ಆಟೋಮ್ಯಾಟಿಕ್ ಎಸಿ ಕಂಟ್ರೊಲ್, ಸ್ವಯಂಚಾಲಿತವಾಗಿ ಹೊಂದಾಣಿಕೆ ಮಾಡಬಹುದಾದ ಸೀಟ್, ವೆಂಟಿಲೆಟೆಡ್ ಸೀಟುಗಳು, ಕ್ಯಾಬಿನ್ ರಕ್ಷಿಸುವ ಹಲವಾರು ಏರ್‌ಬ್ಯಾಗ್‌ಗಳು, ಎಮರ್ಜೆನ್ಸಿ ಬ್ರೇಕಿಂಗ್ ಸೇರಿದಂತೆ ಹಲವಾರು ಡ್ರೈವ್ ಅಸಿಸ್ಟ್ ಸೌಲಭ್ಯಗಳಿವೆ.

ಕಾಶಿ ಪ್ರಯಾಣದ ವೇಳೆ ಪ್ರಧಾನಿ ನರೇಂದ್ರ ಮೋದಿ ಬಳಸಿದ ಕಾರಿನ ವಿಶೇಷತೆ ಏನು?

ನರೇಂದ್ರ ಮೋದಿಯವರು ಪ್ರಸ್ತುತ ದೇಶದ ರಾಜಧಾನಿ ದೆಹಲಿಯಿಂದ ಇತರ ನಗರಗಳಿಗೆ ಪ್ರಯಾಣಿಸುವಾಗ ಈ ಎಸ್‌ಯುವಿ ಕಾರನ್ನು ಹೆಚ್ಚಾಗಿ ಬಳಸುತ್ತಿದ್ದು, ಮುಖ್ಯ ಕಾರು ಮಾದರಿಯೊಂದಿಗೆ ಒಂದೇ ವಿನ್ಯಾಸದ ಇನ್ನು ಮೂರು ಕಾರುಗಳು ಸಹ ಬೆಂಗಾವಲು ಪಡೆಯಲ್ಲಿವೆ. ಇವು ಕೂಡಾ ಮುಖ್ಯ ಕಾರು ಮಾದರಿಯಲ್ಲಿರುವಂತೆ ಎಲ್ಲಾ ಸುರಕ್ಷಾ ವೈಶಿಷ್ಟ್ಯತೆಗಳನ್ನು ಹೊಂದಿರಲಿದ್ದು, ಯಾವುದೇ ರೀತಿಯ ದಾಳಿಗೂ ಜಗ್ಗದಂತೆ ಈ ಕಾರುಗಳನ್ನು ನಿರ್ಮಾಣ ಮಾಡಲಾಗಿದೆ.

ಕಾಶಿ ಪ್ರಯಾಣದ ವೇಳೆ ಪ್ರಧಾನಿ ನರೇಂದ್ರ ಮೋದಿ ಬಳಸಿದ ಕಾರಿನ ವಿಶೇಷತೆ ಏನು?

ಪ್ರಧಾನಿ ಮಂತ್ರಿಯವರ ವೈಯಕ್ತಿಕ ಭದ್ರತಾ ವಿಭಾಗವು ನಿಗದಿಪಡಿಸಿದ ಸುರಕ್ಷತಾ ನಿಯಮಗಳನ್ನು ಅನುಸರಿಸಿದರೆ ಮಾತ್ರ ಅವರ ಅಧಿಕೃತ ಕಾರು ಎಂದು ಅರ್ಹತೆ ಪಡೆಯಬಹುದು ಎಂಬುದು ಗಮನಾರ್ಹವಾಗಿದ್ದು, ವಿವಿಧ ರಾಷ್ಟ್ರಗಳ ನಾಯಕರು ಹಲವಾರು ಮಾದರಿಯ ಸುರಕ್ಷಿತ ಕಾರುಗಳ ಬಳಕೆಗೆ ಆದ್ಯತೆ ನೀಡುತ್ತಿದ್ದಾರೆ.

Most Read Articles

Kannada
English summary
Pm modi s new official car toyota land cruiser details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X